ಬಾಬರಿ ಮಸೀದಿ ಧ್ವಂಸ: ಅಡ್ವಾಣಿ ವಿರುದ್ಧ ಮತ್ತೆ ವಿಚಾರಣೆ ಸಾಧ್ಯತೆ

7 Mar, 2017
ಪ್ರಜಾವಾಣಿ ವಾರ್ತೆ

ನವದೆಹಲಿ: ವಿವಾದಿತ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಇತರರ ವಿರುದ್ಧದ ಕ್ರಿಮಿನಲ್ ಪಿತೂರಿ ಆರೋಪ ಕೈಬಿಟ್ಟಿದ್ದು ಏಕೆ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಪ್ರಶ್ನಿಸಿತು.

ಹದಿಮೂರು ಜನರ ವಿರುದ್ಧದ ಆರೋಪಗಳನ್ನು ತಾಂತ್ರಿಕ ಕಾರಣಗಳ ಆಧಾರದಲ್ಲಿ ಕೈಬಿಟ್ಟಿರುವುದು ಸರಿಯಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಪಿ.ಸಿ. ಘೋಷ್ ಮತ್ತು ಆರ್.ಎಫ್. ನಾರಿಮನ್ ಅವರಿದ್ದ ಪೀಠ ಹೇಳಿತು. ಇವರ ವಿರುದ್ಧ ಸಿಬಿಐ –ಪೂರಕ ಆರೋಪ ಪಟ್ಟಿ ಸಲ್ಲಿಸಬಹುದಿತ್ತು ಎಂದೂ ಪೀಠ ಹೇಳಿತು.

‘ಅವರ ಮೇಲಿನ ಕ್ರಿಮಿನಲ್ ಪಿತೂರಿ ಆರೋಪ ಕೈಬಿಡಬಹುದಿತ್ತು ಎಂದು ಮೇಲ್ನೋಟಕ್ಕೆ ಅನಿಸುತ್ತಿಲ್ಲ. ಇದು ವಿಲಕ್ಷಣ ಪ್ರಕರಣ’ ಎಂದು ಪೀಠ ಹೇಳಿತು.
ಬಾಬರಿ ಮಸೀದಿ ಧ್ವಂಸದ ನಂತರ ದಾಖಲಿಸಿಕೊಂಡ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಬಾರದೇ ಎಂಬ ಪ್ರಶ್ನೆಯನ್ನು ಪೀಠ ಸಿಬಿಐ ಮುಂದಿಟ್ಟಿತು.

ಬಾಬರಿ ಮಸೀದಿ ಧ್ವಂಸವಾದ 1992ರ ಡಿ. 6ರಂದು ಅಯೋಧ್ಯೆಯಲ್ಲಿ ವೇದಿಕೆಯ ಮೇಲಿದ್ದ ಅಡ್ವಾಣಿ ಮತ್ತು ಇತರರ ವಿರುದ್ಧ ಒಂದು ಎಫ್‌ಐಆರ್‌ ದಾಖಲಿಸಲಾಗಿದೆ. ಆ ಸಂದರ್ಭದಲ್ಲಿ ಅಲ್ಲಿದ್ದ ಕರಸೇವಕರ ವಿರುದ್ಧ ಇನ್ನೊಂದು ಎಫ್‌ಐಆರ್‌ ದಾಖಲಿಸಲಾಗಿದೆ.ಮೊದಲ ಎಫ್‌ಐ ಆರ್‌ಗೆ ಸಂಬಂಧಿಸಿದ ಪ್ರಕರಣ ರಾಯ್‌ಬರೇಲಿಯ ನ್ಯಾಯಾಲಯದಲ್ಲಿ, ಎರಡನೆಯ ಎಫ್‌ಐಆರ್‌ಗೆ ಸಂಬಂಧಿಸಿದ ಪ್ರಕರಣ ಲಖನೌದಲ್ಲಿ ವಿಚಾರಣೆ ಹಂತದಲ್ಲಿದೆ.

ಬಿಜೆಪಿ ನಾಯಕರ ವಿರುದ್ಧದ ಕ್ರಿಮಿನಲ್ ಪಿತೂರಿ ಆರೋಪಕ್ಕೆ ಮತ್ತೆ ಜೀವ ಕೊಡಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಅಲಹಾಬಾದ್‌ ಹೈಕೋರ್ಟ್‌ನ ಆದೇಶದ ವಿರುದ್ಧ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ. ಇದೇ ವಾದ ಹಾಜಿ ಮೆಹ ಬೂಬ್ ಅಹಮದ್ (ಈಗ ಮೃತರಾಗಿದ್ದಾರೆ) ಸಲ್ಲಿಸಿದ ಅರ್ಜಿಯಲ್ಲೂ ಇದೆ.

‘ಆರೋಪಮುಕ್ತಗೊಳಿಸಿದ ಆದೇಶ ರದ್ದಾಗಬೇಕು ಎಂಬುದು ನಮ್ಮ ನಿಲುವೂ ಹೌದು’ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ನೀರಜ್ ಕಿಶನ್ ಕೌಲ್ ಹೇಳಿದರು.

**

ಇವರ ಮೇಲಿನ ಆರೋಪ ಕೈಬಿಡಲಾಗಿದೆ
ಅಡ್ವಾಣಿ, ಜೋಷಿ ಮತ್ತು ಉಮಾ ಮಾತ್ರವಲ್ಲದೆ, ಕಲ್ಯಾಣ್ ಸಿಂಗ್ (ಈಗ ರಾಜಸ್ತಾನದ ರಾಜ್ಯಪಾಲ), ಶಿವಸೇನಾ ಮುಖ್ಯಸ್ಥರಾಗಿದ್ದ ಬಾಳ ಠಾಕ್ರೆ ಮತ್ತು ವಿಎಚ್‌ಪಿ ಮುಖಂಡ ಆಚಾರ್ಯ ಗಿರಿರಾಜ್ ಕಿಶೋರ್ (ಠಾಕ್ರೆ ಮತ್ತು ಕಿಶೋರ್ ಮೃತಪಟ್ಟಿದ್ದಾರೆ) ಅವರ ವಿರುದ್ಧದ ಆರೋಪಗಳನ್ನೂ ಕೈಬಿಡಲಾಗಿದೆ.

**

ವಕೀಲರ ವಿರೋಧ
ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸುವು ದಕ್ಕೆ ಅಡ್ವಾಣಿ ಪರ ವಕೀಲರು ವಿರೋಧ ­ವ್ಯಕ್ತಪಡಿಸಿ ದರು. ಎರಡೂ ಪ್ರಕರಣಗಳು ಬೇರೆ ಬೇರೆ ಕಡೆ ವಿಚಾರಣೆಯ ಹಂತದಲ್ಲಿವೆ, ಇವೆರಡರ ಆರೋಪಿಗಳೂ ಬೇರೆ ಬೇರೆ ಎಂದು ವಾದಿಸಿದರು.

Read More

Comments
ಮುಖಪುಟ

ಪಾಕ್‌ಗೆ ಮುಖಭಂಗ

ಮಲೀಹಾ ಅವರು ತೋರಿಸಿದ ಚಿತ್ರ ಗಾಜಾದ 17 ವರ್ಷದ ಬಾಲಕಿ ರವ್ಯಾ ಅಬು ಜೋಮಾ ಅವರದ್ದು. ಇಸ್ರೇಲ್‌ ದಾಳಿಗೆ ಸಿಕ್ಕಿ ಅವರ ಮುಖ ಜರ್ಜರಿತವಾಗಿತ್ತು. 2014ರ ಜುಲೈನಲ್ಲಿ ಈ ಚಿತ್ರವನ್ನು ಪ್ರಶಸ್ತಿ ಪುರಸ್ಕೃತ ಛಾಯಾಗ್ರಾಹಕ, ಅಮೆರಿಕದ ಹೈಡಿ ಲಿವೈನ್‌ ತೆಗೆದಿದ್ದರು...

‘ರಾಷ್ಟ್ರೀಯ ಬಸವ ಸೇನಾ’ ಅಸ್ತಿತ್ವಕ್ಕೆ

ಹೋರಾಟದ ನೇತೃತ್ವ ವಹಿಸಿರುವ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ‘ಈ ಸಂಘಟನೆಗೆ ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರು ಅಧ್ಯಕ್ಷರಾಗಿರುತ್ತಾರೆ’ ಎಂದು ಪ್ರಕಟಿಸಿದರು. ಧ್ವಜ ನೀಡುವ ಮೂಲಕ ಅಧಿಕಾರದ ಜವಾಬ್ದಾರಿ ವಹಿಸಿಕೊಟ್ಟರು...

ಭಾರತಕ್ಕೆ ಸರಣಿ ಗೆಲುವಿನ ಪುಳಕ

ಅಜಿಂಕ್ಯ ರಹಾನೆ ಮತ್ತು ರೋಹಿತ್ ಶರ್ಮಾ ಹಾಕಿಕೊಟ್ಟ ಬುನಾದಿಯ ಮೇಲೆ ಸ್ಫೋಟಕ ಬ್ಯಾಟ್ಸ್‌ಮನ್‌ ಹಾರ್ದಿಕ್ ಪಾಂಡ್ಯ ಗೆಲುವಿನ ಸೌಧ ಕಟ್ಟಿದರು.

ಸಿದ್ಧಾರ್ಥ ಅಘೋಷಿತ ಆಸ್ತಿ ₹650 ಕೋಟಿ

‘ಸಿದ್ಧಾರ್ಥ ಅವರಿಗೆ ಸೇರಿದ ಕಾಫಿ ಉದ್ಯಮ, ಪ್ರವಾಸೋದ್ಯಮ, ಹಣಕಾಸು ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕಂಪೆನಿಗಳ ಮೇಲಿನ ಶೋಧ ಭಾನುವಾರ ಮುಕ್ತಾಯವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅವರು ₹ 650 ಕೋಟಿ ಅಘೋಷಿತ ಆಸ್ತಿ ಹೊಂದಿದ್ದಾರೆ ಎಂಬುದು ಗೊತ್ತಾಗಿದೆ.

ಸಂಗತ

...ಹಾಗಾದರೆ ‘ನಾವು’ ಯಾರು?

ಲಿಂಗಾಯತ ಸಮೂಹಕ್ಕೆ ತಾನು ‘ವೈದಿಕ ಹಿಂದೂ’ ಅಲ್ಲ ಎಂದು ತಾತ್ವಿಕವಾಗಿ ಸಮರ್ಥಿಸಿಕೊಳ್ಳಲು ವಚನ ತಾತ್ವಿಕತೆಯ ಆಕರಮೂಲ ಇದೆ. ಹಾಗಾದರೆ ಬೇಡರು, ಬೆಸ್ತರು, ಮಾದಿಗರು, ಕುರುಬರು, ಕುಂಬಾರರು, ಒಕ್ಕಲಿಗರು, ಗಾಣಿಗರು, ಉಪ್ಪಾರರಂಥ ಸಮೂಹಗಳು ಕೂಡ ಈ ಪ್ರಶ್ನೆಯನ್ನು ಇದಿರಾಗಬೇಕಲ್ಲವೇ?

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಆಟಅಂಕ

ವೇಗದ ಹಾದಿಯಲ್ಲಿ ನವೋಲ್ಲಾಸ

ಭಾರತದ ನೆಲದಲ್ಲಿ ಸರಣಿ ನಡೆದಾಗಲೆಲ್ಲಾ ಸ್ಪಿನ್ನರ್‌ಗಳೇ ಪ್ರಾಬಲ್ಯ ಮೆರೆಯುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಆತಿಥೇಯ ವೇಗಿಗಳು ಕೂಡ ಲೀಲಾಜಾಲವಾಗಿ ವಿಕೆಟ್‌ ಉರುಳಿಸಿ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಈ ಬಗ್ಗೆ ಜಿ.ಶಿವಕುಮಾರ ಬರೆದಿದ್ದಾರೆ.

ಸ್ವಂತ ಕ್ರೀಡಾಂಗಣದಲ್ಲಿ ರಣಜಿ ಸಂಭ್ರಮ

ಆರು ವರ್ಷಗಳ ನಂತರ ರಣಜಿ ಟ್ರೋಫಿ ಪಂದ್ಯ ಮತ್ತೆ ಶಿವಮೊಗ್ಗಕ್ಕೆ ಮರಳಿದೆ ಎನ್ನುವುದಕ್ಕಿಂತ ಮುಖ್ಯವಾಗಿ ಅದು ಕೆಎಸ್‌ಸಿಎ ಸ್ವಂತ ಕ್ರೀಡಾಂಗಣದಲ್ಲಿ ನಡೆಯುತ್ತಿದೆ ಎನ್ನುವುದೇ ವಲಯ ಸಮಿತಿಯ ಸಂಭ್ರಮಕ್ಕೆ ಕಾರಣವಾಗಿದೆ.

ಮಿನಿ ಫುಟ್‌ಬಾಲ್‌ನ ಮಹಾ ಜಗತ್ತು

ಪ್ರೊ ಕಬಡ್ಡಿ ಸೇರಿದಂತೆ ವಿವಿಧ ಲೀಗ್‌ಗಳ ಜೊತೆಗೆ ಭಾರತದಲ್ಲಿ ಪ್ರೀಮಿಯರ್‌ ಫುಟ್‌ಸಾಲ್‌ ಎಂಬ ಫುಟ್‌ಬಾಲ್ ಕ್ರೀಡೆ ಜನಪ್ರಿಯವಾಗುತ್ತಿದೆ. ಸಣ್ಣ ಅಂಗಣದಲ್ಲಿ, ಕಡಿಮೆ ಅವಧಿಯಲ್ಲಿ ಐದು ಮಂದಿ ಆಟಗಾರರು ಆಡುವ ಈ ಆಟ ಪ್ರೇಕ್ಷಕರನ್ನು ರೋಮಾಂಚನದ ಶಿಖರಕ್ಕೆ ಕೊಂಡೊಯ್ಯುತ್ತದೆ. ವಿದೇಶದ ದಿಗ್ಗಜರ ಜೊತೆ ದೇಶದ ಯುವ ಆಟಗಾರರಿಗೆ ಬೆರೆಯಲು ಅವಕಾಶ ಲಭಿಸುತ್ತಿರುವುದು ಫುಟ್‌ಸಾಲ್‌ನ ವೈಶಿಷ್ಟ್ಯ.

ಮಿಥುನ್‌ ಫಿಟ್‌ನೆಸ್‌ಗೆ ‘ಯೋಗ’ ಬಲ

ರಣಜಿ ಟೂರ್ನಿ ವೇಳೆ ಪದೇ ಪದೇ ಗಾಯದ ಸಮಸ್ಯೆ ಎದುರಿಸಿ ಟೀಕೆಗೆ ಒಳಗಾಗಿದ್ದ ವೇಗದ ಬೌಲರ್‌ ಅಭಿಮನ್ಯು ಮಿಥುನ್‌ ಫಿಟ್‌ನೆಸ್‌ ಹೆಚ್ಚಿಸಿಕೊಳ್ಳಲು ಯೋಗದ ಮೊರೆ ಹೋಗಿದ್ದಾರೆ. ಮುಂದಿನ ತಿಂಗಳು ಆರಂಭವಾಗುವ ರಣಜಿ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. ಇದರ ಬಗ್ಗೆ ಮಾತನಾಡಿರುವ ಅವರನ್ನು ಪ್ರಮೋದ ಜಿ.ಕೆ. ಸಂದರ್ಶಿಸಿದ್ದಾರೆ.

ಶಿಕ್ಷಣ

ತರಗತಿಯಲ್ಲಿ ಪಠ್ಯಪುಸ್ತಕದ ಪ್ರಶಸ್ತ ಬಳಕೆ

‘ಪುಸ್ತಕವನ್ನು ಬಿಸಾಡು; ಪ್ರಕೃತಿಯೇ ನಿನಗೆ ಪರಮ ಗುರುವಾಗಲಿ’ – ಎಂಬ ವಾಕ್ಯವನ್ನು ವರ್ಡ್ಸ್‌ವರ್ಥ್‌ ತನ್ನ ಕೃತಿಯಲ್ಲಿ ಹೇಳಿದ್ದಾರೆ.  ಈ ವಾಕ್ಯದ ಆಶಯ ಚೆನ್ನಾಗಿದೆಯಾದರೂ ಮರುಪರಿಶೀಲನೆಗೆ ಒಳಗಾಗಬೇಕಾದ ವಾಕ್ಯವಿದು. ನಮ್ಮ ಆಲೋಚನೆಯ ವಿಷಯ ನಿಸರ್ಗ ಕೇಂದ್ರಿತವಾಗಬೇಕು ಎಂಬುದೇನೋ ಸರಿ. ಆದರೆ ನಿಸರ್ಗ ಕುರಿತು ಆಲೋಚನೆ ಮಾಡುವ ಬಗೆಗೆ ಪುಸ್ತಕಗಳು ತಿಳಿಸದೇ ಹೋದರೆ– ಅದು ಕೇವಲ ಅನುತ್ಪಾದಕ ಹಗಲುಗನಸಿನ ಆಕರ ಸಾಮಗ್ರಿ ಆಗಿಬಿಡುವ ಅಪಾಯವಿದೆ. ನಿಸರ್ಗದ ಅಧ್ಯಯನಕ್ಕೆ ಬೇಕಾದ– ಪ್ರಶ್ನೆ ರೂಪಿಸುವ ಕೇಳಲು ತಾರ್ಕಿಕ ವಿಭಾಗ, ಪರೀಕ್ಷೆ, ಪ್ರಯೋಗ ಎಲ್ಲವೂ ಪುಸ್ತಕದ ಅಧ್ಯಯನದಿಂದಲೇ ಪರಿಪಕ್ವವಾಗಬೇಕಾದವು. ವಿಷಯವನ್ನು ಆಲೋಚನಾ ಕೇಂದ್ರವನ್ನು ನಿಸರ್ಗ ಒದಗಿಸಿದರೂ ಆಲೋಚನಾ ವಿಧಾನವನ್ನು ಪುಸ್ತಕವೇ ಒದಗಿಸಬೇಕು.

ಮಕ್ಕಳಿಗೆ ಒತ್ತಡ ಬೇಕೇ?

ಇತ್ತೀಚಿಗೆ ತರಬೇತಿಗೆಂದು ಮೈಸೂರಿಗೆ ಹೋಗಿದ್ದೆ. ಮಾರ್ಕೆಟ್‌ನಲ್ಲಿ ಸುತ್ತಾಡುತ್ತಿರುವಾಗ ಬಹುತೇಕ ಮಾರಾಟಗಾರರು ಕೈಯಲ್ಲಿ ಆಟಿಕೆಯೊಂದನ್ನು ಹಿಡಿದು 'ನೂರಕ್ಕೊಂದು ನೂರುಕ್ಕೊಂದು, ತಿರುಗಿಸಿ ನೋಡಿ, ಟೆನ್ಷನ್‌ ಕಡಿಮೆ ಮಾಡ್ಕೊಳ್ಳಿ' ಎಂದು ಕೂಗುತ್ತಿದ್ದರು. ಅಲ್ಲಿಗೆ ಬಂದ ಪ್ರೌಢಶಾಲಾ ಹುಡುಗರ ಗುಂಪೊಂದು ನನ್ನನ್ನು ಆಕರ್ಷಿಸಿತು. ಅವರನ್ನು ಹಿಂಬಾಲಿಸಿದೆ...

ಪ್ರಜಾವಾಣಿ ಕ್ವಿಜ್‌

ಉಸ್ತಾದ್ ಆಲಿ ಅಹಮ್ಮದ್ ಹುಸೇನ್ ಅವರು ಯಾವ ವಾದ್ಯವನ್ನು ನುಡಿಸುವುದರಲ್ಲಿ ಖ್ಯಾತರಾಗಿದ್ದರು?

ಸ್ಪರ್ಧಾತ್ಮಕ ಪರೀಕ್ಷೆಗಳು ಹೆದರಿಕೆ ಬೇಡ, ಇರಲಿ ಧೈರ್ಯ

ಇದೀಗ ಶಾಲೆಗಳಲ್ಲಿ ನವೆಂಬರ್ ತಿಂಗಳಿನಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಭರದಿಂದ ಸಾಗುತ್ತಿದೆ. ಇದು ಅಗತ್ಯ ಕೂಡ. ಮಕ್ಕಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡುವುದು ಸಹ ಶಾಲೆಗಳ ಕರ್ತವ್ಯ. ಶಿಕ್ಷಕರಿಗೆ ಇದೊಂದು ಹೆಚ್ಚುವರಿ ಕಾರ್ಯ.