‘ಪ್ರೇಮ ಬರಹ’ದ ಮೊದಲ ಅಕ್ಷರ

9 Feb, 2018
ಪದ್ಮನಾಭ ಭಟ್‌

‘ನಾನು ಇಲ್ಲಿಗೆ ಯಾಕೆ ಬಂದಿದ್ದೀನಿ ಎನ್ನುವುದು ನನಗೆ ಚೆನ್ನಾಗಿ ಗೊತ್ತು’ -ಹೀಗೆಂದು ಸ್ಪಷ್ಟವಾಗಿ ಹೇಳಿದರು ಐಶ್ವರ್ಯಾ ಅರ್ಜುನ್‌. ತಂದೆಯ ಜನಪ್ರಿಯತೆ ನಿಮಗೆ ಯಾವತ್ತೂ ಭಾರ ಅನಿಸಿಲ್ಲವೇ? ಎಂಬ ಪ್ರಶ್ನೆಗೆ ಅವರು ಉತ್ತರವಾಗಿದ್ದು ಹೀಗೆ. ಅದು ಎದುರಿನವರಿಗೆ ಹೇಳಿದಷ್ಟೇ, ತಮಗೆ ತಾವು ಹೇಳಿಕೊಂಡ ಹಾಗೆಯೂ ಇತ್ತು.

‘ನನ್ನ ತಂದೆ ಅರ್ಜುನ್‌ ಸರ್ಜಾ ದೊಡ್ಡ ನಟ. ಅವರ ಹೆಸರನ್ನು ಉಳಿಸಬೇಕು. ಆ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಈ ಎಲ್ಲವೂ ನಿಜ. ಆದರೆ ಅದನ್ನೇ ತಲೆಯಲ್ಲಿ ತುಂಬಿಕೊಂಡು ಕೂತರೆ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನಾನು ಸಿನಿಮಾರಂಗಕ್ಕೆ ಬಂದಿರುವುದು ನಟನೆಯ ಪ್ಯಾಷನ್‌ ಇರುವುದರಿಂದ. ಆದ್ದರಿಂದ ಉಳಿದ ಯಾವ ಸಂಗತಿಯೂ ನನ್ನನ್ನು ಅತಿಯಾಗಿ ಕಾಡುವುದಿಲ್ಲ’ ಎಂದು ಇನ್ನಷ್ಟು ವಿಸ್ತರಿಸಿ ಹೇಳಿದರು.

ಐಶ್ವರ್ಯಾ ಅಭಿನಯದ ‘ಪ್ರೇಮ ಬರಹ’ ಸಿನಿಮಾ ಈ ವಾರ (ಫೆ.9) ತೆರೆಕಾಣುತ್ತಿದೆ. ಇದು ಅವರ ಮೊದಲ ಸಿನಿಮಾ. ಅವರ ಈ ಅಂಬೆಗಾಲ ಹೆಜ್ಜೆಗೆ ಅಪ್ಪನ ಕಿರುಬೆರಳ ಭದ್ರ ಹಿಡಿತ ಸಿಕ್ಕಿರುವುದೂ ಅವರ ಉತ್ಸಾಹವನ್ನು ಹೆಚ್ಚಿಸಿದೆ. ಮಗಳ ಮೊದಲ ಸಿನಿಮಾಗೆ ಅರ್ಜುನ್‌ ಸರ್ಜಾ ಅವರೇ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಆರಂಭದಲ್ಲಿ ಅರ್ಜುನ್‌, ಮಗಳಿಗೆ ಮೂರು ಸ್ಕ್ರಿಪ್ಟ್‌ ಕೈಲಿಟ್ಟಿದ್ದರಂತೆ. ‘ತಂದೆಯವರು ಕೊಟ್ಟ ಮೂರು ಕಥೆಗಳಲ್ಲಿ ಒಂದು ನಾಯಕಿ ಪ್ರಧಾನ, ಇನ್ನೊಂದು ಪಕ್ಕಾ ಕಮರ್ಷಿಯಲ್‌ ಇತ್ತು. ಅಂಥ ಕಥೆಗಳನ್ನು ನಾನು ತುಂಬ ಕೇಳಿದ್ದೆ, ನೋಡಿದ್ದೆ. ಆದರೆ ಮೂರನೇ ಕಥೆ ಈ ಎರಡಕ್ಕಿಂತ ತುಂಬ ಭಿನ್ನವಾಗಿತ್ತು. ಒಬ್ಬಳು ನಟಿಗೆ ಮೊದಲ ಸಿನಿಮಾದಲ್ಲಿ ಏನೇನೂ ಇರಬೇಕೋ ಅವೆಲ್ಲ ಅಂಶಗಳೂ ಇದ್ದವು. ಪ್ರೇಮ, ಹಾಸ್ಯ, ಆ್ಯಕ್ಷನ್‌ ಎಲ್ಲ ಅಂಶಗಳೂ ಈ ಸಿನಿಮಾದಲ್ಲಿವೆ. ಆ ಕಾರಣದಿಂದ ಆ ಕಥೆಯನ್ನೇ ಆಯ್ದುಕೊಂಡೆ’ ಎಂದು ಸಿನಿಮಾ ಆಯ್ದುಕೊಂಡ ಕಾರಣವನ್ನು ವಿವರಿಸುತ್ತಾರೆ ಐಶ್ವರ್ಯಾ.

‘ನಮ್ಮ ಕುಟುಂಬದಲ್ಲಿ ನಾನು ಮೂರನೇ ಪೀಳಿಗೆಯ ಕಲಾವಿದೆ. ಅಂದ ಮೇಲೆ ನಿರೀಕ್ಷೆಗಳು ಇದ್ದೇ ಇರುತ್ತವೆ. ಆ ನಿರೀಕ್ಷೆಗೆ ತಕ್ಕ ಹಾಗೆ ವೇದಿಕೆ ಸಿಕ್ಕುವುದು ತುಂಬ ಮುಖ್ಯ. ಅಂಥ ವೇದಿಕೆ ನನ್ನ ತಂದೆಯಿಂದಲೇ ನಿರ್ಮಾಣವಾಗಿರುವುದು ನನ್ನ ಅದೃಷ್ಟ’ ಎಂದೂ ಅವರು ಹೇಳಿಕೊಳ್ಳುತ್ತಾರೆ.

ಕಳೆದು ಮೂರು ವರ್ಷಗಳ ಹಿಂದೆ ಮುಂಬೈನಲ್ಲಿ ಒಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದಾಗ ಐಶ್ವರ್ಯಾ ಅವರಿಗೆ ನಟನೆಯಲ್ಲಿ ಆಸಕ್ತಿ ಬೆಳೆಯಿತು. ನನ್ನೊಳಗೆ ಒಬ್ಬಳು ನಟಿ ಇದ್ದಾಳೆ ಎಂದು ಅರಿವಾಯಿತು. ಹಾಗೆಂದು ತಕ್ಷಣ ಅವರು ಯಾವುದೋ ಸಿನಿಮಾ ಒಪ್ಪಿಕೊಂಡು ನಟನೆಗೆ ಇಳಿದುಬಿಡಲಿಲ್ಲ. ಕೆಲವು ಸಮಯದ ನಂತರ ತಿರುಗಿ ಮುಂಬೈಗೆ ತೆರಳಿ ಇನ್ನೊಂದು ಕಾರ್ಯಾಗಾರದಲ್ಲಿ ಪಾಲ್ಗೊಂಡರು. ನಟನೆ ಬಗ್ಗೆ ಸಾಕಷ್ಟು ತಿಳಿದುಕೊಂಡ ಮೇಲೆಯೇ ಬಣ್ಣದ ಬದುಕಿಗೆ ಕಾಲಿಡುವ ನಿರ್ಧಾರ ಮಾಡಿದರು.

ಐಶ್ವರ್ಯಾ ಮನಸ್ಸು ಮಾಡಿದ್ದರೆ ಬೇರೆ ಭಾಷೆಗಳ ಚಿತ್ರರಂಗದ ಮೂಲಕವೂ ಬಣ್ಣದ ಜಗತ್ತಿಗೆ ಅಡಿಯಿಡಬಹುದಿತ್ತು. ಆದರೆ, ಅವರಿಗೆ ಅದು ಇಷ್ಟವಿರಲಿಲ್ಲ. ಹಾಗೆಯೇ ಇಲ್ಲಿನ ಜನರ ಪ್ರೀತಿ, ಪ್ರೋತ್ಸಾಹ ಅವರನ್ನು ಮಾತೃಭಾಷೆಯಲ್ಲಿಯೇ ಮೊದಲ ಸಿನಿಮಾದಲ್ಲಿ ನಟಿಸಬೇಕು ಎಂಬ ನಿರ್ಧಾರ ತಳೆಯಲು ಕಾರಣವಾಗಿತ್ತು. ಇದೇ ಕಾರಣಕ್ಕೆ ತಮಿಳಿನಲ್ಲಿ ಬಂದಿದ್ದ ಒಂದು ಅವಕಾಶವನ್ನು ತಿರಸ್ಕರಿಸಲೂ ಅವರು ಹಿಂದೆ ಮುಂದೆ ನೋಡಿಲ್ಲ. ಮುಂದೆಯೂ ಕನ್ನಡ ಚಿತ್ರರಂಗದಲ್ಲಿಯೇ ಮುಂದುವರಿಯುವ ಇರಾದೆ ಅವರದು.

‘ಪ್ರೇಮ ಬರಹ’ ಸಿನಿಮಾದಲ್ಲಿ ಅವರು ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಾಧುರ್ಯಾ ಎಂಬುದು ಪಾತ್ರದ ಹೆಸರು. ‘ಮೊದಲಾರ್ಧ ತುಂಬ ಮಾತಾಡುವ, ಜಗಳಗಂಟಿ ಥರ ನೋಡ್ತೀರಾ. ದ್ವಿತೀಯಾರ್ಧದಲ್ಲಿ ಬೇರೆ ಬೇರೆ ಛಾಯೆಗಳು ಬರುತ್ತ ಹೋಗುತ್ತವೆ. ತುಂಬ ವೈವಿಧ್ಯವಿರುವ, ಭಾವುಕ ಸ್ಪರ್ಶವೂ ಇರುವ ಪಾತ್ರ’ ಎಂದು ವಿವರಿಸುತ್ತಾರೆ.

ಒಂದು ಪಾತ್ರಕ್ಕಾಗಿ ವಿಶೇಷ ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಐಶ್ವರ್ಯಾ ಅವರಿಗೆ ಅಷ್ಟೊಂದು ನಂಬಿಕೆ ಇದ್ದಂತಿಲ್ಲ. ‘ನಟನೆ ಎನ್ನುವುದು ಮಾಡುತ್ತ ಮಾಡುತ್ತಲೇ ಕಲಿತುಕೊಳ್ಳುತ್ತ ಹೋಗುವುದು. ಅನುದಿನವೂ ಕಲಿಯುತ್ತಲೇ ಇರಬೇಕು’ ಎನ್ನುವ ಅವರು, ‘ಚಿತ್ರರಂಗಕ್ಕೆ ಬರಬೇಕು ಎಂದು ಮಾನಸಿಕವಾಗಿ ಸಿದ್ಧರಾಗಬೇಕು. ಶಕ್ತರಾಗಿರಬೇಕು. ಚಿತ್ರರಂಗದ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರಿಸಿಕೊಂಡಿರಬೇಕು’ ಎಂದು ಹೇಳಲು ಮರೆಯುವುದಿಲ್ಲ. ಹಾಗೆಯೇ ‘ನಮ್ಮ ಮನೆಯಲ್ಲಿಯೇ ಚಿತ್ರರಂಗದ ಜತೆ ಒಡನಾಟ ಇರುವ, ನಟನೆ, ನಿರ್ದೇಶನದ ಒಳ್ಳೆಯ ಮಾದರಿಗಳು ಇರುವುದರಿಂದ ನನಗೆ ತುಂಬ ತೊಂದರೆ ಎನಿಸಲಿಲ್ಲ’ ಎಂದೂ ಅವರು ಸೇರಿಸುತ್ತಾರೆ.

ತಂದೆಯ ನಿರ್ದೇಶನದಲ್ಲಿ ಕೆಲಸ ಮಾಡಿದ್ದೂ ಐಶ್ವರ್ಯಾಗೆ ಸಾಕಷ್ಟು ಸಂಗತಿಗಳನ್ನು ಕಲಿಸಿಕೊಟ್ಟಿದೆ. ‘ಪ್ರೇಮ ಬರಹದಲ್ಲಿ ನಟಿಸಿದ ಮೇಲೆ ಒಂದು ಸಿನಿಮಾ ಮಾಡುವಾಗ ನಿರ್ದೇಶಕ ಎಷ್ಟು ಮುಖ್ಯ ಎಂಬುದು ತಿಳಿಯಿತು. ಈಗ ನಾನು ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗಲೂ ನಿರ್ದೇಶಕ ಎಷ್ಟು ಪ್ರತಿಭಾವಂತ ಎಂಬುದನ್ನು ನೋಡುತ್ತೇನೆ. ನಂತರ ಕಥೆ, ಟೀಮ್ ಎಲ್ಲವೂ ಬರುತ್ತದೆ’ ಎಂದು ಅವರು ಹೇಳುತ್ತಾರೆ.

ಐಶ್ವರ್ಯಾಗೆ ಐತಿಹಾಸಿಕ ಪಾತ್ರದಲ್ಲಿ ನಟಿಸುವ ಇಂಗಿತ ಇದೆ. ಒಂದಕ್ಕಿಂತ ಒಂದು ಭಿನ್ನ ಪಾತ್ರಗಳ ಮೂಲಕ ತಮ್ಮ ವೃತ್ತಿಜೀವನವನ್ನು ಶ್ರೀಮಂತ ಗೊಳಿಸಿ ಕೊಳ್ಳುವ ಕನಸೂ ಅವರಿಗಿದೆ. ತಮ್ಮ ಈ ಆಸೆಗಳಿಗೆ ‘ಪ್ರೇಮ ಬರಹ’ ಸಮರ್ಥ ಮುನ್ನುಡಿ ಬರೆಯಲಿದೆ ಎಂಬ ನಂಬಿಕೆ ಅವರಿಗೆ ಇದೆ

*
ಯಾವುದೇ ಕಲಾಪ್ರಕಾರದಲ್ಲಿ ನೆಲೆಯೂರಬೇಕು ಎಂದರೆ ಪ್ಯಾಷನ್‌ ಇರಬೇಕು. ಹಾಗೆಯೇ ಪರಿಶ್ರಮ ಪಡುವ ಮನಸ್ಸಿರಬೇಕು. ಅವಿಲ್ಲದಿದ್ದರೆ ಉಳಿದ ಯಾವ ಸಂಗತಿಯೂ ನಿಮ್ಮನ್ನು ಬಹಳ ದೂರ ಕೈಹಿಡಿದು ನಡೆಸಲಾರವು.
-ಐಶ್ವರ್ಯಾ ಅರ್ಜುನ್‌, ನಟಿ

Comments
ಮುಖಪುಟ

ನೂತನ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಪ್ರಧಾನಿ ಮೋದಿ ಅಭಿನಂದನೆ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ಎಚ್‌.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯ ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದೇವೆ: ಕುಮಾರಸ್ವಾಮಿ

‘ನಮ್ಮದು ಅಸ್ಥಿರ ಸರ್ಕಾರ ಎಂಬ ತಪ್ಪುಕಲ್ಪನೆ ಬದಿಗಿಡಿ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ರಾಷ್ಟ್ರಕವಿ ಕುವೆಂಪು ತಮ್ಮ ಕವನದಲ್ಲಿ ಹೇಳಿರುವಂತೆ, ಸರ್ವಜನಾಂಗದ ಶಾಂತಿಯ ತೋಟ ನಮ್ಮ ರಾಜ್ಯವಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿದೆ’ ಎಂದು ನೂನತ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ನಾನೊಬ್ಬ ‘ಸಾಂದರ್ಭಿಕ ಶಿಶು’: ಮುಖ್ಯಮಂತ್ರಿ ಕುಮಾರಸ್ವಾಮಿ

ಮುಂದಿನ ದಿನಗಳಲ್ಲಿ  ಜೆಡಿಎಸ್‌– ಕಾಂಗ್ರೆಸ್‌ ಹೊಂದಾಣಿಕೆ ಸರಿ ಎನ್ನುವಂತಹ ರೀತಿಯಲ್ಲಿ ಆಡಳಿತ ನಡೆಸುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಕೇಂದ್ರದ ಎನ್‌ಡಿಎ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ 100ಕ್ಕೂ ಹೆಚ್ಚು ಸಂಘಟನೆಗಳ ಸದಸ್ಯರು ಬುಧವಾರ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿ ಪ್ರತಿಭಟನೆ ನಡೆಸಿದರು.

ಸಂಗತ

ಸಾಲಮುಕ್ತ ಸಮಾಜ: ಸ್ವಾಭಿಮಾನ ಸಮಾಜ

ಸ್ವಾಭಿಮಾನಿಗಳಾದ ಕೃಷಿಕರು ಸರ್ಕಾರ ಕೊಡಮಾಡುವ ಸಾಲಮನ್ನಾದ ಹಣವನ್ನು ವಿಧಾನಸೌಧಕ್ಕೆ ಎಸೆದುಬರುವ ಧೈರ್ಯವನ್ನು ತೋರಿಸಬೇಕಾಗುತ್ತದೆ

ಮಕ್ಕಳ ಕಳ್ಳರು ಎಲ್ಲಿದ್ದಾರೆ?

ಅಭದ್ರ ಸ್ಥಿತಿಯಲ್ಲಿರುವ ಅನ್ಯರೆಲ್ಲರೂ ಅನುಮಾನಕ್ಕೆ ಅರ್ಹರು ಎಂಬ ಮನಸ್ಥಿತಿಯ ಅತಿರೇಕವೇ ವದಂತಿ ಹಾಗೂ ಹಲ್ಲೆಗಳಿಗೆ ಪ್ರೇರಣೆ ನೀಡಿದಂತಿದೆ

ಸಮ್ಮಿಶ್ರ ಸರ್ಕಾರ: ಬೀಸುಮಾತು ಸರಿಯಲ್ಲ

ಭಾರತಕ್ಕೆ ಸಮ್ಮಿಶ್ರ ಸರ್ಕಾರ ಎನ್ನುವುದು ದೊಡ್ಡ ಸಮಸ್ಯೆಯಲ್ಲ. ಏಕೆಂದರೆ ಭಾರತದ ಸಮಾಜವೇ ಜಗತ್ತಿನ ಅತ್ಯಂತ ದೊಡ್ಡ ಸಮ್ಮಿಶ್ರ ವ್ಯವಸ್ಥೆಯಾಗಿದೆ.

ಅತಂತ್ರ ಸರ್ಕಾರದ ಹೆಜ್ಜೆಗಳು

ರಾಜಕಾರಣಕ್ಕೆ ಈಗ ಪಕ್ಷ ಒಂದು ನೆಪವಾಗಿದೆ. ಅದರ ಮೇಲೆ ಬಾಜಿ ಕಟ್ಟುವ ಪಣದಾಟ. ನಾಯಕರಿಂದ ಕಾರ್ಯಕರ್ತರವರೆಗೆ ಬರೀ ಕೂಗಾಟ...

ವಾಣಿಜ್ಯ

ನ್ಯೂಟ್ರಿ ಪ್ಯಾರಡೈಸ್‌ ಸ್ಟಾರ್ಟ್‌ಅಪ್‌

ಕಾಯಿಲೆ ಗುಣಪಡಿಸುವಲ್ಲಿ ಔಷಧೋಪಚಾರಗಳ ಜತೆಗೆ ಆರೋಗ್ಯಕರ ಆಹಾರ ಸೇವನೆಯೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರು ಚಿಕಿತ್ಸೆಗೆ ತ್ವರಿತವಾಗಿ ಸ್ಪಂದಿಸಲು ನೆರವಾಗುವ ಆಹಾರ ಉತ್ಪನ್ನಗಳನ್ನು ತಯಾರಿಸಿ, ಪೂರೈಸುತ್ತಿರುವ ಬೆಂಗಳೂರಿನ ನವೋದ್ಯಮ ‘ನ್ಯೂಟ್ರಿ ಪ್ಯಾರಡೈಸ್‌’ನ ಸಾಹಸ ಮತ್ತು ಸವಾಲುಗಳು ಇಲ್ಲಿದೆ.

ಕಬ್ಬು ಬೆಲೆ ನಿಗದಿಗೆ ಆಸ್ಟ್ರೇಲಿಯಾ ಮಾದರಿ

ಈ ವರದಿಯ ಶಿಫಾರಸಿನಂತೆ ಕಬ್ಬು ಬೆಳೆಗಾರರಿಗೆ ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಅನುಕ್ರಮವಾಗಿ 30:70 ರ ಅನುಪಾತದಂತೆ ಒಟ್ಟು ಆದಾಯದ ವರಮಾನ ಹಂಚಿಕೆಯನ್ನು ನಿಗದಿಪಡಿಸಲಾಗಿತ್ತು. ಈ ವರದಿಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು, ಪ್ರತಿಯೊಂದು ರಾಜ್ಯಗಳಲ್ಲಿ  ರೈತ ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳನ್ನೊಳಗೊಂಡ ಕಬ್ಬು ನಿಯಂತ್ರಣಾ ಮಂಡಳಿ ರಚಿಸಿದೆ.

ಹಿರಿಯರ ನೆರವಿಗೆ ಹಲವು ಸಾಧನಗಳು

ಬೇಸಿಕ್ ಮೊಬೈಲ್ ಫೋನ್, ಕೆಂಪುಗುಂಡಿ, ಹಸಿರು ಗುಂಡಿ ಒತ್ತುವುದು, ಮಾತನಾಡುವುದು… ಹಿರಿಯರಿಗೆ ತಿಳಿದಿರಬೇಕಾದ ತಂತ್ರಜ್ಞಾನ ಇಷ್ಟೇನಾ… ಇನ್ನೂ ಹಲವು ಇವೆ. ಕೆಲವು ಸಾಧನಗಳ ರೂಪದಲ್ಲಿದ್ದರೆ, ಇನ್ನೂ ಕೆಲವು ತಂತ್ರಾಂಶಗಳ ರೂಪದಲ್ಲಿವೆ.

ಮಹಿಳೆಯರಿಗೂ ಬೇಕು ಆರೋಗ್ಯ ವಿಮೆ

‘ಅಸೋಚಾಂ’ ನಡೆಸಿದ ಒಂದು ಅಧ್ಯಯನದ ಪ್ರಕಾರ ನೌಕರಿ ಮಾಡುವ ಶೇ 80ರಷ್ಟು ಭಾರತೀಯ ಮಹಿಳೆಯರು, ಹೃದಯದ ರಕ್ತನಾಳದ ಸಮಸ್ಯೆ, ಮಧುಮೇಹ, ರಕ್ತದೊತ್ತಡ, ಖಿನ್ನತೆ, ಬೊಜ್ಜು, ಬೆನ್ನು ನೋವು ಮುಂತಾದ ಜೀವನಶೈಲಿ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ

ತಂತ್ರಜ್ಞಾನ

ಬದಲಾಗಲಿದೆ ಸಂಚಾರ ಸೂತ್ರ

ಮನೆ ನಂ.35ರಲ್ಲಿ ನಿಂತು ಕಾಯುತ್ತಿದ್ದರೆ ಹಿಂದಿನ ಬೀದಿಯ ಮನೆ ನಂ.70ರಲ್ಲಿ ಕ್ಯಾಬ್ ನಮ್ಮ ಬರುವಿಕೆಗಾಗಿ ಕಾದಿರುತ್ತದೆ. ‘ಏಕೆ ಹೀಗೆ?’ ಎಂದು ನಮ್ಮಲ್ಲೇ ಗೊಣಗುವುದರ ಜತೆಗೆ ಚಾಲಕನ ಜತೆ ವಾಗ್ವಾದ ನಡೆಸಿ ಕಸ್ಟಮರ್ ಕೇರ್‌ಗೂ ಕರೆ ಮಾಡಿ ದೂರುಗಳ ಸುರಿಮಳೆ ಸಲ್ಲಿಕೆಯಾಗಿರುತ್ತದೆ. ಆದರೂ ಮತ್ತದೇ ಗೊಂದಲದ ಪುನರಾವರ್ತನೆ. ಇದಕ್ಕೆ ಕಾರಣ ಸದ್ಯ ಬಳಕೆಯಲ್ಲಿರುವ ನ್ಯಾವಿಗೇಷನ್(ಪಥದರ್ಶಕ) ಸಿಸ್ಟಮ್.

ಬದಲಾದ ಜಿಮೇಲ್ ಸ್ವರೂಪ; ಹೊಸತೇನಿದೆ?

ಜಿಮೇಲ್ ಡಿಸೈನ್ ಬದಲಾಗಿದ್ದು ಎಲ್ಲರೂ ಗಮನಿಸಿರಬಹುದು. ಜಿಮೇಲ್ ಬಳಕೆದಾರರು ಇನ್ನೂ ಹೊಸ ಡಿಸೈನ್‍ ಆಯ್ಕೆ ಮಾಡಿಕೊಂಡಿಲ್ಲ ಎಂದಾದರೆ ಜಿಮೇಲ್ ಸೆಟ್ಟಿಂಗ್ ಬಟನ್ ಕ್ಲಿಕ್ ಮಾಡಿದರೆ Try new Gmail ಎಂಬ ಆಪ್ಶನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಹೊಸ ಸ್ವರೂಪದ ಜಿಮೇಲ್‍ಗೆ ಸ್ವಿಚ್ ಆಗಬಹುದು.

ಫೇಸ್‌ಬುಕ್‌ನಲ್ಲಿ ಈ ವಿಷಯ ಶೇರ್ ಮಾಡಬೇಡಿ

ಫೇಸ್‌ಬುಕ್‌ ಅನ್ನು ಖಾಸಗಿ ಡೈರಿಯಂತೆ ಪರಿಗಣಿಸಿದವರು ಸಾಕಷ್ಟು ಮಂದಿ ಇದ್ದಾರೆ. ಅಂತಹವರಿಗೆ ತಮ್ಮ ಬದುಕಿನ ಸುಖ–ದುಃಖಗಳನ್ನು ಫೇಸ್‌ಬುಕ್ಕಿನಲ್ಲಿ ಹಂಚಿಕೊಂಡರೆ ನೆಮ್ಮದಿ. ಆದರೆ ಕೆಲವೊಂದು ವಿಷಯಗಳನ್ನು ಸಾಮಾಜಿಕ ತಾಣಗಳಲ್ಲಿ ಶೇರ್ ಮಾಡಿಕೊಳ್ಳುವಾಗ ವಿವೇಚನೆ ಅಗತ್ಯ.

ವಾಟ್ಸ್ಆ್ಯಪ್ ಬಳಕೆಗೆ ಕನಿಷ್ಠ ವಯಸ್ಸು ನಿಗದಿ

ಯುರೋಪ್ ದೇಶಗಳಲ್ಲಿ ವಾಟ್ಸ್ಆ್ಯಪ್ ಬಳಕೆದಾರರ ಕನಿಷ್ಠ ವಯೋಮಿತಿಯನ್ನು 16ಕ್ಕೆ ಏರಿಕೆ ಮಾಡಲಾಗಿದೆ. ಯುರೋಪ್ ರಾಷ್ಟ್ರಗಳಲ್ಲಿ ಈ ಹಿಂದೆ ಕನಿಷ್ಠ ವಯೋತಿ 13 ವರ್ಷ ಇತ್ತು...