,

ಅಪರಾಧ ಕೃತ್ಯವೆಸಗುವ ಮುನ್ನ ಹಂತಕರು ಮೂರು ಬಾರಿ ಗೌರಿ ಲಂಕೇಶ್ ಮನೆ ಬಳಿ ಸುಳಿದಾಡಿದ್ದರು!

13 Sep, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು:  ಸೆಪ್ಟೆಂಬರ್ 5ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲು ಹೊಂಚು ಹಾಕಿದ್ದ ಹಂತಕರು ಮೂರು ಬಾರಿ ಗೌರಿಯವರ ಮನೆ ಬಳಿ ಸುಳಿದಾಡಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಗೌರಿ ಲಂಕೇಶ್‍ ಮೇಲೆ ಗುಂಡಿನ ದಾಳಿ ನಡೆಸುವ ಮುನ್ನ ಅಂದರೆ 30-45 ನಿಮಿಷಗಳಿಗೊಮ್ಮೆ ಶಂಕಿತ ಆರೋಪಿಗಳು ಗೌರಿ ಮನೆ ಬಳಿ ಕಾಣಿಸಿಕೊಂಡಿದ್ದರು. ಗೌರಿ ಮೇಲೆ ಗುಂಡು ಹಾರಿಸಿರುವ ಆರೋಪಿ ಉದ್ದ ತೋಳಿನ ಬಿಳಿ ಶರ್ಟ್ ಧರಿಸಿರುವುದಾಗಿ ಸಿಸಿಟಿವಿ ದೃಶ್ಯಾವಳಿಯಿಂದ ಪತ್ತೆ ಹಚ್ಚಲಾಗಿದೆ.  ಮೊಟಾರ್ ಸೈಕಲ್  ಓಡಿಸಿಕೊಂಡು ಬಂದಿದ್ದ ಆ ವ್ಯಕ್ತಿಯ ವಯಸ್ಸು 35ಗಿಂತ ಹೆಚ್ಚು ಇರಲ್ಲ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ.

ಗೌರಿಯವರ ಮನೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಂತೆ ಶಂಕಿತ ಆರೋಪಿ ರಸ್ತೆಯ ಬಲ ಬದಿಯಿಂದ ಬಂದು ಎಡಬದಿಯಲ್ಲಿರುವ ಗೌರಿಯವರ ಮನೆ ಮುಂದೆ ಬರುವುದಕ್ಕಾಗಿ 10 ಅಡಿ ದೂರದಿಂದಲೇ ಯೂ ಟರ್ನ್ ತೆಗೆದುಕೊಂಡಿದ್ದಾನೆ. ಆ ಹೊತ್ತಿಗೇ ಹಂತಕರು ಯಾವ ದಿಶೆಯಿಂದ ಗುಂಡು ಹಾರಿಸಬೇಕೆಂದು ಯೋಜನೆ ಮಾಡಿದ್ದಾರೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ ಈ ಮಾತನ್ನು ತನಿಖಾ ತಂಡದ ಅಧಿಕಾರಿಗಳು ತಳ್ಳಿಹಾಕಲೂ ಇಲ್ಲ ಒಪ್ಪಲೂ ಇಲ್ಲ.

ಅಪರಾಹ್ನ 3.27ಕ್ಕೆ ಮೊದಲ ಬಾರಿ ಬಂದ ಆ ಆರೋಪಿಗಳು ಆಮೇಲೆ ಸಂಜೆ 7.15ಕ್ಕೆ ಬಂದಿದ್ದಾರೆ. ಆ ವೇಳೆ ವೇಗವಾಗಿ ಗಾಡಿ ಚಲಾಯಿಸಿಕೊಂಡು ಬಂದ ಆರೋಪಿಗಳು ಸಿಸಿಟಿವಿ ಕಣ್ಗಾವಲಿನಿಂದ ದೂರಕ್ಕೆ ಹೋಗಿದ್ದಾರೆ. ಇದಾದನಂತರ 30 ನಿಮಿಷ ಕಳೆದು ಬಂದ ಆರೋಪಿಗಳು ಅಪರಾಧ ಕೃತ್ಯವೆಸಗಲು ಸೂಕ್ತ ಅವಕಾಶ ಎಂದರಿತು ನಿಧಾನವಾಗಿ ಗಾಡಿ ಓಡಿಸಿಕೊಂಡು ಬಂದು ಗುಂಡಿನ ದಾಳಿ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕಾ ಪ್ರತಿನಿಧಿಗಳು ಮಂಗಳವಾರ ಭೇಟಿ ನೀಡಿದ್ದಾರೆ. ಈ ವೇಳೆ ಗಮನಕ್ಕೆ ಬಂದ ವಿಷಯ ಏನೆಂದರೆ ಆರೋಪಿಗಳು ಬಂದಿರುವ ಬೈಕ್ ಕಾಣಿಸುವುದು ಗೌರಿಯವರ ನೆರೆಮನೆಯಲ್ಲಿದ್ದ ಸಿಸಿಟಿವಿಯಲ್ಲಿ ಮಾತ್ರ.


ಅಪರಾಧ ಕೃತ್ಯವೆಸಗಲು ಹೊಂಚು ಹಾಕಿದ ಆರೋಪಿ ಎರಡು ಬಾರಿ ಗೌರಿಯವರ ಮನೆ ಮುಂದೆ ಸುಳಿದಾಡಿದಾಗ ಆ ವ್ಯಕ್ತಿ ಕಪ್ಪು ಹೆಲ್ಮೆಟ್  ಧರಿಸಿದ್ದು, ಕೈಯಲ್ಲಿ ಏನೂ ಇರಲಿಲ್ಲ. ಆದರೆ ಮೂರನೇ ಬಾರಿ ಬಂದಾಗ ಆತನ ಬಳಿ ಸ್ಲಿಂಗ್ ಬ್ಯಾಗ್ ಇತ್ತು ಎಂದು ತನಿಖಾ ಅಧಿಕಾರಿಗಳು ಹೇಳಿದ್ದಾರೆ.


ತನಿಖಾಧಿಕಾರಿಗಳ ಪ್ರಕಾರ ಆರೋಪಿ ಸ್ಲಿಂಗ್ ಬ್ಯಾಗ್‍ನಲ್ಲಿ ಆಯುಧವಿರಿಸಿದ್ದನು. ಸಿಸಿಟಿವಿ ದೃಶ್ಯಾವಳಿಯನ್ನು ಗಮನಿಸಿದಾಗ ಸಂಜೆ 7.15ರ ನಂತರ ಗೌರಿಯವರ ಮನೆ ಮುಂದೆ ಇರುವ ಸ್ಟ್ರೀಟ್ ಲೈಟ್ ಕೂಡಾ ಕಾರ್ಯವೆಸಗುತ್ತಿಲ್ಲ ಎಂಬುದು ಪತ್ತೆಯಾಗಿದೆ. ಅಂದಹಾಗೆ ಇದಕ್ಕಿಂತ ಮುಂಚೆ ಸ್ಟ್ರೀಟ್ ಲೈಟ್ ಸಮಸ್ಯೆಯೇನೂ ಇರಲಿಲ್ಲ ಎಂದು ಶನಿವಾರ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ನೆರೆಮನೆಯವರೊಬ್ಬರು ಹೇಳಿದ್ದರು.
 

2ನೇ ಬುಲೆಟ್ ಮಿಸ್ ಆಯ್ತು?
ಬಲ್ಲಮೂಲಗಳ ಪ್ರಕಾರ ಗೌರಿಯವರು ಹಂತಕರಿಂದ ತಪ್ಪಿಸಿಕೊಳ್ಳಲು ಪುಟ್ಟ ಗೇಟ್ ತೆರೆದಾಗ ಮೊದಲನೇ ಗುಂಡು ಹಾರಿಸಲಾಗಿದೆ. ಮೊದಲನೇ ಗುಂಡು ಗೌರಿಯವರ ದೇಹದ ಹಿಂಭಾಗಕ್ಕೆ ತಾಗಿದೆ ಎಂದು ಶಂಕಿಸಲಾಗುತ್ತಿದೆ. ಎರಡನೇ ಗುಂಡು ಮಿಸ್ ಆಗಿ ಗೋಡೆಗೆ ತಾಗಿದೆ. ಈ ವೇಳೆ ಗೌರಿ ಹಿಂತಿರುಗಿ ನೋಡಿದಾಗ ಎರಡು ಬುಲೆಟ್‍ಗಳು ಅವರ ಹೃದಯಭಾಗಕ್ಕೆ ಹೊಕ್ಕಿವೆ. ಇದರಲ್ಲಿ ಒಂದು ಗುಂಡು ಹೃದಯಕ್ಕೆ ತಗುಲಿತ್ತು ಎನ್ನಲಾಗಿದೆ.
ಗೌರಿಯವರ ದೇಹಕ್ಕೆ ತಾಗಿದ ಮೂರು ಗುಂಡುಗಳನ್ನು ಅಪರಾಧ ಕೃತ್ಯ ನಡೆದ ಅದೇ ದಿನದಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ ನಾಲ್ಕನೇ ಗುಂಡುಪತ್ತೆಯಾಗಲೇ ಇಲ್ಲ. ಸೆಪ್ಟೆಂಬರ್ 6ರಂದು ಡಿಟೆಕ್ಟರ್ ಬಳಸಿ ಹುಡುಕಿದರೂ ಅದು ಪತ್ತೆಯಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.