ಕಂಚುಕಲೋಕ

7 Oct, 2017
ರೋಹಿಣಿ ಮುಂಡಾಜೆ

ನನ್ನ ‘ಎದೆ’ ಸಣ್ಣದು. ಎಲ್ಲರೂ ನನ್ನನ್ನು ಸ್ಕೇಲ್ ಎಂದು ಕರೆಯುತ್ತಿದ್ದರು. ನನ್ನ ಬಗ್ಗೆ ಏನೇನೋ ಅಸಹ್ಯವಾಗಿ ಜೋಕ್‌ ಮಾಡುತ್ತಿದ್ದರು. ಹಳೆಯ ಕೆಲಸ ಬಿಟ್ಟಿದ್ದು ಅದೇ ಕಾರಣಕ್ಕೆ. ಹೊಸ ಕಂಪೆನಿಗೆ ಬಂದ ಮೇಲೆ ನನ್ನ ಗೆಟಪ್ಪು ಬದಲಾಯಿಸಿಕೊಂಡೆ’ ಎಂದು ಆತ್ಮವಿಶ್ವಾಸದಿಂದಲೇ ಹೇಳಿದಳು ಸುಪ್ರಿಯಾ.

ಸ್ತನಗಳ ಗಾತ್ರ ಚಿಕ್ಕದಾಗಿದ್ದ ಸುಪ್ರಿಯಾಳಿಗೆ ಆತ್ಮವಿಶ್ವಾಸ ಮರಳಿದ್ದು ಪ್ಯಾಡೆಡ್‌ ಬ್ರೇಸಿಯರ್‌ ಹಾಕುವುದನ್ನು ರೂಢಿ ಮಾಡಿಕೊಂಡ ಮೇಲೆ! ಆದರೆ ಅಂಕಿತಾ ಎಂಬ ಎಂಬಿಎ ಪದವೀಧರೆಗೆ ಮಾತ್ರ ಪ್ಯಾಡೆಡ್‌ ಬ್ರಾಗಳು ದುಃಸ್ವಪ್ನವಾಗಿವೆ. ನಿರಂತರವಾಗಿ ಅವುಗಳನ್ನು ಧರಿಸಿದ ಕಾರಣ ಅವಳ ಎದೆ ಮತ್ತು ಹೊಟ್ಟೆಯ ಭಾಗದಲ್ಲಿ ಕಾಣಿಸಿಕೊಂಡಿರುವ ಹುಣ್ಣುಗಳು!

ಸುಪ್ರಿಯಾ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲು ಕಾರಣ ಅವಳ ಸುತ್ತಮುತ್ತಲಿನ ಜನರ ದೃಷ್ಟಿಕೋನ. ಹೆಣ್ಣಿನ ಮೈಮಾಟವನ್ನು ಅಂಕಿ–ಅಂಶದ ‘ಮಾನದಂಡ’ದಲ್ಲಿ ಅಳೆಯುವ ರಸಿಕರ ಸಮಾಜದಲ್ಲಿ ಸುಪ್ರಿಯಾಳಂತಹ ಹೆಣ್ಣುಮಕ್ಕಳ ಎದೆಯ ಗಾತ್ರವೂ ಲೆಕ್ಕಕ್ಕೆ ಸಿಗುತ್ತದೆ! 36–24–36 ಎಂಬ, ಮೈಮಾಟದ ಈ ಲೆಕ್ಕಾಚಾರ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ!

‘ಎದೆಯ ಸುತ್ತಳತೆ’ 36 ಇಂಚು ಇರದಿದ್ದರೆ ಕೃತಕವಾಗಿ ಅಷ್ಟು ಕಾಣುವಂತೆ ಮಾಡುವುದೇ ಈ ಮಾರುಕಟ್ಟೆ ಮಂತ್ರ! ನಿಜ, ಟ್ರೆಂಡಿ ಕಂಚುಕಗಳ (ಬ್ರಾ/ಬ್ರೇಸಿಯರ್‌) ಬಳಕೆ ಅಚ್ಚರಿ ಮೂಡಿಸುವಷ್ಟು ಹೆಚ್ಚಳವಾಗಿರುವುದಕ್ಕೆ ಈ ದೃಷ್ಟಿಕೋನಗಳೇ ಕಾರಣ. ಅದನ್ನು ಸಾರಾಸಗಟಾಗಿ ಹೆಣ್ಣುಮಕ್ಕಳು ಒಪ್ಪಿಕೊಂಡಿರುವುದು ಮಾತ್ರ ದುರಂತವೇ.

ಸ್ತನಗಳ ಆಕಾರ ಕೆಡದಂತೆ ಮತ್ತು ಅಂದ ಎದ್ದುಕಾಣುವಂತೆ ಮಾಡುವ ನಿಟ್ಟಿನಲ್ಲಿ ಕಂಚುಕಗಳು ಅರ್ಥಾತ್‌ ಬ್ರೇಸಿಯರ್‌/ಬ್ರಾಗಳು ಗಮನಾರ್ಹ ಪಾತ್ರ ವಹಿಸಿದವು. ಸ್ತನಗಳ ತೊಟ್ಟು (ನಿಪ್ಪಲ್‌) ಎದ್ದುತೋರದಂತೆ ಮಾಡುವುದೂ ಬ್ರಾ ಧರಿಸುವ ಉದ್ದೇಶವಾಗಿತ್ತು. ಆದರೆ ನಮ್ಮ ಸೌಂದರ್ಯಪ್ರಜ್ಞೆ ಮತ್ತು ಅನುಕರಣೆ ಕೃತಕವಾಗಿಯಾದರೂ ಎದೆಗಾತ್ರವನ್ನು ಉಬ್ಬಿಸಿಕೊಳ್ಳುವ ಚಟಕ್ಕೆ ಬೀಳುವಂತೆ ಮಾಡುತ್ತಿವೆ.

ನಾಲ್ಕೈದು ದಶಕಗಳ ಹಿಂದೆ ಲಭ್ಯವಿರುತ್ತಿದ್ದುದು ಮೂರೋ ನಾಲ್ಕೋ ಬಣ್ಣದ ಕಂಚುಕಗಳು. ಕಪ್ಪು, ಬಿಳಿ, ಕೆಂಪು ಮತ್ತು ಗಾಢ ಗುಲಾಬಿ ಬಣ್ಣದವುಗಳು. ಆದರೆ ಈಗ ಫ್ಯಾಷನ್‌ ಜಗತ್ತಿನಲ್ಲಿ ಕಂಚುಕಗಳ ವಿನ್ಯಾಸಕರಿಗೆ ಅಗ್ರ ಬೇಡಿಕೆ. ಬಣ್ಣ, ವಿನ್ಯಾಸ, ಆಕಾರಗಳು ಮಾಡುವ ಮೋಡಿಯ ಮುಂದೆ ಬೆಲೆ ನಗಣ್ಯವಾಗುತ್ತಿದೆ.

ಮತ್ತೊಂದೆಡೆ, ಕೆಳಮಧ್ಯಮ ಮತ್ತು ಮಧ್ಯಮ ವರ್ಗದ ಮಂದಿ ತಾವು ಖರೀದಿಸಿದ ಕಂಚುಕ ಎಷ್ಟು ತಿಂಗಳು/ವರ್ಷ ಬಾಳ್ವಿಕೆ ಬರುತ್ತದೆ ಎಂಬ ಬಗ್ಗೆ ಮಾತ್ರ ಯೋಚಿಸುವ ಕಾರಣ ಅಗ್ಗದ ಬ್ರಾಗಳ ಮೊರೆಹೋಗುತ್ತಿದ್ದಾರೆ. ಅವುಗಳ ಬಳಕೆ ಎಷ್ಟು ಸುರಕ್ಷಿತ ಎಂಬ ಪರಿಜ್ಞಾನವೇ ಇಲ್ಲದೆ ಸಮಸ್ಯೆಗಳನ್ನು ಎಳೆದುಕೊಳ್ಳುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಈಗ ಪ್ಯಾಡೆಡ್‌, ಸಿಂಥೆಟಿಕ್‌, ಫೋಮ್‌ ಮತ್ತು ಸಿಲಿಕಾನ್‌ ಬ್ರಾಗಳು ದಂಡಿದಂಡಿಯಾಗಿ ಸಿಗುತ್ತಿವೆ.

ಫ್ಯಾನ್ಸಿ ಬ್ರಾಗಳ ತಯಾರಿಯಲ್ಲಿ ಸಿಂಥೆಟಿಕ್‌, ನೈಲಾನ್‌, ರೇಯಾನ್‌, ಸಿಲಿಕಾನ್‌ ಮುಂತಾದ ಫೈಬರ್‌ಗಳನ್ನು ಯಥೇಚ್ಛವಾಗಿ ಬಳಸಲಾಗುತ್ತದೆ. ಹತ್ತಿ ಮತ್ತು ರೇಷ್ಮೆಯನ್ನು ಹೊರತಡುಪಡಿಸಿ, ಮೇಲೆ ಉಲ್ಲೇಖಿಸಿದ ಫೈಬರ್‌ಗಳು ಚರ್ಮಸ್ನೇಹಿಯೇ, ಚರ್ಮಸ್ನೇಹಿಯಾಗಬೇಕಾದರೆ ಎಷ್ಟು ಪ್ರಮಾಣದಲ್ಲಿ ಬಳಸಿರಬೇಕು – ಎಂಬ ಅಂಶಗಳತ್ತ ಗಮನ ನೀಡಬೇಕು. ಆದರೆ ಯಾವುದೇ ಬ್ರ್ಯಾಂಡ್‌ನ ಕಂಚುಕಗಳಲ್ಲಿ ಈ ಮಾಹಿತಿಗಳು ಲಭ್ಯವಿರುವುದಿಲ್ಲ. ಇದ್ದರೂ ಸೂಜಿಮೊನೆಯಷ್ಟು ಸಣ್ಣ ಅಕ್ಷರಗಳಲ್ಲಿ ಬರೆದಿರುವ ‘ಮೆಟೀರಿಯಲ್ಸ್‌ ಯೂಸ್ಡ್‌’ ಎಂಬ ವಿವರವನ್ನು ದುರ್ಬೀನು ಹಾಕಿಕೊಂಡು ಓದುವಷ್ಟು ವ್ಯವಧಾನ ಗ್ರಾಹಕರಿಗೆ ಇರುವುದಿಲ್ಲ. ಎಷ್ಟೋ ಮಂದಿಗೆ ಅದೇನು ಎಂಬುದೇ ಗೊತ್ತಿರುವುದಿಲ್ಲ ಬಿಡಿ.

ಇತ್ತೀಚಿಗೆ ಸಿಂಥೆಟಿಕ್‌, ನೈಲಾನ್‌, ರೇಯಾನ್‌ ಮತ್ತು ಸಿಲಿಕಾನ್‌ ಬಳಸಿದ ಲೇಯರ್ಡ್‌, ಪ್ಯಾಡೆಡ್‌, ಪುಷ್‌ ಅಪ್‌, ಎನ್‌ಹ್ಯಾನ್ಸಿಂಗ್‌ ಎಂಬ ವೈವಿಧ್ಯಮಯ ಬ್ರಾಗಳು ಹೆಣ್ಣುಮಕ್ಕಳ ಮನಸ್ಸನ್ನು ಗೆದ್ದಿವೆ. ಲೇಯರ್ಡ್‌ ಬ್ರಾಗಳು ಸ್ತನಗಳನ್ನು ಸ್ವಲ್ಪ ಮಟ್ಟಿಗೆ ದಪ್ಪಗೆ ಕಾಣಿಸಿದರೆ, ಪ್ಯಾಡೆಡ್‌ ಬ್ರಾಗಳು ಸ್ತನಗಳಿಗೆ ಮಾದಕ ನೋಟ ನೀಡುತ್ತವೆ.

ಸುಪ್ರಿಯಾಳಂತಹ ‘ಶೋಷಿತೆ’ಯರಿಗೆ ಪ್ಯಾಡೆಡ್‌ ಬ್ರಾಗಳು ವರದಾನ! ಸ್ತನಗಳು ಜೋತುಬಿದ್ದವರನ್ನು ಮುಜುಗರದಿಂದ ತಪ್ಪಿಸಿದ್ದು ಪುಷ್‌ ಅಪ್‌ ಬ್ರಾಗಳು. ಎನ್‌ಹ್ಯಾನ್ಸಿಂಗ್‌ ಬ್ರಾಗಳದ್ದೂ ಇದೇ ಕತೆ. ಸ್ತನಗಳು ದೊಡ್ಡದಾಗಿ, ಸೆಕ್ಸಿಯಾಗಿ ಮತ್ತು ಮಧ್ಯದ ಸೀಳು ಢಾಳಾಗಿ ಕಾಣಬೇಕು ಎಂದು ಬಯಸುವವರು ಈ ಮಾದರಿಯ ಬ್ರಾಗಳನ್ನು ಧರಿಸುತ್ತಾರೆ. ಈ ಬಗೆಯ ಬ್ರಾಗಳ ಸ್ಟ್ರಾಪ್‌ಗಳು ಪಾರದರ್ಶಕವಾಗಿರುತ್ತವೆ. ಬ್ರಾಗಳದ್ದೇ ಬಣ್ಣದ ಸ್ಟ್ರಾಪ್‌ಗಳೂ ಇರುತ್ತವೆ. ಸ್ಟ್ರಾಪ್‌ಗಳೂ ಪ್ಲಾಸ್ಟಿಕ್‌ನಿಂದ ತಯಾರಾಗಿರುತ್ತವೆ ಎಂಬುದನ್ನು ಮರೆಯಬಾರದು.

ಮತ್ತೊಂದು ವಿಚಾರ. ಇತ್ತೀಚಿನ ವರ್ಷಗಳಲ್ಲಿ ಟ್ರೆಂಡ್‌ ಸೃಷ್ಟಿಸಿರುವ ಡಿಸೈನರ್‌ ರವಿಕೆಗಳ ಜಾಯಮಾನದಿಂದಾಗಿ ರವಿಕೆಗಳಲ್ಲೇ ಬ್ರಾಗಳ ಕಪ್‌ಗಳನ್ನೂ ಅಳವಡಿಸಿರುತ್ತಾರೆ. ದುರಂತವೆಂದರೆ, ಫುಟ್‌ಪಾತ್‌ಗಳಲ್ಲೂ ಡಿಸೈನರ್‌ ರವಿಕೆಗಳು ಅಗ್ಗದ ದರಕ್ಕೆ ಸಿಗುತ್ತಿರುವಾಗ ಸಾವಿರಾರು ರೂಪಾಯಿ ಯಾಕೆ ಖರ್ಚು ಮಾಡಬೇಕು ಎಂಬುದು ಕೆಲವರ ಜಾಣ ಲೆಕ್ಕಾಚಾರ. ಆದರೆ ಈ ರವಿಕೆಗಳಲ್ಲಿ ಅಳವಡಿಸಿರುವ ಬ್ರಾ ಕಪ್‌ಗಳು ಬರೀ ಸ್ಪಂಜ್‌ಗಳು! ಸಾಮಾನ್ಯವಾಗಿ ಪಾರ್ಸೆಲ್‌ ಬಾಕ್ಸ್‌ಗಳಲ್ಲಿ, ಪ್ಯಾಕಿಂಗ್‌ಗಳಲ್ಲಿ, ಅಂಗಡಿಗಳಲ್ಲಿ ಶರ್ಟುಗಳ ಮಧ್ಯೆ ಇರಿಸುವಂತಹುದೇ ಸಂಜ್‌ಗಳನ್ನೇ ಇಲ್ಲಿ ಬಳಸುವುದು!

ಅಪಾಯ ಏನು?
‘ಡಿಸೈನರ್‌ ರವಿಕೆಗಳನ್ನು ಹಾಗೂ ಸಿಂಥೆಟಿಕ್‌/ ಪ್ಯಾಡೆಡ್‌ ಬ್ರಾಗಳನ್ನು ಧರಿಸಿದಾಗ ಸ್ತನಗಳು ಬೆಚ್ಚಗಾಗುತ್ತವೆ, ಇಡೀ ದಿನ  ಅಂದರೆ ಎಂಟು ಗಂಟೆಗೂ ಹೆಚ್ಚು ಕಾಲ ಧರಿಸಿದ್ದರೆ ಉಸಿರು ಕಟ್ಟಿದಂತಹ ಅನುಭವವಾಗುತ್ತದೆ’ ಎನ್ನುವುದು ಅಂಕಿತಾಳ ಅನುಭವದ ಮಾತು.

‘ಕೆಲವೊಮ್ಮೆ ನಿಪ್ಪಲ್‌ ಹಾಗೂ ಸ್ತನದ ಯಾವುದೋ ಭಾಗದಲ್ಲಿ ನವೆಯಾದಂತೆ ಕಿರಿಕಿರಿ ಉಂಟಾಗುತ್ತಿತ್ತು. ಆದರೆ ಎಲ್ಲರೆದುರು ಹೇಗೆ ಕೆರೆದುಕೊಳ್ಳುವುದು? ನಾನು ಆರೇಳು ವರ್ಷ ಹಗಲು ರಾತ್ರಿ ಸಿಂಥೆಟಿಕ್‌ ಮತ್ತು ಪ್ಯಾಡೆಡ್‌ ಬ್ರೇಸಿಯರ್‌ಗಳನ್ನೇ ಬಳಸಿದ್ದೆ. ಹಾಸ್ಟೆಲ್‌ನಲ್ಲಿದ್ದ ಕಾರಣ ನನ್ನ ಚಪ್ಪಟೆ ಎದೆನೋಡಿ ಯಾರಾದರೂ ಏನು ಅಂದುಕೊಳ್ಳುತ್ತಾರೋ ಎಂಬ ಆತಂಕದಿಂದ ರಾತ್ರಿಯೂ ತೆಗೆಯುತ್ತಿರಲಿಲ್ಲ.

ಬೆಳಿಗ್ಗೆ ಸ್ನಾನದ ವೇಳೆ ತೆಗೆಯುವಾಗ ಒಂಥರಾ ದುರ್ವಾಸನೆ ಇರುತ್ತಿತ್ತು. ಅದು ಎಷ್ಟೋ ದಿನ ಗಾಳಿ ಬೆಳಕು ಆಡದ ಕೋಣೆ ತೆರೆದರೆ ಮುಖಕ್ಕೆ ಹೊಡೆಯುವ ಮುಗ್ಗಲು ವಾಸನೆಯನ್ನು ಹೋಲುತ್ತಿತ್ತು. ಎರಡೂ ಸ್ತನಗಳ ಬುಡದಿಂದ ಆರಂಭವಾದ ಗುಳ್ಳೆಗಳು ಹೊಟ್ಟೆಯ ಭಾಗಕ್ಕೂ ಪಸರಿಸಿತು. ಮೇಲೆ ಕತ್ತಿನ ವರೆಗೂ ಆವರಿಸಿಕೊಂಡಿತು. ಕೆರೆತ ಹೆಚ್ಚಾಗಿ, ಉರಿ, ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಂಡಾಗ ನಾನು ಜಾಗೃತಳಾದೆ’ ಎಂದು ವಿವರಿಸುತ್ತರೆ ಅವರು. ಅಂಕಿತಾಳ ಅನುಭವದ ಮಾತು, ಫ್ಯಾನ್ಸಿ ಬ್ರಾ ಧರಿಸುವ ಚಟಕ್ಕೆ ಬಿದ್ದ ಹೆಣ್ಣುಮಕ್ಕಳಿಗೆ ಪಾಠವಾಗಬೇಕು.

ಬ್ಯಾಕ್‌ಲೆಸ್‌ ಉಡುಪು ಮತ್ತು ಫ್ಯಾನ್ಸಿ ಬ್ರಾ
ಆಧುನಿಕ ವಿನ್ಯಾಸದ ಬ್ರಾಗಳ ಕುರಿತು ಪ್ರಸ್ತಾಪಿಸಿದ ಅಷ್ಟೂ ಫೀಚರ್‌ಗಳ ಸಮ್ಮಿಶ್ರಣವೇ ಸಿಲಿಕಾನ್‌ ಬ್ರಾ! ಒಂದು ಸೆಂ.ಮೀ. ದಪ್ಪದ ಪ್ಲಾಸ್ಟಿಕ್‌ನ ಅರೆಪಾರದರ್ಶಕ ಕಪ್‌ ಹೇಗಿರುತ್ತದೆ ಎಂದು ಕಲ್ಪಿಸಿಕೊಂಡರೆ ಸಿಲಿಕಾನ್‌ ಬ್ರಾಗಳ ಚಿತ್ರಣ ಕಣ್ಮುಂದೆ ಬಂದೀತು. ಸಿಲಿಕಾನ್‌ ಬ್ರಾಗಳು ಹಲವು ಆಕಾರಗಳಲ್ಲಿ ಲಭ್ಯ. ಮಾತ್ರವಲ್ಲ, ಚರ್ಮದ ಬಣ್ಣಗಳಿಗೆ ಅನುಗುಣವಾಗಿ ಸಿಗುತ್ತವೆ.

ವಿದೇಶಗಳಲ್ಲಿ ಜನಸಾಮಾನ್ಯರೂ ಸಿಲಿಕಾನ್‌ ಬ್ರಾಗಳನ್ನು ಧರಿಸುತ್ತಾರೆ. ಸ್ತನಗಳನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವಂತೆ ವಿಶಿಷ್ಟವಾದ ಗೋಂದು/ಗಮ್‌ಟೇಪ್‌ನಂತಹುದು (adhessive) ಬಳಸಲಾಗಿರುತ್ತದೆ. ಇಡೀ ಬೆನ್ನು ಕಾಣುವಂತಹ ಉಡುಪುಗಳಿಗೆ ಈ ‘ಸ್ಟಿಕ್‌ ಆನ್‌’ ಬ್ರಾಗಳೇ ಬೇಕು! ಉಡುಪುಗಳಲ್ಲೇ ಬ್ರಾ ಕಪ್‌ಗಳನ್ನು ಅಳವಡಿಸುವುದೂ ವಾಡಿಕೆ.

Read More

Comments
ಮುಖಪುಟ

ಕನಿಷ್ಠ ಮೂಲವೇತನ ₹16,350ಕ್ಕೆ ಹೆಚ್ಚಳ?

ನೌಕರರ ಆರಂಭಿಕ ವೇತನ ಶ್ರೇಣಿ ಅಂದರೆ ‘ಡಿ’ ಗ್ರೂಪ್‌ ನೌಕರರಿಗೆ ಮೂಲವೇತನ ₹9,600 ಇದ್ದು, ತುಟ್ಟಿಭತ್ಯೆ ಈಗ ಶೇ 45.25ರಷ್ಟಿದೆ. ಬೆಂಗಳೂರಿನಲ್ಲಿ ಮನೆಬಾಡಿಗೆ ಭತ್ಯೆ ಮೂಲವೇತನದ ಶೇ 30ರಷ್ಟಿದೆ.

ರಾಹುಲ್‌ ಯುಗಾರಂಭ; ಸೋನಿಯಾ ಭಾವುಕ ವಿದಾಯ

ಸತತ 19 ವರ್ಷಗಳ ಕಾಲ ಪಕ್ಷದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಸೋನಿಯಾ ಗಾಂಧಿ, ಸಾವಿರಾರು ಬೆಂಬಲಿಗರು ಮತ್ತು ಕಾರ್ಯಕರ್ತರೆದುರು ತಮ್ಮ ಪುತ್ರ ರಾಹುಲ್‌ಗೆ ಅಧಿಕಾರ ಹಸ್ತಾಂತರಿಸಿದರು.

 

ಮುಖ್ಯಮಂತ್ರಿಗೆ ‘ಚಿನ್ನದ ಕಿರೀಟ’ ಉಡುಗೊರೆ!

ಚಿನ್ನದ ಕಿರೀಟದ ತೂಕ 500 ಗ್ರಾಂ ಎಂದು ಕೆಲವರು, 250 ಗ್ರಾಂ ಎಂದೂ ಇನ್ನು ಕೆಲವರು ತಿಳಿಸಿದರು. ‘ಕಿರೀಟದ ಅಂದಾಜು ಮೌಲ್ಯ ₹5 ಲಕ್ಷ. ಖಡ್ಗದ ಮೌಲ್ಯ ₹30 ಸಾವಿರ ಹಾಗೂ ಹಾರದ ಮೌಲ್ಯ ₹25 ಸಾವಿರ ಇರಬಹುದು’ ಎಂದು ಶಾಸಕರ ಆಪ್ತ ಮೂಲಗಳು ಹೇಳುತ್ತವೆ.

ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

ಒಬಾಮ ಸರ್ಕಾರದ ರೂಪಿಸಿದ್ದ ನಿಯಮಾವಳಿಯಲ್ಲಿ ಬದಲಾವಣೆ ತರುವ ಆಲೋಚನೆ ಇದೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಸಂಗತ

ನಿರ್ಭಯಾ ನೆನಪು– ವರ್ಮಾ ವರದಿ

ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ನ್ಯಾಯಮೂರ್ತಿ ವರ್ಮಾ ವರದಿ ಒಂದು ಅಪರೂಪದ ದಾಖಲೆ. ಒಂದು ಬೃಹತ್ ಆಂದೋಲನದ ಫಲ. ಮಹಿಳಾ ಚಳವಳಿಗಳು ಇಂತಹ ವರದಿಗಳ ಅನುಷ್ಠಾನಕ್ಕೆ ಆಗ್ರಹಿಸಬೇಕು

ಪೇಜಾವರ ಶ್ರೀಗಳಿಗೆ... ಸ್ಪಷ್ಟನೆಗಾಗಿ ಪತ್ರ

ಸಂವಿಧಾನದ ಯಾವ ವಿಧಿಗಳ ಬಗ್ಗೆ ತಮಗೆ ತಕರಾರಿದೆ? ತಾವು ಬಯಸುವ ಬದಲಾವಣೆ ಏನು?

ಭಾರತ–ಬ್ರಿಟನ್‌ ನಡುವೆ ‘ಸಜೀವ ಸೇತುವೆ’

ದ್ವಿಪಕ್ಷೀಯ ಸಂಬಂಧ ವೃದ್ಧಿ ಕ್ರಮ: ಬೆಂಗಳೂರಿನಲ್ಲಿ ವೀಸಾ ಕೇಂದ್ರ

ಮನೆಪಾಠಕ್ಕೆ ಮದ್ದುಂಟೆ?

ಖಾಸಗಿ ಪಾಠ ವ್ಯವಸ್ಥೆಯು ಸಾಂಸ್ಥಿಕ ರೂಪದ ಶಾಲೆ–ಕಾಲೇಜುಗಳಿಗೆ ಪರ್ಯಾಯವಾಗಿ ಬೆಳೆಯತೊಡಗಿರುವುದು ಸಾಮಾಜಿಕ ದೃಷ್ಟಿಕೋನದಿಂದ ಸಮ್ಮತವೆನಿಸುವುದಿಲ್ಲ

ಮುಕ್ತಛಂದ

‌ಅಂಗೈಯಲ್ಲೇ ಸ್ವರ್ಗ ಕಾಣಬೇಕೆ?

ಯುವ ಮನಸ್ಸುಗಳ ಉತ್ಸಾಹ, ನವೋನ್ಮಾದಗಳನ್ನು ವೃದ್ಧಿಸುತ್ತಿರುವ ಕಾಲಘಟ್ಟದ ಆರಂಭದ ದಿನಗಳಲ್ಲಿ ನಾವಿದ್ದೇವೆ. ಇಂದಿನ ಹದಿಹರೆಯ, ಯುವಜನರ ಭಾವೋದ್ರೇಕದ ವರ್ತನೆಗಳು ನವೀನ ರೀತಿಯದ್ದಾಗಿದ್ದು ‘ಅದರಿಂದ ಕೆಡಕು’ ಎನ್ನುವ ಭಾವನೆ ವ್ಯಾಪಕ. ಮನೆ, ಸಮುದಾಯದ ಅಸಹನೆ ಹೆಚ್ಚುತ್ತಿರುವುದಕ್ಕೆ ತಂತ್ರಜ್ಞಾನ ಒದಗಿಸಿರುವ ಸಲಕರಣೆಗಳ ಪ್ರಭಾವವಿದೆ ಎನ್ನುವುದು ನಿಜವಿರಲೂಬಹುದು.

ಟಿ.ಆರ್‌.ಪಿ. ಎಂಬ ಚಾಲೂ ಚೆಲುವೆ!

ಟಿ.ಆರ್‌.ಪಿ. ಗಳಿಕೆಗಾಗಿಯೇ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಇಲ್ಲಿ ಪ್ರತಿಯೊಂದೂ ಮಾರುಕಟ್ಟೆ ಸರಕಾಗುತ್ತದೆ. ನೀವು ಪ್ರತಿಯೊಂದನ್ನೂ ಮಾರಬೇಕು. ಸುದ್ದಿಯನ್ನೂ ಅಷ್ಟೇ, ಧಾರಾವಾಹಿಯನ್ನೂ ಅಷ್ಟೇ. ಈ ಸರಕು ಸಂಸ್ಕೃತಿ ನಮ್ಮ ನೋಟವನ್ನು ಆಳುತ್ತದೆ. ನಮ್ಮ ಮೌಲ್ಯಗಳನ್ನು ಪಲ್ಲಟಗೊಳಿಸುತ್ತದೆ. ನಮ್ಮ ಅತಿ ಖಾಸಗಿ ನಂಟುಗಳನ್ನೂ ಅಲ್ಲಾಡಿಸುತ್ತದೆ.

ಟಿ.ವಿ. ವಾಹಿನಿಗಳ ನೈತಿಕ ಪ್ರಜ್ಞೆ

ಟಿ.ವಿ. ಚಾನೆಲ್‌ಗಳ ನಿರ್ವಾಹಕರೇ ಸ್ವಲ್ಪ ಸಾಮಾಜಿಕ ಕಳಕಳಿಯಲ್ಲದಿದ್ದರೂ ಜವಾಬ್ದಾರಿ ತೋರಿದರೆ ಆದೀತು. ಆದರೆ, ಪರಸ್ಪರ ತುಳಿದೇ ಮೇಲೆ ಬರುವ ಕ್ರೂರ ಸ್ಪರ್ಧೆಯ ಸುಳಿಯಲ್ಲಿ ಸಿಲುಕಿರುವ ಟಿ.ವಿ. ಸಂಸ್ಥೆಗಳಿಗೆ ಈ ನೈತಿಕತೆ ತುಂಬಾ ದುಬಾರಿಯಾಗಿಬಿಡುತ್ತದೆ. ಉದಾಹರಣೆಗೆ ಎಲ್ಲಾ ಟಿ.ವಿ. ಸಂಸ್ಥೆಗಳು ಅನುಸರಿಸಲೇಬೇಕಾದ ಹಲವು ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳಲ್ಲಿ ಒಂದು, ಕೇಬಲ್ ಟೆಲಿವಿಷನ್ ರೆಗ್ಯುಲೇಷನ್ ಆಕ್ಟ್ 1995.

ಮಧ್ಯಕಾಲದ ಹೆಣ

ಹೆಣ ಹಿರಿಹಿರಿ ಹಿಗ್ಗುತ್ತಿದೆ
ತಾನು ದೆವ್ವಗಿವ್ವ ಏನೂ ಆಗಿಲ್ಲವೆಂದು
ಆದರೆ ಭಯವೋ ಭಯ
ತನ್ನವೇ ಕೈ-ಕಾಲು ಕಣ್ಣು ತಲೆ ನೋಡಿಕೊಳ್ಳಲು!