ಪ್ರೀತಿಯೆಂದರೆ?

10 Sep, 2017
ಪ್ರಜಾವಾಣಿ ವಾರ್ತೆ

–ಸದಾನಂದ ಆರ್

*

014 ಮಾರ್ಚ್ 15

‘ಕಣ್ಣು ಮಂಜಾಗ್ತಾಯಿದೆ ಅಲೋಕ' ಉಸುರಿದಳು ಅಲಕಾ.

‘ಹೂಂ, ಔಷಧಿ ಕೆಲಸ ಮಾಡ್ತಾಯಿದೆ'

‘ನಾನು ನಿಂಗೋಸ್ಕರ ಕಾಯ್ತಾ ಇರ‍್ತೀನಿ’

‘ಖಂಡಿತ ಬರ್ತೇನೇ’

‘ಅಲೋಕ...’ ಮಾತು ಇಲ್ಲವಾಯಿತು.

ಎದುರಿಗಿದ್ದ ಮಾನಿಟರ್ ಹೃದಯ ಬಡಿತ ನಿಂತ ಸೂಚನೆಯನ್ನು ನೀಡಿತು.

ದುಃಖ ತಡೆಯದಾದ ಅಲೋಕ. ಅಲಕಾಳನ್ನು ಒಂದು ಬಾರಿ ಅಪ್ಪಿದ.

ಒಂದೆರಡುಗಳಿಗೆ ಅಪ್ಪಿದ್ದವನು, ಚೇತರಿಸಿಕೊಂಡು ಕಣ್ಣುಗಳನ್ನು ಒರೆಸಿಕೊಳ್ಳುತ್ತಾ ಆ ಸ್ವಿಚ್ಚಿಗಾಗಿ ತಡಕಾಡಿದ. ಹೃದಯದ ಬಡಿತ ನಿಂತ ಸೂಚನೆ ಸಿಕ್ಕ ತಕ್ಷಣವೇ ಅದನ್ನು ಒತ್ತಬೇಕೆಂದು ಹೇಳಿದ್ದ ಡಾ. ಚಿರಂಜೀವ ಹೊರಗೆ ಐದಾರು ಜನರೊಂದಿಗೆ ಕಾಯುತ್ತಿದ್ದರು. ಸ್ವಿಚ್ಚನ್ನು ಬಲವಾಗಿ ಅದುಮಿದ. ತಕ್ಷಣವೇ ಬಾಗಿಲನ್ನು ತಳ್ಳಿಕೊಂಡು ಡಾ. ಚಿರಂಜೀವ ಒಳ ಬಂದರು.

ಒಂದೆರಡು ಪರೀಕ್ಷೆಗಳನ್ನು ನಡೆಸಿದ ಅವರು, ‘ಯಂಗ್ ಮ್ಯಾನ್ ಶೀ ಈಸ್ ಡೆಡ್’ ಎನ್ನುತ್ತಾ ತಮ್ಮೊಂದಿಗೆ ಬಂದಿದ್ದ ಸಿಬ್ಬಂದಿಗೆ ಸೂಚನೆಯಿತ್ತರು.

ಅಲಕಾಳಷ್ಟೇ ಉದ್ದವಿದ್ದ ಸ್ವೀಲ್ ಡ್ರಮ್‌ ಒಂದರಲ್ಲಿ ಅವಳನ್ನು ಇಳಿಸಿ ಮುಚ್ಚಿದರು.

**

2200 ಜೂನ್ 3

‘ಐ ಥಿಂಕ್ ಎಲ್ಲವೂ ಸರಿಯಿದೆ’ ಎಂದಳು ಚಾರುಮತಿ ರೋಬೋಗೆ.

‘ಯಾವುದಕ್ಕೂ ಚೆಕ್ ಮಾಡಿ ಬಿಡಲೇ?’

‘ಖಂಡಿತ ರೋಬೋ. ಈಗ ಬಂದೆ’ ಎನ್ನುತ್ತಾ ಹೊರನಡೆದಳು.

ಬ್ಲ್ಯಾಕ್ ಕಾಫಿ ಕೈಯಲ್ಲಿ ಹಿಡಿದು ಬಂದವಳು ರೋಬೋನ ಕೆಲಸ ನೋಡುತ್ತಾ ದೂರದಲ್ಲಿ ಕುಳಿತಳು. ರೋಬೋ ಅವಳ ಆತ್ಮೀಯ. ಅವನ ಬಗ್ಗೆ ಅವಳಿಗೆ ಯಾವಾಗಲೂ ಹೆಮ್ಮೆ. ತನ್ನ ಸಂಶೋಧನಾ ಕೆಲಸಕ್ಕಾಗಿಯೇ ಆರ್ಡ್‌ರ್ ಮಾಡಿ ಪಡೆದ ರೋಬೋ ಇದು. ಅದನ್ನು ರೋಬೋ ಎಂದೇ ಕರೆದಿದ್ದಳು. ಅದರ ಸಾಫ್ಟ್‌ವೇರ್ ಅಪ್‌ಲೋಡ್ ಆಗುವ ವೇಳೆ ಹಾಜರಿದ್ದು, ಅದಕ್ಕೆ ರೋಬೋ ಎಂದು ಹೆಸರಿಸಿ, ನಿರ್ದಿಷ್ಟ ಧ್ವನಿಯನ್ನು ನೀಡಿ ತನ್ನೊಂದಿಗೆ ಟ್ಯಾಗ್ ಮಾಡಿಕೊಂಡಿದ್ದಳು. ಇದು ನಡೆದಿದ್ದು ಇಪ್ಪತ್ತು ವರ್ಷಗಳ ಹಿಂದೆ. ಈ ನಡುವೆ ಎಷ್ಟೋ ಅಪ್‌ಡೇಟ್‌ಗಳು ಆಗಿದ್ದರೂ ರೋಬೋ ಚಾರುಮತಿಯ ಹತ್ತಿರದವನಾಗೇ ಇದ್ದ. ಅವನು ಎಲ್ಲವೂ ಆಗಿದ್ದ; ಲ್ಯಾಬ್ ಅಸ್ಟಿಟೆಂಟ್, ಸೆಕ್ರೆಟರಿ, ಫ್ರೆಂಡ್, ಕುಕ್ ಇತ್ಯಾದಿ.

ಅತ್ಯಂತ ಹಳೆಯ ರೋಬೋ ಇದು. ವರ್ಶನ್ 69. ಚಾಲ್ತಿಯಲ್ಲಿರುವ ರೋಬೋಗಳ ವರ್ಶನ್ 149. ಗುಜರಿಯಲ್ಲಿರಬೇಕಾದ ರೋಬೋ! ಎರಡು ವಾರಗಳ ಹಿಂದೆ ಅದರ ಸಾಫ್ಟ್‌ವೇರ್ ಅಪ್‌ಡೇಶನ್ ಮಾಡಿದ್ದ ಎಂಜಿನಿಯರ್ ‘ಚಾರುಮತಿಯವರೆ, ಇದೇ ಕಡೇ ಅಪ್‌ಡೇಶನ್. ರೋಬೋನ ಹಾರ್ಡ್‌ವೇರ್ ಇದಕ್ಕಿಂತ ಮುಂದುವರಿದ ಸಾಫ್ಟ್‌ವೇರ್‌ಗಳನ್ನು ಸರ್ಪೋಟ್ ಮಾಡಲ್ಲ’ ಎಂದಿದ್ದ. ಇದೆಲ್ಲಾ ನೆನಪಾಗಿ ಕಣ್ಣು ಮುಚ್ಚಿ ಕುಳಿತ ಅವಳಿಗೆ ‘ಆಲ್ ಚೆಕ್ಡ್?’ ಎನ್ನುವ ಅಪ್ಪನ ದನಿ ಕೇಳಿ ಕಣ್ಣು ತೆರೆದಳು. ಈಗ ಅಪ್ಪನ ದನಿ ಎಲ್ಲಿಂದ ಬಂತು ಎಂದು ತಿಳಿಯದೆ ಗೊಂದಲವಾಯಿತು. ಒಂದೆರಡು ಗಳಿಗೆ ಅಷ್ಟೆ. ತನ್ನ ಪೆದ್ದುತನಕ್ಕೆ ತಾನೆ ನಗತೊಡಗಿದಳು. ದಶಕಗಳ ಹಿಂದೆ ತೀರಿಕೊಂಡ ಅಪ್ಪನ ದನಿಯನ್ನೇ ರೋಬೋನ ದನಿಯಾಗಿಸಿಕೊಂಡಿರುವ ವಿಷಯ ಮರೆತೇ ಹೋಗಿತ್ತಲ್ಲ ಎಂದುಕೊಂಡಳು.

‘ಎಲ್ಲ ರೆಡಿಯಿದೆ. ಐ.ಡಿ. 3377 ಮಿದುಳು ಸಿಸ್ಟಂನೊಂದಿಗೆ ಸಂಪರ್ಕ ಸಾಧಿಸಲು ಅಗತ್ಯ ಸ್ಥಿತಿಯಲ್ಲಿದೆ.’

‘ಗ್ರೇಟ್ ರೋಬೋ’ ಎನ್ನುತ್ತಾ ಅವಳು ಕ್ಯಾಬಿನ್ನಿನೊಳಗೆ ನಡೆದಳು.

ಪರದೆಯ ಮೇಲಿದ್ದ ಸ್ಟಾರ್ಟ್ ಡೌನ್‌ಲೋಡ್ ಬಟನ್ ಅನ್ನು ಬೆರಳ ತುದಿಯಿಂದ ಒತ್ತಿದಳು. ಕೆಲಸ ಆರಂಭವಾದ ಸೂಚನೆ ಪರದೆಯ ಮೇಲೆ ಮೂಡಿತು. ಸಮೀಪದಲ್ಲಿದ್ದ ಇನ್ನೊಂದು ಮೇಜಿನ ಮೇಲೆ ಐ.ಡಿ. 3377ರ ಮಿದುಳನ್ನು ಹೊಂದಿದ್ದ ಕಂಟೇನರ್‌ಗೆ ಹಲವಾರು ಸೆನ್ಸರ್‌ಗಳನ್ನು ಜೋಡಿಸಲಾಗಿತ್ತು.

ಜೈವಿಕ ಅಂಗವಾದ ಮಿದುಳಿನಲ್ಲಿರುವ ನೆನಪುಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿಕೊಳ್ಳುವ ತಂತ್ರಜ್ಞಾನ ಆವಿಷ್ಕಾರವಾಗಿದ್ದು ಕ್ರಿ.ಶ. 2150ರಲ್ಲಿ. ಕ್ರಿ.ಶ. 2200ರ ಹೊತ್ತಿಗೆ ಒಂದು ಬಟನ್ ಒತ್ತಿ ಎಲ್ಲವನ್ನೂ ಡಿಜಿಟಲ್ ರೂಪಕ್ಕೆ ಪರಿವರ್ತಿಸಿಕೊಳ್ಳುವ ಹಂತ ತಲುಪಲಾಗಿತ್ತು. ಈಗ ಜೈವಿಕ ಹಂತದಲ್ಲಿರುವ ಮಾನವನ ನೆನಪುಗಳನ್ನು ಡಿಜಿಟಲ್ ಮಾಡುವುದಷ್ಟೆ ಅಲ್ಲದೆ, ಅವುಗಳಿಗೆ ಲಿಪಿ ರೂಪ ನೀಡುವ ಹಂತವನ್ನು ತಲುಪಲಾಗಿದೆ. ಆದರೆ ಮಾತಿನ ರೂಪವನ್ನು ನೀಡುವಲ್ಲಿ ಇನ್ನು ಕೆಲವು ತೊಡಕುಗಳು ಇವೆ. ಮುಖ್ಯವಾಗಿ ಮೂರು ನೂರು ವರ್ಷಗಳ ಹಿಂದಿನ ಮಿದುಳುಗಳನ್ನು ನಿಭಾಯಿಸುವಾಗ ತೊಂದರೆ ಕಾಣಿಸುತ್ತವೆ. ಇದನ್ನು ಪೂರ್ಣಗೊಳಿಸುವ ಕಾರ್ಯದಲ್ಲೇ ಚಾರುಮತಿಯ ಸಂಶೋಧನೆ ಇತ್ತು.

‘ಈ ಡೌನ್ ಲೋಡ್ ಏಕೆ?’ ಪಕ್ಕದಲ್ಲಿದ್ದ ರೋಬೋ ಕೇಳಿದ.

‘ಈ ಐ.ಡಿ.ಯ ಮಿದುಳು ಕನ್ನಡ ಭಾಷೆಯನ್ನು ಬಳಸುತ್ತಿತ್ತು ರೋಬೋ. 2070 ರ ಹೊತ್ತಿಗೆ ಈ ಭಾಷೆಯನ್ನು ಬಳಸುವವರು ಇಲ್ಲವಾದರಂತೆ. ನಾವೀಗ ಬಳಸುವ ಇಂಗ್ಲೀಷ್ ಅನ್ನೇ ಅಂದು ಕನ್ನಡ ಮಾತನಾಡುತ್ತಿದ್ದವರು ಬಳಸ ತೊಡಗಿದ್ದರಿಂದ ಅದು ಇಲ್ಲವಾಯಿತಂತೆ. ಕನ್ನಡ ಬಳಸುತಿದ್ದ ಮಿದುಳಿನ ಡೇಟಾ ಡೌನ್ ಲೋಡ್ ಮಾಡಿದಾಗ ಮತ್ತು ಅವುಗಳನ್ನು ಆಕ್ಟಿವೇಟ್ ಮಾಡಿದಾಗ ಅವುಗಳೊಂದಿಗೆ ಸಂಪೂರ್ಣ ಸಂವಹನ ಸಾಧ್ಯವಾಗುತ್ತಿಲ್ಲ. ಕೆಲವು ಪದಗಳ ಪರಿಚಯ ನಮಗಿಲ್ಲ. ಎಷ್ಟೋ ಬಾರಿ ಅವುಗಳ ಬಳಕೆ ಮತ್ತು ಅರ್ಥಗಳು ತಿಳಿಯುತ್ತಿಲ್ಲ. ಅದನ್ನು ಸಾಧಿಸುವ ನಿಟ್ಟಿನಲ್ಲಿ ಈ ಕೆಲಸ.’

‘ನನ್ನ ಡೇಟಾ ಪ್ರಕಾರ ಕನ್ನಡ ಮಾತನಾಡುತ್ತಿದ್ದ ಕೊನೆಯ ವ್ಯಕ್ತಿ ಕ್ರಿ.ಶ. 2070, ಜುಲೈ 30 ರಂದು ಮೃತರಾದರು. ಅದಕ್ಕಿಂತಲೂ ಐವತ್ತು ವರ್ಷ ಮೊದಲೇ ಕನ್ನಡ ಭಾಷೆಯನ್ನು ಬಳಸುವುದನ್ನು ಬಹುತೇಕರು ನಿಲ್ಲಿಸಿದ್ದರಂತೆ. ಎಲ್ಲರೂ ಇಂಗ್ಲಿಷ್ ಭಾಷೆಯನ್ನು ಬಳಸುತ್ತಿದ್ದರಂತೆ...’ ರೋಬೋ ಮಾತು ಮುಂದುವರಿದಿತ್ತು.

‘ರೋಬೋ, ಎಲ್ಲಾ ಸರಿ. ಇದೆಲ್ಲಾ ಆಮೇಲೆ ಚರ್ಚೆ ಮಾಡುವ. ಮೊದಲು ಐ.ಡಿ. 3377 ರ ಕುರಿತು ನಿನ್ನಲ್ಲಿ ಏನು ಮಾಹಿತಿ ಇದೆ ನೋಡು.’

‘ಓಕೆ. ಮಾಹಿತಿ ಹೀಗಿದೆ–

ಹೆಸರು: ಅಲಕಾ

ವೃತ್ತಿ : ಮಾನವಶಾಸ್ತ್ರಜ್ಞೆ.

ವಯಸ್ಸು: 35 ವರ್ಷ ಸತ್ತಾಗ. ಸಾವಿಗೆ ಕ್ಯಾನ್ಸರ್ ಕಾರಣ.

ವಿಶೇಷ ಮಾಹಿತಿಗಳು: ಇಡೀ ಶರೀರವನ್ನು ಸಂರಕ್ಷಿಸಲಿಡಲಾಗಿತ್ತು. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಕುರಿತು ಸಂಶೋಧನೆಗೆ ನೆರವಾಗಲಿ ಎಂದು. ಜೊತೆಗೆ ಇಲ್ಲೊಂದು ವಿಶೇಷವಿದೆ. ಮುಂದೊಂದು ದಿನ ಶರೀರಕ್ಕೆ ಮರುಜೀವ ನೀಡಲು ಸಾಧ್ಯವಾದಲ್ಲಿ, ಮಿದುಳಿನಲ್ಲಿರುವ ಎಲ್ಲಾ ನೆನಪುಗಳು ಹಾಗೇ ಉಳಿಯಲಿ ಎಂದು ಔಷಧಿ ಮೂಲಕ ಸಾವು ಬರುವಂತೆ ಮಾಡಲಾಗಿತ್ತು’

‘ಸರಿ. ಆದರೆ ಕ್ಯಾನ್ಸರ್ ಬರದಂತೆ ಲಸಿಕೆ ಸಂಶೋಧನೆಗೊಂಡ ಕಾರಣ ಅದರ ಚಿಕಿತ್ಸೆಯ ಅಗತ್ಯ ಈಗಿಲ್ಲ ಬಿಡು. ಹಾಗೇ ರೋಬೋ, ಆ ಲಸಿಕೆ ಕಂಡು ಹಿಡಿದ ವರ್ಷ ಯಾವುದು?’

‘ಕ್ರಿ.ಶ. 2110, ಜನವರಿ 30’

‘ಹಾಗೇ ಈ ಐ.ಡಿ. 3377 ಇಷ್ಟು ದಿನ ಉಳಿದಿದ್ದು ಏಕೆ ಎನ್ನುವುದು ನನ್ನ ಪ್ರಶ್ನೆ’ ಎಂದಿತು ರೋಬೋ.

ಡೇಟಾ ಹುಡುಕುವೆ ಎನ್ನುತ್ತಾ ಮಾತು ಮುಂದುವರಿಸಿತು. ‘ಹಾ ಸಿಕ್ಕಿತು. ಲಭ್ಯವಿರುವ ಡೇಟಾ ಪ್ರಕಾರ 2100ಕ್ಕೆ ಇದು ನಾಶವಾಗಬೇಕಿತ್ತು. ಅಂದು ಇದ್ದ ಅತ್ಯಂತ ಹಳೆಯ ಸಾಫ್ಟ್‌ವೇರ್‌ನ ದೋಷದಿಂದ 2200ರವರೆಗೆ ಸಂರಕ್ಷಿಸಲ್ಪಟ್ಟಿತು. ಹೀಗಾಗಿ ಎರಡು ದಿನದ ಹಿಂದೆ ನಿನ್ನ ಕಚೇರಿಗೆ ಡೇಟಾ ಎಕ್ಸಾಟ್ರಶನ್‌ಗೆಂದು ಬಂದಿದೆ. ಕನ್ನಡ ಭಾಷೆಯ ಮಿದುಳು ಎಂದು ದಾಖಲಾಗಿದ್ದ ಕಾರಣ, ಇದನ್ನು ನಿನ್ನ ಬಳಿ ಕಳುಹಿಸಲಾಗಿದೆ.'

'ಇರಲಿ ಬಿಡು. ಈಗ ಕನ್ನಡದ ಕುರಿತಾದ ಕೆಲಸಕ್ಕಾದರೂ ಬರುತ್ತಿದೆಯಲ್ಲಾ. ಅದೇ ಸಮಾಧಾನ ರೋಬೋ.'

ಪರದೆಯ ಮೇಲೆ ಡೇಟಾ ಡೌನ್‌ಲೋಡ್ ಆದ ಕುರಿತು ಸಂಕೇತ ಮೂಡತೊಡಗಿತು. ಅದರತ್ತ ಮುಖ ಮಾಡಿ ಮೇಜಿನ ಮೇಲೆ ಬೆರಳಿಂದ ಕುಟ್ಟಿದಾಗ ಕೀಲಿಮಣೆಯೊಂದು ಗೋಚರಿಸಿತು. ಅದರಲ್ಲಿ ಟೈಪ್ ಮಾಡಿದಳು. ಭಾಷೆ ಕನ್ನಡ. ಮೌಖಿಕ ಸಂವಹನ ಆರಂಭ. ಒಂದೆರಡು ಕ್ಷಣ ಕಳೆದು ಪರದೆಯ ಮೇಲೆ ಹಸಿರು ಬೆಳಕು ಮೂಡಿತು.

'ನಮಸ್ಕಾರ' ಎಂದಳು ಚಾರುಮತಿ.

'ನಮಸ್ಕಾರ ಎಂದವರು ಯಾರು?'

'ನಾನು ಚಾರುಮತಿ. ಭಾಷಾ ಸಂಶೋಧಕಿ'

'ನಾನು ಅಲಕಾ. ಇದು ಯಾವ ವರ್ಷ?'

ಕ್ರಿ.ಶ. 2200. ನಿಖರವಾಗಿ ಹೇಳಬೇಕೆಂದರೆ, 2200ರ ಜೂನ್ 30. ಬೆಳಗಿನ 9 ಗಂಟೆ

‘ಅಂದರೆ ಸುಮಾರು 186 ವರ್ಷ ಆಯಿತು. ಗ್ರೇಟ್. ನನ್ನ ಅಲೋಕ ಎಲ್ಲಿ?’

‘ಯಾವ ಅಲೋಕ?’

‘ನನ್ನ ಪತಿ.’

ಚಾರುಮತಿ ರೋಬೋ ಕಡೆ ನೋಡಿ ಹೇಳಿದಳು ‘ಚೆಕ್ ದ ಡೇಟಾ. ಬೇಗ.’

‘ನೀವು ಯಾರಿಗೆ ಹೇಳಿದ್ದು... ನಿಮ್ಮ ಹೆಸರು...’

‘ಚಾರುಮತಿ’

‘ಚಾರುಮತಿ. ಹೆಸರು ಚೆನ್ನಾಗಿದೆ. ನೀವು ಯಾರಿಗೆ ಡೇಟಾ ಚೆಕ್ ಮಾಡು ಎಂದು ಹೇಳಿದ್ದು?’

‘ನನ್ನ ರೋಬೋ ಅಸ್ಟಿಟೆಂಟ್‌ಗೆ’

‘ಓಕೆ. ನಾನು ಈಗ ಹೇಗಿದ್ದೇನೆ. ಅಂದರೆ ನನ್ನ ಶರೀರ ಇತ್ಯಾದಿ’

‘ಸಾರಿ ಅಲಕಾ. ಸಾಫ್ಟ್‌ವೇರ್‌ನ ದೋಷದ ಕಾರಣದಿಂದ ನಿಮ್ಮ ಶರೀರ 2100ರಲ್ಲಿ ಹಾಳಾಯಿತು. ಕೇವಲ ನಿಮ್ಮ ಮಿದುಳು ಮಾತ್ರ ಸಂರಕ್ಷಿತವಾಯಿತು. ಈಗ ಅದನ್ನು ಕಂಪ್ಯೂಟರ್‌ ಮೂಲಕ ಜೋಡಿಸಿ ನಿಮಗೆ ಜೀವ ನೀಡಲಾಗಿದೆ.

**

‘ಅಲಕಾ’

‘ಆಂ? ಹಾ... ಕೇಳಿಸುತ್ತಿದೆ. ಬೇಸರ ಆಗುತ್ತಿದೆ. ಇರಲಿ ಅಲೋಕ ಎಲ್ಲಿ?’

‘ಒಂದು ನಿಮಿಷ. ನನ್ನ ರೋಬೋ ಹೇಳ್ತಾನೆ. ತಡೀರಿ. ರೋಬೋ ಮಾಹಿತಿ ಸಿಕ್ತಾ?’

‘ಖಂಡಿತಾ. ಅಲಕಾ ಅವರೆ. ನೀವು ಹೇಳುತ್ತಿರುವ ಅಲೋಕ ನಿಮ್ಮ ಪತಿ ಅಲ್ಲವೇ?’

‘ಹೌದು’

‘ನಿಮಗೆ 2010ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಇದೆ ಮತ್ತು ಮೂರು ವರ್ಷಕ್ಕಿಂತ ಹೆಚ್ಚು ಬದುಕುವುದಿಲ್ಲ ಎಂದು ಗೊತ್ತಾಯಿತು. ಅದೇ ಸಮಯದಲ್ಲಿ ಶರೀರವನ್ನು ಸಂರಕ್ಷಿಸಿಡುವ ತಂತ್ರಜ್ಞಾನ ಇರೋದು ಸಹ ಗೊತ್ತಾಯಿತು. ಸರಿಯೇ?’

‘ಹೌದು’

‘ಅದರ ವೆಚ್ಚ ತುಂಬಾ ಜಾಸ್ತಿ ಇತ್ತು. ಹಾಗಾಗಿ ನೀವು ಬ್ಲಾಗ್ ಮೂಲಕ ಮತ್ತು ಈ ಮೇಲ್‌ಗಳ ಮೂಲಕ ನೆರವು ಕೋರಿದಿರಿ.’

‘ಹೌದು’

‘ಶ್ರೀ ಸಿಂಗಾನಿಯಾ ಅವರು ಹಣ ಸಹಾಯ ಮಾಡಲು ಮುಂದೆ ಬಂದರು. ಆಗ ನೀವೊಂದು ಷರತ್ತು ಹಾಕಿದಿರಿ. ಅಲೋಕನ ಸಾವಿನ ದಿನ ಸಮೀಪಿಸಿದಾಗ ಆತನ ಶರೀರ ಸಂರಕ್ಷಣೆಗೂ ಸಹಾಯ ಮಾಡಬೇಕು ಎಂದು. ಏಕೆಂದರೆ ಅವರಿಗೂ ಕ್ಯಾನ್ಸರ್ ಇತ್ತು.’

‘ಆತನಿಗೆ ಏನಾಯಿತು?’

‘ಹೂಂ... ಏನಾಯಿತು ಅಲೋಕ ಅವರಿಗೆ?... ಡೇಟಾ ಸಿಕ್ಕಿತು. ನಿಮ್ಮ ಸಾವಿನ ನಂತರ ಅಲೋಕ ಅವರು ತೀವ್ರ ದುಃಖಕ್ಕೆ ಒಳಗಾದರು. ಇದೇನಿದು... ಖಿನ್ನತೆಗೆ ಒಳಾಗದರು. ಇದನ್ನು ಸರಿಪಡಿಸಿಕೊಳ್ಳಲು ಬೌದ್ಧಮತ ಸೇರಿದರು. ಅಲ್ಲಿ ಸನ್ಯಾಸಿಯಾದರು... ಸನ್ಯಾಸಿ ಅಂದ್ರೇನು ಅಂತ ನನಗೆ ಗೊತ್ತಿಲ್ಲ. ಇರಲಿ ಬಿಡಿ... ಆಮೇಲೆ 2025ರಲ್ಲಿ ಅವರ ಸಾವಿನ ದಿನಗಳು ಹತ್ತಿರವಾದವು. ಆಗ ಶ್ರೀ ಸಿಂಗಾನಿಯಾ ಅವರನ್ನು ಅಲೋಕ ಅವರು ಭೇಟಿಯಾದರು. ಆದರೆ ಸಿಂಗಾನಿಯಾ ಅವರು ನೆರವು ನೀಡಲು ನಿರಾಕರಿಸಿದರು. ಕಾರಣ ಅಲೋಕರು ಧರ್ಮಾಂತರ ಮಾಡಿದರೆಂದು. ಚಾರು...ಈ ಧರ್ಮಾಂತರ ಅಂದರೇನು?’

‘ಒಂದು ಧರ್ಮವನ್ನು ಬಿಟ್ಟು ಇನ್ನೊಂದು ಧರ್ಮವನ್ನು ಆಶ್ರಯಿಸುವುದು’

‘ಧರ್ಮ ಅಂದರೆ?’

‘ಅದೆಲ್ಲಾ ಆಮೇಲೆ. ಮೊದಲು ನನ್ನ ಅಲೋಕನಿಗೆ ಏನಾಯಿತು ಹೇಳಿ ಅಲಕಾ ಕೂಗಿದಳು.’

‘ಶ್ರೀ ಸಿಂಗಾನಿಯಾ ನೆರವು ನೀಡದ ಕಾರಣ, ಅಲೋಕರು 2025ರ ಮಾರ್ಚ್ 15ರಂದು ಮೃತರಾದರು. ಅವರನ್ನು ಬೆಂಗಳೂರಿನ ರುದ್ರಭೂಮಿಯೊಂದರಲ್ಲಿ ಹೂಳಲಾಯಿತು. ಈ ರುದ್ರಭೂಮಿ ಅಂದರೇನು?'

'ನೋ...' ಅಲಕಾ ಕಿರುಚಿದಳು.

ಕಂಪ್ಯೂಟರ್‌ಗೆ ಜೋಡಿಸಿದ್ದ ತೆಳುವಾದ ಸ್ಪೀಕರ್‌ಗಳು ಅಲುಗಿದವು. ಚಾರುಮತಿ ಪರದೆಯನ್ನು ದಿಟ್ಟಿಸಿದಳು. ಅದರ ಬೆಳಕಿನ ವಿನ್ಯಾಸದಲ್ಲಿ ಬದಲಾವಣೆಗಳು ಕಾಣಿಸಿಕೊಂಡವು. ಹಸಿರು ಬಣ್ಣದಿಂದ ನೇರಳೆ ಬಣ್ಣ, ನೇರಳೆ ಬಣ್ಣದಿಂದ ಹಳದಿ, ಹಳದಿ ಬಣ್ಣದಿಂದ ಕೆಂಪು ಮೂಡಿತು. ಪರದೆ ತುಂಬಾ ಗಾಢಾವಾದ ಕೆಂಪು ಹರಡಿತು, ಕೊನೆಗೆ ಕೋಣೆಯೇ ಕೆಂಪಾಯಿತು.

‘ನೋ ಅಲಕಾ ನಿಲ್ಲಿ. ನಿಮ್ಮೊಂದಿಗೆ ಮಾತನಾಡುವುದಿದೆ’ ಚಾರುಮತಿ ಕೂಗಿದಳು.

ಮರುಕ್ಷಣವೇ ಪರದೆ ಕಪ್ಪಾಯಿತು. ಒಂದೆರಡು ಕ್ಷಣದ ನಂತರ ಡೇಟಾ ಲಾಸ್ಟ್ ಎಂದು ಪರದೆ ಮೇಲೆ ಮೂಡಿತು.

‘ಸಾರಿ ಚಾರು. ನಿನಗೆ ಬೇಸರ ಆಗಿದೆಯೆಂದು ನನಗೆ ಗೊತ್ತಾಗಿದೆ. ಅಲಕಾ ಸಾಯುವ ವೇಳೆ ಅಲೋಕನಿಗಾಗಿ ಮತ್ತೆ ಬದುಕಬೇಕೆಂದು ನಿರ್ಧಾರ ಮಾಡಿದ್ದಳು. ಇದರಿಂದ ಅಲೋಕನಿಗಾಗಿ ಮಾತ್ರ ನೆನಪುಗಳು ಮರುಜೀವ ಪಡೆಯಬೇಕೆಂದು ಸೂಚನೆಯಿತ್ತು. ಜೈವಿಕ ಕೋಶಗಳು ಇದನ್ನು ದಾಖಲಿಸಿಕೊಂಡಿದ್ದವು. ಇವು ಡಿಜಿಟಲ್ ರೂಪಕ್ಕೆ ಡೌನ್‌ಲೋಡ್ ಆದಾಗ ಅಂದು ಅಲಕಾ ಹಾಕಿಕೊಂಡಿದ್ದ ಕಂಡೀಷನ್ ಮುಂದುವರಿದಿತ್ತು. ನಾನು ನಿನಗೆ ಎಚ್ಚರ ನೀಡಲು ನಿಧಾನಿಸಿದೆ. ಅಲೋಕ ಬದುಕಿಲ್ಲ ಎಂದೊಡನೆ ಡೇಟಾ ಡಿಸ್ಟ್ರಕ್ಷನ್‌ಗೆ ಒಳಗಾಯಿತು’

‘ಈ ಪ್ರೀತಿ ಅಂದ್ರೆ ಇದೇನಾ?’ ಕೇಳಿತು ರೋಬೋ.

Read More

Comments
ಮುಖಪುಟ

ಕನ್ನಡ ಪಾಠ ಮಾಡಲು ಅವಕಾಶ ಕೊಡುತ್ತಿಲ್ಲವೆಂದು ಶಿಕ್ಷಕನ ಪ್ರತಿಭಟನೆ

ಕನ್ನಡ ಶಿಕ್ಷಕ ನಮ್ಮ ಶಾಲೆಗೆ ಬೇಕಿಲ್ಲ ಎಂದು ಎಸ್‌ಡಿಎಂಸಿಯವರು ಹೇಳುತ್ತಾರೆ. ಶಾಲೆಗೆ ಹೋದರೆ ಹಲವು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ಇದನ್ನು ಬಿಇಒ ಸೇರಿದಂತೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂದು ಕನ್ನಡ ಶಿಕ್ಷಕ ವಿ‌‌.ಜಿ. ಬಾಳೇಕುಂದ್ರಿ ದೂರಿದರು.

ಯೋಗೀಶ್‌ ಗೌಡ ಹತ್ಯೆ ಪ್ರಕರಣ: ಕಾಂಗ್ರೆಸ್‌–ಬಿಜೆಪಿ ಕಾರ್ಯಕರ್ತರ ಮುಖಾಮುಖಿ

ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಕೈವಾಡವಿದ್ದು, ಸತ್ಯ ಹೊರಬರಬೇಕಾದರೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿ ಕಾರ್ಯಕರ್ತರು ಆಗ್ರಹಿಸಿದರು.

ಧರ್ಮದ ಹೆಸರಿನಲ್ಲಿ ಉಪಟಳ ನೀಡುವವರನ್ನು ಹತ್ತಿಕ್ಕಬೇಕು: ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ಧರ್ಮದ ಹೆಸರಿನಲ್ಲಿ ಸಮಾಜಕ್ಕೆ ಉಪಟಳ ನೀಡುತ್ತಿರುವವರನ್ನು ಹತ್ತಿಕ್ಕಬೇಕು. ಇಲ್ಲವಾದರೆ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಎಚ್ಚರಿಸಿದರು.

ದೇಶ ರಾಮರಾಜ್ಯ ಆಗಬೇಕು: ತೋಗಾಡಿಯಾ

ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸತ್‌ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹಿಂದೂ ದೇವಾಲಯಗಳ ಆಡಳಿತವನ್ನು ಸರ್ಕಾರಗಳು ನಿರ್ವಹಿಸುವುದು ಸಂವಿಧಾನ ವಿರೋಧಿಯಾಗಿದ್ದು, ಜಾತ್ಯಾತೀತ ಸಂವಿಧಾನಕ್ಕೆ ಮಾಡುವ ಅಪಚಾರ ಎಂದರು.

ಸಂಗತ

ತೂಕತಪ್ಪಿದ ಮಾತುಗಳಿಗೆ ಬೇಕು ಕಡಿವಾಣ

ಪರಸ್ಪರರ ನಿಂದನೆಗೆ ಕೀಳು ಅಭಿರುಚಿಯ ಮಾತುಗಳನ್ನಾಡುವ ರಾಜಕೀಯ ನಾಯಕರ ಸಂಸ್ಕೃತಿ ಪ್ರಶ್ನಾರ್ಹ

ಇವರದು ಸೇವೆಯಲ್ಲ, ಉದ್ಯೋಗವಷ್ಟೇ

‘ಹೋಟೆಲ್‌ನವರು ರೇಟ್ ನಿರ್ಧರಿಸಬಹುದು, ಲಾಜ್‌ನವರು ನಿರ್ಧರಿಸಬಹುದು, ನಾವೇಕೆ ನಮ್ಮ ದರಗಳನ್ನು ನಿರ್ಧರಿಸುವಂತಿಲ್ಲ’ ಎಂದು ಪ್ರಶ್ನಿಸುತ್ತ ಅವರು ತಮ್ಮ ಸ್ಥಾನವನ್ನು ಉಳಿದೆಲ್ಲ ಉದ್ದಿಮೆಗಳ ಮಟ್ಟಕ್ಕೆ ತಂದಿಟ್ಟುಬಿಟ್ಟಿದ್ದಾರೆ. ಜನರ ದಯನೀಯ ಸ್ಥಿತಿ ಬಳಸಿಕೊಂಡು ಲಾಭ ಮಾಡಿಕೊಳ್ಳುವವರು ಸೇವಾ ನಿರತರೇ?

ಹಗಲು ಕವಿದ ಅಮಾವಾಸ್ಯೆ ಕತ್ತಲು

ಅಲ್ಲದೇ ಟಿ.ವಿ. ವಾಹಿನಿಗಳ ಮೇಲೆ ನಿಬಂಧನೆಯನ್ನು ಹೇರುವ ‘ಕೇಬಲ್‌ ಟೆಲಿವಿಷನ್ ನೆಟ್‌ವರ್ಕ್ (ರೆಗ್ಯುಲೇಷನ್) ಆ್ಯಕ್ಟ್, 1995’ ಹಲವು ನಿಬಂಧನೆಗಳೊಂದಿಗೆ ‘ಅರೆಸತ್ಯವಾದ, ಅತೀಂದ್ರಿಯ ನಂಬಿಕೆ ಅಥವಾ ಕುರುಡು ನಂಬಿಕೆಗಳನ್ನು ಪ್ರೋತ್ಸಾಹಿಸುವಂಥ’ ಕಾರ್ಯಕ್ರಮಗಳನ್ನು ಬಿತ್ತರಿಸಲು ನಿಷೇಧವಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

‘ಜ್ಞಾನ’ಚಾಲಿತ ವಸಾಹತೀಕರಣದ ಹೊಸ ಆವೃತ್ತಿ

ನಮಗೆ ಹೊಸ ಜ್ಞಾನ ಬೇಕು. ಆದರೆ ಅದು ಅಸಹಜ ಕಸರತ್ತುಗಳ ಮೂಲಕ ಕನ್ನಡದ ಕನ್ನಡಿಯಲ್ಲಿ ಮೂಡಬಲ್ಲ ಪ್ರತಿಬಿಂಬವಾಗಿ ಅಲ್ಲ.

ಚಂದನವನ

‘ಅತಿರಥ’ನಾಗಿ ಚೇತನ್

‘ಅತಿರಥ’ ಚಿತ್ರದಲ್ಲಿ ಅವರದ್ದು ಟಿ.ವಿ. ಪತ್ರಕರ್ತನ ಪಾತ್ರ. ಮಹೇಶ್‌ ಬಾಬು ನಿರ್ದೇಶನದ ಈ ಚಿತ್ರ ಇಂದು(ನ. 24) ತೆರೆಕಾಣುತ್ತಿದೆ. ಈ ಕುರಿತು ಚೇತನ್‌ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

ಚಿನ್ನದ ಹುಡುಗಿಯ ‘ಬೆಳ್ಳಿ’ ಮಾತು

ಝೀ ವಾಹಿನಿಯ ‘ಯಾರೇ ನೀ ಮೋಹಿನಿ’ ಧಾರಾವಾಹಿಯಲ್ಲಿ ಮುಗ್ಧ ಹಳ್ಳಿಹುಡುಗಿ ‘ಬೆಳ್ಳಿ’ ಪಾತ್ರಕ್ಕೆ ಜೀವ ತುಂಬಿರುವವರು ನಟಿ ಸುಷ್ಮಾ ಶೇಖರ್‌.

ನಾನು ಗಂಡುಬೀರಿ ‘ಗಂಗಾ’

ವೈಯಕ್ತಿಕ ಬದುಕು ಹಾಗೂ ನಟನಾ ಬದುಕು ವಿರುದ್ಧವಾಗಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸುತ್ತಿರುವ ದೊಡ್ಡ ಗಂಗಾಳ ಮಾತೃಭಾಷೆ ತೆಲುಗು. ಆದರೂ, ಧಾರಾವಾಹಿಯಲ್ಲಿ ಹವ್ಯಕ ಕನ್ನಡದಲ್ಲಿ ಮಾತನಾಡಲು ಶುರುವಿಟ್ಟರೆ ಸಾಕು ಎಲ್ಲರೂ ಮೂಗಿನ ಮೇಲೆ ಕೈ ಇಡುವುದು ಖಂಡಿತ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರು.

‘ಕನಕ’ ಚಿತ್ರದ ಹಾಡುಗಳ ಬಿಡುಗಡೆ

ಅದು ‘ಕನಕ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಚಿತ್ರರಂಗದ ಹಲವು ಗಣ್ಯರು ಅಲ್ಲಿ ನೆರೆದಿದ್ದರು. ಚಿತ್ರದ ನಿರ್ದೇಶಕ ಆರ್. ಚಂದ್ರು ಅವರ ಮೊಗದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ ಖುಷಿ ಇತ್ತು. ಚಿತ್ರದ ಹಾಡುಗಳನ್ನು ಕೇಳಿದ ಗಣ್ಯರು ಸಂತಸ ಹಂಚಿಕೊಂಡರು.