ತಿರುಗಾಡುವ ಫ್ರಿಜ್‌; ಕೇಳಿಸಿಕೊಳ್ಳುವ ಸ್ಪೀಕರ್‌

14 Sep, 2017
ಹೇಮಂತ್‌ ಕುಮಾರ್‌ ಎಸ್‌

ನಮ್ಮಿಂದ ನಮ್ಮೊಂದಿಗೆ ಬೆಳೆದು, ನಮ್ಮ ಬೆಳವಣಿಗೆಯಲ್ಲಿಯೂ ತಂತ್ರಜ್ಞಾನ ಬೆಸೆದುಕೊಂಡಿದೆ. ಆಧುನಿಕ ಜಗತ್ತಿನ ಜತೆಯಲ್ಲಿ ಸಾಗಲು ಇದರ ಅವಲಂಬನೆ ಅತ್ಯಗತ್ಯವಾಗಿ ಹೋಗಿದೆ. ಮನೆ, ಕಚೇರಿಗಳಲ್ಲಿ ಮನುಷ್ಯರಿಗಿಂತಲೂ ಎಲೆಕ್ಟ್ರಾನಿಕ್ ಉಪಕರಣಗಳ ಸಂಖ್ಯೆಯೇ ಹೆಚ್ಚು.

ನಿತ್ಯವೂ ಅಪ್‌ಡೇಟ್ ಆಗುವ ಆ್ಯಪ್‌ಗಳು, ಇಂದು ಕೊಂಡ ಹೊಸ ಮೊಬೈಲ್ ಫೋನ್ ಮುಂದಿನ ವಾರಕ್ಕೆ ಅತಿ ಹಳತು. 2ಕೆ ಸ್ಕ್ರೀನ್ ಬೆಲೆಗೆ 4ಕೆ ಟಿ.ವಿಗಳು, ಲ್ಯಾಪ್‌ಟಾಪ್‌ಗಿಂತಲೂ ವೇಗವಾಗಿ ಕಾರ್ಯನಿರ್ವಹಿಸುವ ಟ್ಯಾಬ್, ಭಾವನೆಯನ್ನೂ ಅರ್ಥ ಮಾಡಿಕೊಳ್ಳುವ ರೋಬೊಗಳು... ಎಷ್ಟೆಲ್ಲ ಸಾಧನ–ಸಲಕರಣೆಗಳು.

ತಂತ್ರಜ್ಞಾನ ಎಂದರೆ ನಿತ್ಯ ಅಚ್ಚರಿ. ಅದು ಎಂದಿಗೂ ಮುಗಿಯದ ಅಥವಾ ನಿಲ್ಲದ ಹರಿವು. ಇಡೀ ವರ್ಷ ನಡೆಸಿದ ಸಂಶೋಧನೆ, ಅಭಿವೃದ್ಧಿಯಾದ ತಂತ್ರಜ್ಞಾನ, ಅದರಿಂದ ರೂಪುಗೊಂಡ ಅತ್ಯಾಧುನಿಕ ಸಾಧನಗಳನ್ನು ಪ್ರತಿ ವರ್ಷ ಬರ್ಲಿನ್‌ ‘ಐಎಫ್ಎ ಟೆಕ್ ಷೋ’ ಮೂಲಕ ಜಗತ್ತಿನ ಮುಂದಿಡಲಾಗುತ್ತದೆ.

ಈ ಬಾರಿಯ ತಂತ್ರಜ್ಞಾನ ಪ್ರದರ್ಶನದಲ್ಲಿ ಜಗತ್ತಿನ ಪ್ರತಿಷ್ಠಿತ ಸಂಸ್ಥೆಗಳು ಹತ್ತಾರು ವಿನೂತನ ಉತ್ಪನ್ನಗಳನ್ನು ಜನರ ಮುಂದಿಟ್ಟಿವೆ. ಅವುಗಳಲ್ಲಿ ಗಮನಸೆಳೆದ ಕೆಲವು ನಿಮ್ಮ ಮುಂದೆ...

*

ಸದಾ ನಿಮ್ಮ ಸೇವೆಗೆ
ಅಡುಗೆ ಮಾಡುವಾಗ, ಸುಸ್ತಾಗಿ ಬಂದು ಕುರ್ಚಿಗೆ ಒರಗಿದಾಗ, ಮನೆಯಲ್ಲಿ ಅತಿಥಿಗಳು ಸೇರಿರುವಾಗ ತಕ್ಷಣಕ್ಕೆ ಏನೋ ಬೇಕೆಂದಾಗಲೆಲ್ಲ ಓಡೋಡಿ ರೆಫ್ರಿಜರೇಟರ್ ಬಾಗಿಲು ತೆಗೆದು ಹುಡುಕುವ ಅವಶ್ಯಕತೆ ಮುಂದಿನ ದಿನಗಳಲ್ಲಿ ಇರುವುದಿಲ್ಲ. ಕರೆಯುವಲ್ಲಿಗೆ, ಇಲ್ಲವೇ ನೀವು ಇರುವಲ್ಲಿಗೆ ಸ್ವತಃ ರೆಫ್ರಿಜರೇಟರ್ ಬರುತ್ತದೆ!

ಪ್ಯಾನಸೋನಿಕ್ ಸಂಸ್ಥೆ ಸಿದ್ಧಪಡಿಸಿರುವ ಈ ಬುದ್ಧಿವಂತ ಯಂತ್ರ, ಒಳಗಿನ ವಸ್ತುಗಳನ್ನು ತಣ್ಣಗಿರಿಸಿರುವ ಜತೆಗೆ ಸೂಚಿಸಿದಲ್ಲಿಗೆ ಬರುತ್ತದೆ. ಗಾಲಿಗಳ ಸಹಾಯದಿಂದ ಸಂಚರಿಸುವ ಯಂತ್ರವು ‘ಅಡುಗೆ ಮನೆಗೆ ಬಾ, ಲಿವಿಂಗ್ ರೂಂ ಕಡೆಗೆ ಬಾ...’ ಎಂದೆಲ್ಲ ನೀಡುವ ಮಾತಿನ ಸೂಚನೆಯನ್ನೂ ಗ್ರಹಿಸಬಲ್ಲದು.

ತನ್ನಿಂದ ಮುಂದಿನ 15 ಸೆಂ.ಮೀ. ಅಂತರದ ವಸ್ತುಗಳನ್ನು ಗುರುತಿಸಿ, ಅಗತ್ಯವಿದ್ದರೆ ಪಥ ಬದಲಿಸಿ ಇಲ್ಲವೇ ನಿಂತು ಸಾಗುವ ವ್ಯವಸ್ಥೆಯನ್ನೂ ಹೊಂದಿದೆ. ಹಾಗಾಗಿ ಮಕ್ಕಳಿಗೆ ಮತ್ತು ನೆಚ್ಚಿನ ಸಾಕು ಪ್ರಾಣಿಗಳಿಗೆ ಡಿಕ್ಕಿ ಹೊಡೆಯುವ ಸಂಭವ ಇಲ್ಲ. ನಾವು ತಿಂಡಿ ತಿನ್ನಲು ಬಳಸಿದ ಪಾತ್ರೆಗಳನ್ನು ಇದರೊಳಗೆ ಇಟ್ಟರೆ ಪಾತ್ರೆ ತೊಳೆಯುವ ಜಾಗಕ್ಕೆ ಸಾಗಿಸುತ್ತದೆ. ಪ್ರದರ್ಶಿಸಲಾಗಿರುವ ಈ ಯಂತ್ರ ಭವಿಷ್ಯದ ರೆಫ್ರಿಜರೇಟರ್ ಆಗಿದ್ದು, ಮುಂದಿನ ಐದಾರು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

*

ಪುಟ್ಟ ಕಾರ್ಡ್‌ನಲ್ಲಿ 400 ಜಿ.ಬಿ. ನೆನಪು!
ಫೋಟೊ ಮತ್ತು ವಿಡಿಯೊ ಚಿತ್ರಿಸಿ ಸಂಗ್ರಹಿಸಿಕೊಳ್ಳಲು ಮೊಬೈಲ್ ಬಳಕೆ ಹೆಚ್ಚುತ್ತಿದ್ದಂತೆ ಮೆಮೊರಿ ಕಾರ್ಡ್‌ ಬೇಡಿಕೆಯೂ ಹೆಚ್ಚಿದೆ. ಸದಾ ‘ಅಯ್ಯೋ, ಮೆಮೊರಿ ಫುಲ್...’ ಎಂದು ಗೊಣಗುವವರು ಈ ಪುಟ್ಟ ಕಾರ್ಡ್‌ ಕೊಳ್ಳಬಹುದು.

ಯಾವುದೇ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹೊಂದಿರುವಷ್ಟು ಮಾಹಿತಿ ಸಂಗ್ರಹದ ಅವಕಾಶವನ್ನು ಸ್ಯಾನ್‌ಡಿಸ್ಕ್ ಸಂಸ್ಥೆಯ ಈ ಮೈಕ್ರೋ ಎಸ್ಎಕ್ಸ್‌ ಡಿಸಿ ಕಾರ್ಡ್‌ ನೀಡುತ್ತದೆ. ಒಂದು ಇಂಚಿಗಿಂತಲೂ ಕಡಿಮೆ ಗಾತ್ರದ ಕಾರ್ಡ್‌ 400 ಜಿ.ಬಿ. ಸಂಗ್ರಹಣ ಸಾಮರ್ಥ್ಯ ಹೊಂದಿದೆ. ದೊಡ್ಡ ಹಾರ್ಡ್‌ ಡಿಸ್ಕ್‌ನ ಜಾಗವನ್ನು ಮುಂದಿನ ದಿನಗಳಲ್ಲಿ ಈ ಪುಟ್ಟ ಕಾರ್ಡ್‌ ಆಕ್ರಮಿಸಿಕೊಳ್ಳಬಹುದು.

ಅತಿ ಹೆಚ್ಚು ಸಂಗ್ರಹ ಹಾಗೂ ಪ್ರತಿ ಸೆಕೆಂಡ್‌ಗೆ 100 ಎಂ.ಬಿ. ಮಾಹಿತಿ ಅಥವಾ 1200 ಫೋಟೊಗಳನ್ನು ವರ್ಗಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಫೋಟೋಗ್ರಫಿ ಹಾಗೂ ವಿಡಿಯೊಗ್ರಫಿ ಕ್ಯಾಮೆರಾ, ಮೊಬೈಲ್, ಲ್ಯಾಪ್‌ಟಾಪ್‌ಗಳಿಗೆ ಹೆಚ್ಚು ಉಪಯುಕ್ತವೆನಿಸಿದೆ. ಅಂದಾಜು ಬೆಲೆ: 250 ಡಾಲರ್(₹ 15 ಸಾವಿರ)

*

ಎಲ್‌ಜಿ ಹೊಸಸ್ಮಾರ್ಟ್‌ ಫೋನ್‌
ಈ ಬಾರಿ ಪ್ರದರ್ಶನಗೊಂಡ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚು ಗಮನ ಸೆಳೆದ ಮೊಬೈಲ್ ಎಲ್‌ಜಿ ವಿ30. ಪ್ರೊಫೆಷನಲ್‌ ಕ್ಯಾಮೆರಾದಂತೆ ಹಲವು ಫೀಚರ್‌ಗಳು ಹಾಗೂ 16 ಮೆಗಾಪಿಕ್ಸೆಲ್‌ನ ಹಿಂದಿನ ಎರಡು ಕ್ಯಾಮೆರಾಗಳಿಂದಾಗಿ ಅತ್ಯುತ್ತಮ ಫೋಟೊಗಳನ್ನು ಪಡೆಯಬಹುದಾಗಿದೆ. ಮುಂದೆ ವೈಡ್ ಆ್ಯಂಗಲ್ ಲೆನ್ಸ್ ಹೊಂದಿರುವ 12 ಎಂಪಿ ಕ್ಯಾಮೆರಾ ಇದೆ.

ಮೆಟಾಲಿಕ್ ಹೊರಭಾಗ ಮತ್ತು 6 ಇಂಚು ಒಎಲ್ಇಡಿ ಪರದೆ, ಗುಣಮಟ್ಟದ ಆಡಿಯೊಗಾಗಿ ಕ್ವಾಡ್ ಡಿಎಸಿ, ಕ್ವಾಲ್ಕಂ ಸ್ನ್ಯಾಪ್‌ ಡ್ರ್ಯಾಗನ್ 835 ಚಿಪ್‌ಸೆಟ್, 4 ಜಿ.ಬಿ. ರ್‍ಯಾಮ್, 3300 ಎಂಎಎಚ್ ಬ್ಯಾಟರಿ ಹಾಗೂ 64 ಜಿ.ಬಿ ಮೊಬೈಲ್ ಮೆಮೊರಿ ಹೊಂದಿದೆ. ಬೆಲೆ ಅಂದಾಜು: ₹ 45-55 ಸಾವಿರ.

*

ಬಯಸಿದ ಹಾಡು ಹೇಳುವೆ
ನಮ್ಮ ನೆಚ್ಚಿನ ಹಾಡುಗಳನ್ನು ಒಳಗೊಂಡ ಮೊಬೈಲ್ ಸೇರಿದಂತೆ ಇನ್ನಾವುದೇ ಸಾಧನವನ್ನು ಬ್ಲೂಟೂತ್ ಅಥವಾ ವೈಫೈ ಮೂಲಕ ಸಂಪರ್ಕಿಸಿದರೆ ಸಾಕು. ನೀವು ಹೇಳಿದಂತೆ ಹಾಡನ್ನು ಪ್ರಾರಂಭಿಸುತ್ತದೆ, ನಿಲ್ಲಿಸುತ್ತದೆ, ಬೇರೊಂದು ಹಾಡಿನ ಆಯ್ಕೆ ಮಾಡುತ್ತದೆ.

ಕೊಳವೆ ಆಕಾರದಲ್ಲಿ ತಂಪು ಪಾನೀಯದ ಚಿಕ್ಕ ಟಿನ್ ರೀತಿ ಕಾಣುವ ಸೋನಿ ಎಲ್ಎಫ್-ಎಸ್50ಜಿ ಸ್ಮಾರ್ಟ್‌ ಸ್ಪೀಕರ್, ಎಲ್ಲ ದಿಕ್ಕಿನಲ್ಲಿ ಕೇಳಿಸುತ್ತದೆ. ಗೂಗಲ್ ಅಸಿಸ್ಟೆಂಟ್ ವ್ಯವಸ್ಥೆ ಇರುವುದರಿಂದ ಹೇಳುವುದನ್ನು ಕೇಳಿಸಿಕೊಂಡು ಹಾಡನ್ನು ಪ್ಲೇ ಮಾಡುತ್ತದೆ. ಸಮಯವನ್ನೂ ತೋರಿಸುವ ಸ್ಪೀಕರ್ ಕೈ ಆಡಿಸಿ ನೀಡುವ ಸಂದೇಶವನ್ನೂ ಸೆನ್ಸರ್‌ನಿಂದ ಗುರುತಿಸುತ್ತದೆ.

ಮಾತು ಮತ್ತು ಸಂಜ್ಞೆ ಎರಡನ್ನೂ ಅರ್ಥೈಸಿಕೊಳ್ಳುವ ಸ್ಪೀಕರ್ ಈಗಾಗಲೇ ಮಾರುಕಟ್ಟೆಯಲ್ಲಿರುವ ಹೋಮ್, ಇಕೋ ಹಾಗೂ ಹೋಮ್‌ ಪಾಡ್‌ಗಿಂತಲೂ ಹೆಚ್ಚು ವಿಶೇಷತೆಗಳನ್ನು ಒಳಗೊಂಡಿದೆ. ಇಡೀ ಮನೆಗೆ ಕೇಳಿಸುವಷ್ಟು ಸಮರ್ಥವಾಗಿರುವ ಈ ಸ್ಪೀಕರ್ ಬೆಲೆ, ಅಂದಾಜು: 199 ಡಾಲರ್(₹11,900)

*

ಈಜುವಾಗಲೂ ಇರಲಿ ಸ್ಮಾರ್ಟ್‌ ವಾಚ್
ಹಿಂದಿನಿಂದಲೂ ಸ್ಮಾರ್ಟ್‌ ವಾಚ್ ತಯಾರಿಸುತ್ತಿರುವ ಕಂಪೆನಿಗಳು ವಾಚ್‌ಗಳ ಮುಂದೆ ಗಮನ ಸೆಳೆಯಲಿಲ್ಲ. ಇನ್ನು ಫಿಟ್ನೆಸ್ ವಾಚ್‌ಗಳೂಫಿಟ್‌ಬಿಟ್‌ನಷ್ಟು ಹೆಸರು ಗಳಿಸಲಿಲ್ಲ. ನೀರಿನೊಳಗೂ ಕಾರ್ಯ ನಿರ್ವಹಿಸಬಲ್ಲ ಸ್ಯಾಮ್ಸಂಗ್ ‘ಗೇರ್ ಸ್ಫೋಟರ್’ ಇದೀಗ ಬಹುಚರ್ಚಿತ ವಾಚ್.

ಓಡಾಟ, ಹೃದಯದ ಬಡಿತ, ಈಜುವಾಗ ಆದ ಬದಲಾವಣೆ ಹೀಗೆ ದೇಹಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಿ ತೋರಿಸುತ್ತದೆ. ವೃತ್ತಾಕಾರದ 1.2 ಇಂಚು ಪರದೆ ಇದೆ. ಇತರೆ ಫಿಟ್ನೆಸ್ ವಾಚ್‌ಗಳಿಗಿಂತ ಭಿನ್ನ. 4 ಜಿ.ಬಿ. ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಬೇಕಾದ ಮಾಹಿತಿ, ಹಾಡು, ವಿಡಿಯೊ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ.

ಸ್ಯಾಮ್ಸಂಗ್‌ನ ಸ್ಮಾರ್ಟ್‌ಹೋಮ್‌ ಸೇರಿದಂತೆ ಇತರೆ ಉಪಕರಣಗಳ ನಿಯಂತ್ರಣವೂ ವಾಚ್ ಮೂಲಕ ಸಾಧ್ಯ. 300 ಎಂಎಎಚ್ ಬ್ಯಾಟರಿ ನಾಲ್ಕು ದಿನಗಳವರೆಗೂ ಚಾರ್ಜ್‌ ಉಳಿಸಿಕೊಳ್ಳಬಹುದು ಹಾಗೂ ವೈರ್‌ಲೆಸ್‌ ಚಾರ್ಜಿಂಗ್ ವ್ಯವಸ್ಥೆಯೂ ಇದೆ.
ಅಂದಾಜು ಬೆಲೆ: 300 ಡಾಲರ್ (₹18 ಸಾವಿರ)

*
ಬೃಹತ್ ಗೇಮಿಂಗ್ ಪರದೆ
: ಕಂಪ್ಯೂಟರ್ ಗೇಮ್‌ಗಳಲ್ಲಿ ಅತಿ ಹೆಚ್ಚು ಗ್ರಾಫಿಕ್ ಬಳಕೆ ಆಗುವುದರಿಂದ ಪರದೆಯಲ್ಲಿ ಗುಣಮಟ್ಟ ದೃಶ್ಯ ಕಾಣಲು ಅಂಥದ್ದೇ ಮಾನಿಟರ್ ಅವಶ್ಯಕ. 49 ಇಂಚು ದೊಡ್ಡದಾದ ಪರದೆ 3ಡಿ ಸೇರಿದಂತೆ ಎಲ್ಲ ರೀತಿಯ ಗೇಮಿಂಗ್ ಬಳಕೆಗೆ ಉಪಯುಕ್ತವೆನಿಸಿದೆ. ಸ್ಯಾಮ್ಸಂಗ್ ಬಿಡುಗಡೆ ಮಾಡಿರುವ ಬಾಗಿರುವ ಬೃಹತ್ ಪರದೆ ಕ್ವಾಂಟಮ್ ಡಾಟ್ ಎಲ್ಇಡಿ ತಂತ್ರಜ್ಞಾನವನ್ನು ಒಳಗೊಂಡಿದ್ದು, 3840*1080 ರೆಸಲ್ಯೂಷನ್ ಸ್ಪಷ್ಟತೆ ಕಾಣಬಹುದಾಗಿದೆ.

144 ಹಡ್ಸರ್ ರಿಫ್ರೆಷ್ ರೇಟ್, 1 ಮಿಲಿ ಸೆಕೆಂಡ್ ಪ್ರಕ್ರಿಯೆಯ ಪರದೆಯು ಬಹುಪಯೋಗಿ. ಹತ್ತಾರು ಆ್ಯಪ್‌ಗಳನ್ನು ಒಮ್ಮೆಲೆ ತೆರೆದು ಕಾಣಬಹುದು, ಒಂದುಕಡೆ ವಿಡಿಯೊ ಮತ್ತೊಂದು ಕಡೆ ಬೇರೆ ಹುಡುಕಾಟದ ಕಾರ್ಯವನ್ನೂ ನಡೆಸಬಹುದು.

*
ಏಸರ್‌ನಿಂದ ಗೇಮಿಂಗ್ ಡೆಸ್ಕ್‌ಟಾಪ್
ಗೇಮಿಂಗ್‌ನ ಅತ್ಯಂತ ಶಕ್ತಿಯುತವಾದ ಡೆಸ್ಕ್‌ಟಾಪ್‌ ಪ್ರದರ್ಶನಗೊಂಡಿದೆ. ಏಸರ್ ‘ಪ್ರಿಡೇಟರ್ ಒರಿಯನ್ 9000’ ಆಲ್-ಇನ್-ಒನ್ ಲಿಕ್ವಿಡ್ ಕೂಲಿಂಗ್ ತಂತ್ರಜ್ಞಾನ ಹೊಂದಿದೆ. ಗೇಮ್ ಆಡುವ ಪ್ರೊಸೆಸರ್ ಹೆಚ್ಚು ಬಳಕೆಯಾಗುವುದರಿಂದ ಶಾಖ ಉತ್ಪತ್ತಿಯಾಗುತ್ತದೆ. ಅದನ್ನು ತಣ್ಣಗಾಗಿಸಿ ಸಮರ್ಥವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಲಾಗಿದೆ.

ಇಂಟೆಲ್ ಐ9 ಎಕ್ಸ್ಟ್ರೀಮ್ ಪ್ರೊಸೆಸರ್ ಇರುವುದರಿಂದ 18 ಕೋರ್ ಸಾಧನವಾಗಿ ಹೊರಹೊಮ್ಮಿದೆ. 

ಅಂದಾಜು ಬೆಲೆ: 1999 ಡಾಲರ್ (₹1.19 ಲಕ್ಷ)

*

ಸ್ಟಾರ್ ವಾರ್‌ಗಳ ಲೋಕದಲ್ಲಿ...
ಈ ಹೆಡ್‌ಸೆಟ್ ಅನ್ನು ಕನ್ನಡಕದಂತೆ ಧರಿಸಿ, ಬೆಳಕಿನ ವಿಶೇಷ ಅಸ್ತ್ರವನ್ನು ಕೈಯಲ್ಲಿ ಹಿಡಿದು ನಿಂತರೆ, ನಿಮ್ಮ ಮುಂದೆ ಹೊಸದೊಂದು ಜಗತ್ತೇ ಸೃಷ್ಟಿಯಾಗುತ್ತದೆ. ಹೋರಾಡಲು ಸಿದ್ಧನಾಗಿ ನಿಂತ ಶಸ್ತ್ರಧಾರಿ ಕಾಣುತ್ತಾನೆ. ನಡೆಯುತ್ತಿರುವ ಯುದ್ಧದ ಮೈದಾನ ಗೋಚರಿಸುತ್ತದೆ, ನೀವೂ ಯುದ್ಧ ಮಾಡಬೇಕಾಗುತ್ತದೆ!

ಅಗ್ಮೆಂಟೆಡ್ ರಿಯಾಲಿಟಿ(ಎಆರ್) ಗೇಮ್ ವಾಸ್ತವದಲ್ಲಿ ಪಾತ್ರಗಳು ಇರುವಂತೆ ಕಂಡು ಆಡುವ ತಂತ್ರಜ್ಞಾನವಾಗಿದೆ. ಲಿನೋವಾ ಬಿಡುಗಡೆ ಮಾಡಿರುವ ಸ್ಟಾರ್ ವಾರ್‍ಸ್ ಜೇಡಿ ಚಾಲೆಂಜರ್ಸ್‌ ಕುತೂಹಲ ಹೆಚ್ಚಿಸಿದೆ.

ಇದು ಎಆರ್ ಹೆಡ್‌ಸೆಟ್, ಬೆಳಕು ನಿಯಂತ್ರಣ ಸಾಧನವನ್ನು ಹೊಂದಿದೆ. ಸ್ಪೋರ್ಟ್ಸ್‌ ಫಿಷ್ಐ ಸೆನ್ಸರ್‌ಗಳು, 2200 ಎಂಎಎಚ್ ಬ್ಯಾಟರಿ, ಪಥ ಗುರುತಿಸಲು ಬಟನ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ ಇವೆ. ಅಂದಾಜು ಬೆಲೆ: 200 ಡಾಲರ್ (₹ 12 ಸಾವಿರ)

*

ಬಿಯೋಪ್ಲೇ ಮತ್ತು ಚಿಪ್‌ಸೆಟ್ 
* ಕಿವಿಯ ತೂತಿನಷ್ಟೇ ಗಾತ್ರದ ವೈರ್‌ಲೆಸ್ ಇಯರ್‌ಫೋನ್. ಅಲ್ಲಿ ಇಲ್ಲಿ ಸಿಲುಕುವ ವೈರ್ ಇಲ್ಲದ ಬ್ಲೂಟೂತ್ ಮೂಲಕ ಮೊಬೈಲ್‌ನೊಂದಿಗೆ ಸಂಪರ್ಕಿಸಿಕೊಳ್ಳುವ ‘ಬಿಯೋಪ್ಲೇ ಇ8’ ವೈರ್‌ಲೆಸ್ ಇಯರ್‌ಫೋನ್ ಗುಣಮಟ್ಟದ ಆಡಿಯೊ ನೀಡುತ್ತದೆ. ಒಮ್ಮೆ ಚಾರ್ಜ್‌ ಮಾಡಿದರೆ 5 ಗಂಟೆ ಬಳಕೆ ಮಾಡಬಹುದು. ಅಂದಾಜು ಬೆಲೆ: 300 ಡಾಲರ್(₹18 ಸಾವಿರ).

* ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಸಹಕಾರಿಯಾಗುವ ಹುವೈನ ‘ಕಿರಿನ್ 970’ ಚಿಪ್‌ಸೆಟ್, ಶಾಪರ್ ಸಂಸ್ಥೆಯ 8ಕೆ ರೆಸೊಲ್ಯೂಶನ್ ಟಿ.ವಿ., ಲಿನೋವಾ ಯೋಗಾ 920 ಲ್ಯಾಪ್‌ಟಾಪ್, ಏಸರ್ 360 ಡಿಗ್ರಿ ಕ್ಯಾಮೆರಾ, ನಾಲ್ಕು ಆಡಿಯೊ ಸಾಧನಗಳಿಗೆ ಒಮ್ಮೆಲೆ ಸಂಪರ್ಕಿಸುವ ವ್ಯವಸ್ಥೆ ಹೊಂದಿರುವ ‘ಮೋಟೋ ಎಕ್ಸ್4’ ಮೊಬೈಲ್, 3ಡಿ ವಿಡಿಯೊ ಮಾಡಬಹುದಾದ ಸೋನಿ ಎಕ್ಸ್ಪೀರಿಯಾ ಎಕ್ಸ್‌ಜೆಡ್ ಹಾಗೂ ಸ್ಮಾರ್ಟ್‌ ಪರದೆಯನ್ನು ಒಳಗೊಂಡ ದೊಡ್ಡ ರೆಫ್ರಿಜರೇಟರ್ ಸೇರಿದಂತೆ ವಿನೂತನ ತಂತ್ರಜ್ಞಾನದ ಲೋಕವೇ ಬರ್ಲಿನ್‌ನಲ್ಲಿ ಸೃಷ್ಟಿಯಾಗಿತ್ತು.
 

Read More

Comments
ಮುಖಪುಟ

ಉಕ್ರೇನ್ ರಾಯಭಾರಿ ಕೆಂಪುಕೋಟೆ ಬಳಿ ಫೋಟೊ ಕ್ಲಿಕ್ಕಿಸುತ್ತಿದ್ದಾಗ ಫೋನ್ ಕಿತ್ತು ಪರಾರಿ

ಪೊಲೀಖಾ ಅವರು ಬೆಳಗ್ಗೆ 9.15ರ ಹೊತ್ತಿಗೆ ದೆಹಲಿಯ ಕೆಂಪುಕೋಟೆ ಬಳಿ ಫೋಟೊ ತೆಗೆದುಕೊಳ್ಳುತ್ತಿದ್ದ ವೇಳೆ ಆಗಂತುಕನೊಬ್ಬ ಫೋನ್ ಕಿತ್ತು ಪರಾರಿಯಾಗಿದ್ದಾನೆ.

ಪ್ರಾಚೀನ ಭಾರತದಲ್ಲಿ ದುರ್ಗೆ ರಕ್ಷಣಾ ಸಚಿವೆ, ಲಕ್ಷ್ಮಿ ಹಣಕಾಸು ಮಂತ್ರಿ: ವೆಂಕಯ್ಯನಾಯ್ಡು

ವಿದ್ಯಾರ್ಥಿಗಳು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡಬೇಕು. ರಾಮರಾಜ್ಯ ಎನ್ನುವುದು ಇಂದಿಗೂ ನಮ್ಮ ಇತಿಹಾಸದ ಶ್ರೇಷ್ಠ ಕಾಲಘಟ್ಟವಾಗಿದೆ. ಅದಕ್ಕೆ ಕಾರಣ ಆ ಆಡಳಿತ ವ್ಯವಸ್ಥೆಯಲ್ಲಿದ್ದ ಆದರ್ಶಗಳು. ಆದರೆ ಇತ್ತೀಚಿನ ದಿನಗಳು ಅದನ್ನು ಕೋಮು ಭಾವ ದೃಷ್ಟಿಯಲ್ಲಿ ನೋಡಲಾಗುತ್ತಿದೆ.

ಆರ್‍ಎಸ್ಎಸ್ ಭಾರತವನ್ನು ಹಿಂದೂ, ಹಿಂದಿ, ಹಿಂದೂಸ್ತಾನವನ್ನಾಗಿಸಲು ಯತ್ನಿಸುತ್ತಿದೆ

ಆರ್‍ಎಸ್ಎಸ್ ರಾಜ್ಯ ಸರ್ಕಾರಗಳನ್ನು ದುರ್ಬಲವಾಗಿಸಲು ಯತ್ನಿಸುತ್ತಿವೆ. ಇದಕ್ಕಾಗಿ ಅವರು ಒಕ್ಕೂಟವಾದವನ್ನು ಒಡೆದು ಹಿಂದಿ, ಹಿಂದೂ, ಹಿಂದೂಸ್ತಾನವನ್ನಾಗಿಸುವ ಉದ್ದೇಶವನ್ನು ಹೇರುತ್ತಿದ್ದಾರೆ. ಬಿಜೆಪಿಯೂ ಇದೇ ರೀತಿ ಮಾಡುತ್ತಿದ್ದು ಅವರ ಈ ಯತ್ನವನ್ನು ವಿಫಲಗೊಳಿಸಬೇಕಿದೆ

‘ಗುಮ್ನಾಮಿ ಬಾಬಾ ಅವರೇ ನೇತಾಜಿ ಎಂದು ಹೆಚ್ಚು ಜನ ನಂಬಿದ್ದರು’

‘ಆಯೋಗದ ಮುಂದೆ ಖುದ್ದಾಗಿ ಇಲ್ಲವೇ ಪತ್ರ ಮುಖೇನ ಮಾಹಿತಿ ನೀಡಿರುವ ಬಹುತೇಕರು ಗುಮ್ನಾಮಿ ಬಾಬಾ ಅವರೇ ನೇತಾಜಿ ಆಗಿದ್ದರು ಎಂದು ಹೇಳಿದ್ದಾರೆ...

ಸಂಗತ

ಆರೋಗ್ಯ ಬೇಕೇ? ಸ್ವಚ್ಛತೆ ಕಾಪಾಡಿ

ಮನುಷ್ಯ ಹಣ ಗಳಿಕೆಗಾಗಿ ಗುಣ ಹಾಗೂ ಆರೋಗ್ಯ ಎರಡನ್ನೂ ಪಣಕ್ಕಿಟ್ಟು ದುಡಿಯುತ್ತಿದ್ದಾನೆ. ಹಾಗೇ ಇವೆರಡನ್ನೂ ಕಳೆದುಕೊಳ್ಳುತ್ತಿದ್ದಾನೆ.

ವಸ್ತುನಿಷ್ಠತೆ ಮೆರೆಯೋಣ

ವ್ಯಕ್ತಿ ನಿಂದೆ ಮಾಡದೆಯೂ ಗಾಂಧಿ ಚಿಂತನೆಗಳ ಪುನರ್ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲವೇ? ನಕಾರಾತ್ಮಕ ದೃಷ್ಟಿಯ ಬರವಣಿಗೆಯಿಂದ ಯುವಕರನ್ನು ಹಾದಿ ತಪ್ಪಿಸಿದಂತಾಗುತ್ತದೆ.

ಕರ್ಮಸಿದ್ಧಾಂತ, ಕಾಯಕಸಿದ್ಧಾಂತ ಪೂರ್ಣ ಬೇರೆ

ವೇದವನೋದಿದ ವಿಪ್ರರು ಹೊನಲಲ್ಲಿ ಹೋದ ಕೇಡ ನೋಡಿರೇ!

ಭರ್ಗೋ ದೇವಸ್ಯ ಧೀಮಹಿ ಎಂಬರು

ಒಬ್ಬರಿಗಾಗಿ ವಿಚಾರವಿಲ್ಲ ನೋಡಿರೇ

ಕೂಡಲಸಂಗಮದೇವಾ.

ಇಳೆಯ ನರಳಿಕೆಗೆ ಚಿಕಿತ್ಸೆ

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ

ಚಂದನವನ

ಹಬ್ಬುವ ಹೆಬ್ಬಯಕೆಯ ಚಿಗುರು ಲತೆ

ಉತ್ತರ ಕನ್ನಡದ ಶಿರಸಿಯಲ್ಲಿ ಹುಟ್ಟಿ ನ್ಯೂಜಿಲೆಂಡ್‌ನಲ್ಲಿ ಬೆಳೆದು ಮತ್ತೀಗ ಚಿತ್ರರಂಗದ ಮೂಲಕ ತವರಿನಲ್ಲಿಯೇ ಬೇರೂರಿ ಬೆಳೆಯುವ ಹಂಬಲದಲ್ಲಿರುವ ಸುಂದರಿ ಲತಾ ಹೆಗಡೆ. ಮಹೇಶ್‌ ಬಾಬು ನಿರ್ದೇಶನದ ‘ಅತಿರಥ’ ಸಿನಿಮಾದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿರುವ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕರೆ ಇಲ್ಲಿಯೇ ನೆಲೆಯೂರುವ ಬಯಕೆ ಇದೆ.

‘ಹೀರೊಯಿನ್‌’ ಹಾಡು ಪಾಡು

ಹಾಸ್ಯದ ರೂಪದಲ್ಲಿ ಒಂದು ಸಂದೇಶವನ್ನೂ ನೀಡಿದ್ದೇವೆ. ಬದುಕಿನಲ್ಲಿ ಬರುವ ಕಷ್ಟಗಳನ್ನು ಕಾಮಿಡಿಯ ದೃಷ್ಟಿಕೋನದಿಂದಲೇ ನೋಡುವ ಪ್ರಯತ್ನ ಇದು’ ಎಂದು ಬಾಹುಬಲಿ ವಿವರಿಸಿದರು.

ಪೊಲೀಸ್ ದಿರಿಸಿನಲ್ಲಿ ಹುಚ್ಚ ವೆಂಕಟ್

ಈ ಸಿನಿಮಾದಲ್ಲಿ ವೆಂಕಟ್ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪೊಲೀಸರಿಗೆ ಜನ ಬೆಲೆ ಕೊಡುವುದು ಅವರ ಖಾಕಿ ಬಟ್ಟೆ ನೋಡಿ ಅಲ್ಲ. ಬೆಲೆ ಕೊಡುವುದು ಅವರ ಧರಿಸುವ ಪೊಲೀಸ್ ಕ್ಯಾಪ್ ನೋಡಿ’ ಎನ್ನುತ್ತ ಮಾತಿಗೆ ಇಳಿದರು ವೆಂಕಟ್.

ಮತ್ತೆ ಬರುತ್ತಿದ್ದಾನೆ ‘ಕೌರವ’

ಮುಂದಿನ ತಿಂಗಳ 13ರಂದು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಇದೆ. ನಾನು ಹಣ ಮಾಡುವ ಉದ್ದೇಶದಿಂದ ಈ ರಂಗಕ್ಕೆ ಬಂದವನಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ’ ಎಂದು ನರೇಶ್ ಹೇಳಿಕೊಂಡರು.