ಮನೆಯೊಳಗೆ ಹಸಿರ ಸಿರಿ

12 Sep, 2017
ಸ್ಮಿತಾ ಶಿರೂರ

ಇದು ಅಪಾರ್ಟ್‌ಮೆಂಟ್‌ಗಳ ಕಾಲ. ಜಾಗ ಕಡಿಮೆ. ಅದರಲ್ಲೂ ಮಣ್ಣು–ಗಾಳಿ–ಬೆಳಕು ಯಥೇಚ್ಛವಾಗಿ ಸಿಗುವುದು ಅಪರೂಪ. ಹೀಗಾಗಿ ಕೈತೋಟ ಮಾಡಬೇಕೆಂದ ಹಲವರ ಕನಸು ನನಸಾಗುವುದು ಕಷ್ಟ. ಆದರೂ, ಪರಿಸರಪ್ರಿಯರಿಗೆ ಸಸಿ ಬೆಳೆಸುವ ಉತ್ಸಾಹ ಗರಿಗೆದರುವಂತೆ ಮಾಡಿದೆ ‘ಟೆರೇರಿಯಂ’.

ಹಲವರು ಮನೆಯೊಳಗೆ, ಟೆರೇಸ್‌ ಮೇಲೆ ಸಸಿಗಳನ್ನು ಬೆಳೆಸುವುದನ್ನು ಕಂಡಿದ್ದೇವಾದರೂ, ‘ಟೆರೇರಿಯಂ’ ಇದಕ್ಕಿಂತ ಸ್ವಲ್ಪ ಭಿನ್ನ. ಆಲಂಕಾರಿಕ ಮೀನುಗಳನ್ನು ಬೆಳೆಸುವ ‘ಅಕ್ವೇರಿಯಂ’ನಂತೆ ಇದೂ ಆಲಂಕಾರಿಕ ಸಸಿಗಳನ್ನು ಒಡಲಲ್ಲಿಟ್ಟುಕೊಂಡು ಮನೆ ಯನ್ನು ಅಂದಗೊಳಿಸುವ ಹಾಗೂ ಆಹ್ಲಾದಕರ ಶುದ್ಧ ಗಾಳಿಯಾಡುವಂತೆ ಮಾಡುವ ಪುಟ್ಟ ಗಾಜಿನಗೋಳ. ವಿವಿಧ ಆಕಾರದ ಪುಟ್ಟ ಕುಂಡಗಳನ್ನೂ ‘ಟೆರೇರಿಯಂ’ಗಳಂತೆ ಬಳಸಬಹುದು.

ಸುಂದರ ಆಕಾರದ ಗಾಜಿನಗೋಳ, ವಿನ್ಯಾಸಭರಿತ ಪುಟ್ಟ ಕುಂಡಗಳಲ್ಲಿ ಇಂಥ ಸೂಕ್ಷ್ಮಸಸಿಗಳನ್ನು ಬೆಳೆಸುವ ಕೈಂಕರ್ಯದಲ್ಲಿ ಕಳೆದೆರಡು ವರ್ಷಗಳಿಂದ ನಿರತರಾಗಿದ್ದಾರೆ ಮೈಸೂರಿನ ಟೆರೇಷಿಯನ್‌ ಕಾಲೇಜಿನ ಜೈವಿಕ ತಂತ್ರಜ್ಞಾನ ಉಪನ್ಯಾಸಕ ವಿನಯ್‌ ರಾಘವೇಂದ್ರ. ಇವರು ಸಸ್ಯವಿಜ್ಞಾನದಲ್ಲಿ ಬಿಎಸ್‌ಸಿ, ಜೈವಿಕ ತಂತ್ರಜ್ಞಾನದಲ್ಲಿ ಎಂಎಸ್‌ಸಿ, ಪಿ.ಎಚ್.ಡಿ, ಅಂಗಾಂಶ ಕೃಷಿಯಲ್ಲಿ ಪೋಸ್ಟ್‌ ಡಾಕ್ಟೋರಲ್‌ (ಯುನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ) ಪಡೆದಿದ್ದಾರೆ.

ಅಡುಗೆಮನೆ, ಓದುವ ಕೋಣೆ, ಪುಸ್ತಕದ ಕಪಾಟು, ಮಲಗುವ ಕೋಣೆ, ಹಜಾರ... ಹೀಗೆ ಎಲ್ಲೆಂದರಲ್ಲಿ ಇಡಬಹುದಾದ ‘ಟೆರೇರಿಯಂ’ಗಳನ್ನು ಇವರು ವಿನ್ಯಾಸಗೊಳಿಸಿದ್ದಾರೆ. ಕಾಫಿ, ಟೀ ಟ್ರೇಗಳಲ್ಲೂ ಇವುಗಳನ್ನು ಇಡುವ ಟ್ರೆಂಡ್‌ ಈಚೆಗೆ ಬೆಳೆದಿದೆ. ಕಡಿಮೆ ಬೆಳಕಿನಲ್ಲಿ, ಸ್ವಲ್ಪವೇ ನೀರು ಪಡೆದು ಬೆಳೆಯುವ ವಿವಿಧ ಸಸ್ಯಗಳನ್ನು ಗುರುತಿಸಿ ಅವುಗಳನ್ನು ವಿಶಿಷ್ಟ ವಿಧಾನದ ಮೂಲಕ ಬೆಳೆಸಲಾಗುತ್ತದೆ.

ಸ್ವಲ್ಪವೇ ಮಣ್ಣು, ಕಲ್ಲುಗಳನ್ನು ಹಾಕಿ ಚಿಕ್ಕದಾಗಿ ಬೆಳೆಯುವ ಸಸಿಗಳನ್ನು ನೆಡಲಾಗುತ್ತದೆ. ಅವುಗಳಿಗೆ ನಿಗದಿತ ಪ್ರಮಾಣದ ನೀರು ಹಾಕಲಾಗುತ್ತದೆ. ಇವು ‘ಶೋ’ಗಷ್ಟೇ ಅಲ್ಲದೆ ದಿನವಿಡೀ ಆಮ್ಲಜನಕ ಉತ್ಪಾದಿಸುವ ಕಾರ್ಖಾನೆಗಳಂತೆ ಕೆಲಸ ಮಾಡುತ್ತವೆ ಎನ್ನುತ್ತಾರೆ ವಿನಯ್‌. ಸಿಎಫ್‌ಟಿಆರ್ಐ ನಿವೃತ್ತ ವಿಜ್ಞಾನಿ ಡಾ.ಭಾಗ್ಯಲಕ್ಷ್ಮಿ ಅವರ ಸಲಹೆ ಪಡೆದು ‘ಅಂಗಾಂಶ ಕೃಷಿ’ ಪ್ರಯೋಗಾಲಯ ನಡೆಸುತ್ತಿರುವುದು ಇವರ ಈ ಕೌಶಲಕ್ಕೆ ಅಡಿಪಾಯವಾಗಿದೆ.

ಶಂಖ, ಬಾಟಲಿ, ಬಲ್ಬ್‌, ಊಟದ ಡಬ್ಬಿ, ವೈನ್‌ ಗ್ಲಾಸ್‌, ಮಗ್‌, ಫಿಶ್‌ ಬೌಲ್‌ ಆಕಾರಗಳಲ್ಲಿ ಗಾಜಿನ ವಿನ್ಯಾಸಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಅದರಲ್ಲಿ ಸಸ್ಯಗಳನ್ನು ಬೆಳೆಸ ಬಹುದು. ಅದರೊಂದಿಗೆ ವಿವಿಧ ಆಕೃತಿಗಳನ್ನು ಇಟ್ಟು ಒಂದು ಕಾಲ್ಪನಿಕ ದೃಶ್ಯವನ್ನೂ ಸೃಷ್ಟಿಸಬಹುದು.

ಟೆರೇರಿಯಂಗೆ ಮೊದಲು ಸಸ್ಯಗಳ ಆಯ್ಕೆ ಮಹತ್ವದ್ದು. ಪಾಪಾಸುಕಳ್ಳಿ ಜಾತಿಯ ಎಕಿನೋಪ್ಸಿಸ್‌, ಹೆಡ್ಜ್‌ ಹಾಗ್‌, ಪೀನಟ್‌, ಈಸ್ಟರ್‌ ಲಿಲಿ, ಆರ್ಜೆನ್‌ಟೈನ್‌ ಜೇಂಟ್‌, ಸಕ್ಯುಲೆಂಟ್ಸ್‌ ಜಾತಿಯ ಎಚೆವೆರಿಯಾ, ಕ್ರಾಸ್ಸುಲ, ಹವಾರ್ತಿಯಾ, ಯುಫೊರ್ಬಿಯಾ ತಿರುಕಳ್ಳಿ ಮೊದಲಾದವು ಸೂಕ್ತ.

ದೊಡ್ಡ ಗಾತ್ರದ ಬೌಲ್‌ ಇದ್ದರೆ ಪೀಸ್‌ ಲಿಲ್ಲಿ, ಕೆಂಪಂಚಿನ ಡ್ರಾಸಿಯಸ್‌, ಸ್ನೇಕ್ ಪ್ಲಾಂಟ್‌, ಇಂಗ್ಲಿಷ್‌ ಐವಿ, ಬಾರ್ಬೇರ್ಟನ್‌ ಡೈಸಿ, ಲೇಡಿ ಪಾಮ್‌, ಫ್ಲೆಮಿಂಗೋ ಲಿಲ್ಲಿ, ಡೆವಿಲ್ಸ್‌ ಐವಿ, ಚೈನೀಸ್ ಎವರ್‌ಗ್ರೀನ್‌, ಸ್ಪೈಡರ್‌ ಪ್ಲಾಂಟ್‌, ಕಿಂಬರ್ಲಿ ಕ್ವೀನ್‌ ಫರ್ನ್‌ ಮೊದಲಾದ ಸಸ್ಯಗಳನ್ನೂ ಬಳಸಬಹುದು. ಇವು ದಿನದ 24 ಗಂಟೆಯೂ ಆಮ್ಲಜನಕ ಬಿಡುಗಡೆ ಮಾಡುತ್ತವೆ. ಇವನ್ನು ಒಳಾಂಗಣ ಅಲಂಕಾರಕ್ಕೆ ಬಳಸಲಾಗುತ್ತದೆ ಎನ್ನುತ್ತಾರೆ ಅವರು.

ಎ.ಸಿ, ರೆಫ್ರಿಜರೇಟರ್‌ಗಳಿಂದ ಉತ್ಪತ್ತಿಯಾಗುವ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುವ ಇಂಥ ಸಸ್ಯಗಳು ಮನೆಯೊಳಗಿನ ಹವೆಯನ್ನು ಶುದ್ಧಗೊಳಿಸುತ್ತವೆ. ಮೊದಲು ಅಮೆರಿಕ, ಯುರೋಪ್‌ ಖಂಡಗಳ ವಿವಿಧ ದೇಶಗಳಲ್ಲಿ ಕಂಡು ಬಂದ ‘ಟೆರೇರಿಯಂ’ ಬಳಕೆ ಈಚೆಗೆ ದೇಶಕ್ಕೂ ಕಾಲಿಟ್ಟಿದೆ.

ವಿದೇಶಕ್ಕೆ ಅಧ್ಯಯನಕ್ಕಾಗಿ ತೆರಳಿದಾಗ ಅಲ್ಲಿ ಇವುಗಳನ್ನು ಕಂಡು ವಿನಯ್‌ ಆಕರ್ಷಿತರಾದರು. ದೇಶಕ್ಕೆ ಮರಳಿದ ನಂತರ ಮೈಸೂರಿನ ‘ಭೂದೇವಿ ಫಾರ್ಮ್‌’ನ ಮಾಲೀಕ ಕೃಷ್ಣರಾಜು ಅವರಿಗೆ ಇಂಥ ಆಲಂಕಾರಿಕ ಸಸ್ಯಗಳನ್ನು ಬೆಳೆಸುವಂತೆ ಸಲಹೆ ನೀಡಿದರು. ಶುಭಸಮಾರಂಭಗಳಲ್ಲಿ ಹೂಗುಚ್ಛಗಳನ್ನು ಕೊಡುವ ಬದಲು ಇಂಥ ಪರೋಪಕಾರಿ ‘ಟೆರೇರಿಯಂ’ಗಳನ್ನು ನೀಡಬಹುದು.

ಇಲ್ಲವೇ ಹಗುರವಾದ ಹೂಕುಂಡಗಳನ್ನೂ ನೀಡಬಹುದು ಎನ್ನುತ್ತಾರೆ ವಿನಯ್‌. ಇವರು ಈಗಾಗಲೇ ‘ಲೇಡಿಸ್‌ ಕ್ಲಬ್‌’ಗಳಿಗೆ, ಮಹಿಳಾ ಸಂಘಗಳಿಗೆ ತರಬೇತಿಯನ್ನೂ ನೀಡಿದ್ದಾರೆ. ಬೆಂಗಳೂರು, ಮೈಸೂರಿನ ಹಲವು ಅಪಾರ್ಟ್‌ಮೆಂಟ್‌ಗಳಿಗೆ ‘ಟೆರೇರಿಯಂ’ಗಳನ್ನು ವಿನ್ಯಾಸಗೊಳಿಸಿಕೊಟ್ಟಿದ್ದಾರೆ. ₹500ರಿಂದ ₹10,000 ಬೆಲೆವರೆಗೂ ಟೆರೇರಿಯಂಗಳನ್ನು ತಯಾರಿಸಬಹುದು.

ಹೊರಗೆ ಹೋಗಿ ಉದ್ಯೋಗ ಮಾಡಲು ಅನುಕೂಲವಿಲ್ಲದ ಮಹಿಳೆಯರು ಇದನ್ನು ತಯಾರಿಸಿ ಆರ್ಥಿಕವಾಗಿ ಬಲಗೊಳ್ಳಬಹುದು ಎನ್ನುತ್ತಾರೆ ವಿನಯ್‌.

ಟೆರೇರಿಯಂ ಸಿದ್ಧಪಡಿಸುವುದು ಹೇಗೆ?
ಸಾಮಾನ್ಯವಾಗಿ ಪಾಪಾಸುಕಳ್ಳಿ ಮತ್ತು ಸಕ್ಯುಲೆಂಟ್ಸ್‌ ಜಾತಿಯ ಗಿಡಗಳನ್ನು ಆಯ್ದುಕೊಳ್ಳಬೇಕು. ಇಷ್ಟವಾದ ಆಕಾರದ ಗಾಜಿನ ಧಾರಕಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಗಾಜಿನ ಬೌಲ್‌ ಅನ್ನು ಚೆನ್ನಾಗಿ ತೊಳೆದು, ಅದರಲ್ಲಿ ಸ್ವಲ್ಪ ಬೆಣಚುಕಲ್ಲು ಅಥವಾ ಜಲ್ಲಿಕಲ್ಲುಗಳನ್ನು ಹಾಕಬೇಕು. ನಂತರ ಇದ್ದಿಲನ್ನು ಹಾಕಬೇಕು. ಇದ್ದಿಲು ಗಿಡಗಳಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸಿ ಬೇರು ಸದೃಢವಾಗಿ ಬೆಳೆಯಲು ಸಹಕಾರಿಯಾಗುತ್ತದೆ.

ಇದರ ಪದರದ ಮೇಲೆ ಕಾಲು ಭಾಗದಷ್ಟು ಕೋಕೊಪಿಟ್‌ ಸೇರಿಸಬೇಕು. ಇದನ್ನು ಸೇರಿಸುವುದರಿಂದ ಗಿಡಗಳಿಗೆ ಬೇಕಾದಷ್ಟೇ ನೀರು ಹಾಗೂ ಪೋಷಕಾಂಶಗಳು ದೊರೆಯುತ್ತವೆ. ಆಯ್ಕೆಯಾದ ಗಿಡಗಳನ್ನು ಎಚ್ಚರಿಕೆಯಿಂದ ನೆಡಬೇಕು. ನಂತರ ಕೋಕೊಪಿಟ್‌ ಪದರದ ಮೇಲೆ ವಿವಿಧ ಬಣ್ಣಗಳಿಂದ ತಯಾರಿಸಲಾದ ಮರಳನ್ನು ಆಲಂಕಾರಿಕವಾಗಿ ಹಾಕಿ, ಬೆಣಚುಕಲ್ಲುಗಳನ್ನು ಹರಡಬೇಕು. ನಡುವೆ ವಿವಿಧ ಸಣ್ಣ ಮೂರ್ತಿಗಳು, ಆಕೃತಿಗಳನ್ನು ಇಡಬಹುದು.

ಬ್ರಿಟನ್ನಿನ ಸಸ್ಯವಿಜ್ಞಾನಿ ನಥಾನಿಯಲ್‌ ಬಾಗ್‌ಶಾ ವಾರ್ಡ್‌ ಅವರು 1842ರಲ್ಲಿ ‘ಟೆರೇರಿಯಂ’ ಅನ್ನು ಕಂಡುಹಿಡಿದರು. ಅವರು ಸಂಶೋಧನೆ ಮಾಡುತ್ತಿರುವಾಗ ಆಕಸ್ಮಿಕವಾಗಿ ಗಾಜಿನ ಜಾರ್‌ ಒಂದರಲ್ಲಿ ಉಳಿದಿದ್ದ ಬೀಜವೊಂದು ಮೊಳಕೆಯೊಡೆದು ಸಸಿಯಾಗಿದ್ದನ್ನು ಕಂಡರು. ಇದರ ಆಧಾರದ ಮೇಲೆ ಅವರೇ ವ್ಯವಸ್ಥಿತವಾಗಿ ರೂಪಿಸಿದ ‘ವಾರ್ಡಿಯನ್‌ ಕೇಸ್‌’ ಮುಂದೆ ಟೆರೇರಿಯಂ ಎಂದು ಖ್ಯಾತವಾಯಿತು.

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.