ಬಿಜೆಪಿ ಸೇರಲು ಕೃಷ್ಣ ನಿರ್ಧಾರ

7 Mar, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ತಮ್ಮನ್ನು ಅಗೌರವದಿಂದ ನಡೆಸಿಕೊಳ್ಳಲಾಯಿತು ಎಂಬ ಕಾರಣಕ್ಕೆ ಕಾಂಗ್ರೆಸ್‌ ಪಕ್ಷ ತೊರೆದಿರುವ ಹಿರಿಯ ರಾಜಕಾರಣಿ ಎಸ್‌.ಎಂ. ಕೃಷ್ಣ ನಿರೀಕ್ಷೆಯಂತೆ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ.

ಸದಾಶಿವ ನಗರದಲ್ಲಿರುವ ಕೃಷ್ಣ ಅವರ ಮನೆಗೆ  ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ಉಪ ನಾಯಕ ಆರ್‌. ಅಶೋಕ್‌ ಸೋಮವಾರ ಸಂಜೆ ತೆರಳಿ ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದರು. ಕೃಷ್ಣ ಆಹ್ವಾನ ಸ್ವೀಕರಿಸಿದರು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ತಿಂಗಳ 17ರೊಳಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರ ಸಮ್ಮುಖದಲ್ಲಿ  ಕೃಷ್ಣ ಆ ಪಕ್ಷ ಸೇರಲಿದ್ದಾರೆ. ಮೊದಲಿಗೆ ಅವರೊಬ್ಬರೇ ಬರುತ್ತಾರೆ. ಆ ನಂತರ ಅವರಿಗೆ ನಿಷ್ಠರಾಗಿರುವ ಕೆಲವು ನಾಯಕರು ಹಿಂಬಾಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕೃಷ್ಣ  ಅವರು ಬೇಷರತ್ತಾಗಿ ಬಿಜೆಪಿಗೆ ಸೇರುತ್ತಿದ್ದಾರೆ. ರಾಜ್ಯಸಭೆ ಸದಸ್ಯತ್ವ ಸೇರಿದಂತೆ ಯಾವುದೇ  ಸ್ಥಾನಗಳಿಗೆ ಬೇಡಿಕೆ ಇಟ್ಟಿಲ್ಲ. ಅವರ ಅಳಿಯ ಸಿದ್ಧಾರ್ಥ ಅವರ ಪರವಾಗಿಯೂ ಯಾವುದೇ  ಷರತ್ತು ಹಾಕಿಲ್ಲ’ ಎಂದು ಮೂಲಗಳು ಖಚಿತಪಡಿಸಿವೆ.

ಸುಮಾರು 40 ನಿಮಿಷಗಳ ಕಾಲ ಮೂವರು ನಾಯಕರ ಮಧ್ಯೆ ನಡೆದ ಮಾತುಕತೆಯಲ್ಲಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ  ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ಚರ್ಚಿಸಲಾಯಿತು.

2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಎಲ್ಲ 28 ಕ್ಷೇತ್ರಗಳನ್ನೂ ಗೆಲ್ಲಲು ಒಗ್ಗಟ್ಟಾಗಿ ಶ್ರಮಿಸುವ ಕುರಿತು ಕೃಷ್ಣ  ಪ್ರಸ್ತಾಪಿಸಿದರು ಎನ್ನಲಾಗಿದೆ. ಹಿರಿಯ ರಾಜಕಾರಣಿ ಸೇರ್ಪಡೆಯಿಂದಾಗಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನದ ರಾಜಧಾನಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರಿನಲ್ಲಿ ಬಿಜೆಪಿ ಬಲ ಹೆಚ್ಚಲಿದೆ ಎಂದು ಆ ಪಕ್ಷದ ನಾಯಕರು ಭಾವಿಸಿದ್ದಾರೆ.

ಕೃಷ್ಣ  ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ ಐಟಿ–ಬಿಟಿ ಉದ್ಯಮವು ಗಟ್ಟಿಯಾಗಿ ನೆಲೆಯೂರಿತು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತು. ಅಲ್ಲದೆ, ಬೆಂಗಳೂರು ನಗರದ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿರುವುದನ್ನು ಬೆಂಗಳೂರಿನ ನಾಗರಿಕರು ಮರೆತಿಲ್ಲ. ಇದರಿಂದ 2018 ರಲ್ಲಿ ಬೆಂಗಳೂರಿನ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲಲು ಸಹಾಯಕವಾಗುತ್ತದೆ ಎಂದು ಬಿಜೆಪಿ ನಾಯಕರು ವಿಶ್ಲೇಷಿಸುತ್ತಿದ್ದಾರೆ.

ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆಗಳೂ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕೃಷ್ಣ ಅವರ  ಸೇರ್ಪಡೆಯಿಂದ ಬಿಜೆಪಿಗೆ ಅನುಕೂಲವಾಗಲಿದೆ. ಕನಿಷ್ಠ ಶೇ 2ರಷ್ಟು ಮತಗಳು ಹೆಚ್ಚಾಗಬಹುದು ಎಂಬ ಲೆಕ್ಕಾಚಾರ ಆ ಪಕ್ಷದಲ್ಲಿದೆ.

ಆಂತರಿಕ ಭಿನ್ನಮತ, ಮೂಲ ಮತ್ತು ವಲಸಿಗ ಕಾಂಗ್ರೆಸ್ಸಿಗರ ತಿಕ್ಕಾಟದಲ್ಲಿ ನಲುಗಿರುವ ಕಾಂಗ್ರೆಸ್‌ನಿಂದ ಒಂದಷ್ಟು ನಾಯಕರು ಚುನಾವಣೆ ಸಂದರ್ಭದಲ್ಲಿ ಬಿಜೆಪಿಯತ್ತ ವಲಸೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ವಿ. ಶ್ರೀನಿವಾಸ್‌ ಪ್ರಸಾದ್‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ. ಜಯ ಪ್ರಕಾಶ್‌ ಹೆಗ್ಡೆ,  ಕುಮಾರ್‌ ಬಂಗಾರಪ್ಪ ಬಿಜೆಪಿಗೆ ಸೇರುತ್ತಿದ್ದಾರೆ. ನಟ, ಮಂಡ್ಯ ಜಿಲ್ಲೆಯ ರಾಜಕಾರಣಿ ಅಂಬರೀಷ್‌ ಅವ ರನ್ನೂ ಸೆಳೆಯುವ ಪ್ರಯತ್ನ ನಡೆದಿದೆ.

Read More

Comments
ಮುಖಪುಟ

ಮೋದಿ ವಿರುದ್ಧ ಕೈ ಎತ್ತಿದರೆ ಆ ಕೈ ಕತ್ತರಿಸಿ ಹಾಕುತ್ತೇವೆ: ಬಿಹಾರದ ಬಿಜೆಪಿ ಮುಖಂಡ

ಹಲವಾರು ಸಂಕಷ್ಟಗಳನ್ನು ಮೀರಿ ನಿಂತು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಯಾರಾದರೂ ಅವರತ್ತ ಬೆರಳು ತೋರಿಸಿದರೆ ಅಥವಾ ಕೈ ಎತ್ತಿದರೆ ಆ ಕೈಯನ್ನು ತುಂಡರಿಸುತ್ತೇವೆ ಎಂದು ಬಿಹಾರದ ಬಿಜೆಪಿ ರಾಜ್ಯಾಧ್ಯಕ್ಷ ನಿತ್ಯಾನಂದ ರೈ ಹೇಳಿದ್ದಾರೆ.

ಐಸಿಜೆ ನ್ಯಾಯಮೂರ್ತಿಯಾಗಿ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ

ಹೇಗ್‍ನಲ್ಲಿರುವ ಅಂತರ ರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ನ್ಯಾಯಾಧೀಶರಾಗಿ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆಯಾಗಿದ್ದಾರೆ. ನ್ಯಾಯಾಧೀಶರಾಗಿ ದಲ್ವೀರ್ ಭಂಡಾರಿ ಆಯ್ಕೆಯಾಗಿರುವ ಸಂಗತಿಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಪರಿಭಾವಿತ ಅರಣ್ಯದಲ್ಲಿನ 10 ಸಾವಿರ ಮರ ನಾಶ

ಹಿಂದಿನಿಂದಲೂ ಆರ್.ಟಿ.ಸಿ. ದಾಖಲೆಗಳಲ್ಲಿ ಈ ಅರಣ್ಯ ಪ್ರದೇಶ ನಾರಗೋಡ ಗ್ರಾಮಕ್ಕೆ ಸೇರಿದ ‘ಕಾನು’ ಎಂದೇ ನಮೂದಾಗಿತ್ತು. ಈಗ ಬೇರೆ ಭಾಗದ ಕೆಲವು ಶ್ರೀಮಂತರು ತಮ್ಮ ಹೆಸರಿಗೆ ಖಾತೆ ಇದೆ ಎಂದು ಹೇಳಿಕೊಂಡು ಮರಗಳನ್ನು ನೆಲಕ್ಕುರುಳಿಸುತ್ತಿದ್ದಾರೆ. 50ಕ್ಕೂ ಹೆಚ್ಚು ಕಾರ್ಮಿಕರು ಕೊಡಲಿ, ಗರಗಸ, ಜೆಸಿಬಿಗಳನ್ನು ಬಳಸಿ ಅಮೂಲ್ಯ ವನ್ಯಸಂಪತ್ತು ಹಾಳುಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ಕುಟುಂಬಕ್ಕೆ ಭದ್ರತೆ

ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆ ಮೇರೆಗೆ ದೀಪಿಕಾ ಕುಟುಂಬದವರು ವಾಸವಿರುವ ಬೆಂಗಳೂರಿನ ಜೆ.ಸಿ.ನಗರದ ನಂದಿದುರ್ಗ ರಸ್ತೆಯಲ್ಲಿರುವ ‘ವುಡ್ಸ್‌ ವೇಲ್’ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಸಂಗತ

‘ಜ್ಞಾನ’ಚಾಲಿತ ವಸಾಹತೀಕರಣದ ಹೊಸ ಆವೃತ್ತಿ

ನಮಗೆ ಹೊಸ ಜ್ಞಾನ ಬೇಕು. ಆದರೆ ಅದು ಅಸಹಜ ಕಸರತ್ತುಗಳ ಮೂಲಕ ಕನ್ನಡದ ಕನ್ನಡಿಯಲ್ಲಿ ಮೂಡಬಲ್ಲ ಪ್ರತಿಬಿಂಬವಾಗಿ ಅಲ್ಲ.

ಪವರ್‌ಲೆಸ್ ವಿ.ಸಿ- ಪವರ್‌ಫುಲ್ ಡಿ.ಸಿ

ಜ್ಞಾನಾಧಾರಿತ ಅರ್ಥವ್ಯವಸ್ಥೆಯ ಹೊಸ ತಲೆಮಾರಿನ ಯುವಜನರ ಕನಸುಗಳನ್ನೇ ಭಗ್ನಗೊಳಿಸುವಂತಿರುವ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆಯನ್ನು ಸರ್ಕಾರ ವಾಪಸು ಪಡೆದು, ಮತ್ತೊಮ್ಮೆ ಎಲ್ಲ ಪ್ರಜ್ಞಾವಂತ ವಲಯಗಳ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಪುನರ್‌ರೂಪಿಸಬೇಕು.

ವೈದ್ಯ–ರೋಗಿ ಸಂಬಂಧಕ್ಕೆ ಧಕ್ಕೆ

ನ್ಯಾಯಮೂರ್ತಿ ವಿಕ್ರಮ್‍ಜಿತ್ ಸೇನ್ ಅವರ ವರದಿಯನ್ನು ಸರ್ಕಾರ ಅಕ್ಷರಶಃ ಜಾರಿಗೆ ತಂದರೆ ವೈದ್ಯ ಸಮೂಹ ಅದನ್ನು ಖಂಡಿತ ಸ್ವೀಕರಿಸುತ್ತದೆ

ಆಸ್ಪತ್ರೆ ನಿಯಂತ್ರಣ: ಕಣ್ಣೊರೆಸುವ ತಂತ್ರವೇ?

ಯಾವುದೇ ಜನಪರ ಸರ್ಕಾರಕ್ಕೆ ತನ್ನ ಜನರ ಆರೋಗ್ಯ ರಕ್ಷಣೆ ಎಲ್ಲಕ್ಕಿಂತ ಮುಖ್ಯವಾಗಿರಬೇಕಲ್ಲವೇ? ಈ ದೃಷ್ಟಿಯಿಂದ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸರ್ಕಾರದಿಂದ ರಚಿತವಾದ ಜಸ್ಟಿಸ್ ಭೋರ್ ಸಮಿತಿ 1946ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು.

ಕರ್ನಾಟಕ ದರ್ಶನ

ಈತ ವಾನರ ಸೇನೆಯ ಕರ್ನಲ್‌!

ಒಮ್ಮೆ ಸಮರ್ಥನ ಸುಳಿವು ಸಿಗದಿದ್ದಾಗ ಅಜ್ಜಿಯ ಮನೆಯಲ್ಲಿನ ಎಲ್ಲ ಹಾಸಿಗೆ ಕಿತ್ತುಹಾಕಿದ್ದವು ಮುಸುವಗಳು. ಹೌದು, ಈ ಪೋರನಿಗೂ ಅವುಗಳಿಗೂ ಸ್ನೇಹ ಕುದುರಿದ್ದು ಹೇಗೆ?

ಕೊರಡು ಅರಳಿ ಹೂವಾಗಿ...

ಈ ಊರಿನ ಪ್ರತಿ ಮನೆಯ ಹೊಸ್ತಿಲ ಬಳಿಯೂ ತೈಲವರ್ಣದ ಚಿತ್ರ ಬಳಿದಂತೆ ಒಂದೇ ಭಂಗಿಯಲ್ಲಿ ಕುಳಿತು ಮಾಲೆ ಪೋಣಿಸುವ ಮಹಿಳೆಯರು ಕಾಣುತ್ತಾರೆ. ಯಾರಿಗೆ ಗೊತ್ತು? ನಿಮ್ಮೂರಿನ ಯಾವುದೋ ಸಭೆಯಲ್ಲಿ ಅತಿಥಿಗಳು ಧರಿಸಿದ ಕಟ್ಟಿಗೆ ಹೂವಿನ ಮಾಲೆ ಕೂಡ ಇಲ್ಲಿ ತಯಾರಾಗಿದ್ದೇ ಆಗಿರಬಹುದು!

ಹಿತ್ತಲಲ್ಲಿ ಕಂಡ ಕೆಂಪು ಸುಂದರಿ

ಶರೀರಕ್ಕಿಂತ ಒಂದೂವರೆ ಪಟ್ಟು ಉದ್ದದ ಹಾಗೂ ರೇಷ್ಮೆಯಂತಹ ಬಾಲ ಹೊಂದಿರುವ ಈ ಕೆಂದಳಿಲು ಕುಶಲ ಕಲೆಗಾರನಂತೆ ಹಲ್ಲಿನಿಂದಲೇ ಬಲಿತ ಕಾಯಿಗಳನ್ನು ತೂತು ಮಾಡಿ ಎಳನೀರು ಕುಡಿಯುವ ಕೌಶಲಕ್ಕೆ ಯಾರಾದರೂ ತಲೆದೂಗಲೇಬೇಕು

ತೆರೆದ ಅಂಚೆ

ಬಿ. ಬಸವರಾಜು ಹನೂರು ಅವರ ‘ದೇವರಾದರು ಈ ಸಾಹೇಬರು’ ಲೇಖನ ನಿಷ್ಕಾಮ ಕರ್ಮಕ್ಕೆ ಎಷ್ಟೊಂದು ಬೆಲೆ ಎಂಬುದನ್ನು ತೋರಿಸಿದೆ. ಡಿಸಿಎಫ್ ಅರಣ್ಯಾಧಿಕಾರಿ ಪಿ. ಶ್ರೀನಿವಾಸ ಅವರ ಸೇವೆ ಇಂದಿಗೂ ಜನರ ಮನದಾಳದಲ್ಲಿ ಉಳಿದು, ಅವರು ದೇವರಾಗಿದ್ದುದನ್ನು ಲೇಖನ ಸಮರ್ಥವಾಗಿ ಕಟ್ಟಿಕೊಟ್ಟಿದೆ.

ಕೃಷಿ

ತಾರಸಿ ಮೇಲೆ ಭತ್ತದ ಪೈರು

ತಾರಸಿಯಲ್ಲಿ ತರಕಾರಿ, ಹೂವಷ್ಟೇ ಅಲ್ಲ, ಭತ್ತವನ್ನೂ ಬೆಳೆದಿದ್ದಾರೆ ಕೃಷ್ಣಪ್ಪ ಗೌಡರು. 15 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದು,ಪ್ರತಿ ವರ್ಷ ಸರಾಸರಿ 50 ಕೆ.ಜಿ ಭತ್ತ ತಾರಸಿ ಹೊಲದಿಂದ ಸಿಗುತ್ತದೆ...

ಎಳನೀರಿನ ಹಿಮಚೆಂಡು?

ಮಲೇಷ್ಯಾ ಮತ್ತು ಇನ್ನೂ ಕೆಲವು ಪುಟ್ಟ ದೇಶಗಳಲ್ಲಿ ಇದು ಪ್ರವಾಸಿ ಆಕರ್ಷಣೆ! ಯಾವುದೇ ಯಂತ್ರ ಬಳಸದೆ, ಬರೀ ಕೈಚಳಕದಿಂದ ಈ ರೀತಿಯ ಹಿಮಚೆಂಡನ್ನು ಹೊರತೆಗೆದು ಮಾರುತ್ತಾರೆ. ಈ ಕುಶಲಕರ್ಮಿಗಳಿಗೆ ಇದೇ ವೃತ್ತಿ.

ಸಮಗ್ರ ಕೃಷಿಯಲ್ಲಿ ನಷ್ಟದ ಮಾತೆಲ್ಲಿ?

ಶಶಿ ಅವರಿಗೆ ಒಂಬತ್ತು ಎಕರೆ ಭೂಮಿ ಇದೆ. ಈ ವರ್ಷ ಮೂರು ಎಕರೆಯಲ್ಲಿ ತಿಪಟೂರು ತಳಿ ಶೇಂಗಾ (ಗುಚ್ಚಿ) ಬೆಳೆದಿದ್ದು, 50 ಕ್ವಿಂಟಲ್‌ ಇಳುವರಿ ಪಡೆದಿದ್ದಾರೆ. ಖರ್ಚು ಕಳೆದು, ₹1 ಲಕ್ಷ ಆದಾಯ ಗಳಿಸಿದ್ದಾರೆ.

ಕಲ್ಲು ಭೂಮಿಯಲ್ಲಿ ಕೃಷಿ

ಭೂಮಿ ಬಗೆದೆಡೆ ಕಲ್ಲುಗಳೇ... ಹಿರಿಯರಿಂದ ಸಿಕ್ಕ ಈ ಕಲ್ಲು ನೆಲದಲ್ಲೇ ಕೃಷಿಗಿಳಿದರು ಈ ರೈತ. ಹಸನಾದ ಭೂಮಿ ಈಗ ಹುಲುಸಾಗಿ, ಎಷ್ಟೊಂದು
ಫಲ ನೀಡುತ್ತಿದೆ...