ನಗರದಲ್ಲಿ ಮತ್ತೆ ಮಳೆ ಅಬ್ಬರ: ಸಂಚಾರ ಅಸ್ತವ್ಯಸ್ತ

  • ನೆಲಮಂಗಲದ ಗಜಾರಿಯಾ ಬಡಾವಣೆಯು ಜಲಾವೃತಗೊಂಡಿರುವುದು

12 Oct, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ನಗರದಲ್ಲಿ ಬುಧವಾರ ಗರಿಷ್ಠ 23.5 ಮಿ.ಮೀ ಮಳೆ ಸುರಿದಿದ್ದು, ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು.

ಯಶವಂತಪುರ, ಹೆಬ್ಬಾಳ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಯಲಹಂಕ, ಜಕ್ಕೂರು ಆಡುಗೋಡಿ ಸುತ್ತಮುತ್ತ ಭಾರಿ ಮಳೆಯಾಯಿತು. ರಾಜಾಜಿನಗರ, ಮಲ್ಲೇಶ್ವರ, ವಿಜಯನಗರ, ಬಸವೇಶ್ವರನಗರ, ಬಸವನಗುಡಿ, ಚಾಮರಾಜಪೇಟೆ, ಮೆಜೆಸ್ಟಿಕ್, ಎಂ.ಜಿ.ರಸ್ತೆ, ಶಿವಾಜಿನಗರ, ಕೆಂಗೇರಿ, ಅಶೋಕನಗರದಲ್ಲಿ ಸಾಧಾರಣ ಮಳೆಯಾಯಿತು.

ಆಡುಗೋಡಿಯ ವಿಪ್ರೊ ಜಂಕ್ಷನ್–ಮಹಾರಾಜ ಜಂಕ್ಷನ್‌ ಮಾರ್ಗದಲ್ಲಿ ಮಳೆ ನೀರಿನಲ್ಲಿ ಗೂಡ್ಸ್‌ ವಾಹನವೊಂದು ಕೆಟ್ಟು ನಿಂತಿತ್ತು. ಇದರಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ಹೀಗಾಗಿ, ಈ ಮಾರ್ಗದಲ್ಲಿ ಸಂಚಾರ ಬಂದ್‌ ಮಾಡಿ ಬದಲಿ ಮಾರ್ಗದಲ್ಲಿ ವಾಹನಗಳ ಓಡಾಟಕ್ಕೆ ಸಂಚಾರ ಪೊಲೀಸರು ಅನುವು ಮಾಡಿಕೊಟ್ಟರು.

ಹುಳಿಮಾವು ಮುಖ್ಯರಸ್ತೆ, ಬನ್ನೇರುಘಟ್ಟ ರಸ್ತೆ, ಸಾಗರ ಆಸ್ಪತ್ರೆ, ಗೊರಗುಂಟೆ ಪಾಳ್ಯ ಜಂಕ್ಷನ್, ಹೆಬ್ಬಾಳ ಕೆಳಸೇತುವೆ, ಕಂಟೋನ್ಮೆಂಟ್ ರೈಲ್ವೆ ಕೆಳಸೇತುವೆ, ಇಂದಿರಾನಗರದ ಸೋನಿ ಜಂಕ್ಷನ್, ಉಪ್ಪಾರಪೇಟೆಯ ಎಲೈಟ್‌ ಜಂಕ್ಷನ್‌, ಹೊಸೂರು ರಸ್ತೆಯ ಆನೆಪಾಳ್ಯ ಹಾಗೂ ರೇಸ್‌ಕೋರ್ಸ್‌ ರಸ್ತೆ ಮೇಲೆ ನೀರು ನಿಂತಿತ್ತು. ಇದರಿಂದಾಗಿ ನಿಧಾನಗತಿಯ ಸಂಚಾರವಿತ್ತು.

ಮರ, ಕೊಂಬೆ ಧರೆಗೆ: ನಟ ಯಶ್ ಅವರ ಕತ್ರಿಗುಪ್ಪೆಯಲ್ಲಿನ ನಿವಾಸದ ಬಳಿ ಹಾಗೂ ಸಂಜಯನಗರದ ಕೆಇಬಿ ಲೇಔಟ್‌ನ 5ನೇ ಕ್ರಾಸ್‌ನಲ್ಲಿ ಎರಡು ಮರಗಳು ಬುಡಸಮೇತ ಉರುಳಿಬಿದ್ದವು.

ಕೋರಮಂಗಲದ ಸೇಂಟ್‌ ಜಾನ್ಸ್ ಆಸ್ಪತ್ರೆ ಹಾಗೂ ಗಾಯಿತ್ರಿ ನಗರದ ದೇವಯ್ಯ ಪಾರ್ಕ್‌ ಬಳಿ ಎರಡು ಮರಗಳ ಕೊಂಬೆಗಳು ಮುರಿದು ರಸ್ತೆ ಮೇಲೆ ಬಿದ್ದಿವೆ. ಬಿಬಿಎಂಪಿ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಬಿಬಿಎಂಪಿ ಸಿಬ್ಬಂದಿಯೊಬ್ಬರು ತಿಳಿಸಿದರು.

ನೆಲಮಂಗಲದಲ್ಲಿ ಭಾರಿ ಮಳೆ: ಕೋಡಿ ಬಿದ್ದ ಕೆರೆಗಳು
ನೆಲಮಂಗಲ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಭಾರಿ ಮಳೆ ಸುರಿದಿದ್ದು, ನೆಲಮಂಗಲ ಹಾಗೂ ಭಿನ್ನಮಂಗಲ ಕೆರೆಗಳು ತುಂಬಿ ಕೋಡಿ ಹರಿದಿವೆ.

ಪಟ್ಟಣದ ಕೆಲ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಹಿಪ್ಪೆ ಆಂಜನೇಯ ಬಡಾವಣೆ, ಗಜಾರಿಯಾ ಬಡಾವಣೆ, ಭೈರವೇಶ್ವರ ಬಡಾವಣೆ, ಚನ್ನಪ್ಪ ಬಡಾವಣೆ, ಜ್ಯೋತಿನಗರ ಹಾಗೂ ಸುಭಾಷ್‌ ನಗರ ಮಂಗಳವಾರ ಬೆಳಿಗ್ಗೆವರೆಗೆ ಜಲಾವೃತಗೊಂಡಿದ್ದವು.

ಮನೆಗಳಿಗೆ ನೀರು ನುಗ್ಗಿದ್ದರಿಂದ ದವಸ–ಧಾನ್ಯ, ಪೀಠೋಪಕರಣಗಳು ಹಾಳಾದವು. ನಿವಾಸಿಗಳು ರಾತ್ರಿ ಪೂರ್ತಿ ಜಾಗರಣೆ ಮಾಡುವಂತಾಯಿತು.

ಕುಸಿದ ಗೋಡೆ: ಮಲ್ಲಾಪುರದಲ್ಲಿ ಪುಟ್ಟಯ್ಯ, ವೆಂಕಟೇಶ್‌ಮೂರ್ತಿ ಅವರಿಗೆ ಸೇರಿದ ಎರಡು ಮನೆಗಳ ಗೋಡೆಗಳು ಕುಸಿದಿವೆ. ಭೈರವೇಶ್ವರ ಲೇಔಟ್‌ನ ರಾಜಕಾಲುವೆ ಪಕ್ಕದ ಸೈಯದ್‌ ಅಲೀಮ್‌ ಹಾಗೂ ಪವನ್‌ ಎಂಬುವವರಿಗೆ ಸೇರಿದ ಮನೆಗಳ ಕಾಂಪೌಂಡ್‌ ಸಹ ಕುಸಿದಿದೆ. ಚನ್ನಪ್ಪ ಬಡಾವಣೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ನೀರಿನಲ್ಲಿ ಮುಳುಗಿದ್ದವು.‌

Read More

Comments
ಮುಖಪುಟ

ಕನಿಷ್ಠ ಮೂಲವೇತನ ₹16,350ಕ್ಕೆ ಹೆಚ್ಚಳ?

ನೌಕರರ ಆರಂಭಿಕ ವೇತನ ಶ್ರೇಣಿ ಅಂದರೆ ‘ಡಿ’ ಗ್ರೂಪ್‌ ನೌಕರರಿಗೆ ಮೂಲವೇತನ ₹9,600 ಇದ್ದು, ತುಟ್ಟಿಭತ್ಯೆ ಈಗ ಶೇ 45.25ರಷ್ಟಿದೆ. ಬೆಂಗಳೂರಿನಲ್ಲಿ ಮನೆಬಾಡಿಗೆ ಭತ್ಯೆ ಮೂಲವೇತನದ ಶೇ 30ರಷ್ಟಿದೆ.

ರಾಹುಲ್‌ ಯುಗಾರಂಭ; ಸೋನಿಯಾ ಭಾವುಕ ವಿದಾಯ

ಸತತ 19 ವರ್ಷಗಳ ಕಾಲ ಪಕ್ಷದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಸೋನಿಯಾ ಗಾಂಧಿ, ಸಾವಿರಾರು ಬೆಂಬಲಿಗರು ಮತ್ತು ಕಾರ್ಯಕರ್ತರೆದುರು ತಮ್ಮ ಪುತ್ರ ರಾಹುಲ್‌ಗೆ ಅಧಿಕಾರ ಹಸ್ತಾಂತರಿಸಿದರು.

 

ಮುಖ್ಯಮಂತ್ರಿಗೆ ‘ಚಿನ್ನದ ಕಿರೀಟ’ ಉಡುಗೊರೆ!

ಚಿನ್ನದ ಕಿರೀಟದ ತೂಕ 500 ಗ್ರಾಂ ಎಂದು ಕೆಲವರು, 250 ಗ್ರಾಂ ಎಂದೂ ಇನ್ನು ಕೆಲವರು ತಿಳಿಸಿದರು. ‘ಕಿರೀಟದ ಅಂದಾಜು ಮೌಲ್ಯ ₹5 ಲಕ್ಷ. ಖಡ್ಗದ ಮೌಲ್ಯ ₹30 ಸಾವಿರ ಹಾಗೂ ಹಾರದ ಮೌಲ್ಯ ₹25 ಸಾವಿರ ಇರಬಹುದು’ ಎಂದು ಶಾಸಕರ ಆಪ್ತ ಮೂಲಗಳು ಹೇಳುತ್ತವೆ.

ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

ಒಬಾಮ ಸರ್ಕಾರದ ರೂಪಿಸಿದ್ದ ನಿಯಮಾವಳಿಯಲ್ಲಿ ಬದಲಾವಣೆ ತರುವ ಆಲೋಚನೆ ಇದೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಸಂಗತ

ನಿರ್ಭಯಾ ನೆನಪು– ವರ್ಮಾ ವರದಿ

ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ನ್ಯಾಯಮೂರ್ತಿ ವರ್ಮಾ ವರದಿ ಒಂದು ಅಪರೂಪದ ದಾಖಲೆ. ಒಂದು ಬೃಹತ್ ಆಂದೋಲನದ ಫಲ. ಮಹಿಳಾ ಚಳವಳಿಗಳು ಇಂತಹ ವರದಿಗಳ ಅನುಷ್ಠಾನಕ್ಕೆ ಆಗ್ರಹಿಸಬೇಕು

ಪೇಜಾವರ ಶ್ರೀಗಳಿಗೆ... ಸ್ಪಷ್ಟನೆಗಾಗಿ ಪತ್ರ

ಸಂವಿಧಾನದ ಯಾವ ವಿಧಿಗಳ ಬಗ್ಗೆ ತಮಗೆ ತಕರಾರಿದೆ? ತಾವು ಬಯಸುವ ಬದಲಾವಣೆ ಏನು?

ಭಾರತ–ಬ್ರಿಟನ್‌ ನಡುವೆ ‘ಸಜೀವ ಸೇತುವೆ’

ದ್ವಿಪಕ್ಷೀಯ ಸಂಬಂಧ ವೃದ್ಧಿ ಕ್ರಮ: ಬೆಂಗಳೂರಿನಲ್ಲಿ ವೀಸಾ ಕೇಂದ್ರ

ಮನೆಪಾಠಕ್ಕೆ ಮದ್ದುಂಟೆ?

ಖಾಸಗಿ ಪಾಠ ವ್ಯವಸ್ಥೆಯು ಸಾಂಸ್ಥಿಕ ರೂಪದ ಶಾಲೆ–ಕಾಲೇಜುಗಳಿಗೆ ಪರ್ಯಾಯವಾಗಿ ಬೆಳೆಯತೊಡಗಿರುವುದು ಸಾಮಾಜಿಕ ದೃಷ್ಟಿಕೋನದಿಂದ ಸಮ್ಮತವೆನಿಸುವುದಿಲ್ಲ

ಮುಕ್ತಛಂದ

‌ಅಂಗೈಯಲ್ಲೇ ಸ್ವರ್ಗ ಕಾಣಬೇಕೆ?

ಯುವ ಮನಸ್ಸುಗಳ ಉತ್ಸಾಹ, ನವೋನ್ಮಾದಗಳನ್ನು ವೃದ್ಧಿಸುತ್ತಿರುವ ಕಾಲಘಟ್ಟದ ಆರಂಭದ ದಿನಗಳಲ್ಲಿ ನಾವಿದ್ದೇವೆ. ಇಂದಿನ ಹದಿಹರೆಯ, ಯುವಜನರ ಭಾವೋದ್ರೇಕದ ವರ್ತನೆಗಳು ನವೀನ ರೀತಿಯದ್ದಾಗಿದ್ದು ‘ಅದರಿಂದ ಕೆಡಕು’ ಎನ್ನುವ ಭಾವನೆ ವ್ಯಾಪಕ. ಮನೆ, ಸಮುದಾಯದ ಅಸಹನೆ ಹೆಚ್ಚುತ್ತಿರುವುದಕ್ಕೆ ತಂತ್ರಜ್ಞಾನ ಒದಗಿಸಿರುವ ಸಲಕರಣೆಗಳ ಪ್ರಭಾವವಿದೆ ಎನ್ನುವುದು ನಿಜವಿರಲೂಬಹುದು.

ಟಿ.ಆರ್‌.ಪಿ. ಎಂಬ ಚಾಲೂ ಚೆಲುವೆ!

ಟಿ.ಆರ್‌.ಪಿ. ಗಳಿಕೆಗಾಗಿಯೇ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಇಲ್ಲಿ ಪ್ರತಿಯೊಂದೂ ಮಾರುಕಟ್ಟೆ ಸರಕಾಗುತ್ತದೆ. ನೀವು ಪ್ರತಿಯೊಂದನ್ನೂ ಮಾರಬೇಕು. ಸುದ್ದಿಯನ್ನೂ ಅಷ್ಟೇ, ಧಾರಾವಾಹಿಯನ್ನೂ ಅಷ್ಟೇ. ಈ ಸರಕು ಸಂಸ್ಕೃತಿ ನಮ್ಮ ನೋಟವನ್ನು ಆಳುತ್ತದೆ. ನಮ್ಮ ಮೌಲ್ಯಗಳನ್ನು ಪಲ್ಲಟಗೊಳಿಸುತ್ತದೆ. ನಮ್ಮ ಅತಿ ಖಾಸಗಿ ನಂಟುಗಳನ್ನೂ ಅಲ್ಲಾಡಿಸುತ್ತದೆ.

ಟಿ.ವಿ. ವಾಹಿನಿಗಳ ನೈತಿಕ ಪ್ರಜ್ಞೆ

ಟಿ.ವಿ. ಚಾನೆಲ್‌ಗಳ ನಿರ್ವಾಹಕರೇ ಸ್ವಲ್ಪ ಸಾಮಾಜಿಕ ಕಳಕಳಿಯಲ್ಲದಿದ್ದರೂ ಜವಾಬ್ದಾರಿ ತೋರಿದರೆ ಆದೀತು. ಆದರೆ, ಪರಸ್ಪರ ತುಳಿದೇ ಮೇಲೆ ಬರುವ ಕ್ರೂರ ಸ್ಪರ್ಧೆಯ ಸುಳಿಯಲ್ಲಿ ಸಿಲುಕಿರುವ ಟಿ.ವಿ. ಸಂಸ್ಥೆಗಳಿಗೆ ಈ ನೈತಿಕತೆ ತುಂಬಾ ದುಬಾರಿಯಾಗಿಬಿಡುತ್ತದೆ. ಉದಾಹರಣೆಗೆ ಎಲ್ಲಾ ಟಿ.ವಿ. ಸಂಸ್ಥೆಗಳು ಅನುಸರಿಸಲೇಬೇಕಾದ ಹಲವು ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳಲ್ಲಿ ಒಂದು, ಕೇಬಲ್ ಟೆಲಿವಿಷನ್ ರೆಗ್ಯುಲೇಷನ್ ಆಕ್ಟ್ 1995.

ಮಧ್ಯಕಾಲದ ಹೆಣ

ಹೆಣ ಹಿರಿಹಿರಿ ಹಿಗ್ಗುತ್ತಿದೆ
ತಾನು ದೆವ್ವಗಿವ್ವ ಏನೂ ಆಗಿಲ್ಲವೆಂದು
ಆದರೆ ಭಯವೋ ಭಯ
ತನ್ನವೇ ಕೈ-ಕಾಲು ಕಣ್ಣು ತಲೆ ನೋಡಿಕೊಳ್ಳಲು!