ಸರ್ಕಾರಕ್ಕೆ ‘ಜಿಲೇಬಿ’ ಅಲರ್ಜಿ

21 Mar, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ‘ಜಿಲೇಬಿಗೆ(ಗೌಡ, ಲಿಂಗಾಯತ, ಬ್ರಾಹ್ಮಣ) ಸಂಬಂಧಿಸಿದ ಕಡತಗಳು ಹೋದರೆ, ಈ ಸರ್ಕಾರದಲ್ಲಿ ಕೊಳೆಯುತ್ತಾ  ಬೀಳುವುದು ಗ್ಯಾರಂಟಿ’ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಟೀಕಿಸಿದರು.

ವಿಧಾನಸಭೆಯಲ್ಲಿ ಸೋಮವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಈಗಿನ ಸರ್ಕಾರಕ್ಕೆ ಜಿಲೇಬಿ ಎಂದರೆ ಅಲರ್ಜಿ. ಅದಕ್ಕೇ ನಾನ್‌ ಜಿಲೇಬಿ ಕಡತಗಳು ಮಾತ್ರ ವಿಲೇವಾರಿ ಆಗುತ್ತಿವೆ’ ಎಂದರು.

ಈ ಹೇಳಿಕೆ ಸ್ವಾರಸ್ಯಕರ ಚರ್ಚೆಗೆ ದಾರಿ ಮಾಡಿಕೊಟ್ಟಿತು. ಹಲವು ಸದಸ್ಯರು ‘ಯಾವುದದು ಜಿಲೇಬಿ’ ಎಂದು ಕುತೂಹಲದಿಂದ ಕೇಳಿದರು.

‘ಆಡಳಿತ ನಡೆಸುವವರ ಸಂಕೇತ ಭಾಷೆಯಲ್ಲಿ ‘ಜಿಲೇಬಿ’ ಎಂದರೆ ಗೌಡ, ಲಿಂಗಾಯತ ಹಾಗೂ ಬ್ರಾಹ್ಮಣ ಸಮುದಾಯ. ‘ಜಿಲೇಬಿ’ಗೆ ಸಂಬಂಧಿಸಿದ ಕಡತಗಳು ಹೋದರೆ ಪಕ್ಕಕ್ಕೆ ಇಡಲಾಗುತ್ತದೆ. ಅದೇ ನಾನ್‌ ಜಿಲೇಬಿ (ಮೇಲಿನ ಮೂರೂ ಸಮುದಾಯಗಳನ್ನು ಹೊರತುಪಡಿಸಿದ ಇತರ ಜಾತಿಗಳು) ಕಡತಗಳು ಬಂದರೆ ತಕ್ಷಣ ವಿಲೇವಾರಿ ಆಗುತ್ತವೆ’ ಎಂದು ಅವರು ಸರ್ಕಾರವನ್ನು ಕುಟುಕಿದರು.

‘ನಮ್‌ ಕಡೆ ಹೆಣ್ಣು ಹುಟ್ಟಿದರೆ ಜಿಲೇಬಿ, ಗಂಡಾದರೆ ಫೇಡೆ ಹಂಚ್ತೀವಿ. ಸ್ವೀಟ್‌ ಏನು ಬಂದೈತಿ ನೋಡಿದಾಗ ಯಾವ ಕೂಸು ಹುಟ್ಟೈತಿ ಅಂತ ಗೊತ್ತಾಗ್ತೈತಿ. ಈ ಸರ್ಕಾರ ಕೂಡ ಕಡತ ವಿಲೇವಾರಿಗೆ ಅಂಥದ್ದೇನೋ ನಿಯಮ ಮಾಡೈತಿ’ ಎಂದು ಬಿಜೆಪಿಯ ಲಕ್ಷ್ಮಣ ಸವದಿ ಚರ್ಚೆಗೆ ಇನ್ನಷ್ಟು ರಂಗು ತುಂಬಿದರು.

‘ಹೆಣ್ಣು ಹುಟ್ಟಿದರೆ ಲಕ್ಷ್ಮಿ ಬಂದಂತೆ. ಜಿಲೇಬಿ ಹಂಚಿ ಸಂಭ್ರಮಿಸುವುದು ಒಳ್ಳೆಯದೇ’ ಎಂದು ಆಡಳಿತ ಪಕ್ಷದ ಹಲವು ಸದಸ್ಯರು ಹೇಳಿದಾಗ, ‘ಸರ್ಕಾರದ ಈ ಜಿಲೇಬಿ, ನಾನ್‌ ಜಿಲೇಬಿ ಕಡತಗಳಿಂದ ಯಾರ ಬಳಿಗೆ ಲಕ್ಷ್ಮಿ ಬಂದಿದ್ದಾಳೆ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಕೇಳಿದರು.

Read More

Comments
ಮುಖಪುಟ

ಆರು ಸಂಸದರ ಅಮಾನತು

‘ಲೋಕಸಭೆ ಕಾರ್ಯಾಲಯದ ಮೇಜಿನ ಮೇಲಿದ್ದ ಕಾಗದ ಪತ್ರಗಳನ್ನು ಹರಿದು ಸ್ಪೀಕರ್‌ ಪೀಠದತ್ತ ಅವರು ಎಸೆದಿದ್ದಾರೆ. ಪೀಠದ ಮುಂದೆ ಗದ್ದಲ ಎಬ್ಬಿಸುವುದೇ ಅಶಿಸ್ತಿನ ನಡವಳಿಕೆ. ಕಾಗದ ಪತ್ರಗಳನ್ನು ಹರಿದು ನಾಲ್ಕು ಬಾರಿ ಸ್ಪೀಕರ್‌ ಕಡೆಗೆ ಎಸೆಯುವುದು ಇನ್ನೂ ಕೆಟ್ಟ ನಡವಳಿಕೆ’

ಭಾರತ ಬಾಹ್ಯಾಕಾಶದ ‘ಆದಿತ್ಯ’

ಜೀವನದಲ್ಲಿ ಎಂತಹುದೇ ಪ್ರತಿಕೂಲ ಪರಿಸ್ಥಿತಿ ಇದ್ದರೂ ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಇದ್ದರೆ ಉನ್ನತ ಸ್ಥಾನಕ್ಕೆ ಏರಬಹುದು ಎಂಬುದಕ್ಕೆ ರಾವ್‌ ಉತ್ತಮ ನಿದರ್ಶನ.  ಜತೆಗೆ  ಸರಳತೆ, ಸಜ್ಜನಿಕೆ, ಹುಟ್ಟಿದ ನಾಡು, ನುಡಿಯ ಬಗ್ಗೆ ಅಪ್ರತಿಮ ಪ್ರೇಮ ಇವೆಲ್ಲವುಗಳ ಮೂರ್ತರೂಪವಾಗಿದ್ದವರು...

‘ಹಿಂದೂ ಧರ್ಮದಿಂದ ಲಿಂಗಾಯತ ಸಮಾಜ ಪ್ರತ್ಯೇಕವಾಗಬಾರದು’

‘ಲಿಂಗಾಯತ ಧರ್ಮವು ವರ್ಣಾಶ್ರಮ ಹಾಗೂ ಜಾತಿ ವ್ಯವಸ್ಥೆಯನ್ನು ಒಪ್ಪದಿರಬಹುದು, ಆದರೆ ಅದು ಹಿಂದೂ ಧರ್ಮವಲ್ಲವೆಂದು ಹೇಳಲಾಗದು. ಜಾತಿ ವ್ಯವಸ್ಥೆಯನ್ನು ಒಪ್ಪದ ರಾಮಕೃಷ್ಣ ಆಶ್ರಮ, ಆರ್ಯ ಸಮಾಜ ಹಿಂದೂ ಧರ್ಮವೇ ಆಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆ : ಐವರು ಸಚಿವರಿಂದ ರಾಜ್ಯ ಪ್ರವಾಸ

‘ವೀರಶೈವ– ಲಿಂಗಾಯತರು ಹಿಂದೂ ಧರ್ಮದ ಭಾಗವೇ ಆಗಿದ್ದರೂ, ಹಿಂದುತ್ವದ ಭಾಗ ಅಲ್ಲ. ಹಿಂದೂ ಧರ್ಮವನ್ನು ಯಾರೂ ಸ್ಥಾಪನೆ ಮಾಡಿಲ್ಲ. ಅದೊಂದು ಸಂಸ್ಕೃತಿ. ಸಿಂಧೂನದಿ ತಟದಿಂದ ಬಂದ ಈ ಸಂಸ್ಕೃತಿ ಆಯಾ ಕಾಲಕ್ಕೆ ತಕ್ಕಂತೆ ಬದಲಾವಣೆ ಕಂಡಿದೆ...

ಸಂಗತ

ಲಿಂಗಾಯತ: ಬೀದಿ ರಂಪಾಟ ಬೇಡ

ಲಿಂಗಾಯತ’ ಒಂದು ಸ್ವತಂತ್ರ ಧರ್ಮ. ಇದು ಹಿಂದೂ ಧರ್ಮದ ಭಾಗ ಅಲ್ಲವೇ ಅಲ್ಲ. ಲಿಂಗಾಯತ ಎನ್ನುವುದು ಒಂದು ತತ್ವ, ಸಿದ್ಧಾಂತ. ಅದೊಂದು ಜಾತಿಯಲ್ಲ...

ಲಿಂಗಾಯತ: ಹಿಂದೂ ಧರ್ಮಕ್ಕಿಂತ ಭಿನ್ನವೇ?

ಶಿವನ ಪರಿವಾರದ ಗಣೇಶ, ಷಣ್ಮುಖ, ಪಾರ್ವತಿಯರನ್ನು ಪೂಜಿಸುವುದು ಹಾಗಿರಲಿ ವೀರಶೈವದಲ್ಲಿ ಸೇರಿಹೋಗಿರುವ ಇಷ್ಟಲಿಂಗಧಾರಿಗಳಾದ ನಾನಾ ಜಾತಿವರ್ಗದವರು ರಂಗನಾಥ, ವೆಂಕಟೇಶ್ವರ ಮುಂತಾದ ಅನೇಕ ಹಿಂದೂ ದೇವರನ್ನು ಮನೆದೈವವಾಗಿ ಹೊಂದಿದ್ದಾರೆ!

ಶಿಕ್ಷಣ: ಅಧಿಕಾರ ಮತ್ತು ಜ್ಞಾನ

ಜ್ಞಾನ, ಅರಿವು ಮತ್ತು ವಿವೇಕಗಳನ್ನು ಬಿಟ್ಟುಕೊಟ್ಟ ಶಿಕ್ಷಣವು ಅಂಕಪಟ್ಟಿಗೆ ಸೀಮಿತವಾಗುತ್ತಿರುವುದು ವಿಷಾದದ ಸಂಗತಿ...

ವಿಶ್ವ ಕನ್ನಡ ಸಮ್ಮೇಳನ ಸದ್ಯಕ್ಕೆ ಬೇಡ

ಕನ್ನಡ ಪ್ರಾಥಮಿಕ ಶಿಕ್ಷಣಕ್ಕೇ ಧಕ್ಕೆ ಒದಗಿರುವಾಗ ಆ ಬಗ್ಗೆ ಸರ್ಕಾರ ಕಾಳಜಿಯನ್ನೇ ವಹಿಸದೆ ವಿಶ್ವ ಕನ್ನಡ ಸಮ್ಮೇಳನವನ್ನು ಆಚರಿಸಲು ಹೊರಟಿರುವುದು ವಿಪರ್ಯಾಸ.

ಕರ್ನಾಟಕ ದರ್ಶನ

ನಡೀರವ್ವ ಬೀಜ ಆಯಾಕ...

ಉತ್ತರ ಕರ್ನಾಟಕದಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆಯುವತನಕ ಅಲ್ಲಿನ ಗ್ರಾಮೀಣ ಭಾಗದ ಮಹಿಳೆಯರಿಗೆ ಬೇವಿನಬೀಜ ಹಸನಾದ ಬದುಕು ಕಟ್ಟಿಕೊಡುತ್ತಿದೆ. ಅವರ ಪಾಲಿಗೆ ಬೇವೇ ಬಂಗಾರವಾದ ಮಜಕೂರು ಇಲ್ಲಿದೆ...

ಇಲ್ಲಿ ಇನ್ನೂ ಬರ; ಅಲ್ಲಿ ಆಗಲೇ ಹಾಲ್ನೊರೆ!

ಕೊಟ್ಟಿಗೆಹಾರದ ಜಲಕನ್ಯೆಯರನ್ನು ನೋಡಿ ಮಲೆನಾಡಿನ ತುಂಬಾ ಮಳೆ ಸುರಿಯುತ್ತಿದೆ ಎಂದು ಭಾವಿಸಬೇಡಿ. ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಪ್ರದೇಶವಾದ ಹಸಿರುಮಕ್ಕಿ, ಬಾರ್ಜ್‌ ತೇಲಿಸಲು ನೀರಿಲ್ಲದೆ ಇನ್ನೂ ಬಿಕ್ಕುತ್ತಿದೆ!

ಕೊಟ್ಟಿಗೆಹಾರದ ಜಲಕನ್ಯೆಯರು

ಚಾರ್ಮಾಡಿ ಘಾಟಿಯ ಆಲೇಖಾನ್ ಜಲಪಾತ ಮಳೆಯ ಆರ್ಭಟಕ್ಕೆ ಹಾಲಿನ ಹೊಳೆಯಾಗಿ ಹರಿಯುತ್ತಿದೆ. ಈ ಘಾಟಿಯ ಕಣಿವೆ ಸಮೀಪ ಸುರಿಯುವ ಹಲವು ಜಲಪಾತಗಳು ಸಹ ಕಣ್ಮನ ಸೆಳೆಯುತ್ತಿವೆ. ಸಾವಿರಾರು ಅಡಿಯಿಂದ ರಸ್ತೆಗೆ ಧುಮುಕುವ ಜಲಕನ್ಯೆ ಬಂಡೆಯ ಮೇಲೆ ಬಿನ್ನಾಣದಿಂದ ಹರಿದು ರಸ್ತೆಯ ಬದಿಗೆ ಬಳುಕುತ್ತಾ ಸಾಗುತ್ತಿರುವ ದೃಶ್ಯ ಅವರ್ಣನೀಯ!

ತಾಳು ಕಟ್ಟೆತಾಳು, ಸಿಗಲಿದೆ ಹೊಸಬಾಳು!

ವಿಜಯನಗರದ ಸಾಮ್ರಾಜ್ಯದ ದೊರೆ ಬುಕ್ಕರಾಯನ ಮಂತ್ರಿಯಾಗಿದ್ದ ಮಾಧವ ನೂರಾರು ವರ್ಷಗಳ ಹಿಂದೆ ಹೆಮ್ಮಿಗೆ ಗ್ರಾಮದಲ್ಲಿ ಕಟ್ಟಿಸಿದ್ದ ತಾಳೆಕಟ್ಟು ಈಗ ಶಿಥಿಲಗೊಂಡಿದೆ. ರಾಜ್ಯ ಸರ್ಕಾರದ ಈಗಿನ ಮಂತ್ರಿಗಳು ಅಲ್ಲಿ ಹೊಸ ಒಡ್ಡು ಕಟ್ಟಲು ಹೊರಟಿದ್ದಾರೆ. ಹೌದು, ಏನೀ ತಾಳೆಕಟ್ಟಿನ ಮಜಕೂರು?

ಕೃಷಿ

ಮರಳಿ ಬಂದ ಬಣ್ಣದ ಜೋಳ

ಕಣ್ಮರೆಯಾಗುತ್ತಿರುವ ಬಿಳಿಗಿರಿರಂಗನ ಬೆಟ್ಟದ ಸೋಲಿಗರ ಬಹುವರ್ಣದ ಮುಸುಕಿನ ಜೋಳದ ತಳಿಯನ್ನು ಹುಡುಕಿ ತಂದು, ಬೆಳೆದು, ಆಸಕ್ತರಿಗೆ ಹಂಚುತ್ತಿರುವ ಕೊಳ್ಳೇಗಾಲದ ಯುವಕನೊಬ್ಬನ ಯಶೋಗಾಥೆ ಇಲ್ಲಿದೆ...

ಲಿಲ್ಲಿ ಅರಳಿದೆ ಇಲ್ಲಿ!

ಲಿಲ್ಲಿ ಹೂವಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ ಎನ್ನುವ ಮಾಹಿತಿ ತಿಳಿದ ಈ ಕೃಷಿಕ ಗುತ್ತಿಗೆ ಜಮೀನಿನಲ್ಲೇ ಪುಷ್ಪ ಕೃಷಿ ಆರಂಭಿಸಿದರು. ಲೆಕ್ಕಾಚಾರದಲ್ಲಿ ಕೃಷಿ ಕೈಗೊಂಡು ಯಶಸ್ಸನ್ನೂ ಪಡೆದರು

ಟ್ರೇಗಳಲ್ಲಿ ಬೆಳೆದ ಮೇವು!

ಹೈಡ್ರೋಪೋನಿಕ್ ಆಹಾರ ನೀಡುವುದರಿಂದ ಹಾಲಿನಲ್ಲಿ ಕೊಬ್ಬಿನ ಅಂಶ ಹೆಚ್ಚಿಸಲು, ಡಿಗ್ರಿ ಕಾಯ್ದುಕೊಳ್ಳಲು, ಹಸುಗಳಿಗೆ ಕಾಲು–ಬಾಯಿ ಬೇನೆ ಬರದಂತೆ ತಡೆಯಲು ಸಾಧ್ಯವಾಗುತ್ತದೆ. ಗರ್ಭಾವಸ್ಥೆಯಲ್ಲಿರುವ ದನಗಳಿಗೆ ಆಹಾರ ನೀಡುವುದರಿಂದ ಕರು ಆರೋಗ್ಯವಾಗಿ ಬೆಳೆಯುತ್ತದೆ ಎಂಬುದನ್ನು ಪ್ರಕಾಶ ಕಂಡುಕೊಂಡಿದ್ದಾರೆ.

ತೋಟದಲ್ಲಿ ಕಾಡು ಬೆಳೆಸಿ...

ಎಸ್‌ಎಸ್‌ಎಲ್‌ಸಿವರೆಗೆ ಮಾತ್ರ ಓದಿರುವ ಇವರು ಕೃಷಿಯ ಜತೆ ಕಾಡು, ಪ್ರಾಣಿ, ಪಶು, ಪಕ್ಷಿ ಹಾಗೂ ಗ್ರಾಮೀಣಾಭಿವೃದ್ಧಿ ಬಗೆಗೂ ಕಾಳಜಿ ಹೊಂದಿದ್ದು, ಸದಾ ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದಾರೆ. ತಮ್ಮ ಜಮೀನಿಗೆ ಬಂದವರಿಗೆ ಕೃಷಿಪಾಠ ಮಾಡುತ್ತಾರೆ.