₹31,000 ಕೋಟಿ ಹೂಡಿಕೆ ಗುರಿ

14 Sep, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಬಳಕೆ ಹಾಗೂ ತಯಾರಿಕಾ ಘಟಕ ಸ್ಥಾಪನೆಗೆ ಉತ್ತೇಜನ ನೀಡುವ ಹೊಸ ನೀತಿಗೆ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

‘ಕರ್ನಾಟಕ ದೇಶದ ವಿದ್ಯುತ್‌ ಚಾಲಿತ ವಾಹನಗಳ ರಾಜಧಾನಿಯಾಗಲು ಈ ನೀತಿ ಸಹಕಾರಿಯಾಗಲಿದೆ’ ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ಈ ಕ್ಷೇತ್ರದಲ್ಲಿ ₹31,000 ಕೋಟಿ ಬಂಡವಾಳ ಹೂಡಿ 55,000 ಜನರಿಗೆ ಉದ್ಯೋಗ ಸೃಷ್ಟಿಸುವ ಗುರಿಯೊಂದಿಗೆ ನೀತಿ ರೂಪಿಸಲಾಗಿದೆ. ವಿದ್ಯುತ್‌ ಚಾಲಿತ ವಾಹನಗಳ ತಯಾರಿಕೆ, ಸಂಶೋಧನೆ ಮತ್ತು ಪೂರಕ ನವೋದ್ಯಮಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಈ ನೀತಿ ಒಳಗೊಂಡಿದೆ ಎಂದರು.

ಜೆಎಸ್‌ಡಬ್ಲ್ಯೂಗೆ 77 ಎಕರೆ ಭೂಮಿ: ತೋರಣಗಲ್ಲಿನಲ್ಲಿರುವ ಜೆಎಸ್‌ ಡಬ್ಲ್ಯೂ ಸ್ಟೀಲ್ಸ್‌ಗೆ ಹೊಸಪೇಟೆ ತಾಲ್ಲೂಕು ಗೋನಾಳು ಗ್ರಾಮದಲ್ಲಿನ 77 ಎಕರೆ ಸರ್ಕಾರಿ ಭೂಮಿಯನ್ನು ಮಂಜೂರು ಮಾಡಲು ಸಭೆ ನಿರ್ಧರಿಸಿದೆ.

ಈ ಭೂಮಿಗೆ ಎಕರೆಗೆ ₹6ಲಕ್ಷ ಮೌಲ್ಯ ನಿಗದಿಪಡಿಸಿ ಮಂಜೂರು ಮಾಡಲು ನಿರ್ಧರಿಸಲಾಗಿದೆ ಎಂದು ಸಂಪುಟ ಸಭೆ ಬಳಿಕ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರು ತಿಳಿಸಿದರು.

Read More

Comments
ಮುಖಪುಟ

ಮೋದಿ ವಿರುದ್ಧ ಕೈ ಎತ್ತಿದರೆ ಆ ಕೈ ಕತ್ತರಿಸಿ ಹಾಕುತ್ತೇವೆ: ಬಿಹಾರದ ಬಿಜೆಪಿ ಮುಖಂಡ

ಹಲವಾರು ಸಂಕಷ್ಟಗಳನ್ನು ಮೀರಿ ನಿಂತು ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸುತ್ತಿದ್ದಾರೆ. ಯಾರಾದರೂ ಅವರತ್ತ ಬೆರಳು ತೋರಿಸಿದರೆ ಅಥವಾ ಕೈ ಎತ್ತಿದರೆ ಆ ಕೈಯನ್ನು ತುಂಡರಿಸುತ್ತೇವೆ ಎಂದು ಬಿಹಾರದ ಬಿಜೆಪಿ ರಾಜ್ಯಾಧ್ಯಕ್ಷ ನಿತ್ಯಾನಂದ ರೈ ಹೇಳಿದ್ದಾರೆ.

ಐಸಿಜೆ ನ್ಯಾಯಮೂರ್ತಿಯಾಗಿ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆ

ಹೇಗ್‍ನಲ್ಲಿರುವ ಅಂತರ ರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ನ್ಯಾಯಾಧೀಶರಾಗಿ ಭಾರತದ ದಲ್ವೀರ್ ಭಂಡಾರಿ ಪುನರಾಯ್ಕೆಯಾಗಿದ್ದಾರೆ. ನ್ಯಾಯಾಧೀಶರಾಗಿ ದಲ್ವೀರ್ ಭಂಡಾರಿ ಆಯ್ಕೆಯಾಗಿರುವ ಸಂಗತಿಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

ಪರಿಭಾವಿತ ಅರಣ್ಯದಲ್ಲಿನ 10 ಸಾವಿರ ಮರ ನಾಶ

ಹಿಂದಿನಿಂದಲೂ ಆರ್.ಟಿ.ಸಿ. ದಾಖಲೆಗಳಲ್ಲಿ ಈ ಅರಣ್ಯ ಪ್ರದೇಶ ನಾರಗೋಡ ಗ್ರಾಮಕ್ಕೆ ಸೇರಿದ ‘ಕಾನು’ ಎಂದೇ ನಮೂದಾಗಿತ್ತು. ಈಗ ಬೇರೆ ಭಾಗದ ಕೆಲವು ಶ್ರೀಮಂತರು ತಮ್ಮ ಹೆಸರಿಗೆ ಖಾತೆ ಇದೆ ಎಂದು ಹೇಳಿಕೊಂಡು ಮರಗಳನ್ನು ನೆಲಕ್ಕುರುಳಿಸುತ್ತಿದ್ದಾರೆ. 50ಕ್ಕೂ ಹೆಚ್ಚು ಕಾರ್ಮಿಕರು ಕೊಡಲಿ, ಗರಗಸ, ಜೆಸಿಬಿಗಳನ್ನು ಬಳಸಿ ಅಮೂಲ್ಯ ವನ್ಯಸಂಪತ್ತು ಹಾಳುಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ಕುಟುಂಬಕ್ಕೆ ಭದ್ರತೆ

ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರ ಸೂಚನೆ ಮೇರೆಗೆ ದೀಪಿಕಾ ಕುಟುಂಬದವರು ವಾಸವಿರುವ ಬೆಂಗಳೂರಿನ ಜೆ.ಸಿ.ನಗರದ ನಂದಿದುರ್ಗ ರಸ್ತೆಯಲ್ಲಿರುವ ‘ವುಡ್ಸ್‌ ವೇಲ್’ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ಸಂಗತ

‘ಜ್ಞಾನ’ಚಾಲಿತ ವಸಾಹತೀಕರಣದ ಹೊಸ ಆವೃತ್ತಿ

ನಮಗೆ ಹೊಸ ಜ್ಞಾನ ಬೇಕು. ಆದರೆ ಅದು ಅಸಹಜ ಕಸರತ್ತುಗಳ ಮೂಲಕ ಕನ್ನಡದ ಕನ್ನಡಿಯಲ್ಲಿ ಮೂಡಬಲ್ಲ ಪ್ರತಿಬಿಂಬವಾಗಿ ಅಲ್ಲ.

ಪವರ್‌ಲೆಸ್ ವಿ.ಸಿ- ಪವರ್‌ಫುಲ್ ಡಿ.ಸಿ

ಜ್ಞಾನಾಧಾರಿತ ಅರ್ಥವ್ಯವಸ್ಥೆಯ ಹೊಸ ತಲೆಮಾರಿನ ಯುವಜನರ ಕನಸುಗಳನ್ನೇ ಭಗ್ನಗೊಳಿಸುವಂತಿರುವ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆಯನ್ನು ಸರ್ಕಾರ ವಾಪಸು ಪಡೆದು, ಮತ್ತೊಮ್ಮೆ ಎಲ್ಲ ಪ್ರಜ್ಞಾವಂತ ವಲಯಗಳ ಸಹಭಾಗಿತ್ವ ಮತ್ತು ಸಹಕಾರದೊಂದಿಗೆ ಪುನರ್‌ರೂಪಿಸಬೇಕು.

ವೈದ್ಯ–ರೋಗಿ ಸಂಬಂಧಕ್ಕೆ ಧಕ್ಕೆ

ನ್ಯಾಯಮೂರ್ತಿ ವಿಕ್ರಮ್‍ಜಿತ್ ಸೇನ್ ಅವರ ವರದಿಯನ್ನು ಸರ್ಕಾರ ಅಕ್ಷರಶಃ ಜಾರಿಗೆ ತಂದರೆ ವೈದ್ಯ ಸಮೂಹ ಅದನ್ನು ಖಂಡಿತ ಸ್ವೀಕರಿಸುತ್ತದೆ

ಆಸ್ಪತ್ರೆ ನಿಯಂತ್ರಣ: ಕಣ್ಣೊರೆಸುವ ತಂತ್ರವೇ?

ಯಾವುದೇ ಜನಪರ ಸರ್ಕಾರಕ್ಕೆ ತನ್ನ ಜನರ ಆರೋಗ್ಯ ರಕ್ಷಣೆ ಎಲ್ಲಕ್ಕಿಂತ ಮುಖ್ಯವಾಗಿರಬೇಕಲ್ಲವೇ? ಈ ದೃಷ್ಟಿಯಿಂದ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸರ್ಕಾರದಿಂದ ರಚಿತವಾದ ಜಸ್ಟಿಸ್ ಭೋರ್ ಸಮಿತಿ 1946ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು.

ಕರ್ನಾಟಕ ದರ್ಶನ

ಈತ ವಾನರ ಸೇನೆಯ ಕರ್ನಲ್‌!

ಒಮ್ಮೆ ಸಮರ್ಥನ ಸುಳಿವು ಸಿಗದಿದ್ದಾಗ ಅಜ್ಜಿಯ ಮನೆಯಲ್ಲಿನ ಎಲ್ಲ ಹಾಸಿಗೆ ಕಿತ್ತುಹಾಕಿದ್ದವು ಮುಸುವಗಳು. ಹೌದು, ಈ ಪೋರನಿಗೂ ಅವುಗಳಿಗೂ ಸ್ನೇಹ ಕುದುರಿದ್ದು ಹೇಗೆ?

ಕೊರಡು ಅರಳಿ ಹೂವಾಗಿ...

ಈ ಊರಿನ ಪ್ರತಿ ಮನೆಯ ಹೊಸ್ತಿಲ ಬಳಿಯೂ ತೈಲವರ್ಣದ ಚಿತ್ರ ಬಳಿದಂತೆ ಒಂದೇ ಭಂಗಿಯಲ್ಲಿ ಕುಳಿತು ಮಾಲೆ ಪೋಣಿಸುವ ಮಹಿಳೆಯರು ಕಾಣುತ್ತಾರೆ. ಯಾರಿಗೆ ಗೊತ್ತು? ನಿಮ್ಮೂರಿನ ಯಾವುದೋ ಸಭೆಯಲ್ಲಿ ಅತಿಥಿಗಳು ಧರಿಸಿದ ಕಟ್ಟಿಗೆ ಹೂವಿನ ಮಾಲೆ ಕೂಡ ಇಲ್ಲಿ ತಯಾರಾಗಿದ್ದೇ ಆಗಿರಬಹುದು!

ಹಿತ್ತಲಲ್ಲಿ ಕಂಡ ಕೆಂಪು ಸುಂದರಿ

ಶರೀರಕ್ಕಿಂತ ಒಂದೂವರೆ ಪಟ್ಟು ಉದ್ದದ ಹಾಗೂ ರೇಷ್ಮೆಯಂತಹ ಬಾಲ ಹೊಂದಿರುವ ಈ ಕೆಂದಳಿಲು ಕುಶಲ ಕಲೆಗಾರನಂತೆ ಹಲ್ಲಿನಿಂದಲೇ ಬಲಿತ ಕಾಯಿಗಳನ್ನು ತೂತು ಮಾಡಿ ಎಳನೀರು ಕುಡಿಯುವ ಕೌಶಲಕ್ಕೆ ಯಾರಾದರೂ ತಲೆದೂಗಲೇಬೇಕು

ತೆರೆದ ಅಂಚೆ

ಬಿ. ಬಸವರಾಜು ಹನೂರು ಅವರ ‘ದೇವರಾದರು ಈ ಸಾಹೇಬರು’ ಲೇಖನ ನಿಷ್ಕಾಮ ಕರ್ಮಕ್ಕೆ ಎಷ್ಟೊಂದು ಬೆಲೆ ಎಂಬುದನ್ನು ತೋರಿಸಿದೆ. ಡಿಸಿಎಫ್ ಅರಣ್ಯಾಧಿಕಾರಿ ಪಿ. ಶ್ರೀನಿವಾಸ ಅವರ ಸೇವೆ ಇಂದಿಗೂ ಜನರ ಮನದಾಳದಲ್ಲಿ ಉಳಿದು, ಅವರು ದೇವರಾಗಿದ್ದುದನ್ನು ಲೇಖನ ಸಮರ್ಥವಾಗಿ ಕಟ್ಟಿಕೊಟ್ಟಿದೆ.

ಕೃಷಿ

ತಾರಸಿ ಮೇಲೆ ಭತ್ತದ ಪೈರು

ತಾರಸಿಯಲ್ಲಿ ತರಕಾರಿ, ಹೂವಷ್ಟೇ ಅಲ್ಲ, ಭತ್ತವನ್ನೂ ಬೆಳೆದಿದ್ದಾರೆ ಕೃಷ್ಣಪ್ಪ ಗೌಡರು. 15 ವರ್ಷಗಳಿಂದ ಭತ್ತ ಬೆಳೆಯುತ್ತಿದ್ದು,ಪ್ರತಿ ವರ್ಷ ಸರಾಸರಿ 50 ಕೆ.ಜಿ ಭತ್ತ ತಾರಸಿ ಹೊಲದಿಂದ ಸಿಗುತ್ತದೆ...

ಎಳನೀರಿನ ಹಿಮಚೆಂಡು?

ಮಲೇಷ್ಯಾ ಮತ್ತು ಇನ್ನೂ ಕೆಲವು ಪುಟ್ಟ ದೇಶಗಳಲ್ಲಿ ಇದು ಪ್ರವಾಸಿ ಆಕರ್ಷಣೆ! ಯಾವುದೇ ಯಂತ್ರ ಬಳಸದೆ, ಬರೀ ಕೈಚಳಕದಿಂದ ಈ ರೀತಿಯ ಹಿಮಚೆಂಡನ್ನು ಹೊರತೆಗೆದು ಮಾರುತ್ತಾರೆ. ಈ ಕುಶಲಕರ್ಮಿಗಳಿಗೆ ಇದೇ ವೃತ್ತಿ.

ಸಮಗ್ರ ಕೃಷಿಯಲ್ಲಿ ನಷ್ಟದ ಮಾತೆಲ್ಲಿ?

ಶಶಿ ಅವರಿಗೆ ಒಂಬತ್ತು ಎಕರೆ ಭೂಮಿ ಇದೆ. ಈ ವರ್ಷ ಮೂರು ಎಕರೆಯಲ್ಲಿ ತಿಪಟೂರು ತಳಿ ಶೇಂಗಾ (ಗುಚ್ಚಿ) ಬೆಳೆದಿದ್ದು, 50 ಕ್ವಿಂಟಲ್‌ ಇಳುವರಿ ಪಡೆದಿದ್ದಾರೆ. ಖರ್ಚು ಕಳೆದು, ₹1 ಲಕ್ಷ ಆದಾಯ ಗಳಿಸಿದ್ದಾರೆ.

ಕಲ್ಲು ಭೂಮಿಯಲ್ಲಿ ಕೃಷಿ

ಭೂಮಿ ಬಗೆದೆಡೆ ಕಲ್ಲುಗಳೇ... ಹಿರಿಯರಿಂದ ಸಿಕ್ಕ ಈ ಕಲ್ಲು ನೆಲದಲ್ಲೇ ಕೃಷಿಗಿಳಿದರು ಈ ರೈತ. ಹಸನಾದ ಭೂಮಿ ಈಗ ಹುಲುಸಾಗಿ, ಎಷ್ಟೊಂದು
ಫಲ ನೀಡುತ್ತಿದೆ...