ಶಾಂತಿಯ ಲೋಕದ ಅಂಗಳಕೇರಿ...

14 Jan, 2018
ಮಹತಿ

ಆಗಸದ ತುತ್ತತುದಿಯಲ್ಲಿ ಪಕ್ಷಿಯೊಂದು ಹಾರುತ್ತಿದೆ. ಕೊನೆಮೊದಲಿಲ್ಲದ ಆ ತುದಿ ಶಾಂತಿಯ ಬಯಲಿನಂತೆಯೂ ಕಡಲಿನಂತೆಯೂ ಕಾಣಿಸುತ್ತದೆ. ಪಕ್ಷಿಯೊಂದು ತನ್ನ ರೆಕ್ಕೆಗಳಿಂದ ಆ ಬಯಲನ್ನು ಕಡೆಯುತ್ತದೆ. ಅದು ಶಾಂತಿಯನ್ನು ಪ್ರತಿನಿಧಿಸುವ ಪಕ್ಷಿಯೆಂದೂ, ಅದರ ರೆಕ್ಕೆಗಳ ಮಂಥನದಲ್ಲಿ ಶಾಂತಿ ಉದ್ಭವಿಸುತ್ತದೆಂದೂ ಕಲ್ಪಿಸಿಕೊಳ್ಳಬಹುದು. ಆ ಪಕ್ಷಿಗೆ ಎರಡು ರೆಕ್ಕೆಗಳಿವೆ. ಒಂದು ರೆಕ್ಕೆ ಭಾರತ ಧ್ವಜದ ಬಣ್ಣಗಳನ್ನು ಹೊಂದಿದ್ದರೆ, ಇನ್ನೊಂದು ಅಮೆರಿಕ ಬಾವುಟದ ಬಣ್ಣಗಳಲ್ಲಿ ಅಲಂಕೃತಗೊಂಡಿದೆ.

ಇದು ಬೆಂಗಳೂರಿನ ಕಲಾವಿದ ಬಿ.ಡಿ. ಜಗದೀಶ್‍ ಅವರ ಮಹತ್ವಾಕಾಂಕ್ಷೆಯ ಕಲಾಕೃತಿ. ವಿಶ್ವವನ್ನು ಕಾಡುತ್ತಿರುವ ಭಯೋತ್ಪಾದನೆಗೆ ಕಲಾವಿದನೊಬ್ಬನ ಸೃಜನಶೀಲ ಪ್ರತಿಕ್ರಿಯೆಯಿದು. ಭಯೋತ್ಪಾದನೆಯ ಕರಾಳ ಹಸ್ತಗಳಿಂದ ಭೂಮಂಡಲವನ್ನು ರಕ್ಷಿಸಬೇಕೆನ್ನುವ ಇರಾದೆಯ ಕಲಾಕೃತಿ, ವಿಶ್ವಶಾಂತಿ ರಕ್ಷಣೆಯ ಜವಾಬ್ದಾರಿಯನ್ನು ಭಾರತ ಹಾಗೂ ಅಮೆರಿಕ ವಹಿಸಿಕೊಳ್ಳಬೇಕೆಂದು ಆಶಿಸುತ್ತದೆ. ಈ ದೇಶಗಳು ವಿಶ್ವಸಂಸ್ಥೆಯನ್ನು ಮುನ್ನಡೆಸಬೇಕೆಂದು ಹಂಬಲಿಸುತ್ತದೆ.

ಒಂದು ವಿಶ್ವದ ದೊಡ್ಡಣ್ಣ ಎನ್ನಿಸಿಕೊಂಡ ಬಂಡವಾಳಶಾಹಿ ದೇಶ. ಮತ್ತೊಂದು ಜಗತ್ತಿಗೆ ಬುದ್ಧ, ಗಾಂಧಿ, ಬಸವ ಮಾದರಿಗಳನ್ನು ಪರಿಚಯಿಸಿದ ದೇಶ. ಈ ವೈರುಧ್ಯಗಳ ಮುಖಾಮುಖಿಯ ಮೂಲಕ ಶಾಂತಿಯ ಸಮತೋಲನವನ್ನು ಸಾಧಿಸಬೇಕೆನ್ನುವ ಅಪೇಕ್ಷೆ ಕಲಾಕೃತಿಯ ಹಿನ್ನೆಲೆಯಲ್ಲಿ ಇರುವಂತಿದೆ.

ಜಗದೀಶ್‍ರ ಈ ತೈಲವರ್ಣ ಕಲಾಕೃತಿ ರೂಪುಗೊಂಡು ದಶಕವೇ ಕಳೆದಿದೆ. ಆದರೆ ದಿನದಿಂದ ದಿನಕ್ಕೆ ತಮ್ಮ ಕಲಾಕೃತಿ ಹೆಚ್ಚು ಸಮಕಾಲೀನ ಎಂದು ಅವರಿಗೆ ತೋರಿದೆ. ತಮ್ಮ ಕನಸು ವೈಯಕ್ತಿಕವಾಗಿ ಉಳಿಯದೆ, ಸಾರ್ವತ್ರಿಕಗೊಳ್ಳಬೇಕು ಎಂದೂ ಅವರಿಗನ್ನಿಸಿದೆ. ಆ ಕಾರಣದಿಂದಲೇ ತಮ್ಮ ಕಲಾಕೃತಿಯ ಆಶಯವನ್ನು ಜನಪ್ರತಿನಿಧಿಗಳೊಂದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ನಡೆಸಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್‍ ಕಲಾಕೃತಿಯ ಆಶಯವನ್ನು ಮೆಚ್ಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭೇಟಿ ಮಾಡಿಸುವುದಾಗಿ ಜಗದೀಶ್‍ರಿಗೆ ಭರವಸೆ ನೀಡಿದ್ದಾರಂತೆ.

(ಬಿ.ಡಿ. ಜಗದೀಶ್)

ಜಾಗತಿಕ ವಿದ್ಯಮಾನಗಳಿಗೆ ಜಗದೀಶ್‍ ಸ್ಪಂದನ ಇದು ಮೊದಲೇನಲ್ಲ. 1997ರಲ್ಲಿ ಅವರು ರಚಿಸಿದ್ದ ಕಲಾಕೃತಿಯೊಂದು ಸಾಕಷ್ಟು ಸುದ್ದಿ ಮಾಡಿತ್ತು. 1995ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದ ಅವರು, ಅಲ್ಲಿನ ವಿಶ್ವವಾಣಿಜ್ಯ ಕೇಂದ್ರ ಕಟ್ಟಡಗಳನ್ನು ಕಂಡು ಬೆರಗಾಗಿದ್ದರು. ಗಗನಚುಂಬಿ ಅವಳಿ ಕಟ್ಟಡಗಳ ಆಸುಪಾಸಿನಲ್ಲೇ ವಿಮಾನಗಳು ಹಾರಾಟ ನಡೆಸುವುದನ್ನು ಕಂಡಾಗ, ಅವುಗಳ ಸುರಕ್ಷತೆಯ ಬಗ್ಗೆ ಆತಂಕದ ಎಳೆಯೊಂದು ಅವರಲ್ಲಿ ಮೂಡಿತ್ತು. 1983ರಲ್ಲಿ, ಬೆಂಗಳೂರಿನಲ್ಲಿ ನಡೆದ ಗಂಗಾರಾಂ ಕಟ್ಟಡದ ದುರಂತ ಜಗದೀಶರ ಮನಸ್ಸಿನಲ್ಲಿತ್ತು. ಅಂತಹ ದುರಂತ ಅಮೆರಿಕದ ಅವಳಿ ಕಟ್ಟಡಗಳಿಗೆ ಸಂಬಂಧಿಸಿದಂತೆ ಉಂಟಾದರೆ ಸಂಭವಿಸಬಹುದಾದ ಅನಾಹುತ ಅವರನ್ನು ಬೆಚ್ಚಿಬೀಳಿಸಿತ್ತು. ಹೀಗೆ ಕಾಡಲು ಶುರುವಾದ ಆತಂಕವನ್ನು 1997ರಲ್ಲಿ ಅವರು ಕಲಾಕೃತಿಯಾಗಿ ರೂಪಿಸಿದರು. ಈ ಕಲಾಕೃತಿ ಬೆಳಕಿಗೆ ಬಂದುದು 2001ರಲ್ಲಿ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆದಾಗ.

ವಿಶ್ವ ವಾಣಿಜ್ಯ ಕೇಂದ್ರಗಳು ಉಗ್ರರ ದಾಳಿಗೆ ಸಿಲುಕಿ ನೆಲಸಮವಾಗುವ ನಾಲ್ಕು ವರ್ಷಗಳ ಮೊದಲೇ ಅದನ್ನು ಊಹಿಸಿದ್ದ ಕಲಾವಿದ ಮತ್ತು ಕಲಾಕೃತಿ ಮಾಧ್ಯಮಗಳ ಕಣ್ಣಿಗೆ ಬಿದ್ದವು. ಜಗದೀಶ್‍ರನ್ನು ತನಿಖೆಗೊಳಪಡಿಸಲಾಗುತ್ತದೆ ಎನ್ನುವ ಊಹಾಪೋಹಗಳೂ ಹಬ್ಬಿದ್ದವು.

ಜಗದೀಶ್‍ರ ಮತ್ತೊಂದು ಜನಪ್ರಿಯ ಕಲಾಕೃತಿ ಭಾರತ ಮತ್ತು ಪಾಕಿಸ್ತಾನದ ಸೌಹಾರ್ದಕ್ಕೆ ಸಂಬಂಧಿಸಿದ್ದು. ನೂರ್‍ ಫಾತಿಮಾ ಎನ್ನುವ ಬಾಲಕಿಯೊಬ್ಬಳು ಹೃದಯದ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದಿದ್ದ ಸುದ್ದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಉಭಯ ದೇಶಗಳ ನಡುವಣ ಸ್ನೇಹಸೇತುವೆಯ ರೂಪದಲ್ಲಿ ದೆಹಲಿ ಮತ್ತು ಲಾಹೋರ್‌ ನಡುವೆ ಸಂಚರಿಸುತ್ತಿದ್ದ ಬಸ್‌ನಲ್ಲಿ ನೂರ್‌ ಫಾತಿಮಾ ತನ್ನ ಪೋಷಕರೊಂದಿಗೆ 2003ರಲ್ಲಿ ಭಾರತಕ್ಕೆ ಬಂದಿದ್ದಳು. ಎರಡೂವರೆ ವರ್ಷದ ಈ ಬಾಲಕಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಈ ಘಟನೆಗೆ ಪ್ರತಿಕ್ರಿಯೆ ರೂಪದಲ್ಲಿ ಜಗದೀಶ್‍ ಕಲಾಕೃತಿಯೊಂದನ್ನು ರೂಪಿಸಿದ್ದರು. ಆ ಕಲಾಕೃತಿಯ ಪ್ರತಿಯೊಂದನ್ನು ಫಾತಿಮಾ ಕುಟುಂಬದವರು ಪಾಕಿಸ್ತಾನಕ್ಕೆ ಕೊಂಡೊಯ್ದಿದ್ದರು.

ಜಗದೀಶ್‍ರ ಮತ್ತೊಂದು ಪ್ರಮುಖ ಕಲಾಕೃತಿ ಇರಾನ್‍ ಮತ್ತು ಇರಾಕ್‍ ನಡುವಣ ಯುದ್ಧಕ್ಕೆ ಸಂಬಂಧಿಸಿದ್ದು. ಎರಡು ದೇಶಗಳ ಸಂಘರ್ಷವನ್ನು ಚಿತ್ರಿಸಿದ್ದ ಅವರು, ಯುದ್ಧ ಮನುಷ್ಯಕುಲಕ್ಕೆ ಉಂಟುಮಾಡುವ ಅನಾಹುತಗಳನ್ನು ಚಿತ್ರಿಸಿದ್ದರು. ಅಣುಬಾಂಬ್‍ ಬಳಕೆಯ ಅಪಾಯಗಳ ಕುರಿತ ಆತಂಕವೂ ಅವರ ಕಲಾಕೃತಿಗಳಲ್ಲಿತ್ತು.

ಕಲಾಕೃತಿಗಳ ಮೂಲಕ ಮನುಷ್ಯರ ನಡುವಣ ಅಡ್ಡಗೋಡೆಗಳನ್ನು ದಾಟುವ ಹಂಬಲವನ್ನು ನಿರಂತರವಾಗಿ ವ್ಯಕ್ತಪಡಿಸುತ್ತಿರುವ ಜಗದೀಶ್‍ ಮೂಲತಃ ಮಲೆನಾಡಿನವರು. ಕುವೆಂಪು ಅವರ ವಿಶ್ವಮಾನವ ಆದರ್ಶವನ್ನೇ ತಮ್ಮ ಕಲಾರಚನೆಯ ಭಿತ್ತಿಯನ್ನಾಗಿಸಿಕೊಂಡವರು. ತೀರ್ಥಹಳ್ಳಿ ತಾಲ್ಲೂಕಿನ ಬಾಣಂಕಿಯವರಾದ ಅವರ ಮೇಲೆ, ಮಲೆನಾಡಿನ ಪರಿಸರ ಗಾಢ ಪ್ರಭಾವ ಬೀರಿದೆ. ಆ ಪ್ರಭಾವ ಶಾಂತಿ- ಸೌಹಾರ್ದದ ಕುರಿತ ಅವರ ಕನವರಿಕೆಗೆ ಕಾರಣಗಳಲ್ಲೊಂದಾಗಿದೆ. ಮಲೆನಾಡಿನ ಪರಿಸರದಲ್ಲಾದ ಬದಲಾವಣೆಗಳು ಅವರ ಕುಂಚದಲ್ಲಿ ಮೂಡಿವೆ.

ಹಡಪದ್‍ ಮೇಷ್ಟ್ರ ಗರಡಿಯಲ್ಲಿ ಪಳಗಿರುವ ಅವರು, ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಕಲಾವಿದರಾಗಿ ದುಡಿದು ನಿವೃತ್ತರಾಗಿದ್ದಾರೆ. ಈಗವರು ಪೂರ್ಣಕಾಲಿಕ ಕಲಾವಿದರು. ಕಲಾಕೃತಿ ರಚಿಸುವುದಕ್ಕೆ ಮಾತ್ರ ಸೀಮಿತಗೊಳ್ಳದೆ, ತಮ್ಮ ಅಭಿವ್ಯಕ್ತಿಯ ಆಶಯಗಳನ್ನು ಸಹೃದಯರಿಗೆ ತಲುಪಿಸಬೇಕೆನ್ನುವ ತುಡಿತ ಕೂಡ ಅವರಲ್ಲಿದೆ. ಆ ಕಾರಣದಿಂದಲೇ, ಜಾಗತಿಕ ಶಾಂತಿಯ ಆಶಯವನ್ನು ಬಿಂಬಿಸುವ ಕಲಾಕೃತಿಯನ್ನು ಭಾಷೆ- ದೇಶಗಳ ಗಡಿ ದಾಟಿ ಸಹೃದಯರಿಗೆ ತಲುಪಿಸಬೇಕೆಂಬ ಕನಸು ಕಾಣುತ್ತಿದ್ದಾರೆ.

 

Read More

Comments
ಮುಖಪುಟ

ವಿಶ್ವದ ಯೋಶೋಗಾಥೆಯಾದ ಕೊಪ್ಪಳದ ತ್ರಿವಳಿಗಳು !

ಹುಟ್ಟುವಾಗಲೇ ‘ಯಮಪಾಶ’ ಕ್ಕೆ ಸಿಲುಕಿದ್ದ ಈ ಮೂರು ಕಂದಮ್ಮಗಳನ್ನು ಬದುಕಿಸಿದ್ದು ಅಮ್ಮನ ಅದಮ್ಯ ಇಚ್ಛಾ ಶಕ್ತಿ. ಈ ಕಥೆಯೀಗ ವಿಶ್ವದ ‘ಯಶೋಗಾಥೆ’ ಆಗಿದೆ. ಈ ತ್ರಿವಳಿಗಳ ಮರುಜನ್ಮದ ವೃತ್ತಾಂತವನ್ನು ವಿಶ್ವ ಆರೋಗ್ಯ ಸಂಸ್ಥೆ ಜಗದೆಲ್ಲೆಡೆ ಸಾರಲು ಮುಂದಾಗಿದೆ!

ಶಮನವಾಗದ ಬಿಕ್ಕಟ್ಟು

ಸುಪ್ರೀಂ ಕೋರ್ಟ್‌ನಲ್ಲಿ ಉಂಟಾಗಿದ್ದ ಬಿಕ್ಕಟ್ಟು ಇನ್ನೂ ಶಮನವಾಗಿಲ್ಲ. ಆದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮುಂದುವರಿದಿದೆ.

ಸಾಕ್ಷಿಯನ್ನು ಖರೀದಿಸಿಲ್ಲ

ಮಹದಾಯಿ ನ್ಯಾಯಮಂಡಳಿ ಮುಂದೆ ಹಾಜರಾಗಲು ಸಾಕ್ಷಿಯಾಗಿರುವ ಪ್ರೊ. ಎ.ಕೆ. ಗೋಸಾಯಿ ಅವರಿಗೆ ಕರ್ನಾಟಕ ಸರ್ಕಾರ ಹಣ ನೀಡಿದೆ ಎಂದು ಗೋವಾದ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲ್ಯೇಕರ್‌ ಆರೋಪಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ ರೀತಿ ಮರಳು ವಿತರಿಸಿ

‘ರಾಜ್ಯದಲ್ಲಿ ಜಾರಿಯಲ್ಲಿರುವ ಮರಳು ಹರಾಜು ನೀತಿ ಅವೈಜ್ಞಾನಿಕ ಹಾಗೂ ಅವಾಸ್ತವಿಕವಾಗಿದೆ’ ಎಂದು ಹೈಕೋರ್ಟ್‌ ಕಿಡಿ ಕಾರಿದೆ.

ಸಂಗತ

ಮೈಸೂರು ‘ಸಿನಿಮಾ ಭಾಗ್ಯ’ ವಂಚನೆ ಅಕ್ಷಮ್ಯ

ಸಿನಿಮಾ ಎಂಬುದು ಇಪ್ಪತ್ತನೇ ಶತಮಾನದಲ್ಲಿ ತಂತ್ರಜ್ಞಾನ, ದೃಶ್ಯ-ಶಬ್ದ ಕಲೆಗಾರಿಕೆಯ ಹೆಣಿಗೆಯಲ್ಲಿ ಕಲಾಭಿವ್ಯಕ್ತಿಯಾಗಿಯೂ, ರಂಜನೆಯ ಮಾಧ್ಯಮವಾಗಿಯೂ ರೂಪ ಪಡೆಯಿತು. ಬೇರೆಲ್ಲಾ ಕಲಾಭಿವ್ಯಕ್ತಿ ಹಾಗೂ ರಂಜನೋದ್ಯಮಗಳಿಗಿಂತ ಹೆಚ್ಚು ವೇಗವಾಗಿ ಜಗತ್ತಿನಾದ್ಯಂತ ಹರಡಿಕೊಂಡು,

ತಿಳಿವಳಿಕೆ ಕೊರತೆ ಮತ್ತು ಪರಿಣಾಮ

ಪ್ರಚಲಿತ ವಿದ್ಯಮಾನಗಳು ಹಾಗೂ ತಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಜನಸಾಮಾನ್ಯರು ಹೊಂದಿರುವ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ, ರಾಜಕೀಯ ಚರ್ಚೆಗಳಲ್ಲಿ ಬಳಕೆಯಾಗುವ ಪದಗಳು ಮಹತ್ವದ ಪಾತ್ರ ವಹಿಸಿವೆ.

ನಾವು ಮತ್ತು ನಮ್ಮ ದೇಶ

ಹಿಂದೂ ಧರ್ಮ ಇತ್ತೀಚಿನದು ಎನ್ನುವುದಾದರೆ ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಇಲ್ಲಿ ಬದುಕಿದ ಜನರಿಗೆ ಯಾವ ಧರ್ಮವೂ ಇರಲೇ ಇಲ್ಲವೇ? ವೇದ ಕಾಲದಲ್ಲಿ ಯಾವ ಧರ್ಮವಿತ್ತು?

ವೈಚಾರಿಕ ಸ್ಪಷ್ಟತೆ ಇಲ್ಲದ ವಾದ

ಭಾರತದ ಅನೇಕ ರಾಜರು ಸೋತದ್ದು ಕುದುರೆಗಳ ಕೊರತೆಯಿಂದಾಗಿ. ಕುದುರೆ ಸೈನ್ಯದ ಕೊರತೆಯಿಂದಾಗಿ ಆನೆಗಳ ಸೈನ್ಯವಿಟ್ಟುಕೊಂಡು, ಕುದುರೆ ಸೈನ್ಯವನ್ನೇ ಹೊಂದಿದ್ದ ಮುಸ್ಲಿಂ ಅರಸರ ಸೈನ್ಯದಿಂದ. ಹಾಗಿರುವಾಗ ಕುದುರೆಯನ್ನು ಕೊಲ್ಲಬಾರದೆಂದಿದ್ದೂ ಸಹಜವೇ.

ವಾಣಿಜ್ಯ

ಬರಲಿವೆ ಅದ್ಭುತ ತಂತ್ರಜ್ಞಾನಗಳು

ಸೃಷ್ಟಿಗೆ ಪ್ರತಿಸೃಷ್ಟಿ ಮಾಡುವ ಕೆಲಸದಲ್ಲಿ ಮಾನವ ಸದಾ ಮಗ್ನನಾಗಿರುತ್ತಾನೆ. ಹೊಸ ಆವಿಷ್ಕಾರಗಳೊಂದಿಗೆ ಬದಲಾಗಿ, ಜೀವನದಲ್ಲಿ ಬದಲಾವಣೆ ತಂದು, ಅಸಾಧ್ಯ ಎನಿಸಿದ್ದನ್ನೂ ಸಾಧ್ಯ ಮಾಡಲು ಪ್ರಯತ್ನಿಸುತ್ತಾನೆ. ಪ್ರಮುಖ ಬದಲಾವಣೆ ತರುವಂತಹ ಭವಿಷ್ಯದ ತಂತ್ರಜ್ಞಾನಗಳ ಕುರಿತಾದ ಒಂದು ಇಣುಕು ನೋಟು ಇಲ್ಲಿದೆ.

ಬದಲಾವಣೆ ಹಾದಿಯಲ್ಲಿ ಜಿಎಸ್‌ಟಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೆ ಬಂದು ಆರು ತಿಂಗಳು ಪೂರ್ಣಗೊಂಡಿದ್ದು, ಹಲವು ಏರಿಳಿತಗಳ ಹೊರತಾಗಿಯೂ ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯು ನಿಧಾನವಾಗಿ ಸುಸ್ಥಿರಗೊಳ್ಳುತ್ತಿದೆ. ವರ್ತಕರು, ಉದ್ಯಮಿಗಳ ವಹಿವಾಟು ಸರಳೀಕರಣಕ್ಕೆ ಜಿಎಸ್‌ಟಿ ಮಂಡಳಿಯು ಹಲವಾರು ನಿಯಮಗಳಿಗೆ ತಿದ್ದುಪಡಿ ತಂದಿದೆ. ಅವುಗಳನ್ನು ಇಲ್ಲಿ ಹಜರತಅಲಿ ದೇಗಿನಾಳ ಅವರು ವಿವರಿಸಿದ್ದಾರೆ.

ವೈರ್‌ಲೆಸ್‌ ಮೊಬೈಲ್ ಚಾರ್ಜರ್

ಮನೆಗಳಲ್ಲಿ ಐದಾರು ಮೊಬೈಲ್ ಇದ್ದು, ಒಂದೋ-ಎರಡೋ ಚಾರ್ಜರ್ ಇದ್ದವರ ಪರದಾಟ ಮತ್ತು ಚಾರ್ಜಿಂಗ್ ತಾಕಲಾಟಕ್ಕೆ ಈ ನಿಸ್ತಂತು ಚಾರ್ಜರ್ ಇತಿಶ್ರೀ ಹಾಡಲಿದೆ.  ಕ್ರೌಡ್ ಫಂಡಿಂಗ್ ಮೂಲಕ ಈ ಸಾಧನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಇದನ್ನು ತಯಾರಿಸಿರುವ ಕಂಪನಿ ತಿಳಿಸಿದೆ.

ಈಗ ಸ್ಮಾರ್ಟ್‌ಹೋಂ ಸಮಯ

ಮನೆಯ ಆವರಣ, ಹಿಂಬಾಗಿಲು ಅಥವಾ ಮುಖ್ಯದ್ವಾರದ ಬಳಿ ಕೆಲಸದಾಳು ಅಥವಾ ಯಾರೇ ಸುಳಿದಾಡಿದರೂ, ತಕ್ಷಣ ಮಾಲೀಕನ ಮೊಬೈಲ್‌ಗೆ ಎಚ್ಚರಿಕೆ ಸಂದೇಶ ರವಾನೆಯಾಗುತ್ತದೆ.

ತಂತ್ರಜ್ಞಾನ

ಬರಲಿವೆ ಹೊಸ ತಂತ್ರಜ್ಞಾನಗಳು

ಕೃತಕ ಬುದ್ಧಿಮತ್ತೆ ಮನೆಗಷ್ಟೇ ಅಲ್ಲ ದೇಹಕ್ಕೂ ಆವರಿಸುತ್ತಿದೆ. ಸಂವಹನ ಕ್ಷೇತ್ರದ ಮತ್ತೊಂದು ಮೈಲುಗಲ್ಲು 5ಜಿ ತಂತ್ರಜ್ಞಾನ ಬಳಕೆಗೆ ಸನಿಹವಾಗುತ್ತಿದೆ. ರೋಗಗಳಿಗೆ ಹೊಸ ತಂತ್ರಜ್ಞಾನ ಆಧಾರಿತ ಚಿಕಿತ್ಸೆ ದೊರೆಯಲಿದೆ. ಈ ವರ್ಷ ಬಳಕೆಗೆ ಬರಲಿರುವ ಕೆಲವು ವಿಶೇಷ ತಂತ್ರಜ್ಞಾನಗಳ ಮಾಹಿತಿ ಇಲ್ಲಿದೆ.

ಚಾಲಕನಿಲ್ಲದ ಕಾರು ಸವಾಲುಗಳೇನು?

ತಂತ್ರಜ್ಞಾನದಲ್ಲಿನ ಬದಲಾವಣೆಯೊಂದಿಗೆ ಸಮೂಹ ಸಾರಿಗೆ ವ್ಯವಸ್ಥೆಯೂ ಬದಲಾಗುತ್ತಿದೆ. ಸಾರಿಗೆ ವಾಹನಗಳಿಂದ ವಾಯುಮಾಲಿನ್ಯ ಹೆಚ್ಚಳವಾಗುತ್ತಿರುವುದು ಮುಂದುವರಿದ ದೇಶಗಳನ್ನೂ ಕಾಡುತ್ತಿದೆ.

ಜಪಾನ್‌ನಲ್ಲಿ ಮಡಚುವ ಕಾರು

‘ಆ ಜಾಗಕ್ಕೇನೋ ಕಾರಿನಲ್ಲಿ ಹೋಗಬಹುದು. ಆದರೆ, ಕಾರನ್ನು ಎಲ್ಲಿ ಪಾರ್ಕಿಂಗ್ ಮಾಡುವುದು’ ಇದು ಮಹಾನಗರಗಳಲ್ಲಿನ ಕಾರು ಮಾಲೀಕರ ದಿನ ನಿತ್ಯದ ಗೋಳು. ಕಾರಿಗೊಂದು ಸರಿಯಾದ ಜಾಗ ಪತ್ತೆಹಚ್ಚುವುದೇ ಹರಸಾಹಸದ ಕೆಲಸ. ಕಾರು ನಿಲ್ಲಿಸಲು ಜಾಗ ಸಿಕ್ಕರೂ ಅದರ ಭದ್ರತೆ ಕುರಿತು ಆತಂಕವಿರುತ್ತದೆ.

ಫೇಸ್‍‍ಬುಕ್‍‍ನಲ್ಲಿ ಸ್ಲೈಡ್‍ ಶೋ ರಚಿಸಿ

ಫೇಸ್‍‍ಬುಕ್ ಆ್ಯಪ್‍‍ ತೆರೆಯಿರಿ. ‘ಇಲ್ಲಿ ಏನಾದರೂ ಬರೆಯಿರಿ’ ಎಂಬಲ್ಲಿ ಕ್ಲಿಕ್‍‍ ಮಾಡಿ. ಈಗ ಕಾಣುವ ಆಯ್ಕೆಗಳಲ್ಲಿ Slideshow ಎಂಬಲ್ಲಿ ಕ್ಲಿಕ್ಕಿಸಿ. ಈಗ ADD PHOTOS ಎಂಬಲ್ಲಿ ಕ್ಲಿಕ್ ಮಾಡಿ. ಈಗ ನಿಮ್ಮ ಫೋನ್‍‍ನಲ್ಲಿರುವ ಚಿತ್ರಗಳ ಪೈಕಿ ಯಾವ ಚಿತ್ರಗಳನ್ನು ಸ್ಲೈಡ್ ಶೋ ಮಾಡಬೇಕೋ ಆಯಾ ಚಿತ್ರಗಳ ಮೇಲೆ ಕ್ಲಿಕ್ ಮಾಡುತ್ತಾ ಹೋಗಿ.