ಜ್ಯೋತಿಷಿ ಮಾತು ನಂಬಿ ಸಾವಿರ ಮಾನಿಟರ್ ಕದ್ದ!

  • ಜ್ಯೋತಿಷಿ ಕೃಷ್ಣರಾಜು ಅಲಿಯಾಸ್ ಸ್ವಾಮಿ

12 Oct, 2017
ಪ್ರಜಾವಾಣಿ ವಾರ್ತೆ

ಬೆಂಗಳೂರು: ಜ್ಯೋತಿಷಿಯ ಮಾತು ಕೇಳಿ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯ 1,000 ಮಾನಿಟರ್‌ಗಳನ್ನು ಬೇರೆಯವರಿಗೆ ಮಾರಿದ್ದ ದಾಮೋದರ್ (42) ಎಂಬಾತ ಈಗ ಸಿದ್ಧಾಪುರ ಪೊಲೀಸರಿಗೆ ಸಿಕ್ಕಿಬಿದ್ದು ಪರಪ್ಪನ ಅಗ್ರಹಾರ ಕಾರಾಗೃಹದ ಅತಿಥಿಯಾಗಿದ್ದಾನೆ.

ದಾಮೋದರ್ ಮಾತ್ರವಲ್ಲದೆ, ಕಂಪೆನಿಗೆ ವಂಚಿಸುವಂತೆ ಆತನಿಗೆ ಪ್ರಚೋದನೆ ನೀಡಿದ್ದ ಜ್ಯೋತಿಷಿ ಕೃಷ್ಣರಾಜು ಅಲಿಯಾಸ್ ಸ್ವಾಮಿ (58), ಕೃತ್ಯಕ್ಕೆ ನೆರವಾಗಿದ್ದ ಜಯನಗರದ ಸರವಣ (40), ಶ್ರೀನಿವಾಸ್ ಅಲಿಯಾಸ್ ಸೀನು (34) ಹಾಗೂ ಸಿದ್ಧಾಪುರದ ರಾಮ್‌ದಾಸ್ (38) ಕೂಡ ಕಂಬಿ ಎಣಿಸುತ್ತಿದ್ದಾರೆ.

ಸುಧಾಮನಗರ ನಿವಾಸಿಯಾದ ದಾಮೋದರ್, ಹೊಸೂರು ರಸ್ತೆಯಲ್ಲಿರುವ ‘ಸೂಪರ್‌ಟ್ರಾನ್‌ ಎಲೆಕ್ಟ್ರಾನಿಕ್ಸ್‌’ ಕಂಪೆನಿಯಲ್ಲಿ ಏಳು ವರ್ಷಗಳಿಂದ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಅದು ‘ಡೆಲ್‌’ ಕಂಪೆನಿಯ ಮಾನಿಟರ್‌ಗಳನ್ನು ಅಧಿಕೃತವಾಗಿ ಮಾರಾಟ ಮಾಡುತ್ತಿರುವ ಕಂಪೆನಿ.

‘ಕಂಪೆನಿಯ ಬೇಡಿಕೆ ಮೇರೆಗೆ ತಮಿಳುನಾಡಿನ ಪೆರಂಬದೂರಿನಿಂದ ಆ.3 ಹಾಗೂ ಆ.11ರಂದು ಸಾವಿರ ಮಾನಿಟರ್‌ಗಳನ್ನು ‘ಬ್ಲೂ ಡಾರ್ಟ್‌’ ಕೊರಿಯರ್ ಕಂಪೆನಿಯ ವಾಹನದಲ್ಲಿ ಕಳುಹಿಸಲಾಗಿತ್ತು. ಆ ಮಾನಿಟರ್‌ಗಳನ್ನು ಗೆಳೆಯನ ಮನೆಗೆ ಡೆಲಿವರಿ ಮಾಡಿಸಿದ್ದ ದಾಮೋದರ್, ನಂತರ ಸಹಚರರ ಮೂಲಕ ಎಸ್‌.ಪಿ. ರಸ್ತೆಯ ಅಂಗಡಿಗಳಲ್ಲಿ ಅವುಗಳನ್ನು ಮಾರಾಟ ಮಾಡಿಸಿದ್ದ’ ಎಂದು ತನಿಖಾಧಿಕಾರಿಗಳು ಹೇಳಿದರು.

ಮಾನಿಟರ್‌ಗಳನ್ನು ಕಳುಹಿಸಿದ ಕೆಲ ದಿನಗಳ ನಂತರ ಡೆಲ್‌ ಕಂಪೆನಿಯು ಬಿಲ್ ಪಾವತಿಸುವಂತೆ ಇ–ಮೇಲ್ ಮೂಲಕ ‘ಸೂಪರ್‌ಟ್ರಾನ್‌ ಎಲೆಕ್ಟ್ರಾನಿಕ್ಸ್‌’ ಆಡಳಿತ ಮಂಡಳಿಯನ್ನು ಕೋರಿತ್ತು. ಅದಕ್ಕೆ, ‘ಮಾನಿಟರ್‌ಗಳೇ ಬಂದಿಲ್ಲ. ಬಿಲ್ ಹೇಗೆ ಕಟ್ಟುವುದು’ ಎಂದು ಆಡಳಿತ ಮಂಡಳಿ ಪ್ರತಿಕ್ರಿಯಿಸಿತ್ತು.

ಇದರಿಂದ ಗಾಬರಿಗೊಂಡ ಡೆಲ್ ಕಂಪೆನಿ ಸಿಬ್ಬಂದಿ, ‘ಬ್ಲೂ ಡಾರ್ಟ್‌’ ಮೂಲಕ ಮಾನಿಟರ್‌ಗಳನ್ನು ಕಳುಹಿಸಿರುವ ಹಾಗೂ ಸರಕನ್ನು ಸ್ವೀಕರಿಸಿರುವುದಾಗಿ ತಮ್ಮ ಸಿಬ್ಬಂದಿಯೇ ಸಹಿ ಮಾಡಿರುವ ವಿಚಾರವನ್ನು ತಿಳಿಸಿದ್ದರು. ಆ ನಂತರ ಆಡಳಿತ ಮಂಡಳಿಯವರು ಸಿದ್ಧಾಪುರ ಠಾಣೆಗೆ ದೂರು ಕೊಟ್ಟಿದ್ದರು.

‘ಕಂಪೆನಿಯ ಎಲ್ಲ ನೌಕರರನ್ನೂ ವಿಚಾರಣೆಗೆ ಒಳಪಡಿಸಿದೆವು. ದಾಮೋದರ್ ತೊದಲಿಕೆ ಉತ್ತರಗಳನ್ನು ನೀಡುತ್ತಿದ್ದ. ಆತನ ಹೇಳಿಕೆಯಲ್ಲೂ ಸಾಕಷ್ಟು ಗೊಂದಲಗಳಿದ್ದವು. ಅಲ್ಲದೆ, ಸರಕನ್ನು ಸ್ವೀಕರಿಸಿರುವುದಾಗಿ ಆತನೇ ಬೇರೊಬ್ಬರ ಹೆಸರಿನಲ್ಲಿ ಸಹಿ ಮಾಡಿದ್ದ. ಬರವಣಿಗೆ ಶೈಲಿ ಗಮನಿಸಿದಾಗ ಅದು ಖಾತ್ರಿಯಾಯಿತು. ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಆತ ನೀಡಿದ ಮಾಹಿತಿ ಆಧರಿಸಿ ಉಳಿದವರನ್ನೂ ಬಂಧಿಸಲಾಯಿತು. ಸದ್ಯ 671 ಮಾನಿಟರ್‌ಗಳು ಹಾಗೂ ₹ 10.50 ಲಕ್ಷ ನಗದನ್ನು ಜಪ್ತಿ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಭವಿಷ್ಯ ಹಾಳು ಮಾಡಿದ ಜ್ಯೋತಿಷಿ: ‘ಏಳು ವರ್ಷಗಳಿಂದ ಪ್ರಾಮಾಣಿಕತೆಯಿಂದ ದುಡಿದಿದ್ದೆ. ಕಂಪೆನಿಯ ಸಂಬಳವನ್ನೇ ನಂಬಿ ಬದುಕುತ್ತಿದ್ದೆ. ಈ ನಡುವೆ ಆರ್ಥಿಕ ಸಂಕಷ್ಟ ಎದುರಾಯಿತು. ಸಾಲದ ಸುಳಿಯಲ್ಲಿ ಸಿಲುಕಿದ ನಾನು, ಹೇಗಾದರೂ ಮಾಡಿ ಸಂಕಷ್ಟದಿಂದ ಹೊರಬರಬೇಕು ಎಂದು ನಿರ್ಧರಿಸಿದೆ’ ಎಂದು ದಾಮೋದರ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾನೆ.

‘ಮಲ್ಲಿಗೆ ಆಸ್ಪತ್ರೆ ಸಮೀಪದ ಅಶ್ವತ್ಥಕಟ್ಟೆಯ ಬಳಿ ಕೃಷ್ಣರಾಜು ಎಂಬುವರು ಭವಿಷ್ಯ ಹೇಳುತ್ತಾರೆ, ಅವರನ್ನು ಸಂಪರ್ಕಿಸಿದರೆ ಕಷ್ಟಗಳು ನಿವಾರಣೆಯಾಗುತ್ತವೆ ಎಂದು ಪರಿಚಿತರು ಹೇಳಿದ್ದರು. ಅಂತೆಯೇ ಅವರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಹೇಳಿಕೊಂಡೆ. ಕೆಲಸ ಮಾಡುತ್ತಿರುವ ಕಂಪೆನಿಯ ಬಗ್ಗೆಯೂ ತಿಳಿಸಿದ್ದೆ. ಆಗ ಅವರು, ‘ಆಷಾಢ ಕಳೆದ ಮೇಲೆ ಶ್ರಾವಣದಲ್ಲಿ ನಿನಗೆ ಒಳ್ಳೆ ಭವಿಷ್ಯ ಬರುತ್ತದೆ. ನಾನು ಹೇಳಿದ ಹಾಗೆ ಮಾಡಿದರೆ ನೆಮ್ಮದಿಯಾಗಿ ಬದುಕಬಹುದು’ ಎಂದು ಹೇಳಿ ಮಂತ್ರಿಸಿದ ನಿಂಬೆ ಹಣ್ಣನ್ನು ಕೊಟ್ಟು ಕಳುಹಿಸಿದ್ದರು.’

‘ಅವರ ಸೂಚನೆಯಂತೆ ಮೂರು ದಿನಗಳ ಬಳಿಕ ಪುನಃ ಭೇಟಿಯಾದೆ. ಆಗ ಅವರು, ‘ನೀನು ಕೆಲಸ ಮಾಡುವ ಕಂಪೆನಿಗೆ ಬರುವ ಮಾನಿಟರ್‌ಗಳನ್ನು ಬೇರೆಯವರಿಗೆ ಮಾರಾಟ ಮಾಡು. ತಪ್ಪು ಲೆಕ್ಕ ತೋರಿಸಿ ಆಡಳಿತ ಮಂಡಳಿಗೆ ವಂಚನೆ ಮಾಡು. ಇದು ಯಾರಿಗೂ ಗೊತ್ತಾಗುವುದಿಲ್ಲ. ನೀನು ಶ್ರೀಮಂತನಾಗಲು ಇರುವುದು ಇದೊಂದೇ ದಾರಿ. ಭವಿಷ್ಯವಾಣಿಯೂ ಇದನ್ನೇ ನುಡಿಯುತ್ತಿದೆ’ ಎಂದು ಹೇಳಿದರು.

‘ನಂತರ ನನ್ನ ಬಾಮೈದ ರಾಮ್‌ದಾಸ್, ಸ್ನೇಹಿತ ರಾಜೇಂದ್ರ, ಬ್ಲೂ ಡಾರ್ಟ್‌ ಕಂಪೆನಿಗೆ ತಮ್ಮ ವಾಹನಗಳನ್ನು ಬಾಡಿಗೆಗೆ ಬಿಟ್ಟಿದ್ದ ಸರವಣ ಹಾಗೂ ಸೀನು ಅವರನ್ನೂ ಜ್ಯೋತಿಷಿ ಬಳಿ ಕರೆದುಕೊಂಡು ಹೋದೆ. ದಾಮೋದರ್‌ಗೆ ನೆರವಾಗುವಂತೆ ಅವರಿಗೂ ಮರುಳು ಮಾಡಿದ ಜ್ಯೋತಿಷಿ, ‘ಮಾನಿಟರ್‌ಗಳನ್ನು ಮಾರಾಟ ಮಾಡಿದ ಬಳಿಕ ನನಗೂ ಅದರಲ್ಲಿ ಪಾಲು ಕೊಡಿ’ ಎಂದು ಹೇಳಿದ್ದರು.

‘ಆ.3 ಹಾಗೂ ಆ.11ರಂದು ಪೆರಂಬದೂರಿನಿಂದ ಬಂದ ಮಾನಿಟರ್‌ಗಳನ್ನು ರಾಜೇಂದ್ರನ ಮನೆಯಲ್ಲಿ ಇಳಿಸಿದೆವು. ಅಲ್ಲದೆ, ಮಾನಿಟರ್‌ಗಳು ಡೆಲಿವರಿ ಆಗಿರುವುದಾಗಿ ಸಹಿ ಮಾಡಿ ಬ್ಲೂ ಡಾರ್ಟ್‌ಗೆ ವೋಚರ್ ಕಳುಹಿಸಿದ್ದೆವು’ ಎಂದು ದಾಮೋದರ್ ಹೇಳಿಕೆ ಕೊಟ್ಟಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದರು.

‘ಇಷ್ಟೊಂದು ಕದಿಯುತ್ತಾರೆಂದು ಗೊತ್ತಿರಲಿಲ್ಲ’
‘ಸಾಲದ ಸುಳಿಯಲ್ಲಿ ಸಿಲುಕಿರುವುದಾಗಿ ದಾಮೋದರ್ ಹೇಳಿದ್ದರಿಂದ ಕಂಪೆನಿಯ ನಾಲ್ಕೈದು ಮಾನಿಟರ್‌ಗಳನ್ನು ಮಾರಾಟ ಮಾಡಿ, ಸಾಲ ತೀರಿಸಿಕೊಳ್ಳುವಂತೆ ತಮಾಷೆಗೆ ಹೇಳಿದ್ದೆ. ಆದರೆ, ಅವರು ಸಾವಿರ ಮಾನಿಟರ್‌ಗಳನ್ನು ಕಳ್ಳತನ ಮಾಡುತ್ತಾರೆಂಬುದು ನನಗೆ ಗೊತ್ತಿರಲಿಲ್ಲ’ ಎಂದು ಜ್ಯೋತಿಷಿ ಹೇಳಿಕೆ ಕೊಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದರು.

ಜಿಎಸ್‌ಟಿ ನೆಪದಲ್ಲಿ ಮಾರಾಟ
ಕಂಪ್ಯೂಟರ್ ಹಾಗೂ ಮಾನಿಟರ್ ವ್ಯಾಪಾರಿ ಅರವಿಂದ್ ಎಂಬುವರನ್ನು ಸಂಪರ್ಕಿಸಿದ ಆರೋಪಿಗಳು, ‘ಜಿಎಸ್‌ಟಿ ಸಮಸ್ಯೆಯಿಂದ ಈ ಮಾನಿಟರ್‌ಗಳು ಗೋದಾಮಿನಲ್ಲೇ ಉಳಿದಿದ್ದವು. ಈಗ ಕಡಿಮೆ ಬೆಲೆಗೆ ಮಾರಾಟ ಮಾಡಲು ತೀರ್ಮಾನಿಸಿದ್ದೇವೆ’ ಎಂದು ಹೇಳಿದ್ದರು. ಅದನ್ನು ನಂಬಿದ ಅರವಿಂದ್ ಅವರು ನಗರದ ಎಸ್‌.ಪಿ. ರಸ್ತೆಯಲ್ಲಿರುವ 15 ಅಂಗಡಿಗಳಿಗೆ ಅವುಗಳನ್ನು ಮಾರಾಟ ಮಾಡಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

Read More

Comments
ಮುಖಪುಟ

ಕನಿಷ್ಠ ಮೂಲವೇತನ ₹16,350ಕ್ಕೆ ಹೆಚ್ಚಳ?

ನೌಕರರ ಆರಂಭಿಕ ವೇತನ ಶ್ರೇಣಿ ಅಂದರೆ ‘ಡಿ’ ಗ್ರೂಪ್‌ ನೌಕರರಿಗೆ ಮೂಲವೇತನ ₹9,600 ಇದ್ದು, ತುಟ್ಟಿಭತ್ಯೆ ಈಗ ಶೇ 45.25ರಷ್ಟಿದೆ. ಬೆಂಗಳೂರಿನಲ್ಲಿ ಮನೆಬಾಡಿಗೆ ಭತ್ಯೆ ಮೂಲವೇತನದ ಶೇ 30ರಷ್ಟಿದೆ.

ರಾಹುಲ್‌ ಯುಗಾರಂಭ; ಸೋನಿಯಾ ಭಾವುಕ ವಿದಾಯ

ಸತತ 19 ವರ್ಷಗಳ ಕಾಲ ಪಕ್ಷದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ ಸೋನಿಯಾ ಗಾಂಧಿ, ಸಾವಿರಾರು ಬೆಂಬಲಿಗರು ಮತ್ತು ಕಾರ್ಯಕರ್ತರೆದುರು ತಮ್ಮ ಪುತ್ರ ರಾಹುಲ್‌ಗೆ ಅಧಿಕಾರ ಹಸ್ತಾಂತರಿಸಿದರು.

 

ಮುಖ್ಯಮಂತ್ರಿಗೆ ‘ಚಿನ್ನದ ಕಿರೀಟ’ ಉಡುಗೊರೆ!

ಚಿನ್ನದ ಕಿರೀಟದ ತೂಕ 500 ಗ್ರಾಂ ಎಂದು ಕೆಲವರು, 250 ಗ್ರಾಂ ಎಂದೂ ಇನ್ನು ಕೆಲವರು ತಿಳಿಸಿದರು. ‘ಕಿರೀಟದ ಅಂದಾಜು ಮೌಲ್ಯ ₹5 ಲಕ್ಷ. ಖಡ್ಗದ ಮೌಲ್ಯ ₹30 ಸಾವಿರ ಹಾಗೂ ಹಾರದ ಮೌಲ್ಯ ₹25 ಸಾವಿರ ಇರಬಹುದು’ ಎಂದು ಶಾಸಕರ ಆಪ್ತ ಮೂಲಗಳು ಹೇಳುತ್ತವೆ.

ಎಚ್‌1ಬಿ ವೀಸಾ ನಿಯಮ ಬದಲು ಪತ್ನಿ–ಪತಿಯ ಉದ್ಯೋಗಕ್ಕೆ ಕತ್ತರಿ?

ಒಬಾಮ ಸರ್ಕಾರದ ರೂಪಿಸಿದ್ದ ನಿಯಮಾವಳಿಯಲ್ಲಿ ಬದಲಾವಣೆ ತರುವ ಆಲೋಚನೆ ಇದೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.

ಸಂಗತ

ನಿರ್ಭಯಾ ನೆನಪು– ವರ್ಮಾ ವರದಿ

ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ನ್ಯಾಯಮೂರ್ತಿ ವರ್ಮಾ ವರದಿ ಒಂದು ಅಪರೂಪದ ದಾಖಲೆ. ಒಂದು ಬೃಹತ್ ಆಂದೋಲನದ ಫಲ. ಮಹಿಳಾ ಚಳವಳಿಗಳು ಇಂತಹ ವರದಿಗಳ ಅನುಷ್ಠಾನಕ್ಕೆ ಆಗ್ರಹಿಸಬೇಕು

ಪೇಜಾವರ ಶ್ರೀಗಳಿಗೆ... ಸ್ಪಷ್ಟನೆಗಾಗಿ ಪತ್ರ

ಸಂವಿಧಾನದ ಯಾವ ವಿಧಿಗಳ ಬಗ್ಗೆ ತಮಗೆ ತಕರಾರಿದೆ? ತಾವು ಬಯಸುವ ಬದಲಾವಣೆ ಏನು?

ಭಾರತ–ಬ್ರಿಟನ್‌ ನಡುವೆ ‘ಸಜೀವ ಸೇತುವೆ’

ದ್ವಿಪಕ್ಷೀಯ ಸಂಬಂಧ ವೃದ್ಧಿ ಕ್ರಮ: ಬೆಂಗಳೂರಿನಲ್ಲಿ ವೀಸಾ ಕೇಂದ್ರ

ಮನೆಪಾಠಕ್ಕೆ ಮದ್ದುಂಟೆ?

ಖಾಸಗಿ ಪಾಠ ವ್ಯವಸ್ಥೆಯು ಸಾಂಸ್ಥಿಕ ರೂಪದ ಶಾಲೆ–ಕಾಲೇಜುಗಳಿಗೆ ಪರ್ಯಾಯವಾಗಿ ಬೆಳೆಯತೊಡಗಿರುವುದು ಸಾಮಾಜಿಕ ದೃಷ್ಟಿಕೋನದಿಂದ ಸಮ್ಮತವೆನಿಸುವುದಿಲ್ಲ

ಮುಕ್ತಛಂದ

‌ಅಂಗೈಯಲ್ಲೇ ಸ್ವರ್ಗ ಕಾಣಬೇಕೆ?

ಯುವ ಮನಸ್ಸುಗಳ ಉತ್ಸಾಹ, ನವೋನ್ಮಾದಗಳನ್ನು ವೃದ್ಧಿಸುತ್ತಿರುವ ಕಾಲಘಟ್ಟದ ಆರಂಭದ ದಿನಗಳಲ್ಲಿ ನಾವಿದ್ದೇವೆ. ಇಂದಿನ ಹದಿಹರೆಯ, ಯುವಜನರ ಭಾವೋದ್ರೇಕದ ವರ್ತನೆಗಳು ನವೀನ ರೀತಿಯದ್ದಾಗಿದ್ದು ‘ಅದರಿಂದ ಕೆಡಕು’ ಎನ್ನುವ ಭಾವನೆ ವ್ಯಾಪಕ. ಮನೆ, ಸಮುದಾಯದ ಅಸಹನೆ ಹೆಚ್ಚುತ್ತಿರುವುದಕ್ಕೆ ತಂತ್ರಜ್ಞಾನ ಒದಗಿಸಿರುವ ಸಲಕರಣೆಗಳ ಪ್ರಭಾವವಿದೆ ಎನ್ನುವುದು ನಿಜವಿರಲೂಬಹುದು.

ಟಿ.ಆರ್‌.ಪಿ. ಎಂಬ ಚಾಲೂ ಚೆಲುವೆ!

ಟಿ.ಆರ್‌.ಪಿ. ಗಳಿಕೆಗಾಗಿಯೇ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಇಲ್ಲಿ ಪ್ರತಿಯೊಂದೂ ಮಾರುಕಟ್ಟೆ ಸರಕಾಗುತ್ತದೆ. ನೀವು ಪ್ರತಿಯೊಂದನ್ನೂ ಮಾರಬೇಕು. ಸುದ್ದಿಯನ್ನೂ ಅಷ್ಟೇ, ಧಾರಾವಾಹಿಯನ್ನೂ ಅಷ್ಟೇ. ಈ ಸರಕು ಸಂಸ್ಕೃತಿ ನಮ್ಮ ನೋಟವನ್ನು ಆಳುತ್ತದೆ. ನಮ್ಮ ಮೌಲ್ಯಗಳನ್ನು ಪಲ್ಲಟಗೊಳಿಸುತ್ತದೆ. ನಮ್ಮ ಅತಿ ಖಾಸಗಿ ನಂಟುಗಳನ್ನೂ ಅಲ್ಲಾಡಿಸುತ್ತದೆ.

ಟಿ.ವಿ. ವಾಹಿನಿಗಳ ನೈತಿಕ ಪ್ರಜ್ಞೆ

ಟಿ.ವಿ. ಚಾನೆಲ್‌ಗಳ ನಿರ್ವಾಹಕರೇ ಸ್ವಲ್ಪ ಸಾಮಾಜಿಕ ಕಳಕಳಿಯಲ್ಲದಿದ್ದರೂ ಜವಾಬ್ದಾರಿ ತೋರಿದರೆ ಆದೀತು. ಆದರೆ, ಪರಸ್ಪರ ತುಳಿದೇ ಮೇಲೆ ಬರುವ ಕ್ರೂರ ಸ್ಪರ್ಧೆಯ ಸುಳಿಯಲ್ಲಿ ಸಿಲುಕಿರುವ ಟಿ.ವಿ. ಸಂಸ್ಥೆಗಳಿಗೆ ಈ ನೈತಿಕತೆ ತುಂಬಾ ದುಬಾರಿಯಾಗಿಬಿಡುತ್ತದೆ. ಉದಾಹರಣೆಗೆ ಎಲ್ಲಾ ಟಿ.ವಿ. ಸಂಸ್ಥೆಗಳು ಅನುಸರಿಸಲೇಬೇಕಾದ ಹಲವು ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳಲ್ಲಿ ಒಂದು, ಕೇಬಲ್ ಟೆಲಿವಿಷನ್ ರೆಗ್ಯುಲೇಷನ್ ಆಕ್ಟ್ 1995.

ಮಧ್ಯಕಾಲದ ಹೆಣ

ಹೆಣ ಹಿರಿಹಿರಿ ಹಿಗ್ಗುತ್ತಿದೆ
ತಾನು ದೆವ್ವಗಿವ್ವ ಏನೂ ಆಗಿಲ್ಲವೆಂದು
ಆದರೆ ಭಯವೋ ಭಯ
ತನ್ನವೇ ಕೈ-ಕಾಲು ಕಣ್ಣು ತಲೆ ನೋಡಿಕೊಳ್ಳಲು!