ಅಪೌಷ್ಟಿಕತೆಗೆ ಮದ್ದು ಮೊಟ್ಟೆ

18 Mar, 2017
ಪ್ರಜಾವಾಣಿ ವಾರ್ತೆ

ಅಂಗನವಾಡಿ ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರಕ್ಕೆ ಎರಡು ದಿನ ಮೊಟ್ಟೆ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ. ಇದೊಂದು ದೂರಗಾಮಿಯಾದ ಅತ್ಯುತ್ತಮ ನಡೆಯಾಗಿದ್ದು, ಕರ್ನಾಟಕದ ಮಕ್ಕಳ ಪೌಷ್ಟಿಕತೆಯನ್ನು ಬಾಧಿಸುತ್ತಿರುವ ಮೂರು ಪ್ರಮುಖ ತೊಡಕುಗಳನ್ನು ನಿವಾರಿಸಲಿದೆ.

ಮೊದಲನೆಯ ತೊಡಕು: ಭಾರತದಲ್ಲಿ ಮಕ್ಕಳು ತಿನ್ನುವ ಆಹಾರದ ಪ್ರಮಾಣ ಅತ್ಯಂತ ಕಡಿಮೆ. ಭಾರತದಲ್ಲಿರುವ ಮೂರು ವರ್ಷದೊಳಗಿನ ಮಕ್ಕಳಲ್ಲಿ ಇಬ್ಬರಲ್ಲಿ ಒಬ್ಬನಿಗೆ ಅಪೌಷ್ಟಿಕತೆ ಕಾಡುತ್ತಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಹೇಳಿದೆ. ಅಪೌಷ್ಟಿಕತೆಯ ಸಮಸ್ಯೆಯಿಂದ ಬಳಲುತ್ತಿರುವ ದೇಶವೊಂದರಲ್ಲಿ ಮಕ್ಕಳ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸುವುದು ಮುನ್ನಡೆಯತ್ತ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ.

ಮಕ್ಕಳಿಗೆ ಸಾಕಷ್ಟು ಆಹಾರ ದೊರೆಯದ ಸಮಸ್ಯೆಯನ್ನು ನಿವಾರಿಸುವ ಬಿಸಿಯೂಟ ಕಾರ್ಯಕ್ರಮವೇ ಬಹಳ ದೊಡ್ಡ ನಡೆ. ಹಾಗಿದ್ದರೂ ಆಹಾರದಲ್ಲಿ ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಅಮಿನೊ ಆಮ್ಲದ ಕೊರತೆಯಿಂದಾಗಿ ಎಳೆ ವಯಸ್ಸಿನಲ್ಲಿಯೇ ಮಕ್ಕಳು ದೈಹಿಕ ಅಸಾಮರ್ಥ್ಯ, ಉಸಿರಾಟದ ತೊಂದರೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಬಳಲುತ್ತಿದ್ದಾರೆ.

ಇಂತಹ ಮಕ್ಕಳಿಗೆ ಮೊಟ್ಟೆ ನೀಡಿಕೆ ದೊಡ್ಡ ವರವಾಗಲಿದೆ. ದೈಹಿಕ, ಮಾನಸಿಕ ಬೆಳವಣಿಗೆ ಮತ್ತು ಪೌಷ್ಟಿಕತೆಯನ್ನು ಸಮಗ್ರವಾಗಿ ಹೊಂದಿರುವ ಕೆಲವೇ ಆಹಾರಗಳಲ್ಲಿ ಮೊಟ್ಟೆಯೂ ಒಂದು. ಪಿತ್ತಜನಕಾಂಗ (ಲಿವರ್) ಮತ್ತು ನರಗಳ ಆರೋಗ್ಯಕರ ಕಾರ್ಯನಿರ್ವಹಣೆ, ಮಿದುಳು ಮತ್ತು ಸ್ನಾಯು ಬೆಳವಣಿಗೆ ಹಾಗೂ ಪಚನ ಕ್ರಿಯೆಗೆ ಸಹಕರಿಸುವ ಬಹಳ ಮುಖ್ಯವಾದ ಕೊಲೀನ್ ಎಂಬ ಪೋಷಕಾಂಶ ಇರುವ ಕೆಲವೇ ಆಹಾರಗಳಲ್ಲಿ ಮೊಟ್ಟೆಯೂ ಒಂದು.

ಮೊಟ್ಟೆ ಬಹಳ ಅಗ್ಗವಾಗಿ ದೊರೆಯುವುದಲ್ಲದೆ ಮಕ್ಕಳಿಗೆ ಆರೋಗ್ಯಕರವಾದ ಸಾಧನ. ದೀರ್ಘ ಕಾಲ ಇದನ್ನು ಕೆಡದಂತೆ ಇರಿಸಲು ಸಾಧ್ಯವಾಗುವುದರಿಂದ ಫ್ರಿಜ್ ವ್ಯವಸ್ಥೆ ಇಲ್ಲದ ಸ್ಥಳಗಳಲ್ಲಿ ಇದು ಬಹಳ ಮೌಲಿಕವಾದ ಆಹಾರ.

ಎರಡನೆಯದು ರಾಜಕೀಯ ತೊಡಕು: ಭಾರತದ ಅತ್ಯಂತ ಬಡ ಕುಟುಂಬಗಳು ಮಾಂಸಾಹಾರಿ. ಹಾಗೆಯೇ ಭಾರತದಲ್ಲಿ ಅಪೌಷ್ಟಿಕತೆಯಿಂದ ಬಳಲುವ ಬಹುಸಂಖ್ಯೆಯ ಮಕ್ಕಳು ಈ ಕುಟುಂಬಗಳಿಗೆ ಸೇರಿದ್ದಾಗಿವೆ. ಬಿಸಿಯೂಟ, ಭಾರತದಲ್ಲಿರುವ ಅತ್ಯಂತ ರಾಜಕೀಯೇತರವಾದ ಕಾರ್ಯಕ್ರಮವಾಗಿದೆ. ಆದರೆ ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಈ ಯೋಜನೆಯ ಮೇಲೆ ಧರ್ಮ ಮತ್ತು ಸಸ್ಯಾಹಾರ ಪದ್ಧತಿಯ ಪ್ರಭಾವ ಇದೆ.

ಇಂತಹ ಪರಿಸ್ಥಿತಿ ಕರ್ನಾಟಕದಲ್ಲಿಯೂ ಇರುವುದು ವಿಪರ್ಯಾಸ. ಆದರೆ ಆಹಾರದಲ್ಲಿ ಮೊಟ್ಟೆಯ ಸೇರ್ಪಡೆಯೊಂದಿಗೆ ಈ ಪ್ರಭಾವಗಳಿಂದ ಹೊರಗೆ ಬರುವುದು ಸಾಧ್ಯವಾಗುತ್ತದೆ. ಸರ್ಕಾರ ಈಗ ಕೈಗೊಂಡಿರುವ ನಿರ್ಧಾರ ಅತ್ಯಂತ ದಿಟ್ಟವಾದುದು ಮತ್ತು ಮುಂದಿನ ಚುನಾವಣೆ ನಂತರವೂ ಇದು ಮುಂದುವರಿಯಲಿದೆ ಎಂದು ಹಾರೈಸೋಣ.

ಮೂರನೆಯದು ವಾಣಿಜ್ಯ ತೊಡಕು: ಸಸ್ಯಾಹಾರವನ್ನು ಎಲ್ಲರ ಮೇಲೆ ಹೇರುವುದು ನೈತಿಕವಾಗಿ ಸರಿಯಲ್ಲ ಮತ್ತು ವಾಣಿಜ್ಯ ದೃಷ್ಟಿಯಿಂದ ಕಾರ್ಯಸಾಧುವೂ ಅಲ್ಲ. ಮೊಟ್ಟೆಗಳ ಮೇಲೆ ನಿಷೇಧ ಹೇರಿ ಪ್ರೊಟೀನ್‌ಗಾಗಿ ಸಸ್ಯಾಹಾರದಲ್ಲಿರುವ ಪ್ರೊಟೀನ್ ಮೂಲಗಳಾದ ಬ್ರಕೋಲಿ ಮತ್ತು ಸೋಯಾಬೀನ್‌ನಂತಹ ಆಹಾರಗಳನ್ನು ಹುಡುಕುವುದು ನಗೆಪಾಟಲಿಗೀಡಾಗುವ ಯೋಚನೆ.

ಯಾಕೆಂದರೆ ಇವು ದುಬಾರಿ ಮತ್ತು ಅವುಗಳನ್ನು ಸಂಗ್ರಹಿಸಿ ಇರಿಸಲು ಫ್ರಿಜ್ ಅತ್ಯಗತ್ಯ. ಈ ಸಸ್ಯಾಹಾರಿ ಪ್ರೊಟೀನ್ ಆಹಾರ ಎಲ್ಲೆಡೆಯೂ ಲಭ್ಯ ಇಲ್ಲ ಮತ್ತು ಅವುಗಳನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಲು ಭಾರಿ ವೆಚ್ಚ ತಗಲುತ್ತದೆ. ಅದು ಬಿಸಿಯೂಟದ ಒಟ್ಟು ವೆಚ್ಚವನ್ನು ದೊಡ್ಡ ಪ್ರಮಾಣದಲ್ಲಿ ಏರಿಕೆ ಮಾಡುತ್ತದೆ. 

ಅದಕ್ಕೆ ಹೋಲಿಸಿದರೆ ಮೊಟ್ಟೆ ಲಭ್ಯವಾಗುವಂತೆ ಮಾಡುವುದು ಬಹಳ ಸುಲಭ. ಯಾಕೆಂದರೆ ಕೋಳಿ ಫಾರಂಗಳು ಸರ್ವತ್ರ ವ್ಯಾಪಿಸಿವೆ. ಬಿಸಿಯೂಟದಲ್ಲಿ ಮೊಟ್ಟೆ ನೀಡುವುದು ಸ್ಥಳೀಯ ವ್ಯಾಪಾರಕ್ಕೆ ಉತ್ತೇಜನ ನೀಡುತ್ತದೆ. ಸ್ಥಳೀಯವಾಗಿಯೇ ಮೊಟ್ಟೆಗಳನ್ನು ಪಡೆದುಕೊಳ್ಳುವುದರಿಂದ ಅದರ ಸಾಗಾಟ ಸುಲಭ ಮತ್ತು ಮಕ್ಕಳಿಗೆ ತಾಜಾ ಮೊಟ್ಟೆಯೂ ದೊರೆಯುತ್ತದೆ.

ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆಯನ್ನು ದಕ್ಷವಾಗಿ ಅನುಷ್ಠಾನಗೊಳಿಸುವುದು ಬಹಳ ಮುಖ್ಯ. ಪೂರೈಕೆಯ ಕೊರತೆ ಅಥವಾ ಕಳಪೆ ಗುಣಮಟ್ಟದ ಮೊಟ್ಟೆ ಪೂರೈಕೆಯಂತಹ ಆಡಳಿತಾತ್ಮಕ ತೊಡಕುಗಳು ಯೋಜನೆಯನ್ನು ಬಾಧಿಸದಂತೆ ನೋಡಿಕೊಳ್ಳಬೇಕು. ಮೊಟ್ಟೆ ನೀಡಿಕೆ ಕ್ರಮವು ಬಡ ಮಕ್ಕಳ ಪೌಷ್ಟಿಕತೆ ಕೊರತೆಯನ್ನು ನೀಗಿಸಬೇಕೇ ಹೊರತು ಅದನ್ನು ಇನ್ನಷ್ಟು ಹೆಚ್ಚಿಸದಂತೆ ನೋಡಿಕೊಳ್ಳಬೇಕು.

ಕರ್ನಾಟಕದ 60 ಸಾವಿರ ಅಂಗನವಾಡಿಗಳಲ್ಲಿ ಬಿಸಿಯೂಟ ಯೋಜನೆ ಜಾರಿಯಲ್ಲಿದೆ. ಅಂಗನವಾಡಿಗಳಲ್ಲಿ ಹಿಂದೆಯೂ ಮೊಟ್ಟೆ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಆಗ ಅದು ಬಿಸಿಯೂಟದ ಭಾಗವಾಗಿರಲಿಲ್ಲ. ರಾಜಕೀಯ ಲೆಕ್ಕಾಚಾರಗಳ ತೊಡಕುಗಳಿಗೆ ಒಳಗಾಗದಂತೆ ಸರ್ಕಾರವು ಬುದ್ಧಿವಂತಿಕೆಯ ಹೆಜ್ಜೆ ಇರಿಸಿದೆ.

ಇದು ಅಂಗನವಾಡಿ ಮಕ್ಕಳಿಗೆ ಪ್ರಯೋಜನವಾಗುವುದರ ಜತೆಗೆ ಹತ್ತಿರದ ಸಮುದಾಯಗಳಿಗೂ ಲಾಭಕರ. ಅಂದಾಜುಗಳ ಪ್ರಕಾರ, ರಾಜ್ಯದ 60 ಲಕ್ಷ ಮಕ್ಕಳಿಗೆ ಮೊಟ್ಟೆ ನೀಡಿಕೆಯಿಂದ ಪ್ರಯೋಜನ ದೊರೆಯಲಿದೆ.

 
-ಗಣೇಶ್ ಸಿ.ಆರ್.
ಲೇಖಕ ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕ

Read More

Comments
ಮುಖಪುಟ

‘ಕೈ’ ಪಟ್ಟಿ ಅಂತಿಮ: ಬಿಜೆಪಿ ನಡೆ ನಿಗೂಢ

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಬಾಕಿ ಇರುವಾಗ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಆದರೆ, ಪ್ರಮುಖ ವಿರೋಧ ಪಕ್ಷ ಬಿಜೆಪಿ 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಖೈರುಗೊಳಿಸಿಲ್ಲ.

ಅತ್ಯಾಚಾರ, ಆಸ್ತಿ ಮುಟ್ಟುಗೋಲು: ಸುಗ್ರೀವಾಜ್ಞೆಗೆ ಅಂಕಿತ

12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶನಿವಾರ ರಾತ್ರಿಯೇ ಅಂಕಿತ ಹಾಕಿದ್ದಾರೆ.

‘ಚಾಮುಂಡಿ’ ಕೋಪಕ್ಕೆ ಬೆದರಿ ಬಾದಾಮಿಗೆ

‘ದೇಶ ಗೆದ್ದ ಹಮ್ಮಿನಲ್ಲಿರುವ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುತ್ತೇನೆ’ ಎಂದು ಸಾರುತ್ತಿರುವ, ‘ನುಡಿದಂತೆ ನಡೆದಿದ್ದೇವೆ’ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದಾಗಿ ಬಾದಾಮಿಗೂ ಲಗ್ಗೆ ಇಟ್ಟಿದ್ದಾರೆಯೇ?

ಮಾದ್ಯಮಗಳಿಗೆ ಮಸಾಲೆ ಕೊಡಬೇಡಿ: ಮೋದಿ ಎಚ್ಚರಿಕೆ

ಕ್ಯಾಮೆರಾ ನೋಡಿದ ಕೂಡಲೇ ನೀವು ಮಾತನಾಡಲು ಶುರುಮಾಡುತ್ತೀರಿ, ನೀವು ಮಾತನಾಡಿದ ಅರೆಬರೆ ವಿಷಯಗಳನ್ನೇ ಅವರು ಹೆಕ್ಕಿ ಪ್ರಸಾರ ಮಾಡುತ್ತಾರೆ. ಹಾಗಾಗಿ  ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಿ 

ಸಂಗತ

ಅತ್ಯಾಚಾರ ನಂತರದ ಅನಾಚಾರ

ದೇಶದಲ್ಲಿ ನಡೆಯುವ ಯಾವುದೇ ಘಟನೆಯನ್ನು ರಾಜಕೀಯ ಆಯಾಮದಿಂದಲೇ ವಿಶ್ಲೇಷಿಸುವ ಪರಂಪರೆ ಆರಂಭವಾಗಿರುವುದು ದುರಂತ.

ವಿಶ್ವ ಪುಸ್ತಕ ದಿನ ಹಾಗೂ ಪುಸ್ತಕ ಸಂಸ್ಕೃತಿ

ಪುಸ್ತಕಗಳು ಎಲ್ಲರಿಗೂ ಸಂಗಾತಿಗಳಾಗಬೇಕಾಗಿರುವುದು ಇಂದಿನ ಅಗತ್ಯ. ಈ ಬಾರಿಯ ‘ವಿಶ್ವ ಪುಸ್ತಕ ದಿನ’ ನಮ್ಮೆಲ್ಲರಲ್ಲೂ ಪುಸ್ತಕ ಪ್ರೀತಿಯನ್ನು ಉದ್ದೀಪಿಸುವ ದಿನವಾಗಲಿ

ಸಹಭೋಜನ ಮತ್ತು ಸಮಾನತೆಯ ಆದರ್ಶ

ಮೊದಲೇ ಕೈಬಾಯಿಗಿಲ್ಲದೆ ನಿಕೃಷ್ಟ ಜೀವನ ನಡೆಸುವ ಜನರಿಗೆ ನಾಲ್ಕು ತಿಂಗಳಿಂದ ಸಂಬಳವಿಲ್ಲದ ಮಕ್ಕಳುಮರಿಗಳ ಕುಟುಂಬವೊಂದು ಎಷ್ಟು ಕಂಗಾಲಾಗಿರಬಹುದೋ ಯೋಚಿಸಿ. ಅಂಥವರ ಮನೆಗೆ ನಾಯಕರ ಪುಟ್ಟ ಪಟಾಲಮ್ಮು ಬೆಳಬೆಳಗ್ಗೆ ನುಗ್ಗಿ ‘ನಿಮ್ಮೊಂದಿಗೆ ಉಪಾಹಾರ ಸೇವಿಸುತ್ತೇವೆ’ ಎಂದರೆ ಹೇಗಾಗಿರಬೇಕು?

ರಾಜಕೀಯ ನಂಬಿ ಕೆಟ್ಟ ಮಾದಿಗರು

ರಾಜ್ಯ ರಾಜಕಾರಣದಲ್ಲಿ ಮಾದಿಗ ಮತ್ತು ಅದರ ಉಪಜಾತಿಗಳಿಗೆ ಎಲ್ಲಾ ರಾಜಕೀಯ ಪಕ್ಷಗಳೂ ನಂಬಿಕೆದ್ರೋಹ ಎಸಗುತ್ತಾ ಬಂದಿವೆ

ಆಟಅಂಕ

ರಣಜಿ: ಹಳೇ ಮಾದರಿಗೆ ಹೊಸ ರೂಪ

ರಣಜಿ ಆರಂಭವಾದಾಗಿನಿಂದ ಆಗಾಗ ನಿಯಮ ಮತ್ತು ಟೂರ್ನಿಯ ಮಾದರಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಈ ವರ್ಷದ ಟೂರ್ನಿಯಿಂದ ಪ್ರಿ ಕ್ವಾರ್ಟರ್‌ ಫೈನಲ್‌ ನಿಯಮ ಜಾರಿಗೆ ಬರಲಿದೆ. ಇದರಿಂದ ಎಂಟು ತಂಡಗಳಿಗೆ ತಲಾ ಒಂದು ಪಂದ್ಯ ಹೆಚ್ಚಿಗೆ ಸಿಗುತ್ತದೆ. ಇದರಿಂದ ಆಟಗಾರರ ಗುಣಮಟ್ಟ ಹೆಚ್ಚಾಗಲು ಸಾಧ್ಯವಾಗುತ್ತದೆ ಎಂದು ಪ್ರಮೋದ ಜಿ.ಕೆ.ಅಭಿಪ್ರಾಯಪಡುತ್ತಾರೆ.

ಇದು ಫ್ಯಾಂಟಸಿ ಲೀಗ್ ಕಾಲ

ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳು, ಐಪಿಎಲ್‌ ಹೀಗೆ  ಹೊಸ ಹೊಸ ರೂಪಗಳಲ್ಲಿ ಕ್ರಿಕೆಟ್ ಬೆಳೆಯುತ್ತಿದೆ. ಅದೇ ರೀತಿ ಕ್ರಿಕೆಟ್‌ ಮೇಲಿನ ಅಭಿಮಾನಿಗಳ ‘ಭಕ್ತಿ’ಯೂ ಹೆಚ್ಚಾಗುತ್ತಲೇ ಇದೆ. ಈಗ ಇದಕ್ಕೆ ಹೊಸದಾಗಿ ಫ್ಯಾಂಟಸಿ ಕ್ರಿಕೆಟ್‌  ಸೇರ್ಪಡೆಯಾಗಿದೆ.

ಶೂಟಿಂಗ್‌ ಮೇಲೆ ತೂಗುಗತ್ತಿ

ಗೋಲ್ಡ್ ಕೋಸ್ಟ್‌ ಕಾಮನ್‌ವೆಲ್ತ್ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಭಾರತ ಅಮೋಘ ಸಾಧನೆ ಮಾಡಿದೆ. ಆದರೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ಮುಂದಿನ ಕೂಟದಲ್ಲಿ ಶೂಟಿಂಗ್‌ ಕ್ರೀಡೆಯ ಸೇರ್ಪಡೆ ಬಗ್ಗೆ ಈಗ ಚರ್ಚೆ ಆರಂಭಗೊಂಡಿದೆ. ಆತಿಥೇಯರು ಈ ಕ್ರೀಡೆಯನ್ನು ಕೈಬಿಡುವುದಾಗಿ ಹೇಳಿದ್ದು ಭಾರತ ಶೂಟಿಂಗ್ ಸಂಸ್ಥೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶೂಟಿಂಗ್‌ ಕೈಬಿಡಲೇಬಾರದು ಎಂದು ಒತ್ತಾಯಿಸಿದೆ.

ಡಬಲ್ಸ್‌ ವಿಭಾಗಕ್ಕೂ ಮನ್ನಣೆ ಸಿಗುತ್ತಿದೆ...

ಭಾರತದ ಬ್ಯಾಡ್ಮಿಂಟನ್‌ ಕ್ಷಿತಿಜದ ಮಿನುಗುತಾರೆ ಕರ್ನಾಟಕದ ಅಶ್ವಿನಿ ಪೊನ್ನಪ್ಪ. 2007ರಲ್ಲಿ ವೃತ್ತಿಪರ ಬ್ಯಾಡ್ಮಿಂಟನ್‌ಗೆ ಅಡಿ ಇಟ್ಟ ಅಶ್ವಿನಿ, ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಿಶ್ರ ತಂಡ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಪದಕ ಗೆದ್ದಿರುವ ಅವರನ್ನು ಸಂದರ್ಶನ ಮಾಡಿದ್ದಾರೆ.

ಶಿಕ್ಷಣ

ಪ್ರಜಾವಾಣಿ ಕ್ವಿಜ್ 18

ತಿ. ತಾ. ಶರ್ಮರು ಪತ್ರಕರ್ತರಾಗುವ ಮುನ್ನ ಯಾವ ಕೆಲಸದಲ್ಲಿದ್ದರು

‘ಸಿಐಡಿ–ಸಿಬಿಐ ವಿಭಾ‌ಗಗಳಲ್ಲಿ ಕೆಲಸ ಮಾಡಲು ನನಗಿಷ್ಟ’

ಸಿಐಡಿ, ಸಿಬಿಐನಂತಹ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಕುತೂಹಲವಿದ್ದು. ಈ ವಿಭಾಗದಲ್ಲಿ ಕೆಲಸ ಗಳಿಸಲು ಯಾವ ಡಿಗ್ರಿ ಅಗತ್ಯ ಹಾಗೂ ಅದಕ್ಕೆ ಇನ್ನೇನಾದರೂ ಕೌಶಲ್ಯ ಇರಬೇಕು ಎಂಬುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

 

ಹೀಗಿರಲಿ ನಿಮ್ಮ ನಡುವಿನ ಮಾನಸಿಕ ಅಂತರ!

ಇದೀಗ ಪರೀಕ್ಷೆಗಳು ಮುಗಿದು ಫಲಿತಾಂಶವೂ ಬಂದಾಗಿದೆ. ಮಕ್ಕಳು ರಜೆಯ ಮಜವನ್ನು ಅನುಭವಿಸಲು ಸನ್ನದ್ಧರಾಗಿದ್ದಾರೆ. ಈ ವೇಳೆ ಪೋಷಕರು ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾದ ಬಹುಮುಖ್ಯವಾದ ವಿಷಯವೊಂದಿದೆ. 

ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

ಅಧ್ಯಾಪಕರಾದವರು ಮಕ್ಕಳು ತಮ್ಮನ್ನು ಸರಳವಾಗಿ ಸಂಪರ್ಕಿಸಲು ಮುಕ್ತವಾದ ಒಂದು ಅವಕಾಶವನ್ನು ತೆರೆದಿಡಬೇಕು. ಎಂದರೆ ಒಂದಿಷ್ಟು ತೆರೆದಿಟ್ಟ ‘ಜಾಗ’ ಅಥವಾ ವಲಯ ಇರಬೇಕು. ಮಕ್ಕಳು ಮತ್ತು ಅಧ್ಯಾಪಕರು ಎಷ್ಟೇ ಪರಸ್ಪರ ತೆರೆದುಕೊಂಡಿದ್ದಾರೆ ಎಂದು ಭಾವಿಸಿದರೂ ಮುಚ್ಚಿಟ್ಟುಕೊಂಡಿರುವ ಅನೇಕ ಸಂಗತಿಗಳಿರುತ್ತವೆ.