ಹರೆಯದ ಮನಸುಗಳ ಪಿಸುಮಾತು

13 Feb, 2018

‘ನನಗೆ ಮಲಯಾಳಂ ಒಂದು ಅಕ್ಷರವೂ ಬರಲ್ಲ. ಆದರೂ ಈ ಹಾಡು ಕಟ್ಟಿಕೊಡುವ ಆರ್ದ್ರ ಭಾವಕ್ಕೆ ಲೈಕ್ ಒತ್ತಿದೆ. ಮಧುರ ದನಿ, ತೆಳು ಬೆಳಕಿನಲ್ಲಿ ತೇಲಿ ಬರುವ ಮುಗ್ಧ ಮುಖಗಳು, ಸ್ಲೋಮೋಷನ್‌ ದೃಶ್ಯಗಳು. ವಾಹ್! ಬಾಲ್ಯ ಮುಗಿದು, ಯೌವನದ ಹೊಸ್ತಿಲಿಗೆ ಕಾಲಿಡುವ ಹುಡುಗ– ಹುಡುಗಿಯರ ಮನದ ಭಾವನೆಗಳಿಗೆ ಭಾಷ್ಯ ಬರೆದಂತಿದೆ...’

ಪ್ರಿಯಾ ಪ್ರಕಾಶ್ ಕಣ್ಣು ಹೊಡೆದು, ಹುಬ್ಬು ಹಾರಿಸಿ ವರ್ಲ್ಡ್‌ ಫೇಮಸ್ ಆದ ‘ಮಾಣಿಕ್ಯ ಮಲರಾಯ ಪೂವಿ’ ಹಾಡನ್ನು ಯುಟ್ಯೂಬ್‌ನಲ್ಲಿ ಇಣುಕಿದ ಬೆಂಗಳೂರು ಹುಡುಗ ಸಚಿನ್ ತನ್ನ ವಾಲ್‌ಮೇಲೆ ಬರೆದುಕೊಂಡಿರುವ ಸಾಲುಗಳು. ಹಾಡು ನೋಡಿದ ಅನೇಕರಿಗೆ ಪ್ರಿಯಾ ಹುಬ್ಬು ಹಾರಿಸುವುದನ್ನು ಮೀರಿ ನಾದಸುಧೆ ಮತ್ತು ದೃಶ್ಯವೈಭವ ಇಷ್ಟವಾಗುತ್ತಿದೆ.

‘ಒರು ಅದರ್ ಲವ್ ' ಮಲಯಾಳಂ ಚಿತ್ರದ ‘ಮಾಣಿಕ್ಯಂ ಮಲರಾಯ ಪೂವಿ’ ಹಾಡು ಬೆಂಗಳೂರು ಹುಡುಗ–ಹುಡುಗಿಯರ ಮನಸಿಗೂ ಲಗ್ಗೆ ಇಟ್ಟಿದೆ. ‘ಹಾಡು ಯಾಕಷ್ಟು ಇಷ್ಟವಾಯಿತು’ ಎಂದರೆ, ‘ಅದು ಹಾಗೇ, ನಮಗೇನು ಸಾಹಿತ್ಯ ಅರ್ಥವಾಗಿಲ್ಲ. ಆದರೆ ಹಾಡು ಇಷ್ಟವಾಗಿದೆ. ಬೇಕಿದ್ರೆ ನೀವೂ ಒಂದು ಸಲ ನೋಡಿ’ ಎನ್ನುವ ಉತ್ತರವಷ್ಟೇ ಸಿಗುತ್ತದೆ.

ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ನಡೆಯುವ ಪ್ರೇಮ ಪ್ರಸಂಗಗಳ ಸುತ್ತ ಈ ಹಾಡು ಸುತ್ತುತ್ತದೆ. ‘ಒರು ಅದರ್ ಲವ್’ನ ಈ ಹಾಡಿನಲ್ಲಿ ಎಲ್ಲಾ ಹೊಸಮುಖಗಳೇ. ವಾರ್ಷಿಕೋತ್ಸವದ ಸಂದರ್ಭದಲ್ಲಿ ‘ಮಾಣಿಕ್ಯ...’ ಹಾಡಿನ ಹಿನ್ನೆಲೆಯಲ್ಲಿ ಪಾತ್ರಗಳನ್ನು ನಿರ್ದೇಶಕರು ಚಿತ್ರಿಸಿದ್ದಾರೆ. ಗೆಳತಿಯ ಪಕ್ಕದಲ್ಲಿ ಕೂರಲು ಹೋಗುತ್ತಿರುವಾಕೆ, ಇಷ್ಟದ ಹುಡುಗಿಯನ್ನು ಕಣ್ಣಿನಲ್ಲೇ ಆರಾಧಿಸುವ ಹುಡುಗ, ಕಣ್ಸನ್ನೆಯ ಮಾತುಗಳು, ಇಷ್ಟದ ಹುಡುಗಿ ಇನ್ನೊಬ್ಬನಿಗೆ ಒಲಿಯುವ ಭಗ್ನ ಭಾವನೆ, ತನಗೆ ಸಹಾಯ ಮಾಡಿದ ಹುಡುಗಿಯನ್ನು ಅದೇ ಕ್ಷಣ ಇಷ್ಟಪಡುವ ಹುಡುಗ... ಒಮರ್ ಲುಲು ನಿರ್ದೇಶನದ ಈ ಹಾಡು ನೋಡಿದವರು ನೇರವಾಗಿ ಹರೆಯದ ಹೊನಲಿಗೆ ಜಾರುತ್ತಾರೆ.

ಪಿಎಂಎ ಜಬ್ಬಾರ್‌ ಸಾಹಿತ್ಯಕ್ಕೆ ವಿನೀತ್‌ ಶ್ರೀನಿವಾಸನ್‌ ಕಂಠ ಜೀವ ತುಂಬಿದೆ. ಫೆ.9ರಂದು ಯುಟ್ಯೂಬ್‌ಗೆ ಅಪ್‌ಲೋಡ್ ಹಾಡನ್ನು ಈವರೆಗೆ 89 ಲಕ್ಷ ಮಂದಿ ನೋಡಿ, ಮೆಚ್ಚಿದ್ದಾರೆ. ಹಾಡು ಕೇಳಲು ಆಸೆಯಾದರೆ ಯುಟ್ಯೂಬ್‌ನಲ್ಲಿ manikya malaraya poovi ಎಂದು ಟೈಪಿಸಿ.

Comments
ಮುಖಪುಟ

‘ಕುಟುಂಬದ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ’

‘ನಾಡಿನ ಜನ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡದೇ ಇದ್ದರೂ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಭರವಸೆ ಈಡೇರಿಸಲು ಸಾಧ್ಯವಾಗದೇ ಇದ್ದರೆ ನಾನು ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ನಾನೇ ಹಿಂದೆ ಸರಿಯುತ್ತೇನೆ’ –ಎಚ್.ಡಿ. ಕುಮಾರಸ್ವಾಮಿ.

ಖಾತೆ ಕ್ಯಾತೆ: ವಿಸ್ತರಣೆ ವಿಳಂಬ

ಹಣಕಾಸು ಖಾತೆಗಾಗಿ ಜೆಡಿಎಸ್‌ ಬಿಗಿಪಟ್ಟು ಮುಂದುವರಿಸಿದೆ. ಇದರಿಂದ ಬೆದರಿರುವ ಕಾಂಗ್ರೆಸ್ ವರಿಷ್ಠರು ಈ ಖಾತೆ ಬಿಟ್ಟು ಕೊಡುವ ಆಲೋಚನೆಯಲ್ಲಿ ಇದ್ದಾರೆ. ಇನ್ನುಳಿದ ಖಾತೆಗಳ ಹಂಚಿಕೆ ಬಗ್ಗೆ ಚರ್ಚೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಚಿವ ಸಂಪುಟದ ಉಳಿದ ಸದಸ್ಯರ ಪ್ರಮಾಣ ವಚನಕ್ಕೆ ವಾರಾಂತ್ಯದವರೆಗೆ ಮುಹೂರ್ತ ನಿಗದಿಯಾಗುವ ಲಕ್ಷಣ ಕಾಣಿಸುತ್ತಿಲ್ಲ.

ಶೇನ್ ‘ಸೂಪರ್’ ಆಟ; ಚೆನ್ನೈಗೆ ಕಿರೀಟ

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್‌ 2018ರ ಫೈನಲ್‌ ಪಂದ್ಯದಲ್ಲಿ ಶೇನ್‌ ವಾಟ್ಸನ್ ಅವರ ಭರ್ಜರಿ ಶತಕದ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಅಮೋಘ ಜಯ ಸಾಧಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರೈತರ ಸಾಲ ಮನ್ನಾ: ಕರ್ನಾಟಕ ಬಂದ್‌ ಅನುಮಾನ?

‘ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌ ನಡೆಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸದನದಲ್ಲಿ ಶುಕ್ರವಾರ ಹೇಳಿದ್ದರು. ಬಂದ್‌ ವೇಳೆ ಬಿಗಿ ಭದ್ರತೆ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿ–ಐಜಿ) ನೀಲಮಣಿ ರಾಜು, ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂಗತ

ದುರ್ಬಲ ರಾಜಕಾರಣಿಗಳು

ಕಂಡಕಂಡವರಿಗೆಲ್ಲ ಉದ್ದಂಡ, ದೀರ್ಘದಂಡ ನಮಸ್ಕಾರ ಹಾಕಿ, ತಮ್ಮ ವ್ಯಕ್ತಿತ್ವವನ್ನೇ ಇಲ್ಲಗೈಯುತ್ತಿರುವ ರಾಜಕಾರಣಿಗಳು ಈ ರಾಜ್ಯಕ್ಕೆ, ಈ ದೇಶಕ್ಕೆ ಬೇಡವೇ ಬೇಡ

ಇವಿಎಂ ಮತ್ತು ಮುಂದಿನ ಚುನಾವಣೆಗಳು

ಮೇ 12ರಂದು ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಮೇ 13ರ ಸಂಚಿಕೆಯಲ್ಲಿ ಎಲ್ಲಾ ಪತ್ರಿಕೆಗಳು ವಿವರವಾಗಿ ದಾಖಲಿಸಿದ್ದವು. ಆದರೆ, ‘ಪ್ರಜಾವಾಣಿ’ಯಲ್ಲಿ ಬಂದ ವಿವರಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಎರಡು ಅಂಶಗಳಿದ್ದುವು. ಈ ಅಂಶಗಳನ್ನು ಓದುಗರು

ಪಾರದರ್ಶಕತೆ ಮುಖ್ಯ

ಇವಿಎಂನ ವಿಶ್ವಾಸಾರ್ಹತೆ ಸಾಬೀತುಪಡಿಸಲು ವಹಿಸುವ ಮುತುವರ್ಜಿಯ ಜೊತೆಜೊತೆಗೆ ಅದರ ದುರ್ಬಳಕೆಗೆ ಇರುವ ಅವಕಾಶಗಳತ್ತ ಕೂಡ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳು ಗಮನಹರಿಸುವುದು ಅಗತ್ಯ.

ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ

ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಕಾರಣಕ್ಕಾಗಿ ಪುಟ್ಟ ಪುಟ್ಟ ಸಮುದಾಯಗಳಲ್ಲಿ ಸ್ವಾಭಿಮಾನ ಮತ್ತು ಒಟ್ಟುಗೂಡುವಿಕೆಗೆ ಜೀವ ಬಂದಿದೆ

ಆಟಅಂಕ

ಅಲೋಕ್ ಕನಸುಗಳ ‘ಏಸ್’

‘ಟೆನಿಸ್‌ ದುಬಾರಿ ಆಟವಾಗಿದ್ದು, ಬಡವರ ಕೈಗೆಟುಕುವುದಿಲ್ಲ. ಇದೂ ಒಂದು ರೀತಿಯಲ್ಲಿ ಜೂಜಾಟ ಇದ್ದಂತೆ. ಆಟದಲ್ಲಿ ಕ್ಲಿಕ್‌ ಆದರೆ ನಾವು ಹೂಡಿದ ಹಣ ಬರುತ್ತದೆ; ಇಲ್ಲದಿದ್ದರೆ ಎಲ್ಲವನ್ನೂ ಕಳೆದುಕೊಂಡು ಬರಿದಾಗುತ್ತೇವೆ’ ಎಂಬುದು ಅಲೋಕ್‌ ಅಭಿಪ್ರಾಯ.

ಅವಕಾಶಕ್ಕಾಗಿ ಕಾದವರು...

ಐಪಿಎಲ್‌ 11ನೇ ಆವೃತ್ತಿ ಮುಕ್ತಾಯ ಗೊಂಡಿದೆ. ಪ್ರಶಸ್ತಿ ಕನಸು ಹೊತ್ತು ಭರವಸೆಯಿಂದ ಕಣಕ್ಕೆ ಇಳಿದಿದ್ದ ಎಷ್ಟೋ ತಂಡಗಳು ಪ್ಲೇ ಆಫ್ ಹಂತಕ್ಕೇರುವುದಕ್ಕೂ ಸಾಧ್ಯವಾಗದೆ ನಿರಾಸೆಗೊಂಡಿವೆ. ಇದು ತಂಡಗಳ ಕಥೆಯಾದರೆ, ಆಯ್ಕೆಯಾಗಿಯೂ ಆಡಲು ಸಾಧ್ಯವಾಗದ ಯುವ ಆಟಗಾರರು ಅನೇಕರು ಇದ್ದಾರೆ. ಅವರು ಈಗ ನಿರಾಸೆಗೊಂಡಿದ್ದಾರೆ.
 

ಕೈಗೂಡುವುದೇ ಪದಕದ ಕನಸು?

ಏಳುಬೀಳುಗಳ ನಡುವೆ ಸಾಗುತ್ತಿರುವ ಭಾರತ ಮಹಿಳಾ ಹಾಕಿ ತಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. 2014ರ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು, ಏಷ್ಯಾ ಕಪ್‌ನಲ್ಲಿ ಚಿನ್ನ, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹೀಗೆ ಹಲವು ಪದಕಗಳನ್ನು ಜಯಿಸಿದೆ. ಈ ಎಲ್ಲ ಸಾಧನೆ ಜುಲೈ 21ರಿಂದ ಲಂಡನ್‌ನಲ್ಲಿ ಆರಂಭವಾಗುವ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಪದಕ ಗೆಲ್ಲುವ ಆಸೆಗೆ ಸ್ಫೂರ್ತಿಯಾಗುವುದೇ?  

ಟಾಸ್ ಏನ್ ಆಗುತ್ತೆ..?

ಇದೀಗ ಟಾಸ್ ಹಾಕುವ ಪದ್ಧತಿಯನ್ನು ಕೈಬಿಡಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚಿಂತನೆ ನಡೆಸಿದೆ. ಇದಕ್ಕೆ ಹಲವು ಹಿರಿಯ ಆಟಗಾರರಿಂದ ಪರ–ವಿರೋಧದ ಚರ್ಚೆಗಳು ಆರಂಭವಾಗಿವೆ.

ಶಿಕ್ಷಣ

ಪರೀಕ್ಷೆ ಎಂಬುದು ಪೆಡಂಭೂತ ಅಲ್ಲ!

ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಯನ್ನು ಬರೆಯುತ್ತಿರಲಿ. ಪರೀಕ್ಷೆ, ಪರೀಕ್ಷೆ ಎಂದು ಹೆದರಿ ಕೂರಬಾರದು. ಧೈರ್ಯ ಕಳೆದುಕೊಂಡರೆ ಮನಸ್ಸು ಗಲಿಬಿಲಿಯಾಗುತ್ತದೆ. ಮನೆಯಲ್ಲಿಯೇ ಕೃತಕವಾಗಿ ಪರೀಕ್ಷಾ ಕೊಠಡಿಯ ವಾತಾವರಣ ನಿರ್ಮಿಸಿಕೊಂಡು ಈ ಒತ್ತಡವನ್ನು ಅನುಭವಿಸಿ ಗೆಲ್ಲಬೇಕು. ಪರೀಕ್ಷೆ ಪೆಡಂಭೂತವಲ್ಲ; ಅದು ಕಲಿಕೆಯ ಮಾಪಕ. ಸೆಮಿಸ್ಟರ್‌ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಈ ಲೇಖನ ಮಾಹಿತಿಯನ್ನು ನೀಡುತ್ತದೆ.

 

ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್ ಮಾಡುವಾಸೆ...

ಬಿಎ/ಬಿಕಾಂ ಇನ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ಗಳಿವೆ. ಎಂಟಿಎ ಮಾಸ್ಟರ್ ಆಫ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ ಸಹ ಇದೆ. ಇಂಟಿಗ್ರೇಟೆಡ್ ಕೋರ್ಸ್ 5 ವರ್ಷದ್ದು, ಎಂಬಿಎ ಇನ್ ಟ್ರಾವೆಲ್ ಅಂಡ್ ಟೂರಿಸಂ ಇದೆ.

ಪ್ರಜಾವಾಣಿ ಕ್ವಿಜ್ -22

1. ಕರ್ನಾಟಕ ಸಂಗೀತದಲ್ಲಿರುವ ಮೇಳಕರ್ತ ರಾಗಗಳ ಸಂಖ್ಯೆ ಎಷ್ಟು?

ಮರಳಿ ಯತ್ನವ ಮಾಡೋಣ...

ಪರೀಕ್ಷೆಯಲ್ಲಿ ಫೇಲಾದ ಮಾತ್ರಕ್ಕೆ ಜೀವನವೇ ಮುಗಿಯಿತು ಎಂದುಕೊಳ್ಳಬಾರದು. ಬದಲಾಗಿ ‘ಈ ಪರೀಕ್ಷೆಯಲ್ಲಿ ಫೇಲಾದರೆ ಏನಂತೆ ಮುಂದೆ ಬರುವ ಮರುಪರೀಕ್ಷೆ ಬರೆದು ಪಾಸು ಮಾಡೇ ಮಾಡುತ್ತೇನೆ’ ಎಂಬ ಆತ್ಮವಿಶ್ವಾಸದೊಂದಿಗೆ ಹೊಸ ಮಾರ್ಗದೊಂದಿಗೆ ಓದಿದಾಗ ಯಶಸ್ಸು ಖಂಡಿತ ನಿಮ್ಮದೆ...