‘ಬ್ಲೂ ವೇಲ್’ ಸುಳ್ಳೂ ಆತ್ಮಹತ್ಯೆ ಎಂಬ ಸತ್ಯವೂ

13 Sep, 2017
ಎನ್.ಎ.ಎಂ. ಇಸ್ಮಾಯಿಲ್

‘ಬ್ಲೂ ವೇಲ್ ಚಾಲೆಂಜ್’ ಎಂಬ ಆಟವೊಂದು ಕಳೆದ ಎರಡು ಮೂರು ತಿಂಗಳಿನಿಂದ ಸುದ್ದಿ ಮಾಡುತ್ತಲೇ ಇದೆ. ಮೊದಲಿಗೆ ಇಂಥದ್ದೊಂದು ಆಟವಿದೆಯಂತೆ ಎಂಬ ಸುದ್ದಿ ಬಂತು. ಆದಾದ ಮೇಲೆ ಕೇರಳದಿಂದ ಈ ಆಟಕ್ಕೆ ಬಲಿಯಾದ 11ನೇ ತರಗತಿಯ ಹುಡುಗನ ಕುರಿತ ಸುದ್ದಿ ಬಂತು. ಇದರ ಹಿಂದೆಯೇ ಈ ಆಟಕ್ಕೆ ಬಲಿಯಾದವರೆಂಬ ಪಟ್ಟಿಗೆ ಇನ್ನೂ ಐದು ಮಂದಿಯ ಸೇರ್ಪಡೆಯಾಯಿತು. ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಇಬ್ಬರು ಯುವಕರನ್ನು ಸಾವಿನಿಂದ ರಕ್ಷಿಸಿದ ಸುದ್ದಿ ಬಂತು. ಜೈಪುರದಿಂದ ಆತ್ಮಹತ್ಯೆ ದವಡೆಯಿಂದ ಪಾರಾದ ಬಾಲಕಿ ಪತ್ರಕರ್ತರೊಂದಿಗೆ ಮಾತನಾಡಿ ತನ್ನ ಅನುಭವವನ್ನು ಹಂಚಿಕೊಂಡ ವರದಿಯೂ ಮಾಧ್ಯಮಗಳಲ್ಲಿ ಪ್ರಕಟವಾಯಿತು. ಸರ್ಕಾರವಂತೂ ಎಲ್ಲಾ ಸರ್ಚ್ ಎಂಜಿನ್ ಕಂಪೆನಿಗಳಿಗೆ, ಸಾಮಾಜಿಕ ಜಾಲತಾಣಗಳ ಕಂಪೆನಿಗಳಿಗೆ  ಈ ಆಟಕ್ಕೆ ಸಂಬಂಧಿಸಿದ ಕೊಂಡಿಗಳನ್ನು ತೆಗೆದು ಹಾಕಬೇಕೆಂದು ಸೂಚಿಸಿದೆ. ಈ ಮಧ್ಯ ವಿಷಯ ನ್ಯಾಯಾಲಯವನ್ನೂ ತಲುಪಿದ್ದು ಈ ವಾರದಲ್ಲಿ ಪ್ರಕರಣದ ವಿಚಾರಣೆ ನಡೆಯಲಿದೆ.

ಇಷ್ಟೆಲ್ಲಾ ಸುದ್ದಿ ಮತ್ತು ಗದ್ದಲ ಸೃಷ್ಟಿಸಿದ ಈ ಆಟ ಹೇಗಿದೆ? ಇದು ಕಂಪ್ಯೂಟರ್, ಮೊಬೈಲ್ ಅಥವಾ ಟ್ಯಾಬ್ಲೆಟ್‌ಗಳಿಗೆ ಡೌನ್‌ಲೋಡ್ ಮಾಡಿಕೊಂಡು ಆಡಬಹುದಾದ ಆಟವೇ? ಅಥವಾ ನೇರವಾಗಿ ಆನ್‌ಲೈನ್‌ನಲ್ಲೇ ಆಡಬೇಕೇ? ಈ ಆಟದ ಕೊಂಡಿ ಮಕ್ಕಳಿಗೆ ಹೇಗೆ ದೊರೆಯುತ್ತದೆ? ನಿಜ ಬದುಕಿನ ‘ಟಾಸ್ಕ್’ಗಳನ್ನು ಪೂರೈಸುವುದಕ್ಕೂ ತಂತ್ರಜ್ಞಾನಕ್ಕೂ ಇರುವ ಸಂಬಂಧವೇನು? ಇಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆಯಾಗುವುದು ಕೇವಲ ಸೂಚನೆಗಳನ್ನು ಕೊಡುವುದಕ್ಕೆ ಮಾತ್ರವೇ? ಅಷ್ಟು ಮಾತ್ರವೇ ಆಗಿದ್ದರೆ ಇದಕ್ಕೆ ‘ಆಟ’ವನ್ನು ನಿರ್ವಹಿಸುವವರು ಸಂದೇಶ ರವಾನೆಗಾಗಿ ತಮ್ಮದೇ ಆದ ಒಂದು ಆ್ಯಪ್ ಅಥವಾ ತಂತ್ರಾಂಶವನ್ನು ರೂಪಿಸಿಕೊಂಡಿದ್ದಾರೆಯೇ? ಲಭ್ಯ ಇರುವ ಸಾಮಾಜಿಕ ಜಾಲತಾಣಗಳ ಮೆಸೇಜಿಂಗ್ ತಂತ್ರಾಂಶಗಳನ್ನೇ ಇದಕ್ಕೆ ಬಳಸಿಕೊಳ್ಳಲಾಗುತ್ತಿದೆಯೇ? ನಿರ್ದಿಷ್ಟ ‘ಟಾಸ್ಕ್’ ಪೂರ್ಣಗೊಳಿಸಿದ್ದನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಆಟದ ನಿರ್ವಾಹಕರು ಯಾವೆಲ್ಲಾ ತಂತ್ರಗಳನ್ನು ಅನುಸರಿಸುತ್ತಾರೆ? ಈ ತಥಾಕಥಿತ ‘ಆಟ’ದ ಕುರಿತ ಯಾವ ಪ್ರಶ್ನೆಗಳಿಗೂ ಎಲ್ಲಿಯೂ ಸ್ಪಷ್ಟವಾದ ಉತ್ತರಗಳು ದೊರೆಯುವುದೇ ಇಲ್ಲ.

ಲಭ್ಯವಿರುವ ಮಾಹಿತಿಗಳೆಲ್ಲವೂ ಅಂತೆ-ಕಂತೆಗಳ ಸುತ್ತವೇ ಗಿರಕಿ ಹೊಡೆಯುತ್ತವೆ. ಈ ಆಟ ಹುಟ್ಟಿಕೊಂಡಿತೆಂದು ಹೇಳಲಾಗುವ ರಷ್ಯಾದಿಂದ ಈಗ ಗದ್ದಲ ಸೃಷ್ಟಿಸುತ್ತಿರುವ ನಮ್ಮ ದೇಶದ ತನಕದ ಎಲ್ಲಾ ಸುದ್ದಿಗಳನ್ನು ಜಾಲಾಡಿದರೂ ನಮಗೆ ದೊರೆಯುವುದು ಆಟಗಾರನನ್ನು ಆತ್ಮಹತ್ಯೆಯ ತನಕ ಕೊಂಡೊಯ್ಯುವ ಐವತ್ತು ‘ಟಾಸ್ಕ್’ಗಳ ಪಟ್ಟಿ ಮಾತ್ರ. ಈ ಪಟ್ಟಿಯಲ್ಲಿರುವ ಕ್ರಿಯೆಗಳನ್ನು ಆಟಗಾರ ಸಂಪೂರ್ಣಗೊಳಿಸುವಂತೆ ಹೇಗೆ ಒತ್ತಡ ಹೇರಲಾಗುತ್ತದೆ ಎಂಬ ಪ್ರಶ್ನೆಗೆ ದೊರೆಯುವುದು ಒಂದು ಸಾಲಿನ ಉತ್ತರ- ‘ಆಟಗಾರನನ್ನು ಬ್ಲಾಕ್ ಮೇಲ್ ಮಾಡಲಾಗುತ್ತದೆ’. ಹೇಗೆ ಬ್ಲಾಕ್ ಮೇಲ್ ಮಾಡಲಾಗುತ್ತದೆ? ಅದಕ್ಕೆ ಬೇಕಿರುವ ಮಾಹಿತಿಯನ್ನು ಆಟದ ನಿರ್ವಾಹಕರು ಹೇಗೆ ಸಂಗ್ರಹಿಸಿರುತ್ತಾರೆ ಎಂಬ ಪ್ರಶ್ನೆಗಳಿಗೆ ಎಲ್ಲಿಯೂ ಉತ್ತರ ದೊರಕುವುದಿಲ್ಲ.

ಈ ಪ್ರಶ್ನೆಗಳನ್ನು ಈವರೆಗೆ ಅನೇಕರು ಕೇಳಿದ್ದಾರೆ. ಇವರಲ್ಲಿ ಬಹಮುಖ್ಯ ಹೆಸರು ಅಮೆರಿಕದ ಪತ್ರಕರ್ತೆ ಆ್ಯನ್ ಕೊಲಿಯರ್ ಅವರದ್ದು. 1997ರಿಂದಲೂ ಯುವಕರು ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಸಂಬಂಧಿಸಿದ ವಿಚಾರಗಳನ್ನು ವಿಶ್ಲೇಷಿಸುತ್ತಿರುವ ಆ್ಯನ್ ಇಂಥದ್ದೊಂದು ಆಟವಿದೆ ಎಂಬುದನ್ನೇ ಅನುಮಾನಿಸುತ್ತಾರೆ. ಅವರ ಪ್ರಕಾರ ಇದೊಂದು ‘ಸುಳ್ಳು ಸುದ್ದಿ’.  ಇದು  ‘ಸೈಬರ್ ಅಪಾಯಗಳ ಕುರಿತ ಸುಳ್ಳು ಮಾಹಿತಿ ಕೂಡಾ ಎಷ್ಟು ಅಪಾಯಕಾರಿಯಾಬಹುದು ಎಂಬುದಕ್ಕೆ ಇದೊಂದು ಸಾಕ್ಷಿ’. ಇದು ಕೇವಲ ಇವರೊಬ್ಬರ ಮಾತಲ್ಲ. ಬಲ್ಗೇರಿಯಾದ ಸೇಫ್ ಇಂಟರ್ನೆಟ್ ಸೆಂಟರ್‌ನ ಜಾರ್ಜ್ ಆಪೊಸ್ಟೊಲೊವ್ ಅವರ ಮಾತೂ ಹೌದು. ಇಂಥದ್ದೊಂದು ಆಟ ನಿಜವಾಗಿಯೂ ಇದೆಯೋ ಇಲ್ಲವೋ ಎಂಬುದು ಗೊತ್ತಿಲ್ಲದೆಯೇ ಅನೇಕ ವೆಬ್‌ಸೈಟುಗಳು ಈ ಆಟದ ಕುರಿತು ಬರೆಯುತ್ತಾ ಹೋಗಿರುವುದಂತೂ ನಿಜ.

ಬ್ಲೂವೇಲ್ ಚಾಲೆಂಜ್ ಎಂದು ಇಂಗ್ಲಿಷ್‌ನಲ್ಲಿ ಟೈಪಿಸಿ ಗೂಗಲ್‌ ನಲ್ಲಿ ಹುಡುಕಿದರೆ ಅರ್ಧ ಸೆಕೆಂಡುಗಳ ಅವಧಿಯಲ್ಲಿ 24.10 ಲಕ್ಷ ಫಲಿತಾಂಶಗಳು ನಮ್ಮೆದುರು ಪ್ರತ್ಯಕ್ಷವಾಗುತ್ತವೆ. ಕನಿಷ್ಠ ಮೊದಲ ನೂರು ಕೊಂಡಿಗಳಂತೂ ಈ ಆಟಕ್ಕೆ ಬಲಿಯಾದವರ ಕುರಿತ ವಿವರಗಳನ್ನು ಒದಗಿಸುತ್ತವೆ. ಅಲ್ಲಿಲ್ಲಿ ಕೆಲವು ಭಿನ್ನಮತದ ಧ್ವನಿಗಳಿವೆ. ಹದಿಹರೆಯದವರ ಡಿಜಿಟಲ್ ಸಾಕ್ಷರತೆಯ ಮಟ್ಟ, ಮಾಧ್ಯಮ ಸಾಕ್ಷರತೆಯ ಮಟ್ಟವನ್ನು ಚರ್ಚಿಸುವ ಕೆಲವು ಲೇಖನಗಳಿವೆ. ಆದರೆ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚಿನಂಶ ಪ್ರಕಟವಾಗಿರುವುದು ಇಂಥದ್ದೊಂದು ಆಟ ಇದೆ ಎಂಬ ಅರ್ಥದ ವರದಿಗಳೇ.ಸೈಬರ್ ಜಗತ್ತೆಂಬುದು ಕೇವಲ ಗೂಗಲ್ ಅಥವಾ ಅಂತಹ ಮುಖ್ಯವಾಹಿನಿಯ ಸರ್ಚ್ ಎಂಜಿನ್‌ಗಳು ತೋರಿಸುವಷ್ಟು ಮಾತ್ರ ಅಲ್ಲ ಎಂಬ ವಾಸ್ತವವನ್ನು ಗಮನದಲ್ಲಿಟ್ಟುಕೊಂಡೇ ಬ್ಲೂವೇಲ್ ಚಾಲೆಂಜ್‌ನ ಕುರಿತ ಚರ್ಚೆಗಳನ್ನು ನೋಡಬೇಕಾಗುತ್ತದೆ.

ಈ ಆಟದ ಕುರಿತಂತೆ ಮೊದಲು ತನಿಖಾ ವರದಿಯನ್ನು ಪ್ರಕಟಿಸಿದ್ದು ರಷ್ಯನ್ ಭಾಷೆಯ ಜಾಲತಾಣ ನೊವಾಯ ಗೆಝೆಟಾ (https://goo.gl/Exiho9). 2016ರ ಮೇ ತಿಂಗಳಿನಲ್ಲಿ ಪ್ರಕಟವಾಗ ಈ ವರದಿ ಕಳೆದ ಆರು ತಿಂಗಳ ಅವಧಿಯಲ್ಲಿ ಸಂಭವಿಸಿದ ಹದಿಹರೆಯದವರ ಆತ್ಮಹತ್ಯೆಗಳ ಕುರಿತಂತೆ ಇದ್ದ ವರದಿ ಆತ್ಮಹತ್ಯೆ ಮಾಡಿಕೊಂಡವರಿಗೂ ಆನ್‌ಲೈನ್ ಆಟಗಳ ಸಮುದಾಯವೊಂದಕ್ಕೂ ಇರುವ ಸಂಬಂಧವನ್ನು ಶೋಧಿಸಿ ಹೇಳಿತ್ತು. ಆತ್ಮಹತ್ಯೆ ಮಾಡಿಕೊಂಡವರ ಮೈಮೇಲೆ ಇದ್ದ ಗಾಯಗಳು ಇತ್ಯಾದಿಗಳ ಪ್ರಸ್ತಾಪಗಳೆಲ್ಲವೂ ಈ ವರದಿಯ ಭಾಗ. ಅಲ್ಲಿಂದ ಆರಂಭವಾದ ‘ಬ್ಲೂ ವೇಲ್ ಚಾಲೆಂಜ್’ ಕುರಿತ ಸುದ್ದಿ ವಿಶ್ವವ್ಯಾಪಿಯಾಗಿ ಹರಡಿತು. ವೈರಲ್ ಆಗುವ ಸಂಗತಿಗಳ ಸತ್ಯಾಸತ್ಯತೆಗಳನ್ನು ಬಯಲು ಮಾಡುವ ಸ್ನೋಪ್ಸ್‌ ತಾಣ ಬ್ಲೂ ವೇಲ್ ಚಾಲೆಂಜ್ ಎಂಬ ಆಟ ಇದೆಯೋ ಇಲ್ಲವೋ ಎಂಬುದು ಇನ್ನೂ ಸಾಬೀತಾಗಿಲ್ಲ ಎನ್ನುತ್ತದೆ. ಹಾಗೆಯೇ ರೇಡಿಯೋ ಫ್ರೀ ಯೂರೋಪ್ ನಡೆಸಿದ ತನಿಖೆ ಕೂಡಾ ಹದಿಹರೆಯದವರ ಸಾವುಗಳಿಗೂ ‘ಬ್ಲೂ ವೇಲ್ ಚಾಲೆಂಜ್’ ಎಂಬ ಆಟಕ್ಕೂ ಸಂಬಂಧವಿರುವುದು ಸಂಶಯಾಸ್ಪದ ಎಂದು ಅಭಿಪ್ರಾಯ ಪಟ್ಟಿದೆ.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಬ್ಲೂ ವೇಲ್ ಚಾಲೆಂಜ್ ಎಂಬ ಆಟವೇ ಇಲ್ಲ. ಹಾಗಾಗಿ ನಾವು ಗಾಬರಿಯಾಗಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ಬರಬಹುದೇ? ಈ ಪ್ರಶ್ನೆಗೆ ಇರುವ ಉತ್ತರ ಒಂದೇ- ಸೈಬರ್ ಜಗತ್ತಿನಲ್ಲಿ ಸುಳ್ಳುಗಳೇ ಇಲ್ಲ. ಅಲ್ಲಿರುವುದು ಪರ್ಯಾಯ ಸತ್ಯಗಳು ಮಾತ್ರ! ಈಗ ನಮ್ಮ ಮುಂದಿರುವ ಸವಾಲೇ ಇದು. ಈಗಾಗಲೇ ಹರಡಿರುವ ಸುಳ್ಳು ಸುದ್ದಿಗಳಿಂದಾಗಿಯೇ ಬ್ಲೂ ವೇಲ್ ಚಾಲೆಂಜ್ ಎಂಬ ಅಪಾಯಕಾರಿ ಆಟವೊಂದು ಹುಟ್ಟಿರುವ ಸಾಧ್ಯತೆ ಇದೆ. ಈ ಆಟದ ಕರ್ತೃ ಎನ್ನಲಾದ ಫಿಲಿಪ್ ಬುಡೀಕಿನ್ ಈಗ ಬಂಧನದಲ್ಲಿದ್ದಾನೆ. ಮೊದಲಿಗೆ 17 ಮಂದಿ ಹದಿಹರೆಯದ ಬಾಲಕಿಯರನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ್ದಾಗಿ ಒಪ್ಪಿಕೊಂಡಿದ್ದ ಈತ ಇತ್ತೀಚೆಗೆ ಅದೆಲ್ಲವನ್ನೂ ಅಲ್ಲಗಳೆದಿದ್ದಾನೆ. ‘ಉಪಯೋಗಕ್ಕೆ ಬಾರದವರನ್ನು ಇಲ್ಲದಂತೆ ಮಾಡಿ ಸಮಾಜನವನ್ನು ಶುಚಿಗೊಳಿಸಿದ್ದೇನೆ’ ಎಂಬ ಅರ್ಥದ ಮಾತುಗಳನ್ನು ಆತ ಆಡಿದ್ದ. ಈ ಬಗೆಯ 'ಸಮಾಜವನ್ನು ಶುಚಿಗೊಳಿಸುವ' ಹುಚ್ಚು ಬಾಧಿಸಿರುವ ಮಾನಸಿಕ ರೋಗಿಗಳು ಎಲ್ಲೆಲ್ಲಿಯೂ ಇರಬಹುದು. ಬ್ಲೂವೇಲ್ ಚಾಲೆಂಜ್ ಕುರಿತಂತೆ ಹರಡಿರುವ ಸುದ್ದಿಗಳೇ ಅವರ ‘ಶುಚೀಕರಣ’ ಪ್ರಕ್ರಿಯೆಗೆ ಪ್ರೇರಕವಾಗಿರಲೂಬಹುದು. ‘ಸೈಬರ್ ಅಪಾಯಗಳ ಕುರಿತ ಸುಳ್ಳು ಮಾಹಿತಿ ಅಪಾಯಕಾರಿ’ ಎಂಬ ಆ್ಯನ್ ಕೊಲಿಯೆರ್ ಅವರ ಮಾತುಗಳ ಮುಖ್ಯವಾಗುವುದು ಇದೇ ಕಾರಣಕ್ಕೆ.

‘ಬ್ಲೂ ವೇಲ್ ಚಾಲೆಂಜ್’ನ ಕುರಿತು ಈಗ ಮಾಧ್ಯಮಗಳಿಂದ ತೊಡಗಿ ನ್ಯಾಯಾಲಯದ ತನಕದ ಎಲ್ಲರೂ ಮಾತನಾಡುತ್ತಿದ್ದಾರೆ. ಈ ಮಾತುಗಳಲ್ಲಿ ಮುಖ್ಯವಾಗುತ್ತಿರುವುದು ‘ಬ್ಲೂ ವೇಲ್ ಚಾಲೆಂಜ್’ ಎಂಬ ಆಟವೇ ಹೊರತು ಆತ್ಮಹತ್ಯೆ ಎಂಬ ಸಾಮಾಜಿಕ ಸಮಸ್ಯೆಯಲ್ಲ. 2012ರಲ್ಲಿ ಸೆಂಟರ್ ಫಾರ್ ಗ್ಲೋಬಲ್ ಹೆಲ್ತ್ ರೀಸರ್ಚ್ ಪ್ರಕಟಿಸಿದ ‘ದ ಮಿಲಿಯನ್ ಡೆತ್ ಸ್ಟಡಿ’ ಎಂಬ ಸಂಶೋಧನಾ ವರದಿ ಹೇಳುವಂತೆ ಭಾರತದಲ್ಲಿ ವಾರ್ಷಿಕ 5300 ಮಂದಿ 14 ವರ್ಷದೊಳಗಿನ ಮಕ್ಕಳು ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸುಮಾರು 85,000 ಮಂದಿ 15ರಿಂದ 29 ವರ್ಷದೊಳಗಿನವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂದರೆ ಪ್ರತೀ ವಾರ ನಮ್ಮ ದೇಶದಲ್ಲಿ ನಡೆಯುವ ಆತ್ಮಹತ್ಯೆಗಳ ಸಂಖ್ಯೆಯೇ 1700. ಇವರಲ್ಲಿ 100 ಮಂದಿ ಮಕ್ಕಳಿದ್ದಾರೆ. ಅಂದರೆ ಮಕ್ಕಳ ಆತ್ಮಹತ್ಯೆ ಎಂಬುದು ಈಗಾಗಲೇ ಒಂದು ದೊಡ್ಡ ಸಮಸ್ಯೆಯಾಗಿ ನಮ್ಮ ಮುಂದೆ ನಿಂತಿದೆ. ‘ಬ್ಲೂ ವೇಲ್ ಚಾಲೆಂಜ್’ ಸುದ್ದಿಯಾಗುವ ತನಕವೂ ನಾವ್ಯಾರೂ ಈ ಆತ್ಮಹತ್ಯೆ ಎಂಬ ಸಮಸ್ಯೆಯ ಬಗ್ಗೆ ಸಾಕಷ್ಟು ಚರ್ಚಿಸಿಯೇ ಇರಲಿಲ್ಲ ಎಂಬುದು ಕಟು ವಾಸ್ತವ.

ನೊವಾಯ ಗೆಝಟಾದ ತನಿಖಾ ವರದಿಯ ಪ್ರಕಾರ ರಷ್ಯಾದಲ್ಲಿ ಆರು ತಿಂಗಳ ಅವಧಿಯಲ್ಲಿ ಸಂಭವಿಸಿದ 130 ಆತ್ಮಹತ್ಯೆ ಪ್ರಕರಣಗಳ ಪೈಕಿ 80 ಪ್ರಕರಣಗಳಿಗೂ ಆನ್‌ಲೈನ್ ಆಟಗಳ ಸಮುದಾಯಕ್ಕೂ ಸಂಬಂಧವಿದೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು. ಈ ಸಮುದಾಯವನ್ನು ಸೇರಿಕೊಂಡದ್ದರಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡರು ಎಂದು ಅರ್ಥೈಸುವುದು ಒಂದು ವಿಧಾನ. ಹಾಗೆಯೇ ಆತ್ಮಹತ್ಯಾ ಮನೋಭಾವ ಇದ್ದುದರಿಂದಲೇ ಇಂಥ ಸಮುದಾಯವನ್ನು ಹುಡುಕಿ ಅವರು ಸೇರಿಕೊಂಡರು ಎಂದು ಅರ್ಥೈಸುವುದು ಮತ್ತೊಂದು ವಿಧಾನ. ನಾವು ಎರಡನೇ ಬಗೆಯಲ್ಲಿಯೂ ಆಲೋಚಿಸಬೇಕಾದ ಅಗತ್ಯವಿದೆ. ಬ್ಲೂ ವೇಲ್ ಚಾಲೆಂಜ್ ಎಂಬ ಆಟವೊಂದಿದ್ದರೆ ಅದನ್ನು ಆಡುವುದಕ್ಕೆ ಮಕ್ಕಳೇಕೆ ಅಷ್ಟು ಕುತೂಹಲಿಗಳಾಗಿರುತ್ತಾರೆ ಎಂಬ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಾಗಿದೆ.

ಮನೊವೈದ್ಯರಾದ ಸೌಮಿತ್ರಾ ಪಥಾರೆ ಅವರು ಹೇಳುವಂತೆ ‘ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯಾವ ಅತ್ಯಾಧುನಿಕ ತಂತ್ರಜ್ಞಾನವೂ ಬೇಕಾಗಿಲ್ಲ. ಆತ್ಮಹತ್ಯಾ ಮನೋಭಾವವಿರುವವರು ಸೈಕಾಪಾತ್‌ಗಳು ಸೃಷ್ಟಿಸಿಕೊಂಡಿರುವ ಆನ್‌ಲೈನ್ ಗ್ರೂಪ್‌ಗಳಲ್ಲಿ ಚರ್ಚಿಸುವ ಬದಲಿಗೆ ತಮ್ಮ ಸುತ್ತಲೂ ಇರುವ ಆತ್ಮೀಯರೊಂದಿಗೆ ಮಾತನಾಡುವ ಅವಕಾಶವನ್ನು ಕಲ್ಪಿಸಬೇಕು’. ‘ಬ್ಲೂ ವೇಲ್ ಚಾಲೆಂಜ್’ಗೆ ದೊರೆತಷ್ಟು ಪ್ರಚಾರ ಬೆಂಗಳೂರಿನಲ್ಲೇ ಇರುವ ಆತ್ಮಹತ್ಯಾ ತಡೆ ಸಹಾಯವಾಣಿಗೆ ದೊರೆಯುವುದಿಲ್ಲ ಎಂಬುದರಲ್ಲಿ ನಮ್ಮ ಸಮಸ್ಯೆಗಳಿವೆ. ಅಂದ ಹಾಗೆ ಬೆಂಗಳೂರಿನ ಆತ್ಮಹತ್ಯಾ ತಡೆ ಸಹಾಯವಾಣಿ ದೂರವಾಣಿ ಸಂಖ್ಯೆ ಹೀಗಿದೆ: 080 25497777

Read More

Comments
ಮುಖಪುಟ

ಆಣೆ ಮಾಡಲು ಸಿದ್ದರಾಮಯ್ಯ ದೇವೇಗೌಡರನ್ನು ದತ್ತು ತೆಗೆದುಕೊಂಡಿದ್ದಾರೆಯೇ?: ಕುಮಾರಸ್ವಾಮಿ

ನನಗೆ ನಾಟಕವಾಡಲು ಬರುವುದಿಲ್ಲ ನಾನು ಭಾವಜೀವಿ. ರೈತರು ಮಾಡಿದ ಸಾಲನ್ನು ಮನ್ನಾ ಮಾಡಲು ನಾನು ಬದ್ಧವಾಗಿದ್ದೇನೆ. ಆರೂವರೆ ಕೋಟಿ ಕನ್ನಡಿಗರ ತೆರಿಗೆ ಹಣದಿಂದ ನಾನು ರೈತರ ಸಾಲ ಮನ್ನಾ ಮಾಡುವೆ ಎಂದು ಹೇಳಿದ ಎಚ್‍ಡಿ ಕುಮಾರಸ್ವಾಮಿ.

ಮೋದಿ ಸಲಹೆ ಮೇರೆಗೆ ಪಳನಿಸ್ವಾಮಿ ಜತೆ ಕೈಜೋಡಿಸಿದೆ: ಪನ್ನೀರಸೆಲ್ವಂ

‘ಪಕ್ಷದ ಉಳಿವಿಗಾಗಿ ನೀವು(ಪನ್ನೀರಸೆಲ್ವಂ) ಒಂದಾಗಬೇಕು ಎಂದು ಅವರು(ನರೇಂದ್ರ ಮೋದಿ) ನನಗೆ ಸಲಹೆ ನೀಡಿದ್ದರು’ ಎಂದಿದ್ದಾರೆ. ಆದರೆ ತಾವು ಮೋದಿ ಅವರೊಂದಿಗೆ ಯಾವಾಗ ಮಾತುಕತೆ ನಡೆಸಿದ್ದರು ಎಂಬುದನ್ನು ತಿಳಿಸಿಲ್ಲ.

ಕಾಲೇಜ್ ಬಸ್ಸಿನಲ್ಲಿ ವಿದ್ಯಾರ್ಥಿನಿ ಎದುರು ಹಸ್ತಮೈಥುನ: ಆರೋಪಿಯನ್ನು ಹುಡುಕಿ ಕೊಟ್ಟವರಿಗೆ ₹25 ಸಾವಿರ ಬಹುಮಾನ

ಆರೋಪಿಯ ಬಗ್ಗೆ ಮಾಹಿತಿ ನೀಡಿದ್ದಲ್ಲಿ ಅಥವಾ ಹಿಡಿದು ಕೊಟ್ಟಲ್ಲಿ ಅವರಿಗೆ 25 ಸಾವಿರ ಬಹುಮಾನ ನೀಡಲಾಗುವುದು. ಅಲ್ಲದೇ ಮಾಹಿತಿ ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿ ಇಡಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಮುಂದೆ ವಿಶೇಷ ರೈಲು, ಬೋಗಿಗಳನ್ನು ಆನ್‍ಲೈನ್ ಮೂಲಕ ಕಾಯ್ದಿರಿಸಬಹುದು!

ವಿವಾಹ, ತೀರ್ಥಯಾತ್ರೆ ಮೊದಲಾದ ಅಗತ್ಯಗಳಿಗಾಗಿ ರೈಲಿನಲ್ಲಿ ಬೋಗಿ ಕಾಯ್ದಿರಿಸುವುದಾದರೆ ಇನ್ನು ಮುಂದೆ ಆನ್‍ಲೈನ್‍ನಲ್ಲಿ ಈ ಕಾರ್ಯವನ್ನು ಮಾಡಬಹುದು.

ಸಂಗತ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?

ಭ್ರಮಾಧೀನ ಮನಸ್ಥಿತಿಯಲ್ಲಿ ಬದುಕುತ್ತಿರುವ ಸಮುದಾಯವನ್ನು ಎಚ್ಚರಿಸಿ ಮುನ್ನಡೆಸಬೇಕಾದ ಜವಾಬ್ದಾರಿ ಸಮಾಜಕ್ಕಿದೆಯಲ್ಲವೇ?

ನಿರುದ್ಯೋಗ ವ್ಯಕ್ತಿಗತ ಸಮಸ್ಯೆಯೇ?

ಸ್ಪರ್ಧಾತ್ಮಕ ಜಗತ್ತಿನಲ್ಲಿ ಅರ್ಹತೆಯುಳ್ಳವರಷ್ಟೇ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂಬ ನಿಲುವು ತಳೆಯುವುದು ಆಷಾಡಭೂತಿತನವಾಗುತ್ತದೆ

ಜಾತಿ ಮತ್ತು ಹಿಂಸಾಚಾರದ ಸಮೀಕರಣ

ಒಂದು ವರ್ಗದ ನೀಚ ಕೃತ್ಯಗಳಿಗೆ ಮತ್ತೊಂದು ವರ್ಗವನ್ನು ಹೊಣೆಯಾಗಿಸುವ ಕೆಸರೆರಚಾಟ ಮುಂದುವರಿಯುತ್ತಿರುವವರೆಗೂ ಅಲ್ಲಿ ಅಸಹಿಷ್ಣುತೆ, ಹಿಂಸೆ ತಡೆಯುವುದು ಕಷ್ಟ.

ಮುಕ್ತಛಂದ

ಅಪ್ಪನ ನೆನಪುಗಳು

ಅಡಿಗರ ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಅವರ ನಿಕಟವರ್ತಿಗಳು ಹಾಗೂ ವಿಮರ್ಶಕರು ಸಾಕಷ್ಟು ದಾಖಲಿಸಿದ್ದಾರೆ. ಕೌಟುಂಬಿಕ ವ್ಯಕ್ತಿಯಾಗಿ ಅಡಿಗರು ಹೇಗಿದ್ದರು? ಅವರ ಪುತ್ರ ಪ್ರದ್ಯುಮ್ನ ಗೋಪಾಲಕೃಷ್ಣ ಅಡಿಗ ಅವರ ನೆನಪುಗಳು ಇಲ್ಲಿವೆ.

ಸ್ವಾಭಿಮಾನ ಮತ್ತು ಸಮಗ್ರ ಕಾವ್ಯ!

‘ಪ್ರಾರ್ಥನೆ’ ಕವಿತೆಯ ವಿವಾದದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರ ಪತ್ರಕ್ಕೆ ಅಡಿಗರು ಬರೆದ ಜವಾಬು ಕವಿಗೆ ಇರಬೇಕಾದ ಸ್ವಾಭಿಮಾನವನ್ನು ಸೂಚಿಸುವಂತಿದೆ. ಸ್ವಾಭಿಮಾನ ಎನ್ನುವುದು ಸೋವಿಯಾಗಿರುವ ಇಂದಿನ ಸಂದರ್ಭದಲ್ಲಿ ಅಡಿಗರ ನಿಲುವು ಹೆಚ್ಚು ಮಹತ್ವದ್ದಾಗಿ ಕಾಣುತ್ತದೆ.

ಕನ್ನಡ ಸಾಹಿತ್ಯಲೋಕದ ವಿಷಕಂಠ

ಎಲಿಯಟ್‌ ಕೂಡ ಒಂದು ಕವನದಲ್ಲಿ ಇಷ್ಟೆಲ್ಲ ಹೇಳಲಿಲ್ಲವಲ್ಲ! ಇದು ಅಡಿಗರ ‘ಭೂಮಿಗೀತ’, ‘ಭೂತ’ ಕವಿತೆಗಳಿಗೆ ಅಮೆರಿಕದ ಕವಿಯೊಬ್ಬರ ಉದ್ಗಾರ. ಆದರೆ, ಅತ್ಯುತ್ತಮ ಕಾವ್ಯ ರಚಿಸಿಯೂ ನಿರಂತರವಾಗಿ ಟೀಕೆಗೆ, ಪ್ರತಿರೋಧಕ್ಕೆ, ಖಂಡನೆಗೆ ಗುರಿಯಾದ ಅಡಿಗರಂಥ ಕವಿ ಇನ್ನೊಬ್ಬರಿಲ್ಲ.

‘ಚಂಡೆ ಮದ್ದಳೆ’ ಕವಿಯ ನಿರಂತರ ‘ವೇಸ್ಟ್ ಲ್ಯಾಂಡ್’

ಎಲಿಯಟ್ ಇಂಗ್ಲಿಷ್‌ನಲ್ಲಿ ಮಾಡಿದುದನ್ನು ಅಡಿಗರು ಕನ್ನಡದಲ್ಲಿ ಮಾಡಿದರು. ತಟಸ್ಥವಾಗಿದ್ದ ಸಾಹಿತ್ಯದಲ್ಲಿ ವಿದ್ಯುತ್ ಸಂಚಲನ ಉಂಟು ಮಾಡಿದರು. ಅಡಿಗರ ನಂತರ ಕನ್ನಡ ಕಾವ್ಯ ಮೊದಲಿನ ಹಾಗೆ ಇರಲಿಲ್ಲ. ಇದುವರೆಗೆ ಕನ್ನಡದಲ್ಲಿ ಇಲ್ಲದ್ದನ್ನು ಅವರು ಸೃಷ್ಟಿಸಿದರು. ಅವರನ್ನು ವಿರೋಧಿಸಿದವರು ಕೂಡ ಅವರ ನುಡಿಗಟ್ಟನ್ನು ಸ್ಪರ್ಶಿಸಿಯೇ ಹಾಗೆ ಮಾಡಬೇಕಾಯಿತು. ಇದಕ್ಕಿಂತಲೂ ಹೆಚ್ಚಿನ ಕೊಡುಗೆಯೊಂದಿದೆಯೇ?