ಸಣ್ಣ ರೈತರ ನೆರವಿಗೆ ವಿದ್ಯಾರ್ಥಿಗಳು

21 Mar, 2017
ಪ್ರಜಾವಾಣಿ ವಾರ್ತೆ

ಐ.ಟಿ.ಐಗಳಲ್ಲಿ ಸಾಮಾನ್ಯವಾಗಿ ಪಠ್ಯ ಆಧರಿತ ತರಬೇತಿಗಳು ನಡೆಯುತ್ತವೆ. ಆದರೆ ಇದಕ್ಕಿಂತ ಭಿನ್ನವಾಗಿ ವಿದ್ಯಾರ್ಥಿಗಳಲ್ಲಿ ತರಬೇತಿಗೆ ಪೂರಕವಾದ ಕಾರ್ಯಚಟುವಟಿಕೆಗಳನ್ನು ಮಾಡಬೇಕೆನ್ನುವ ಉದ್ದೇಶದಿಂದ ಧಾರವಾಡದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳು ಕೃಷಿಕರಿಗೆ ಅನುಕೂಲವಾಗುವ ಹಲವಾರು ಯಂತ್ರಗಳನ್ನು ರೂಪಿಸಿದ್ದಾರೆ.

‌ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರ ಹಾಗೂ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದರವರ ಸಲಹೆ ಮೇರೆಗೆ ಅತಿ ಕಡಿಮೆ ದರದಲ್ಲಿ ಇದನ್ನು ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ  ಉಪನ್ಯಾಸಕರಾದ ಮಹೇಶ ಕುಂದರಪಿಮಠ, ಸಿದ್ಧಲಿಂಗಯ್ಯಾ ಹಿರೇಮಠ, ಮಹೇಶ ಬಡಿಗೇರ, ಶೋಭಾ ಕಮ್ಮಾರ,  ವಿನಾಯಕ ಗವಳಿ, ಮಂಜುನಾಥ ಹಾವೇರಿ, ಅಶೋಕ ಜಿಗಳೂರ ಮಾರ್ಗದರ್ಶನ ನೀಡಿದ್ದಾರೆ. ಇವುಗಳಲ್ಲಿ ಹಲವು ಉಪಕರಣಗಳು ವಿದ್ಯುತ್ ಹಾಗೂ ಇಂಧನವಿಲ್ಲದೇ ಕಾರ್ಯ ನಿರ್ವಹಿಸಬಲ್ಲವು. ಉಪಕರಣಗಳ ಪರಿಚಯ ಇಲ್ಲಿದೆ.

ಸೈಕಲ್ ಪೆಡಲಿಂಗ್‌: ಈ ಯಂತ್ರ ಕೇವಲ ಮಾನವ ಶಕ್ತಿಯ ಮುಖಾಂತರ 25 ಅಡಿ ನೀರನ್ನು ಮೇಲೆತ್ತುವ ಕೆಲಸ ಮಾಡುತ್ತದೆ. ದೇಹಕ್ಕೆ ವ್ಯಾಯಾಮ ಹಾಗೂ ಹೊಲ ಮನೆಗಳಿಗೆ ನೀರು ಎರಡನ್ನೂ ಇದರಿಂದ ಪಡೆಯಬಹುದು. ಸೈಕಲ್ ಪೆಡಲ್ ಮಾಡಿದಾಗ ಸೆಂಟ್ರಿಪ್ಯೂಗಲ್ ಪಂಪ್‌ನಿಂದ ನೀರನ್ನು ಮೇಲೆತ್ತುವ ಕೆಲಸವಾಗುತ್ತದೆ.

ಗೋಬರ್ ಗ್ಯಾಸ್: ಸಾಮಾನ್ಯವಾಗಿ ಗೋಬರ್‌ಗ್ಯಾಸ್‌ ಘಟಕ ನಿರ್ಮಾಣಕ್ಕೆ ಭಾರಿ ಹಣ ತೆರಬೇಕು. ಆದರೆ ಇದು ಮನೆಗಳಲ್ಲಿ ಉಪಯೋಗಿಸುವ ಸಿಲಿಂಡರ್ ಗಾತ್ರದ್ದು ಹಾಗೂ ಸರಾಗವಾಗಿ ಕೊಂಡಯ್ಯಬಲ್ಲ ಗ್ಯಾಸ್‌. ಚಿಕ್ಕ ಮನೆಗಳಲ್ಲಿ ವಾಸ ಮಾಡುವವರಿಗೆ ಇದು ವರದಾನ.

(ಬಯೋಗ್ಯಾಸ್)

ಕ್ರಿಮಿನಾಶಕ ಸಿಂಪಡಣೆ ಯಂತ್ರ: ಸಾಮಾನ್ಯವಾಗಿ ರೈತರು ಕ್ರಿಮಿನಾಶಕ ಯಂತ್ರವನ್ನು ಬೆನ್ನಿಗೆ ಕಟ್ಟಿಕೊಂಡು ಸಿಂಪಡಣೆ ಮಾಡುತ್ತಾರೆ. ಇಲ್ಲಿ ಆ ಭಾರವನ್ನು ರೈತ ಹೊರಬೇಕಾಗುತ್ತದೆ. ಐ.ಟಿ.ಐ ವಿದ್ಯಾರ್ಥಿಗಳು ತಯಾರಿಸಿದ ಕ್ರಿಮಿನಾಶಕ ಯಂತ್ರ ನಾಲ್ಕು ಚಕ್ರಗಳನ್ನು ಹೊಂದಿರುವ ಟ್ರಾಲಿಯಲ್ಲಿ ಇರಿಸಲಾಗಿದ್ದು, ಟ್ರಾಲಿಯನ್ನು ಮುಂದಕ್ಕೆ ಚಲಿಸಿದಾಗ ಉಂಟಾಗುವ ಒತ್ತಡದಿಂದ ಕ್ರಿಮಿನಾಶಕ ತಂತಾನೆ ಸಿಂಪಡಣೆಯಾಗುತ್ತದೆ. ಸಿಂಪಡಣೆಯ ಎತ್ತರ ಅಗಲವನ್ನು ನಮಗೆ ಬೇಕಾದ ಹಾಗೆ ಹೊಂದಿಸಿಕೊಳ್ಳಬಹುದು.

(ಕೀಟನಾಶಕ ಯಂತ್ರ)

ಕಳೆ ಕೀಳುವ ಯಂತ್ರ: ಇಂಧನ ಹಾಗೂ ವಿದ್ಯುತ್ ಶಕ್ತಿ ಇಲ್ಲದೇ ಒಬ್ಬನೇ ವ್ಯಕ್ತಿ ಕಳೆ ತೆಗೆಯುವ ಯಂತ್ರ ಇದಾಗಿದೆ. ಸರಾಗವಾಗಿ ಉರುಳುವ ಗಾಲಿಯುಳ್ಳ ತಳಭಾಗಕ್ಕೆ ಕಳೆ ಕತ್ತರಿಸುವ ವಿವಿಧ ಅಳತೆಗಳ ಬ್ಲೇಡ್‌ಗಳನ್ನು ಜೋಡಿಸಿ ಹೊಲದಲ್ಲಿ ಇದನ್ನು ಓಡಿಸಿದಾಗ ಕಸ ಕಡ್ಡಿಗಳನ್ನು ತೆಗೆಯುವುದು.

ಕಾಳು/ ಕಸ ಬೇರ್ಪಡಿಸುವ ಯಂತ್ರ: ಹೊಲದಲ್ಲಿಯ ಕಾಳುಗಳನ್ನು ಸ್ವಚ್ಛ ಮಾಡಲು ದೊಡ್ಡ ದೊಡ್ಡ ಯಂತ್ರಗಳು ಬಂದಿವೆ. ಆದರೆ ಸಣ್ಣ ಪ್ರಮಾಣದ, ಅಂದರೆ ಒಂದು ಅಶ್ವಶಕ್ತಿಯ ವಿದ್ಯುತ್ ಮೋಟಾರು ಹೊಂದಿರುವ ಈ ಯಂತ್ರದಲ್ಲಿ ವಿವಿಧ ಆಕಾರದ ಸಾಣಿಗೆಗಳ ಮುಖಾಂತರ ಕಸಕಡ್ಡಿ ಬೇರ್ಪಡಿಸಬಹುದು.

**

–ಮಹಾವೀರ ಉಪಾದ್ಯೆ

Read More

Comments
ಮುಖಪುಟ

ಪಾನ್‌ಬ್ರೋಕರ್‌ ಸೋಗಿನಲ್ಲಿ ಆರೋಪಿಗಳ ಬಂಧನ

ಪೊಲೀಸರ ಸಂಚಿನ ಬಗ್ಗೆ ಅರಿಯದ ಆರೋಪಿ, ಮಂಗಳವಾರ ಸಂಜೆ ಅಪಾರ್ಟ್‌ಮೆಂಟ್ ಬಳಿ ಬರುವಂತೆ ಕರೆದಿದ್ದ. ಅಂತೆಯೇ ಪೊಲೀಸರ ತಂಡ ಸಂಜೆ 6.30ರ ಸುಮಾರಿಗೆ ಅಲ್ಲಿಗೆ ತೆರಳಿತ್ತು...

ಪೆಟ್ರೋಲಿಯಂ ಉತ್ಪನ್ನ, ರಿಯಲ್‌ ಎಸ್ಟೇಟ್‌ ಜಿಎಸ್‌ಟಿ ವ್ಯಾಪ್ತಿಗೆ

ಜಿಎಸ್‌ಟಿ ಮಂಡಳಿಯಲ್ಲಿ ಎಲ್ಲ ರಾಜ್ಯಗಳೂ ಒಪ್ಪಿಗೆ ನೀಡುವವರೆಗೆ ಪೆಟ್ರೋಲಿಯಂ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ವಿಧಿಸುವುದಿಲ್ಲ...

‘ವಿಮಾನಯಾನ ದರ ಅತ್ಯಂತ ಅಗ್ಗ’

ದುಬಾರಿ ಇಂಧನ, ವಿಮಾನ ಖರೀದಿ ಮತ್ತು ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ ಹಾಗೂ ತೆರಿಗೆ ಹೊರೆ ಹೊರತಾಗಿಯೂ ವಿಮಾನ ಪ್ರಯಾಣ ದರ ಅತ್ಯಂತ ಕಡಿಮೆ ಇದೆ...

ಹಣಕಾಸು ನೆರವಿಗೆ ಕೇಂದ್ರ ನಕಾರ

ಕಂಪೆನಿಗೆ ಸೇರಿದ ಆಸ್ತಿ ಮಾರಾಟ ಮಾಡಿ ಸಿಬ್ಬಂದಿಯ ಬಾಕಿ ವೇತನ  ನೀಡುವಂತೆ ಎಚ್‌ಎಂಟಿಗೆ ಸೂಚನೆ ನೀಡಿರುವುದಾಗಿ ಬೃಹತ್‌ ಕೈಗಾರಿಕಾ ಸಚಿವ ಅನಂತ್‌ ಗೀತೆ ತಿಳಿಸಿದ್ದಾರೆ...

ಸಂಗತ

ಸಹ್ಯಾದ್ರಿ ಮತ್ತು ಸಾಮೂಹಿಕ ಭವಿಷ್ಯ

ಪಶ್ಚಿಮಘಟ್ಟಗಳೂ ಒಳಗೊಂಡಂತೆ ದೇಶದ ಪರಿಸರ ಪರಿಸ್ಥಿತಿ ಮಾತ್ರ ಬಿಗಡಾಯಿಸುತ್ತಲೇ ಇದೆ. ಸಹ್ಯಾದ್ರಿ ಮಡಿಲಿನ ಬಹುಪಾಲು ಸಂಪದ್ಭರಿತ ಕಾಡುಗಳು ಹಾಗೂ ನದಿ ಕಣಿವೆಗಳು ಅತಿಕ್ರಮಣ, ಮರಕಡಿತ ಹಾಗೂ ಕ್ವಾರಿಗಳಿಗೆ ಬಲಿಯಾಗುತ್ತಿವೆ.

ವೈದ್ಯಕೀಯ ಸೀಟು: ನ್ಯಾಯ ಒದಗಿಸಿ

ಜನರಿಂದ ಚುನಾಯಿತವಾದ ಸರ್ಕಾರವು ಕಾನೂನು-ತೀರ್ಪುಗಳನ್ನೆಲ್ಲ ಕಡೆಗಣಿಸಿ ಜನಹಿತಕ್ಕೆ ವಿರುದ್ಧವಾಗಿ  ವರ್ತಿಸುವ ಚಾಳಿಯನ್ನು ಮೈಗೂಡಿಸಿಕೊಂಡಿದೆ ಎನ್ನುವುದಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ.

ಕಾಡುಗುಡ್ಡದಲ್ಲಿ ನೀರಿನ ಠೇವಣಿ

ಲ್ಯಾಟ್ರೈಟ್ ಕಲ್ಲು ಹಾಸಿನ ಬೋಳು ಗುಡ್ಡದಲ್ಲಿ ನಾಟಿ ಮಾಡಿದ ಗಿಡಗಳು ಮಳೆಯಲ್ಲಿ ನೀರು ಹಿಡಿಯುವಂತಾದರೆ ಭೂಸವಕಳಿ ತಗ್ಗುತ್ತದೆ, ಭೂಮಿಗೂ ನೀರಿಂಗುತ್ತದೆ. ನಾಟಿ ಮಾಡಿದ ಗಿಡಗಳ ಸುತ್ತಲಿನ ಹುಲ್ಲನ್ನು ಕೆತ್ತಿ ಗಿಡದ ಬುಡಕ್ಕೆ ಮಣ್ಣೇರಿಸಿದರೆ ಬೆಂಕಿಯಿಂದ ಗಿಡ ನಾಶ ತಡೆಯಬಹುದು.

ಐಐಎಂ ಸ್ವಾಯತ್ತೆ – ಸಾಮಾಜಿಕ ವೈವಿಧ್ಯ

ಅಹಮದಾಬಾದ್, ಬೆಂಗಳೂರು ಮತ್ತು ಕಲ್ಕತ್ತಾ ಐಐಎಂಗಳು ಕಳೆದ ಮೂರು ದಶಕಗಳಿಂದ ಪಿಎಚ್‌.ಡಿ ಪದವಿ ನೀಡುತ್ತಿವೆ. ಬೋಧಕರಿಗೆ ಸಂಬಂಧಿಸಿದ ಶಾಶ್ವತ ಸಂಘಗಳನ್ನು ಹೊಂದಿರುವ 13 ಐಐಎಂಗಳಲ್ಲಿನ ಶೇಕಡ 31ರಷ್ಟು ಬೋಧಕರು ಐಐಎಂಗಳಿಂದಲೇ ಪಿಎಚ್‌.ಡಿ ಪದವಿ ಪಡೆದಿದ್ದಾರೆ.

ಚಂದನವನ

ಬಂಡು ಮನಸ್ಥಿತಿಯ ‘ಕಥಾನಾಯಕಿ’

‘ನಾಯಕನಿಗೆ ಪೂರಕವಾಗಿ ಹಾಡು, ದೃಶ್ಯಗಳಲ್ಲಿ ನಟಿಸುವವರಿಗೆ ನಾಯಕಿ ಎನ್ನುತ್ತಿದ್ದೇವೆ. ನಾನು ಅಂಥ ಪಾತ್ರಗಳಲ್ಲಿ ನಟಿಸುವುದಿಲ್ಲ. ಕಥೆಗೆ ನಾಯಕಿಯಾದರೆ ಮಾತ್ರ ನಟಿಸುತ್ತೇನೆ’. ಇದು ಅಕ್ಷತಾ ಪಾಂಡವಪುರ ಸ್ಪಷ್ಟಮಾತು. ‘ಪಲ್ಲಟ’ ಚಿತ್ರದ ಈ ಚೆಲುವೆ, ಕನ್ನಡ ಚಿತ್ರರಂಗಕ್ಕೆ ರಂಗಭೂಮಿಯ ಹೊಸ ಕೊಡುಗೆ.

ಇದು ರಾಜಕುಮಾರ್, ಪುನೀತ್ ರಾಜಕುಮಾರ್...

ಶೀರ್ಷಿಕೆಯಿಂದಲೇ ಚಿತ್ರರಸಿಕರಲ್ಲಿ ಕುತೂಹಲ ಮೂಡಿಸಿರುವ ‘ರಾಜಕುಮಾರ’ ಇಂದು ತೆರೆಕಾಣುತ್ತಿದೆ. ಕನ್ನಡ ಚಿತ್ರೋದ್ಯಮದಲ್ಲಿ ಹಬ್ಬದ ವಾತಾವರಣ ಮೂಡಿಸಿರುವ ಈ ಸಿನಿಮಾದ ಬಗ್ಗೆ ಪುನೀತ್ ರಾಜಕುಮಾರ್ ‘ಚಂದನವನ’ ಪುರವಣಿಯೊಂದಿಗೆ ಮಾತನಾಡಿದ್ದಾರೆ.

ಅಡ್ಡದಾರಿ ಪ್ರವೇಶ, ಸಿಕ್ಸ್‌ಪ್ಯಾಕ್‌ ಬಂಡವಾಳ!

ಇತ್ತೀಚೆಗೆ ಬರುತ್ತಿರುವ ಹೊಸ ಕಲಾವಿದರಲ್ಲಿ ಎಫರ್ಟ್‌ ಇಲ್ಲ. ಶಾರ್ಟ್‌ ಕಟ್‌ ಮೂಲಕ ಚಿತ್ರರಂಗ ಪ್ರವೇಶಿಸುವ ಯುವ ಕಲಾವಿದರ ಬಗ್ಗೆ ವಿಜಯ್ ಬೇಸರ.

ಸುಂದರ ವ್ಯಕ್ತಿತ್ವಗಳ ಜೊತೆ ಮತ್ತೆ ರಮೇಶ್‌ ಮಾತು–ಕತೆ

ರಮೇಶ್ ಅರವಿಂದ ನಿರೂಪಣೆಯ ‘ವೀಕೆಂಡ್‌ ವಿತ್ ರಮೇಶ್‌’ ರಿಯಾಲಿಟಿ ಷೋನ ಮೂರನೇ ಆವೃತ್ತಿ ನಾಳೆಯಿಂದ (ಮಾರ್ಚ್‌ 25ರಿಂದ) ಶುರು. ದಕ್ಷಿಣ ಭಾರತದ ಜನಪ್ರಿಯ ನಟ ಪ್ರಕಾಶ್ ರೈ ಆರಂಭದ ಸಂಚಿಕೆಯ ಅತಿಥಿ.