ರಾಮ ನಾಮ; ನಾದ ಪ್ರೇಮ

  • ಉತ್ಸವಕ್ಕೆ ಕಳೆ ತುಂಬಿದ ಸುಬ್ಬುಲಕ್ಷ್ಮಿ ಅವರ ಸಂಗೀತ ಕಛೇರಿ

  • ಉತ್ಸವಕ್ಕೆ ಬಂದ ನಟ ರಾಜಕುಮಾರ್ ಅವರನ್ನು ಎಸ್‌. ವಿ. ನಾರಾಯಣಸ್ವಾಮಿ ರಾವ್‌ ಅವರು ಬರಮಾಡಿಕೊಂಡಾಗ...

  • ಸಂಗೀತೋತ್ಸವದಲ್ಲಿ ಬಾಲಮುರಳೀ ಕೃಷ್ಣ ಅವರ ಕಛೇರಿ

  • ಸಂಗೀತಸುಧೆ ಹರಿಸಿದ ಭೀಮಸೇನ ಜೋಷಿ

6 Feb, 2018
ಪದ್ಮನಾಭ ಭಟ್‌

ಅದು 1937.
ಆ ಹುಡುಗನಿಗಿನ್ನೂ ಹದಿನಾಲ್ಕು ವರ್ಷ. ತಂದೆ ಪೊಲೀಸ್‌ ಅಧಿಕಾರಿ. ಇವನೋ ದೇಶಪ್ರೇಮದ ಕಿಚ್ಚು ಒಡಲೊಳಗೆ ತುಂಬಿಕೊಂಡು ಸ್ಫೋಟಿಸಲು ಕಾಯುತ್ತಿರುವ ಹರೆಯದ ಪೋರ. ಅವಕಾಶ ಸಿಕ್ಕಾಗೆಲ್ಲ ಸ್ವಾತಂತ್ರ್ಯ ಹೋರಾಟದ ಭಾಗವಾಗುತ್ತಿದ್ದ.

ಒಮ್ಮೆ ಬೆಂಗಳೂರಿನ ಸಿಟಿ ಮಾರ್ಕೆಟ್‌ ಜಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದರು. ಆ ಗುಂಪಿನಲ್ಲಿ ಆ ಹದಿನಾಲ್ಕರ ಹುಡುಗನೂ ಇದ್ದ. ಘೋಷಣೆ ಮುಗಿಲುಮುಟ್ಟಿತ್ತು. ಆಕ್ರೋಶ ಕಟ್ಟೆಯೊಡೆದಿತ್ತು. ಆವೇಶದಲ್ಲಿ ಮೈಮರೆತಿರುವಾಗಲೇ ಪೊಲೀಸ್‌ ಪಾಳಯದಿಂದ ಸಿಡಿದ ಗುಂಡೊಂದು ಈ ಹುಡುಗನ ಪಕ್ಕದಲ್ಲಿದ್ದ ಸ್ನೇಹಿತನ ಎದೆಯನ್ನು ಹೊಕ್ಕಿತ್ತು. ನೋಡನೋಡುತ್ತಿದ್ದ ಹಾಗೆಯೇ ಗೆಳೆಯ ಮೈಮುರಿದುಕೊಂಡು ನೆಲಕ್ಕೆ ಬಿದ್ದಿದ್ದ. ನೆತ್ತರು ಮಣ್ಣನ್ನು ಹಸಿಗೊಳಿಸತೊಡಗಿತ್ತು. ಕೊನೆಯುಸಿರೆಳೆಯುವ ಕ್ಷಣ ಮೊದಲು ಸ್ನೇಹಿತ ಉಸುರಿದ್ದ ಉದ್ಗಾರ ಆ ಗದ್ದಲದಲ್ಲಿಯೂ ಇವನ ಮನಸ್ಸೊಳಗೆ ನಾಟಿತ್ತು. ಅದು ‘ಹರೇ ರಾಮ್‌!’.

‘ಹರೇ ರಾಮ್‌’ ಇದೊಂದು ಶಬ್ದದ ಮಂತ್ರವಾಗಿ ಆ ಹುಡುಗನ ಮನಸ್ಸಿನೊಳಗೆ ನಾಟಿಬಿಟ್ಟಿತು. ಆ ಅಸಹಾಯಕ ಕ್ಷಣದಿಂದಲೇ ಅವನೊಳಗಿನ ವಿರಾಗದ ಭಿತ್ತಿಯಲ್ಲಿ ಭಕ್ತಿಯ ಸುಧೆ ಸೆಲೆಯೊಡೆದಿತ್ತು. ಬಾಲ್ಯದಿಂದಲೂ ಮಾರು ಹೋಗುತ್ತಲೇ ಇದ್ದ ಸಂಗೀತ ಆ ಭಕ್ತಿಯ ಅಭಿವ್ಯಕ್ತಿಯಾಗಿ ಕಂಡಿತ್ತು. ಸಂಗೀತವೊಂದೇ ಜನರನ್ನು ಪ್ರೇಮದೆಡೆಗೆ, ಸೌಹಾರ್ದದೆಡೆಗೆ ಪರೋಕ್ಷವಾಗಿ ದೇವರೆಡೆಗೆ ಕರೆದೊಯ್ಯುವ ದಾರಿ ಅನಿಸಿತ್ತು.

ಮತ್ತೆರಡು ವರ್ಷಗಳ ನಂತರ, ಅಂದರೆ 1939ರ ರಾಮನವಮಿ ಸಂದರ್ಭದಲ್ಲಿ ಚಾಮರಾಜಪೇಟೆಯ ಮೂರನೇ ಮುಖ್ಯರಸ್ತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಒಂದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಸೇರಿದ ಜನರ ಸಂಖ್ಯೆ ದೊಡ್ಡದೇ ಇತ್ತು. ಈ ಕಾರ್ಯಕ್ರಮ ಆಯೋಜಿಸಿದವನು ಅದೇ ಹುಡುಗ. ಆ ಹುಡುಗನ ಹೆಸರು ಎಸ್‌. ವಿ. ನಾರಾಯಣಸ್ವಾಮಿ ರಾವ್‌.

ಈಗ ಪ್ರತಿವರ್ಷ ಮಾರ್ಚ್‌–ಏಪ್ರಿಲ್‌ ಸಮಯ ದಲ್ಲಿ ಕೋಟೆ ಹೈಸ್ಕೂಲಿನ ಆವರಣದಲ್ಲಿ ನಡೆಯಲಿರುವ ರಾಮನವಮಿ ರಾಷ್ಟ್ರೀಯ ಸಂಗೀತೋತ್ಸವದ ಮೂಲ ಬೇರು ಹೀಗಿದೆ. ಎಸ್‌.ವಿ.ಎನ್‌ ರಾವ್‌ ಪ್ರಾರಂಭಿಸಿದ ಸಂಗೀತೋತ್ಸವ ಇಂದು ದೇಶದಲ್ಲಿಯೇ ಅತಿದೊಡ್ಡ ಭಾರತೀಯ ಶಾಸ್ತ್ರೀಯ ಸಂಗೀತೋತ್ಸವಗಳಲ್ಲಿ ಒಂದಾಗಿದೆ. ಇದನ್ನು ಆಯೋಜಿಸುವ ರಾಮಸೇವಾ ಮಂಡಳಿ, ಶಾಸ್ತ್ರೀಯ ಸಂಗೀತ ಕ್ಷೇತ್ರದ ಪ್ರಮುಖ ಜಾಗೃತಸಂಸ್ಥೆಗಳಲ್ಲಿ ಒಂದಾಗಿದೆ. ಈ ಬೆಳವಣಿಗೆ ಒಮ್ಮಿಂದೊಮ್ಮೆಲೇ ಉಂಟಾಗಿದ್ದಲ್ಲ. ಈ ಯಶಸ್ಸಿನ ಹಿಂದೆ ಎಂಟು ದಶಕದ ಶ್ರಮದ ನಡಿಗೆಯಿದೆ. ಹಲವಾರು ಜನರ ಸಂಗೀತದ ತುಡಿತವಿದೆ.

ಹೆಜ್ಜೆ ಗುರುತುಗಳು
ರಾಮನವಮಿ ಸಂಗೀತೋತ್ಸವ ನಡೆದ ಸ್ಥಳಗಳನ್ನು ಗಮನಿಸಿದರೇ ಅದರ ಬೆಳವಣಿಗೆಯ ಹೆಜ್ಜೆಗಳು ಸ್ಪಷ್ಟವಾಗುತ್ತವೆ. ಚಾಮರಾಜಪೇಟೆಯ 3ನೇ ಮುಖ್ಯರಸ್ತೆಯಲ್ಲಿ ಸಣ್ಣಪ್ರಮಾಣದಲ್ಲಿ ಆರಂಭವಾದ ಸಂಗೀತೋತ್ಸವ ನಂತರದ ವರ್ಷಗಳಲ್ಲಿ ಅಲ್ಲಿಯೇ ಸಮೀಪದ ಶ್ರೀ ರಾಮೇಶ್ವರ ದೇವಸ್ಥಾನದ ಆವರಣಕ್ಕೆ ಸ್ಥಳಾಂತರಗೊಂಡಿತ್ತು. ವರ್ಷದಿಂದ ವರ್ಷಕ್ಕೆ ಈ ಸಂಗೀತೋತ್ಸವದ ಜನಪ್ರಿಯತೆ ಬೆಳೆಯುತ್ತಲೇ ಇತ್ತು. ಆದ್ದರಿಂದಲೇ ಇದರ ಅವಧಿ ಮತ್ತು ಪ್ರಮಾಣ ಎರಡನ್ನೂ ಹಿಗ್ಗಿಸುವುದು ಅನಿವಾರ್ಯವಾಯಿತು. ಹದಿನೈದು ದಿನಗಳ ಪೂರ್ಣ ಪ್ರಮಾಣದ ಸಂಗೀತೋತ್ಸವಗಳನ್ನು ಆಚರಿಸಲು ಆರಂಭಿಸಲಾಯಿತು. 1944ರಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ರಾಮಸೇವಾ ಮಂಡಳಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಅದರಲ್ಲಿ ಸಲೀಂ ದೀಕ್ಷಿತ್‌ ಭಾಗವಹಿಸಿದ್ದರು. ಚಂಬೈ ವೈದ್ಯನಾಥ ಭಾಗವತರ್‌ ಅವರ ಗಾಯ‌ನದ ಮೂಲಕ ಸಂಗೀತೋತ್ಸವ ಪ್ರಾರಂಭವಾಗುವುದು ಒಂದು ಸಂಪ್ರದಾಯ ಎಂಬಂತೆ ಎಷ್ಟೋ ವರ್ಷಗಳ ಕಾಲ ನಡೆಯುತ್ತಿತ್ತು.

ಜನಸಂದಣಿ ಹೆಚ್ಚಿರುವ ಕಾರಣಕ್ಕೆ ರಾಮೇಶ್ವರ ದೇವಸ್ಥಾನದ ಆವರಣವೂ ಕಿರಿದಾಗತೊಡಗಿತ್ತು. 1949ರಿಂದ ಚಾಮರಾಜಪೇಟೆಯ ಎಚ್‌ಡಿಎಫ್‌ಸಿ ಬ್ಯಾಂಕಿನ ಸಭಾಂಗಣಕ್ಕೆ ಸಂಗೀತೋತ್ಸವವನ್ನು ಸ್ಥಳಾಂತರಿಸಲಾಯಿತು. ಮಹಾರಾಜ್‌ಪುರಂ ವಿಶ್ವನಾಥ ಅಯ್ಯರ್‌, ಮಾಧುನಿ ಮಣಿ ಅಯ್ಯರ್‌ರಂಥ ಶ್ರೇಷ್ಠ ಸಂಗೀತಗಾರರ ಕಛೇರಿಗಳಿಗೆ ಈ ವೇದಿಕೆ ಸಾಕ್ಷಿಯಾಯಿತು. ಎಂ.ಎಲ್‌. ವಸಂತಕುಮಾರಿ ಅವರೂ ಇದೇ ವೇದಿಕೆಯಲ್ಲಿ ಹಲವು ಕಛೇರಿಗಳನ್ನು ಪ್ರಸ್ತುತಪಡಿಸಿದ್ದರು.

ರಾಮನವಮಿ ಸಂಗೀತೋತ್ಸವದ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆಯೇ ಅದನ್ನು ಬೆಂಗಳೂರು ಸಿಟಿ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆಸಲು ಆರಂಭಿಸಲಾಯಿತು. ಸುಮಾರು ನಾಲ್ಕು ಸಾವಿರ ಜನರು ಸೇರಬಹುದಾಗಿದ್ದ ಈ ಸ್ಥಳದಲ್ಲಿ ಪ್ರತಿವರ್ಷದ ಸಂಗೀತೋತ್ಸವ ಜನರಿಂದ ಕಿಕ್ಕಿರಿದಿರುತ್ತಿತ್ತು. 1952ರಿಂದ ಮುಂದಿನ ಹದಿನಾರು ವರ್ಷಗಳ ಕಾಲ ಇದೇ ಜಾಗದಲ್ಲಿ ಸಂಗೀತೋತ್ಸವ ನಡೆಯುತ್ತಿತ್ತು. ಐವತ್ತು, ಅರವತ್ತರ ದಶಕ ರಾಮಸೇವಾ ಮಂಡಳಿ ಸಂಗೀತೋತ್ಸವದ ಸುವರ್ಣಯುಗ ಎಂದರೂ ತಪ್ಪಾಗಲಾರದು. ಈ ಹೊಸ ವೇದಿಕೆಯಲ್ಲಿ ಮೊದಲು ಸಂಗೀತ ಕಛೇರಿ ನೀಡಿದ್ದು ಎಂ.ಎಸ್‌. ಸುಬ್ಬುಲಕ್ಷ್ಮಿ. ಮುಂದಿನ ನಲ್ವತ್ತೊಂದು ವರ್ಷಗಳಲ್ಲಿ ಮಂಡಳಿಯ ಸಂಗೀತೋತ್ಸವದಲ್ಲಿ ಸುಬ್ಬುಲಕ್ಷ್ಮಿ ಮೂವತ್ತೊಂದು ಸಲ ಸಂಗೀತ ಕಛೇರಿ ನೀಡಿದ್ದಾರೆ. ಅವರು ಇಷ್ಟು ಸಲ ಇನ್ಯಾವ ವೇದಿಕೆಯಲ್ಲಿಯೂ ಕಾರ್ಯಕ್ರಮ ನೀಡಿಲ್ಲ ಎನ್ನುವುದು ಅವರು ಮಂಡಳಿಯ ಜತೆಗೆ ಬೆಳೆಸಿಕೊಂಡಿದ್ದ ಬಾಂಧವ್ಯಕ್ಕೂ ನಿದರ್ಶನ.

‘ಅದು 1980. ಆಗ ಪೆಂಡಾಲ್‌ ಎಲ್ಲ ಏನಿರಲಿಲ್ಲ. ತೆಂಗಿನ ಚಪ್ಪರ. ಏಳುಗಂಟೆಗೆ ಎಂ.ಎಸ್‌. ಸುಬ್ಬುಲಕ್ಷ್ಮಿ ಅವರ ಸಂಗೀತ ಕಾರ್ಯಕ್ರಮ. ನಾಲ್ಕು ಗಂಟೆಗೆ ಜೋರು ಮಳೆ ಸುರಿಯಿತು. ಆದರೂ ಏಳುಗಂಟೆಯಷ್ಟರಲ್ಲಿ ಸಾವಿರಕ್ಕೂ ಅಧಿಕ ಜನರು ಚಪ್ಪರದ ಎದುರು ಕಿಕ್ಕಿರಿದು ನಿಂತಿದ್ದರು. ಸುಬ್ಬುಲಕ್ಷ್ಮಿ ಅವರೂ ಸ್ವಲ್ಪವೂ ಬೇಸರಿಸಿಕೊಳ್ಳದೆ ಸಂಗೀತ ಕಛೇರಿ ನಡೆಸಿಕೊಟ್ಟರು. ಇಂಥ ಅನೇಕ ಧನ್ಯತೆಯ ಕ್ಷಣಗಳಿಗೆ ಮಂಡಳಿ ಸಾಕ್ಷಿಯಾಗಿದೆ’ ಎಂದು  ನೆನಪಿಸಿಕೊಳ್ಳುತ್ತಾರೆ ಎಸ್‌.ವಿ.ಎನ್‌. ರಾವ್‌ ಅವರ ಮಗ ಎಸ್‌. ಎನ್‌. ವರದರಾಜ್‌. 2000ರಲ್ಲಿ ಎಸ್‌.ವಿ.ಎನ್‌. ರಾವ್‌ ನಿಧನರಾದ ಮೇಲೆ ವರದರಾಜ್‌ ಅವರೇ ಪ್ರಧಾನ ಕಾರ್ಯದರ್ಶಿಯಾಗಿ ಮಂಡಳಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

‘ಪ್ರತಿ ವರ್ಷ ಗಣೇಶ ಚತುರ್ಥಿಯ ದಿನದಂದು ‘ರಾಮಸೇವಾಮಂಡಳಿಯ ಕಛೇರಿಯ ಆವರಣದಲ್ಲಿ ಸಣ್ಣ ಪ್ರಮಾಣದಲ್ಲಿ ಸಂಗೀತ ಕಛೇರಿ ಆಚರಿಸುತ್ತೇವೆ. ಇದು ಮತ್ತೆ ಸ್ವಲ್ಪ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ರಾಮ ನವಮಿ ಸಂಗೀತೋತ್ಸವದ ಪೂರ್ವತಯಾರಿಯ ಮೊದಲ ಹೆಜ್ಜೆಯಾಗಿಯೂ ನೋಡಬಹುದು’ ಎಂದು ವರದರಾಜು ವಿವರಿಸುತ್ತಾರೆ.

ಸಂಸ್ಥೆಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಐವತ್ತನಾಲ್ಕು ದಿನಗಳ ಸಂಗೀತೋತ್ಸವ ಆಯೋಜಿಸಲಾಗಿತ್ತು. ಡೈಮಂಡ್‌ ಜ್ಯುಬಿಲಿ ಅರವತ್ತು ದಿನಗಳ ಕಾಲ ಆಯೋಜಿಸಿತ್ತು. ಹಲವು ವರ್ಷಗಳ ಕಾಲ ನಲ್ವತ್ತು ದಿನಗಳ ಕಾಲ ರಾಮನವಮಿ ಸಂಗೀತೋತ್ಸವ ನಡೆಸಲಾಗಿತ್ತು. ಆದರೆ ಕೆಲವು ವರ್ಷಗಳಿಂದ ಆರ್ಥಿಕ ಸಂಪನ್ಮೂಲ ಹೊಂದಿಸುವುದು ಕಷ್ಟವಾಗಿದ್ದರಿಂದ ಮೂವತ್ತೊಂದು ದಿನಗಳಿಗೆ ಇಳಿಸಲಾಗಿದೆ. ಈ ಮೂವತ್ತೊಂದು ದಿನಗಳಲ್ಲಿ ಸುಮಾರು ಒಂದೂವರೆ ಲಕ್ಷ ಜನ ರಾಮನವಮಿ ಸಂಗೀತೋತ್ಸವದಲ್ಲಿ ಭಾಗವಹಿಸುತ್ತಾರೆ. ಇನ್ನೂರೈವತ್ತರಿಂದ ಮುನ್ನೂರು ಕಲಾವಿದರು ಈ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾರೆ.

ಹಳೆ ದಾರಿಯ ಹೊಸ ಹೊರಳುಗಳು
ಶ್ರೀರಾಮಸೇವಾ ಮಂಡಳಿ ಸ್ಥಾಪನೆಗೊಂಡಿರುವುದೇ ಭಾರತೀಯ ಶಾಸ್ತ್ರೀಯ ಸಂಗೀತದ ಜೇಷ್ಠತೆಯನ್ನು ಎತ್ತಿಹಿಡಿ ಯುತ್ತಾ, ತನ್ಮೂಲಕ ಜನರಲ್ಲಿ ಸಂಗೀತಾಭಿರುಚಿ ಬೆಳೆಸುವ ಉದ್ದೇಶದಿಂದ. ಇದೇ ಗುರಿಯನ್ನು ಮುಖ್ಯವಾಗಿರಿಸಿಕೊಂಡು ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ದಾರಿಗಳಿಗೆ ತನ್ನನ್ನು ತೆರೆದುಕೊಳ್ಳಲೂ ಸಂಸ್ಥೆ ಸಿದ್ಧಗೊಂಡಿದೆ.

ದೇಶದ ಪ್ರಮುಖ ಪಟ್ಟಣಗಳಲ್ಲಿ ಒಂದೊಂದು ತಿಂಗಳಿನ ಒಂದು ದಿನ ಶಾಸ್ತ್ರೀಯ ಸಂಗೀತ ಕಾರ್ಯಾಗಾರ, ವಿಚಾರ ಸಂಕಿರಣಗಳನ್ನು ನಡೆಸುವ ಯೋಚನೆ ಸಂಸ್ಥೆಗಿದೆ. ಹಾಗೆಯೇ ನಮ್ಮ ನೆಲದಲ್ಲಿ ಶಾಸ್ತ್ರೀಯ ಸಂಗೀತದ ಗಂಧವನ್ನು ಉದ್ದೀಪಿಸುವ ಉದ್ದೇಶದಿಂದ ಗುರುಕುಲ ಮಾದರಿಯ ಸಂಗೀತ ಶಾಲೆ ರೂಪಿಸುವ ಯೋಚನೆ ತಂಡ ಕ್ಕಿದೆ. ಹಾಗೆಯೇ ರಾಮಾಯಣದ ಕಥನವನ್ನು ಕಟ್ಟಿಕೊಡುವಂಥ ‘ರಾಮ ಗ್ರಾಮ’ ಎಂಬ ಹೆಸರಿನ ಉದ್ಯಾನ ನಿರ್ಮಾಣ ಮಾಡುವ ಯೋಚನೆಯೂ ಇದೆ.  ಈ ಸಲದ ಉತ್ಸವ ಮಾರ್ಚ್ 25ರಿಂದ ಶುರುವಾಗಲಿದೆ.

-ಉತ್ಸವದಲ್ಲಿ ರಾಜಾಜಿ ಹಾಗೂ ಚಾಮರಾಜೇಂದ್ರ ಒಡೆಯರ್

ಜ್ಞಾನ ಗಾನ ಸಭಾ
‘60ರ ದಶಕದ ಬಹುತೇಕ ರಾಮನವಮಿ ಸಂಗೀತೋತ್ಸವವನ್ನು ಮೈಸೂರಿನ ಜಯಚಾಮರಾಜೇಂದ್ರ ಒಡೆಯರ್‌ ಮತ್ತು ಸಿ. ರಾಜಗೋಪಾಲಾಚಾರಿ ಅವರೇ ಉದ್ಘಾಟಿಸುತ್ತಿದ್ದರು. ರಾಜಗೋಪಾಲಾಚಾರಿ ಅವರು ಒಮ್ಮೆ ಭಾಷಣದಲ್ಲಿ ‘ಈ ಸಂಗೀತೋತ್ಸವ ಯಾವತ್ತೂ ಸ್ವಂತ ಕಟ್ಟಡದಲ್ಲಿ ನಡೆಯಬಾರದು. ಸಾರ್ವಜನಿಕ ಸ್ಥಳದಲ್ಲಿಯೇ ನಡೆಯಬೇಕು. ಯಾಕೆಂದರೆ ಈ ಸಂಗೀತೋತ್ಸವವೇ ಒಂದು ಬಗೆಯಲ್ಲಿ ಸಂಗೀತದ ದೇವಾಲಯ ಇದ್ದಂತಿದೆ’ ಎಂದು ಹೇಳಿದ್ದರು. ಅವರ ಮಾತು ಇಂದಿಗೂ ಸತ್ಯವೇ ಆಗಿ ಉಳಿದಿದೆ. ಇಂದಿಗೂ ಕೋಟೆ ಹೈಸ್ಕೂಲ್‌ ಮೈದಾನದಲ್ಲಿಯೇ ಸಂಗೀತೋತ್ಸವ ನಡೆಯುತ್ತಿದೆ’ ಎಂದು ನೆನಪಿಸಿಕೊಳ್ಳುತ್ತಾರೆ ವರದರಾಜ್‌.

ಮೈಸೂರು ಒಡೆಯರ್‌ ಅವರು ಈ ಕಾರ್ಯಕ್ರಮವನ್ನು ‘ಜ್ಞಾನ ಗಾನ ಸಭಾ’ ಎಂದು ಕರೆದಿದ್ದಾರೆ. ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್ ಅವರು ‘ಕರ್ನಾಟಕದ ಹೆಮ್ಮೆಯ ಭಾರತದ ರಾಮೋತ್ಸವ’ ಎಂದು ಕರೆದಿದ್ದರು.

-ಸಭಿಕರನ್ನು ಸೆಳೆದ ಬಿಸ್ಮಿಲ್ಲಾ ಖಾನ್ ಅವರ ಶೆಹನಾಯಿ ವಾದನ

ಕಛೇರಿ ಕೊಟ್ಟ ಕಲಾವಿದರು
ರಾಮನವಮಿ ಸಂಗೀತೋತ್ಸವದಲ್ಲಿ ಎಂ.ಎಸ್‌. ಸುಬ್ಬುಲಕ್ಷ್ಮಿ, ಬಿಸ್ಮಿಲ್ಲಾ ಖಾನ್, ಭೀಮಸೇನ ಜೋಷಿ, ಬಾಲಮುರಳೀ ಕೃಷ್ಣ, ಯೇಸುದಾಸ್‌, ಎಂ. ಎಲ್‌. ವಸಂತಕುಮಾರಿ ಅವರ ಸಂಗೀತ ಕಛೇರಿಗಳಿದ್ದರೆ ಜನರು ಕಿಕ್ಕಿರಿದು ಸೇರುವುದು ಸಾಮಾನ್ಯ ಸಂಗತಿ. ದೇಶದ ಶ್ರೇಷ್ಠ ಸಂಗೀತಗಾರರ ಬಳಗವೇ ರಾಮಸೇವಾಮಂಡಳಿಯ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿ ಹೋಗಿದ್ದಾರೆ. ಟಿ. ಚೌಡಯ್ಯ, ಟಿ.ಆರ್‌. ಮಹಾಲಿಂಗಂ, ಪಳನಿ ಸುಬ್ರಹ್ಮಣ್ಯ ಪಿಳ್ಳೈ, ಬಾಂಬೆ ಜಯಶ್ರೀ, ವೀಣೆ ದೊರೆಸ್ವಾಮಿ ಅಯ್ಯಂಗಾರ್‌, ಹೊನ್ನಪ್ಪ ಭಾಗವತರ್‌, ಸಲೀಂ ದೇಸಿಖಾನ್‌, ಅಯ್ಯಮಣಿ ಅಯ್ಯರ್‌, ಜಿ.ಎನ್‌. ಬಾಲಸುಬ್ರಹ್ಮಣ್ಯ, ಎಂ.ಎ. ನರಸಿಂಹಾಚಾರ್‌, ಲಾಲ್‌ಗುಡಿ ಜಿ. ಜಯರಾಮನ್‌, ಟಿ.ಎಂ. ಕೃಷ್ಣ ಹೀಗೆ ರಾಮಸೇವಾಮಂಡಳಿಯ ವೇದಿಕೆಗೆ ಕಳೆಗಟ್ಟುವಂತೆ ಮಾಡಿದ ಪ್ರತಿಭಾವಂತ ಸಂಗೀತಗಾರರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

Read More

Comments
ಮುಖಪುಟ

ಸಾರ್ವಜನಿಕವಾಗಿ ಸುಳ್ಳು ಹೇಳಿದ ಶಾ

‘ಕಾಂಗ್ರೆಸ್ ಶಾಸಕ ಎನ್‌.ಎ.ಹ್ಯಾರಿಸ್‌ ಮಗ ಮೊಹಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾಗಿರುವ ವಿದ್ವತ್‌ ನಮ್ಮ ಕಾರ್ಯಕರ್ತ’ ಎಂದು ಮಂಗಳವಾರ ಮಧ್ಯಾಹ್ನ ಬಿ.ಸಿ.ರೋಡ್‌ನಲ್ಲಿ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಸಂಜೆಯ ವೇಳೆಗೆ ಸುರತ್ಕಲ್‌ನಲ್ಲಿ ಅದನ್ನು ಹಿಂಪಡೆದು ಉದ್ದೇಶಪೂರ್ವಕ ವಾಗಿ ಸುಳ್ಳು ಹೇಳಿರುವುದಾಗಿ ಸ್ಪಷ್ಟನೆ ನೀಡಿದರು.

ಅಧಿಕ ಶುಲ್ಕ ವಸೂಲಿ: ಖಾಸಗಿ ಆಸ್ಪತ್ರೆಗಳ ಹಗಲು ದರೋಡೆ

ಔಷಧ, ವೈದ್ಯಕೀಯ ಸಲಕರಣೆಗಳಿಗಾಗಿ ಅಸಹಾಯಕ ರೋಗಿಗಳಿಂದ ಶೇ 1,192 ರಷ್ಟು ಹೆಚ್ಚಿಗೆ ಹಣವನ್ನು ಖಾಸಗಿ ಆಸ್ಪತ್ರೆಗಳು ಲೂಟಿ ಮಾಡಿವೆ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ (ಎನ್‌ಪಿಪಿಎ) ವರದಿ ಹೇಳಿದೆ.

ಮುಖ್ಯ ಕಾರ್ಯದರ್ಶಿ ಮೇಲೆ ಎಎಪಿ ಶಾಸಕರ ಹಲ್ಲೆ?

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನಿವಾಸದಲ್ಲಿ ಸೋಮವಾರ ರಾತ್ರಿ ಆಮ್‌ ಆದ್ಮಿ ಪಕ್ಷದ(ಎಎಪಿ) ಇಬ್ಬರು ಶಾಸಕರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಆರೋಪಿಸಿದ್ದಾರೆ.

ಪಾಲಿಕೆ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡನ ದರ್ಪ

ವಿವಾದಿತ ಜಮೀನಿಗೆ ಖಾತೆ ಮಾಡಿಕೊಡದ ಕಾರಣಕ್ಕೆ ಹೊರಮಾವು ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿರುವ ಕಾಂಗ್ರೆಸ್‌ನ ಕೆ.ಆರ್‌.ಪುರ ಬ್ಲಾಕ್‌ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ದಾಖಲೆಗಳ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲು ಯತ್ನಿಸಿದ್ದಾರೆ.

ಸಂಗತ

ಮಾರುತ್ತರ ನೀಡಲು ಸಾಧ್ಯವೇ?

ನುಡಿಯ ಬಗೆಗೆ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ ನೀಡುವ ಮೊದಲು ತಾವು ಪ್ರತಿನಿಧಿಸುವ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ತಮಗೆ ಮತ ನೀಡಿದ ಜನರು ಬಳಸುತ್ತಿರುವ ವಿವಿಧ ಬಗೆಯ ಉಪಭಾಷೆಗಳ ಬಗೆಗೆ ಮಾಹಿತಿಯನ್ನಾದರೂ ಪಡೆದಿದ್ದರೆ ಚೆನ್ನಾಗಿರುತ್ತಿತ್ತು

ಅಸಾಮಾನ್ಯ ಅಸಭ್ಯರು

ಹಿಂದೊಮ್ಮೆ ರೈತರು ಹಾಗೂ ಶರಣರೂ ಎರಡೂ ಆಗಿದ್ದ ಯಡಿಯೂರಪ್ಪನವರು ನಿಮ್ಮ ಮಾತನ್ನು ಖಂಡಿತವಾಗಿ ಕೇಳಿಸಿಕೊಂಡಾರು. ಒಟ್ಟು ಕತೆಯ ನೀತಿಯೆಂದರೆ ಭಾರತೀಯ ರಾಜಕಾರಣವನ್ನು ಯುಬಿ ಸಿಟಿ ಬಾರುಗಳಿಂದ ಕೆಳಗಿಳಿಸಿ ತರಬೇಕಾದ ಜರೂರು ತುಂಬ ಇದೆ!

ಅರಣ್ಯ ಪರಿಸ್ಥಿತಿ ವರದಿ ಮತ್ತು ನೈಜ ಸ್ಥಿತಿ

ಅರಣ್ಯ ಪ್ರದೇಶ ಹೆಚ್ಚಳದ ಹಿಂದಿನ ಹಾಗೂ ಸಮಾಜೋ-–ಆರ್ಥಿಕ ಆಯಾಮಗಳು ಮತ್ತು ಇಲಾಖೆಯ ಆಡಳಿತಾತ್ಮಕ ಜವಾಬ್ದಾರಿಯನ್ನು ವರದಿ ಚರ್ಚಿಸುವುದಿಲ್ಲ

ಮಾಲ್ಡೀವ್ಸ್‌ನ ರಾಜಕೀಯ ಬಿಕ್ಕಟ್ಟು–ಪರಿಹಾರ

ಭಾರತಕ್ಕೆ ಉಳಿದಿರುವ ದಾರಿಯೆಂದರೆ, ವಿಶ್ವಸಂಸ್ಥೆ ಮತ್ತು ಅಮೆರಿಕದ ಜೊತೆಗೂಡಿ ರಾಜತಾಂತ್ರಿಕ ಮಾರ್ಗದ ಮೂಲಕ ಮಾಲ್ಡೀವ್ಸ್‌ ಬಿಕ್ಕಟ್ಟನ್ನು ಪರಿಹರಿಸಲು ಶ್ರಮಿಸುವುದು.

ವಾಣಿಜ್ಯ

‘ಟಿಟಿಕೆ ಪ್ರೆಸ್ಟೀಜ್’ ಯಶೋಗಾಥೆ

ಟಿಟಿಕೆ ಗ್ರೂ‍ಪ್‌ನ ಅಂಗಸಂಸ್ಥೆಯಾಗಿರುವ ‘ಟಿಟಿಕೆ ಪ್ರೆಸ್ಟೀಜ್‌’, ಬರೀ ಪ್ರೆಷರ್‌ ಕುಕ್ಕರ್‌ ತಯಾರಿಕೆ ಸಂಸ್ಥೆ ಎನ್ನುವ ಗ್ರಾಹಕರ ನಂಬಿಕೆ ಬದಲಿಸಲು ಸಾಕಷ್ಟು ಶ್ರಮಪಟ್ಟಿದೆ. ಪ್ರೆಷರ್‌ ಕುಕ್ಕರ್‌ನಿಂದ ಹಿಡಿದು ವೈವಿಧ್ಯಮಯ ಉತ್ಪನ್ನಗಳ ಮೂಲಕ ಗ್ರಾಹಕರ ಮನ ಗೆದ್ದಿದೆ.

ಗುಂಪು ವಿಮೆ: ಜತೆಗಿರಲಿ ಇನ್ನೊಂದು ವಿಮೆ

ಕಾರ್ಪೊರೇಟ್‌ ಗುಂಪು ಆರೋಗ್ಯ ವಿಮೆ ಖಂಡಿತವಾಗಿಯೂ ಒಳ್ಳೆಯ ಉಪಕ್ರಮ.  ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು  ಗುಂಪು ವಿಮೆಯ ಫಲಾನುಭವಿಗಳು  ಪ್ರತ್ಯೇಕ ಸ್ವತಂತ್ರ ವಿಮೆ ಮಾಡಿಸುವುದರಿಂದ ದೊರೆಯುವ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.

‘ಎಸ್‍ಎಂಇ’ಗಳ ಡಿಜಿಟಲೀಕರಣಕ್ಕೆ ಸೂಕ್ತ ಸಮಯ

ತಂತ್ರಜ್ಞಾನ ಸ್ಟಾರ್ಟ್‌ಅಪ್‍ಗಳ ಚಿಗುರೊಡೆಯುವಿಕೆ ಹಾಗೂ ಡಿಜಿಟಲ್ ಪಾವತಿಯ ಅಳವಡಿಕೆ ವಿಷಯದಲ್ಲಿ ದಕ್ಷಿಣ ಭಾರತ  ಮುಂಚೂಣಿಯಲ್ಲಿದೆ. ತಂತ್ರಜ್ಞಾನದ ಬೆಂಬಲದಿಂದ  ಇಲ್ಲಿಯ ಹಲವು ಉದ್ಯಮಗಳು  ತಮ್ಮ ವ್ಯವಹಾರವನ್ನು ವಿಸ್ತರಿಸಿವೆ.

ಹಣಕಾಸು ಯೋಜನೆ ಮೇಲೆ ಬಜೆಟ್‌ ಪರಿಣಾಮ

ಕೇಂದ್ರ ಸರ್ಕಾರದ ಬಜೆಟ್‌ ನಿಮ್ಮ ಹಣಕಾಸಿನ ಯೋಜನೆಗಳನ್ನು ಬದಲಾಯಿಸುತ್ತದೆಯೇ ಎನ್ನುವ ಅನುಮಾನಗಳಿಗೆ ಸಂಬಂಧಿಸಿದಂತೆ ವೈಭವ್‌ ಅಗರ್‌ವಾಲ್‌ ವಿವರಗಳನ್ನು ನೀಡಿದ್ದಾರೆ.

ತಂತ್ರಜ್ಞಾನ

ವಾಟ್ಸ್ ಆ್ಯಪ್‌ನಲ್ಲಿ ಹೀಗೂ ಇವೆ ಸುಲಭ ಉಪಾಯಗಳು

ವಾಟ್ಸ್‌ಆ್ಯಪ್‌ನಲ್ಲಿ ಫೋಟೊ ಕಳಿಸಿದರೆ ರೆಸೊಲ್ಯೂಷನ್ ಹೊರಟು ಹೋಗುತ್ತದೆ ಎಂದು ಹೇಳುವುದನ್ನು ಕೇಳಿದ್ದೇವೆ. ಆದರೆ ರೆಸೊಲ್ಯೂಷನ್ ಕಡಿಮೆಯಾಗದಂತೆ ಫೋಟೊಗಳನ್ನು ವಾಟ್ಸ್ ಆ್ಯಪ್ ನಲ್ಲಿಯೂ ಕಳುಹಿಸಬಹುದು.

ಮಾತೇ ಮಂತ್ರವಾದಾಗ!

ನಿತ್ಯ ಬಳಸುವ ಸಾಧನಗಳು ಮತ್ತು ಉಪಕರಣಗಳ ಜತೆ ಮಾತನಾಡಿಸುವಷ್ಟು ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಇಷ್ಟು, ದಿನ ಬಳಸುತ್ತಿದ್ದ ಟೆಕ್ಸ್ಟ್... ಕಮಾಂಡ್‌... ಟಚ್‌ಸ್ಕ್ರೀನ್ ತಂತ್ರಜ್ಞಾನಗಳನ್ನೂ ಮೀರಿ ಈಗ ಮಾತುಗಳೇ ಇನ್‌ಪುಟ್ಸ್‌ ಆಗಿ ಬದಲಾಗಿವೆ.

ಫೇಕ್‍ ನ್ಯೂಸ್ ಬಗ್ಗೆ ಎಚ್ಚರವಿರಲಿ

ಸುಳ್ಳು ಸುದ್ದಿಗಳು ಹೆಚ್ಚಾಗಿ ಆಕರ್ಷಕ ಶೀರ್ಷಿಕೆಗಳನ್ನು ಹೊಂದಿರುತ್ತವೆ. ಈ ಸುದ್ದಿಗಳ ಶೀರ್ಷಿಕೆಗಳು ನೋಡಿದ ಕೂಡಲೇ ಓದುಗರಲ್ಲಿ ಕುತೂಹಲ ಹುಟ್ಟಿಸುವಂತಿದ್ದು, ಒಳಗಿರುವ ಸುದ್ದಿಯಲ್ಲಿ ಶೀರ್ಷಿಕೆಯಲ್ಲಿ ಹೇಳಿದಂತೆ ಇರುವ ವಿಷಯಗಳು ಇರುವುದಿಲ್ಲ.

ಕಣ್ಣೀರಿನಿಂದ ಮಧುಮೇಹ ನಿಯಂತ್ರಣ?

ದೇಹದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದಕ್ಕಾಗಿ, ಇನ್ಸುಲಿನ್ ಚುಚ್ಚು ಮದ್ದು ಬಳಸುವುದು ಅನಿವಾರ್ಯವಾಗಿರುತ್ತದೆ.