ಇದೋ ಇನ್ನೊಂದು ಹೋನರ್ ಫೋನ್

7 Dec, 2017
ಯು.ಬಿ. ಪವನಜ

ಹೋನರ್ ಕಂಪನಿಯ ಹಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆ ಯನ್ನು ಈ ಅಂಕಣದಲ್ಲಿ ನೀಡಲಾಗಿತ್ತು. ಬಹುತೇಕ ಸ್ಮಾರ್ಟ್‌ಫೋನ್ ಕಂಪನಿಗಳಂತೆ ಹೋನರ್ ಕೂಡ ಹಲವು ನಮೂನೆಯ ಮತ್ತು ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ. ಸುಲಭವಾಗಿ ಕೈಗೆಟುಕುವ ಬೆಲೆಯ ಸಾಮಾನ್ಯ ಫೋನ್‌ಗಳಿಂದ ಹಿಡಿದು ಸ್ವಲ್ಪ ದುಬಾರಿ ಬೆಲೆಯ ಫೋನ್‌ಗಳ ತನಕ ಅದರ ವ್ಯಾಪ್ತಿ ಹಬ್ಬಿದೆ. ಹಿಂದೊಮ್ಮೆ ಇದೇ ಅಂಕಣದಲ್ಲಿ ಹೋನರ್ 6 ಎಕ್ಸ್ ಫೋನಿನ ವಿಮರ್ಶೆಯನ್ನು ನೀಡಲಾಗಿತ್ತು. ಹೋನರ್ ಕಂಪನಿ ಆ ಫೋನಿಗೆ ಉತ್ತರಾಧಿಕಾರಿಯನ್ನು ತಂದಿದೆ. ಅದುವೇ ನಾವು ಈ ವಾರ ವಿಮರ್ಶಿಸುತ್ತಿರುವ ಹೋನರ್ 7 ಎಕ್ಸ್ (Honor 7x).

ಇದರ ರಚನೆ ಮತ್ತು ವಿನ್ಯಾಸದಲ್ಲಿ ಹೇಳಿಕೊಳ್ಳುವಂಥದ್ದೇನೂ ಇಲ್ಲವಾದರೂ ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಫೋನನ್ನು ಹಿಡಿದ ಅನುಭವವಾಗುತ್ತದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಎರಡು ನ್ಯಾನೊ ಸಿಮ್ ಅಥವಾ ಒಂದು ನ್ಯಾನೊ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಬಳಸಲಾಗುತ್ತದೆ. ಅಂದರೆ ಮೆಮೊರಿ ಕಾರ್ಡ್ ಹಾಕಿದಾಗ ಎರಡು ಸಿಮ್ ಬಳಸಲು ಸಾಧ್ಯವಿಲ್ಲ.

ಯುಎಸ್‌ಬಿ ಓಟಿಜಿ ಸವಲತ್ತು ಇರುವುದರಿಂದ ಮೆಮೊರಿ ಕಾರ್ಡ್ ಬದಲು ಇದನ್ನು ಬಳಸಬಹುದು. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಹಾಗೂ 3.5 ಮಿ.ಮೀ. ಇಯರ್‌ಫೋನ್ ಕಿಂಡಿಗಳಿವೆ. ಹಿಂಭಾಗದಲ್ಲಿ ಮೇಲ್ಭಾಗದ ಮೂಲೆಯಲ್ಲಿ ಕ್ಯಾಮೆರಾಗಳಿವೆ ಹಾಗೂ ಪಕ್ಕದಲ್ಲಿ ಫ್ಲಾಶ್ ಇದೆ. ಹಿಂಭಾಗದ ಮಧ್ಯದಲ್ಲಿ ಸ್ವಲ್ಪ ಮೇಲುಗಡೆ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚ ತುಂಬಾ ನಯವೂ ಅಲ್ಲ ತುಂಬಾ ದೊರಗೂ ಅಲ್ಲ. ಬೇಕಿದ್ದರೆ ಕವಚವೊಂದನ್ನು ಹಾಕಿಕೊಳ್ಳಬಹುದು.

ಈ ಹೋನರ್ 7 ಎಕ್ಸ್ ಕೂಡ ಒಂದು bezelless ನಮೂನೆಯ ಫೋನ್. ಅಂದರೆ ಇದರ ಪರದೆಗೂ ದೇಹಕ್ಕೂ ಇರುವ ಅನುಪಾತ ಉತ್ತಮವಾಗಿದೆ. ಈ ಫೋನಿನ ಗಾತ್ರ ಇತರೆ 5.5 ಇಂಚು ಪರದೆಯ ಫೋನ್‌ಗಳ ಗಾತ್ರದಷ್ಟೇ ಇದೆಯಾದರೂ ಇದರ ಪರದೆಯ ಗಾತ್ರ ಮಾತ್ರ 5.9 ಇಂಚು ಇದೆ. ಆದುದರಿಂದ ಬೆರಳಚ್ಚು ಸ್ಕ್ಯಾನರ್ ಹಿಂಭಾಗದಲ್ಲಿ ಇದೆ.

ಇದರಲ್ಲಿರುವುದು 5.9 ಇಂಚು ಗಾತ್ರದ 1080 x 2160 ಪಿಕ್ಸೆಲ್ ರೆಸೊಲೂಶನ್‌ನ ಪರದೆ. ಪರದೆಯ ಗುಣಮಟ್ಟ ಉತ್ತಮವಾಗಿದೆ. ಫೋನಿನ ಕೆಲಸದ ವೇಗ ತೃಪ್ತಿದಾಯಕವಾಗಿದೆ. ಇದರ ಅಂಟುಟು ಬೆಂಚ್‌ಮಾರ್ಕ್ 58922 ಇದೆ. ಅಂದರೆ ಮಧ್ಯಮ ವೇಗದ ಫೋನ್ ಎನ್ನಬಹುದು. ವಿಡಿಯೊ ವೀಕ್ಷಣೆ, ಸಾಮಾನ್ಯ ಆಟ ಆಡುವುದು ಎಲ್ಲ ತೃಪ್ತಿದಾಯಕವಾಗಿದೆ. ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಕೂಡ ಸ್ವಲ್ಪ ಮಟ್ಟಿಗೆ ತೃಪ್ತಿದಾಯಕವಾಗಿ ಆಡಬಹುದು.

ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೊಗಳ ವೀಕ್ಷಣೆ ಚೆನ್ನಾಗಿದೆ. 4k ವಿಡಿಯೊ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿಲ್ಲ. ನಿಮ್ಮಲ್ಲಿ ಉತ್ತಮ ಹೆಡ್‌ಸೆಟ್ ಇದ್ದರೆ ಒಂದು ಮಟ್ಟಿಗೆ ತೃಪ್ತಿದಾಯಕವಾದ ಸಂಗೀತಾನುಭವ ಪಡೆಯಬಹುದು.

ಇದರಲ್ಲಿ 12 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್‌ಗಳ ಎರಡು ಕ್ಯಾಮೆರಾಗಳಿವೆ. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಆಯ್ಕೆ ಕೂಡ ಇದೆ. ಆದರೆ ಅದರಲ್ಲಿ ಮ್ಯಾನ್ಯುವಲ್ ಫೋಕಸ್ ಇಲ್ಲ. ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಕಡಿಮೆ ಬೆಳಕಿನಲ್ಲೂ ಒಂದು ಮಟ್ಟಿಗೆ ಉತ್ತಮ ಎನ್ನಬಹುದಾದ ಫೋಟೊ ಬರುತ್ತದೆ. ಸ್ವಂತೀ ಕ್ಯಾಮೆರಾ ಪರವಾಗಿಲ್ಲ.

ಇದರಲ್ಲಿ ಒಂದು ವಿಶೇಷ ಸವಲತ್ತಿದೆ. ವೈಫೈಗೆ ಸಂಪರ್ಕ ಹೊಂದಿದ ನಂತರ ಆ ಸಂಪರ್ಕವನ್ನು ಇತರೆ ಸಾಧನಗಳ ಜೊತೆ (ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್...) ಹಂಚಿಕೊಳ್ಳಬಹುದು.

*

ವಾರದ ಆ್ಯಪ್‌(app): ವಿಮಾನ ಹಾರಿಸಿ
ಒಂದು ಕಾಲದಲ್ಲಿ ಗಣಕಗಳಲ್ಲಿ ವಿಮಾನ ಚಾಲನೆ ಮಾಡುವ (flight simulator) ಪ್ರತ್ಯನುಕರಣೆಯ (simulation) ಆಟಗಳು ತುಂಬ ಜನಪ್ರಿಯವಾಗಿದ್ದವು. ಗಣಕಗಳಲ್ಲಿ ಆಡುತ್ತಿದ್ದ ಬಹುತೇಕ ಆಟಗಳು ಈಗ ಸ್ಮಾರ್ಟ್‌ಫೋನಿಗೂ ಲಗ್ಗೆಯಿಕ್ಕಿವೆ. ಹಾಗಿರುವಾಗ ವಿಮಾನ ಚಾಲನೆಯ ಆಟಗಳೇಕೆ ಹಿಂದುಳಿಯಬೇಕು? ಅಂತಹ ಒಂದು ಉತ್ತಮ ಆಟ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Turboprop Flight Simulator 3D ಎಂದು ಹುಡುಕಬೇಕು ಅಥವಾ http://bit.ly/gadgetloka306 ಜಾಲತಾಣಕ್ಕೆ ಭೇಟಿ ನೀಡಬೇಕು. ಇದು ಮೂರು ಆಯಾಮಗಳ ಆಟ. ಇದನ್ನು ಆಡಬೇಕಿದ್ದರೆ ನಿಮ್ಮ ಫೋನ್ ಸಾಕಷ್ಟು ಶಕ್ತಿಯುತವಾಗಿರಬೇಕು. ಆಟ ಚೆನ್ನಾಗಿದೆ. ವಿಮಾನ, ದೃಶ್ಯಗಳು ವಿಮಾನ ಹಾರಿಸುವ ಅನುಭವವನ್ನು ನೀಡುತ್ತವೆ.

ಗ್ಯಾಜೆಟ್‌ ಸುದ್ದಿ: ಮೈಕ್ರೋಸಾಫ್ಟ್ ಕಿನೆಕ್ಟ್‌ನ ಮರಣ
ಕೆಲವೊಮ್ಮೆ ಮೈಕ್ರೋಸಾಫ್ಟ್ ಕಂಪನಿ ತನ್ನ ಅತ್ಯುತ್ತಮವಾದ ಉತ್ಪನ್ನವನ್ನು ತಾನೇ ಕೊಲ್ಲುತ್ತದೆ. ಇದಕ್ಕೆ ಇತ್ತೀಚೆಗಿನ ಉದಾಹರಣೆ ಕಿನೆಕ್ಟ್ (Kinect). ಇದು ಎಕ್ಸ್‌ಬಾಕ್ಸ್‌ಜೊತೆ ಬರುತ್ತಿತ್ತಾದರೂ ಇದನ್ನು ಪ್ರತ್ಯೇಕವಾಗಿ ಲ್ಯಾಪ್‌ಟಾಪ್ ಅಥವಾ ಗಣಕದ ಜೊತೆಯೂ ಬಳಸಬಹುದು. ಇದಕ್ಕೆ ಹಲವು ತಂತ್ರಾಂಶಗಳನ್ನು ಹಾಗೂ ಆಟಗಳನ್ನು ತಯಾರಿಸಬಹುದು. ಕಿನೆಕ್ಟ್ ಮಾನವ ದೇಹದ ಚಲನೆಯನ್ನು ಅರ್ಥಮಾಡಿಕೊಂಡು ಅದಕ್ಕೆ ಸ್ಪಂದಿಸುತ್ತದೆ.

ಆಟಗಳಲ್ಲದೆ ಶಿಕ್ಷಣದಲ್ಲೂ ಅದನ್ನು ಬಳಸಲಾಗುತ್ತಿದೆ. ಉದಾಹರಣೆಗೆ, ನೀವು ಯೋಗ ಮಾಡುವಾಗ ಅದು ಸರಿಯಿದೆಯೇ ಇಲ್ಲವೇ ಎಂದು ತಿಳಿಸಲು ಅದನ್ನು ಪ್ರೋಗ್ರಾಮ್ ಮಾಡಬಹುದು. ಕಿನೆಕ್ಟ್‌ಗೆ ಹಲವು ಪ್ರಶಸ್ತಿಗಳೂ ಬಂದಿವೆ. ಅತ್ಯುತ್ತಮ ಉಪಕರಣ, ಆಟದ ಸಾಧನ, ಎಂಬ ಪ್ರಶಸ್ತಿಗಳಲ್ಲದೆ ಗಿನ್ನೀಸ್ ದಾಖಲೆಯ ಖ್ಯಾತಿಯೂ ಇದಕ್ಕಿದೆ. ಇಂತಹ ಉತ್ತಮ ಸಾಧನದ ತಯಾರಿಯನ್ನು ಮೈಕ್ರೋಸಾಫ್ಟ್ ನಿಲ್ಲಿಸಿದೆ.

ಗ್ಯಾಜೆಟ್‌ ತರ್ಲೆ: ಇತ್ತೀಚೆಗೆ ಗೂಗಲ್ ಮ್ಯಾಪ್‌ನಲ್ಲಿ ಸ್ಥಳಗಳ ಹೆಸರುಗಳನ್ನು ಕನ್ನಡದಲ್ಲೂ ತೋರಿಸುತ್ತಿದ್ದಾರೆ. ಕೆಲವು ಅನುವಾದಗಳು ವಿಚಿತ್ರವಾಗಿದ್ದು ನಗು ಮೂಡಿಸುತ್ತವೆ. ಕೆಲವು ಉದಾಹರಣೆಗಳು-
l Polar Bear – ಹಿಮ ಕರಡಿ
l Mangammana Palya – ಮಂಗಮ್ಮನ ಪಲ್ಯ
l Bata Show Room – ಬಾತುಕೋಳಿಗಳು ಷೋರೂಮ್
l PM Condiments – ಪ್ರಧಾನಿ ಕಾಂಡಿಮೆಂಟ್ಸ್

ಗ್ಯಾಜೆಟ್‌ ಸಲಹೆ: ಪ್ರಶ್ನೆ: ಫೋನ್ ಜೊತೆ ಬಂದಿರುವ ಲಾಂಚರ್ ಬಿಟ್ಟು ಬೇರೆ ಲಾಂಚರ್ ಬಳಸಿದರೆ ತೊಂದರೆ ಇದೆಯೇ?

ಉ: ನಂಬಿಕಸ್ಥ ಕಂಪನಿಗಳು ತಯಾರಿಸಿದ ಲಾಂಚರ್ ಬಳಸಬಹುದು. ಉದಾ –ಗೂಗಲ್‌ ಲಾಂಚರ್.

Read More

Comments
ಮುಖಪುಟ

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವೀರಶೈವ ಮಹಾಸಭಾ ವಿರೋಧ

ಲಿಂಗಾಯತ ಮತ್ತು ಬಸವತತ್ವ ಒಪ್ಪುವ ವೀರಶೈವರಿಗೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವ ರಾಜ್ಯ ಸರ್ಕಾರದ ತೀರ್ಮಾನಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ.

ಅದ್ದೂರಿಯಾಗಿ ನೆರವೇರಿದ ಚಿಮ್ಮನಚೋಡದ ಸಂಗಮೇಶ್ವರ ರಥೋತ್ಸವ

ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ 7೦ನೇ ಶ್ರೀ ಸಂಗಮೇಶ್ವರ ರಥೋತ್ಸವ ಅದ್ದೂರಿಯಾಗಿ ನೆರವೇರಿತು.

ಲಿಂಗಾಯತ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ: ಸರ್ಕಾರದಿಂದ ಅಧಿಸೂಚನೆ

ರಾಜ್ಯದಲ್ಲಿ ಇನ್ನು ಲಿಂಗಾಯತ ಮತ್ತು ಬಸವತತ್ವ ಒಪ್ಪುವ ವೀರಶೈವರು ಅಲ್ಪಸಂಖ್ಯಾತರು ಎಂದು ಮಾನ್ಯತೆ ನೀಡಿ ರಾಜ್ಯ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಬೆಟ್ಟಿಂಗ್‌ ವಿಷವರ್ತುಲದ 'ದುನಿಯಾ'

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅದರಿಂದ ಹೊರಬರುವುದು ಸುಲಭವಲ್ಲ ಎಂಬ ಸಂದೇಶ ಸಾರುವ 'ಯೋಗಿ ದುನಿಯಾ' ಚಿತ್ರ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳಮುಖವನ್ನು ಅನಾವರಣಗೊಳಿಸುತ್ತದೆ.

ಸಂಗತ

ವಚನ: ಹೊಸಧರ್ಮದ ತಳಹದಿಯಾಗಬಲ್ಲುದೇ?

ವೀರಶೈವದಿಂದ ಪ್ರತ್ಯೇಕಗೊಂಡು ಸ್ವತಂತ್ರ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಡುತ್ತಿರುವವರ ಪರವಾಗಿ ಸಂಪುಟ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ವಚನಗಳೇ ಲಿಂಗಾಯತ ಧರ್ಮ ಪ್ರಮಾಣ ಗ್ರಂಥವೆಂದು ಸಚಿವರೊಬ್ಬರು ಹೇಳಿದ್ದಾರೆ.

ಮೌಲ್ಯ... ಜನತಂತ್ರದ ಅಂತಃಸತ್ವ

ಮತದಾನ ಕೆಳಗಿನಿಂದ ಮೇಲ್ಮುಖವಾಗಿ ಚಲಿಸುವ ಪ್ರಕ್ರಿಯೆ. ಮತದಾರರು ತಮ್ಮ ಮತಗಳನ್ನು ಬೆಂಬಲವಾಗಿ ಅಥವಾ ಪ್ರತಿರೋಧದ ಅಸ್ತ್ರಗಳಾಗಿ ಚಲಾಯಿಸುವ ಸ್ವಾಯತ್ತತೆಯನ್ನು ಪಡೆದಿರುತ್ತಾರೆ. ಈ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಅಂಬೇಡ್ಕರ್‌ ಅವರು ‘ಶಿಕ್ಷಣ, ಸಂಘಟನೆ, ಹೋರಾಟ’ ಎಂಬ ಅನುಭವದ ಅರಿವನ್ನು ಬಹುಜನರಿಗೆ ಕಾಣಿಸಿರುವುದನ್ನು ನಾವು ಮನಗಾಣಬಹುದು.

ಪ್ರಣಾಳಿಕೆಯಲ್ಲಿರಲಿ ಕಾಡಿನ ಹಿತ

ಪರಿಸರ ನಾಶದ ವಿರುದ್ಧ ಈ ಚುನಾವಣಾ ಗಳಿಗೆಯಲ್ಲಾದರೂ ಧ್ವನಿ ಎತ್ತಬೇಕಿದೆ.

ಮೈತ್ರಿ ರಾಜಕೀಯದ ಹೊಸ ಹಾದಿ

ಇದೀಗ ಹಲವು ರಾಜಕೀಯ ಪಕ್ಷಗಳ ‘ಕಾಮನಬಿಲ್ಲು ಒಕ್ಕೂಟ’ ಮಾಡಲೆತ್ನಿಸುತ್ತಿರುವ ಕಾಂಗ್ರೆಸ್, ತನ್ನ ಅಖಿಲ ಭಾರತೀಯ ಪಾರ್ಟಿಯ ಹಮ್ಮು ಬಿಟ್ಟು ಬಾಗಿದರೆ ಮಾತ್ರ ಮುಂಬರುವ ಮಹಾಚುನಾವಣೆಯಲ್ಲಿ ಹೊಸ ಹಾದಿ ಕಂಡೀತು!

ಭೂಮಿಕಾ

ಅಮ್ಮ ಹೇಳಿದ ಸತ್ಯಗಳು!

ಹೆಣ್ಣನ್ನು ಹೆಣ್ಣೇ ಬೆಳೆಸುವ, ರೂಪಿಸುವ ಪರಿ ನಿಜವಾಗಲೂ ಅನನ್ಯವಾದ್ದದ್ದು. ‘ತಾಯಿಯಂತೆ ಮಗಳು’ ಎನ್ನುವ ಗಾದೆ ನಿಜವಾಗಲೂ ಅರ್ಥವನ್ನು ಪಡೆಯುವುದು ಮಗಳನ್ನು ಅಮ್ಮ ‘ಬೆಳೆಸುವ’ ಕ್ಲಿಷ್ಟಕರವಾದ ಸಂದರ್ಭದಲ್ಲಿಯೇ. ಜೀವನದ ಒಂದೊಂದು ಘಟ್ಟದಲ್ಲಿಯೂ ಗೆಳತಿಯಾಗಿ, ತತ್ವಜ್ಞಾನಿಯಾಗಿ, ಮಾರ್ಗದರ್ಶಕಿಯಾಗಿ ಕೈಹಿಡಿದು ನಡೆಸುವವಳೇ ಅಮ್ಮ....

ಅಮ್ಮನೆಂದರೆ ಮಡಿಲು... ಮಗಳೆಂದರೆ ಜೋಗುಳ...

ಅಮ್ಮ–ಮಗಳದ್ದು ಆಪ್ತತೆಯ ಭಾವ ಮೂಡಿಸುವ ಸಂಬಂಧ. ಅಮ್ಮ ಎಂದರೆ ಮಗಳಿಗೆ ಅದೇನೋ ಸೆಳೆತ, ಅಮ್ಮನಿಗೋ ಮಗಳೆಂದರೆ ವರ್ಣಿಸಲಾಗದಷ್ಟು ಪ್ರೀತಿ. ಈ ಸಂಬಂಧ ಹೇಗೆಂದರೆ ಒಮ್ಮೊಮ್ಮೆ ಅಸಾಧ್ಯ ಕಿರಿಕಿರಿ, ಮತ್ತೊಮ್ಮೆ ಭರಪೂರ ಮನೋರಂಜನೆ. ಹೀಗೆ ತಾಯಿ–ಮಗಳದ್ದು ಮಡಿಲಿನ ಜೋಗುಳದ ಲಾಲಿಹಾಡು...

‘ಜೀವನದಲ್ಲಿ ಗುರಿಯೇ ಇಲ್ಲ!’

ನಿಮ್ಮ ವಯಸ್ಸು ಮತ್ತು ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಅದೇನೇ ಇರಲಿ, ಈಗ ನಿಮಗೇ ತಿಳಿದಿದೆ – ನಿಮಗೆ ಯಾವುದೇ ವಿಷಯದ ಮೇಲೂ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ – ಎಂಬುದು. ಮೊದಲು ನಿಮ್ಮ ವ್ಯಕ್ವಿತ್ವದ ಮೇಲೆ ಗಮನವನ್ನು ಹರಿಸಿ.

ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

ನಮ್ಮೆಲ್ಲರ ತಾಯಿ ಪ್ರಕೃತಿ; ಅವಳು ನಮ್ಮನ್ನು ಪೋಷಿಸುವವಳು, ಪೊರೆಯುವವಳು. ಅವಳ ಅಡುಗೆಯಲ್ಲಿ ಸವಿರುಚಿಯೊಡನೆ ಕಹಿರುಚಿಯೂ ಇದೆ. ಸಿಹಿಗೆ ಹಿಗ್ಗಬೇಡ, ಕಹಿಗೆ ಕುಗ್ಗಬೇಡ; ಸಮಚಿತ್ತದ ತಕ್ಕಡಿಯಲ್ಲಿ ಇಟ್ಟು ನನ್ನ ಕೈ ಹಿಡಿದು ನಾ ಕರೆದೊಯ್ಯುವಲ್ಲಿಗೆ ಸರಸರನೇ ನಡೆ ಬೇಗ! – ಎನ್ನುತ್ತಾಳೆ. ಈಗ ಎಷ್ಟನೇ ಸಲವೋ ಅವಳಿಗೇ ಗೊತ್ತು, ಯುಗಾದಿ ಮತ್ತೆ ಬಂದಿದೆ...