ವಿವಾಹ ಸಂಭ್ರಮಾಚರಣೆಯಲ್ಲಿ ಹಾರಿದ ಗುಂಡು: ಸೈನಿಕ ಸಾವು

13 Feb, 2018
ಏಜೆನ್ಸಿಸ್‌

ಕಾನ್ಪುರ: ವಿವಾಹ ಸಮಾರಂಭದ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡು ತಗುಲಿ 28 ವರ್ಷದ ಸೈನಿಕ ಸಾವಿಗೀಡಾಗಿರುವ ಘಟನೆ ಇಲ್ಲಿನ ಶ್ಯಾಮ್‌ ನಗರ ಪ್ರದೇಶದಲ್ಲಿ ನಡೆದಿದೆ.

‘ಕುಲದೀಪ್‌ ದೀಕ್ಷಿತ್‌ ಸಾವಿಗೀಡಾದವರು. ಅವರ ಸ್ನೇಹಿತ ಶಿವ ಪ್ರಕಾಶ್‌ ಮದುವೆ ಸಂಭ್ರಮಾಚರಣೆ ವೇಳೆ ಈ ದುರಂತ ಸಂಭವಿಸಿದೆ’ ಎಂದು ಪೂರ್ವ ವಿಭಾಗದ ಎಸ್‌‍ಪಿ ಅನುರಾಗ್‌ ಆರ್ಯ ಹೇಳಿದ್ದಾರೆ.

‘ಸಮಾರಂಭದಲ್ಲಿ ಅತಿಥಿಗಳು ನೃತ್ಯ ಮಾಡುತ್ತಿದ್ದರು. ಈ ವೇಳೆ ಕುಲದೀಪ್‌ ಅವರ ಪರವಾನಗಿ ಹೊಂದಿದ್ದ ಬಂದೂಕಿನಿಂದ ಅವರ ಮತ್ತೊಬ್ಬ ಸ್ನೇಹಿತ ಸಂಜಯ್‌ ಮೌರ್ಯ ಹಲವು ಬಾರಿ ಗುಂಡು ಹಾರಿಸಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ದೀಕ್ಷಿತ್‌ ಅವರ ಹೊಟ್ಟೆ ಭಾಗಕ್ಕೆ ಗುಂಡು ತಗುಲಿದೆ. ತಕ್ಷಣ ಅವರನ್ನು ಕಾನ್ಶಿರಾಮ್‌ ತುರ್ತು ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು’ ಎಂದು ಆರ್ಯ ತಿಳಿಸಿದ್ದಾರೆ.

ಸದ್ಯ ಆರೋಪಿ ಆರ್ಯ ಅವರನ್ನು ಬಂಧಿಸಲಾಗಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Read More

Comments
ಮುಖಪುಟ

‘ಕೈ’ ಪಟ್ಟಿ ಅಂತಿಮ: ಬಿಜೆಪಿ ನಡೆ ನಿಗೂಢ

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಬಾಕಿ ಇರುವಾಗ ಎಲ್ಲ 224 ಕ್ಷೇತ್ರಗಳ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಆದರೆ, ಪ್ರಮುಖ ವಿರೋಧ ಪಕ್ಷ ಬಿಜೆಪಿ 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಖೈರುಗೊಳಿಸಿಲ್ಲ.

ಅತ್ಯಾಚಾರ, ಆಸ್ತಿ ಮುಟ್ಟುಗೋಲು: ಸುಗ್ರೀವಾಜ್ಞೆಗೆ ಅಂಕಿತ

12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸುವ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಶನಿವಾರ ರಾತ್ರಿಯೇ ಅಂಕಿತ ಹಾಕಿದ್ದಾರೆ.

‘ಚಾಮುಂಡಿ’ ಕೋಪಕ್ಕೆ ಬೆದರಿ ಬಾದಾಮಿಗೆ

‘ದೇಶ ಗೆದ್ದ ಹಮ್ಮಿನಲ್ಲಿರುವ ಬಿಜೆಪಿಯನ್ನು ಮಣಿಸಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುತ್ತೇನೆ’ ಎಂದು ಸಾರುತ್ತಿರುವ, ‘ನುಡಿದಂತೆ ನಡೆದಿದ್ದೇವೆ’ ಎಂದು ಬೀಗುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದಾಗಿ ಬಾದಾಮಿಗೂ ಲಗ್ಗೆ ಇಟ್ಟಿದ್ದಾರೆಯೇ?

ಮಾದ್ಯಮಗಳಿಗೆ ಮಸಾಲೆ ಕೊಡಬೇಡಿ: ಮೋದಿ ಎಚ್ಚರಿಕೆ

ಕ್ಯಾಮೆರಾ ನೋಡಿದ ಕೂಡಲೇ ನೀವು ಮಾತನಾಡಲು ಶುರುಮಾಡುತ್ತೀರಿ, ನೀವು ಮಾತನಾಡಿದ ಅರೆಬರೆ ವಿಷಯಗಳನ್ನೇ ಅವರು ಹೆಕ್ಕಿ ಪ್ರಸಾರ ಮಾಡುತ್ತಾರೆ. ಹಾಗಾಗಿ  ಈ ರೀತಿಯ ಹೇಳಿಕೆ ನೀಡುವುದನ್ನು ನಿಲ್ಲಿಸಿ 

ಸಂಗತ

ಅತ್ಯಾಚಾರ ನಂತರದ ಅನಾಚಾರ

ದೇಶದಲ್ಲಿ ನಡೆಯುವ ಯಾವುದೇ ಘಟನೆಯನ್ನು ರಾಜಕೀಯ ಆಯಾಮದಿಂದಲೇ ವಿಶ್ಲೇಷಿಸುವ ಪರಂಪರೆ ಆರಂಭವಾಗಿರುವುದು ದುರಂತ.

ವಿಶ್ವ ಪುಸ್ತಕ ದಿನ ಹಾಗೂ ಪುಸ್ತಕ ಸಂಸ್ಕೃತಿ

ಪುಸ್ತಕಗಳು ಎಲ್ಲರಿಗೂ ಸಂಗಾತಿಗಳಾಗಬೇಕಾಗಿರುವುದು ಇಂದಿನ ಅಗತ್ಯ. ಈ ಬಾರಿಯ ‘ವಿಶ್ವ ಪುಸ್ತಕ ದಿನ’ ನಮ್ಮೆಲ್ಲರಲ್ಲೂ ಪುಸ್ತಕ ಪ್ರೀತಿಯನ್ನು ಉದ್ದೀಪಿಸುವ ದಿನವಾಗಲಿ

ಸಹಭೋಜನ ಮತ್ತು ಸಮಾನತೆಯ ಆದರ್ಶ

ಮೊದಲೇ ಕೈಬಾಯಿಗಿಲ್ಲದೆ ನಿಕೃಷ್ಟ ಜೀವನ ನಡೆಸುವ ಜನರಿಗೆ ನಾಲ್ಕು ತಿಂಗಳಿಂದ ಸಂಬಳವಿಲ್ಲದ ಮಕ್ಕಳುಮರಿಗಳ ಕುಟುಂಬವೊಂದು ಎಷ್ಟು ಕಂಗಾಲಾಗಿರಬಹುದೋ ಯೋಚಿಸಿ. ಅಂಥವರ ಮನೆಗೆ ನಾಯಕರ ಪುಟ್ಟ ಪಟಾಲಮ್ಮು ಬೆಳಬೆಳಗ್ಗೆ ನುಗ್ಗಿ ‘ನಿಮ್ಮೊಂದಿಗೆ ಉಪಾಹಾರ ಸೇವಿಸುತ್ತೇವೆ’ ಎಂದರೆ ಹೇಗಾಗಿರಬೇಕು?

ರಾಜಕೀಯ ನಂಬಿ ಕೆಟ್ಟ ಮಾದಿಗರು

ರಾಜ್ಯ ರಾಜಕಾರಣದಲ್ಲಿ ಮಾದಿಗ ಮತ್ತು ಅದರ ಉಪಜಾತಿಗಳಿಗೆ ಎಲ್ಲಾ ರಾಜಕೀಯ ಪಕ್ಷಗಳೂ ನಂಬಿಕೆದ್ರೋಹ ಎಸಗುತ್ತಾ ಬಂದಿವೆ

ಆಟಅಂಕ

ರಣಜಿ: ಹಳೇ ಮಾದರಿಗೆ ಹೊಸ ರೂಪ

ರಣಜಿ ಆರಂಭವಾದಾಗಿನಿಂದ ಆಗಾಗ ನಿಯಮ ಮತ್ತು ಟೂರ್ನಿಯ ಮಾದರಿಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಈ ವರ್ಷದ ಟೂರ್ನಿಯಿಂದ ಪ್ರಿ ಕ್ವಾರ್ಟರ್‌ ಫೈನಲ್‌ ನಿಯಮ ಜಾರಿಗೆ ಬರಲಿದೆ. ಇದರಿಂದ ಎಂಟು ತಂಡಗಳಿಗೆ ತಲಾ ಒಂದು ಪಂದ್ಯ ಹೆಚ್ಚಿಗೆ ಸಿಗುತ್ತದೆ. ಇದರಿಂದ ಆಟಗಾರರ ಗುಣಮಟ್ಟ ಹೆಚ್ಚಾಗಲು ಸಾಧ್ಯವಾಗುತ್ತದೆ ಎಂದು ಪ್ರಮೋದ ಜಿ.ಕೆ.ಅಭಿಪ್ರಾಯಪಡುತ್ತಾರೆ.

ಇದು ಫ್ಯಾಂಟಸಿ ಲೀಗ್ ಕಾಲ

ಟೆಸ್ಟ್, ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳು, ಐಪಿಎಲ್‌ ಹೀಗೆ  ಹೊಸ ಹೊಸ ರೂಪಗಳಲ್ಲಿ ಕ್ರಿಕೆಟ್ ಬೆಳೆಯುತ್ತಿದೆ. ಅದೇ ರೀತಿ ಕ್ರಿಕೆಟ್‌ ಮೇಲಿನ ಅಭಿಮಾನಿಗಳ ‘ಭಕ್ತಿ’ಯೂ ಹೆಚ್ಚಾಗುತ್ತಲೇ ಇದೆ. ಈಗ ಇದಕ್ಕೆ ಹೊಸದಾಗಿ ಫ್ಯಾಂಟಸಿ ಕ್ರಿಕೆಟ್‌  ಸೇರ್ಪಡೆಯಾಗಿದೆ.

ಶೂಟಿಂಗ್‌ ಮೇಲೆ ತೂಗುಗತ್ತಿ

ಗೋಲ್ಡ್ ಕೋಸ್ಟ್‌ ಕಾಮನ್‌ವೆಲ್ತ್ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಭಾರತ ಅಮೋಘ ಸಾಧನೆ ಮಾಡಿದೆ. ಆದರೆ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿರುವ ಮುಂದಿನ ಕೂಟದಲ್ಲಿ ಶೂಟಿಂಗ್‌ ಕ್ರೀಡೆಯ ಸೇರ್ಪಡೆ ಬಗ್ಗೆ ಈಗ ಚರ್ಚೆ ಆರಂಭಗೊಂಡಿದೆ. ಆತಿಥೇಯರು ಈ ಕ್ರೀಡೆಯನ್ನು ಕೈಬಿಡುವುದಾಗಿ ಹೇಳಿದ್ದು ಭಾರತ ಶೂಟಿಂಗ್ ಸಂಸ್ಥೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಶೂಟಿಂಗ್‌ ಕೈಬಿಡಲೇಬಾರದು ಎಂದು ಒತ್ತಾಯಿಸಿದೆ.

ಡಬಲ್ಸ್‌ ವಿಭಾಗಕ್ಕೂ ಮನ್ನಣೆ ಸಿಗುತ್ತಿದೆ...

ಭಾರತದ ಬ್ಯಾಡ್ಮಿಂಟನ್‌ ಕ್ಷಿತಿಜದ ಮಿನುಗುತಾರೆ ಕರ್ನಾಟಕದ ಅಶ್ವಿನಿ ಪೊನ್ನಪ್ಪ. 2007ರಲ್ಲಿ ವೃತ್ತಿಪರ ಬ್ಯಾಡ್ಮಿಂಟನ್‌ಗೆ ಅಡಿ ಇಟ್ಟ ಅಶ್ವಿನಿ, ಹಲವು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಿಶ್ರ ತಂಡ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಪದಕ ಗೆದ್ದಿರುವ ಅವರನ್ನು ಸಂದರ್ಶನ ಮಾಡಿದ್ದಾರೆ.

ಶಿಕ್ಷಣ

ಪ್ರಜಾವಾಣಿ ಕ್ವಿಜ್ 18

ತಿ. ತಾ. ಶರ್ಮರು ಪತ್ರಕರ್ತರಾಗುವ ಮುನ್ನ ಯಾವ ಕೆಲಸದಲ್ಲಿದ್ದರು

‘ಸಿಐಡಿ–ಸಿಬಿಐ ವಿಭಾ‌ಗಗಳಲ್ಲಿ ಕೆಲಸ ಮಾಡಲು ನನಗಿಷ್ಟ’

ಸಿಐಡಿ, ಸಿಬಿಐನಂತಹ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಬಗ್ಗೆ ಕುತೂಹಲವಿದ್ದು. ಈ ವಿಭಾಗದಲ್ಲಿ ಕೆಲಸ ಗಳಿಸಲು ಯಾವ ಡಿಗ್ರಿ ಅಗತ್ಯ ಹಾಗೂ ಅದಕ್ಕೆ ಇನ್ನೇನಾದರೂ ಕೌಶಲ್ಯ ಇರಬೇಕು ಎಂಬುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

 

ಹೀಗಿರಲಿ ನಿಮ್ಮ ನಡುವಿನ ಮಾನಸಿಕ ಅಂತರ!

ಇದೀಗ ಪರೀಕ್ಷೆಗಳು ಮುಗಿದು ಫಲಿತಾಂಶವೂ ಬಂದಾಗಿದೆ. ಮಕ್ಕಳು ರಜೆಯ ಮಜವನ್ನು ಅನುಭವಿಸಲು ಸನ್ನದ್ಧರಾಗಿದ್ದಾರೆ. ಈ ವೇಳೆ ಪೋಷಕರು ಯೋಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾದ ಬಹುಮುಖ್ಯವಾದ ವಿಷಯವೊಂದಿದೆ. 

ಮಕ್ಕಳು ಮತ್ತು ಮಾಸ್ತರು-ನಡುವೆ ಒಂದಿಷ್ಟು ಜಾಗ

ಅಧ್ಯಾಪಕರಾದವರು ಮಕ್ಕಳು ತಮ್ಮನ್ನು ಸರಳವಾಗಿ ಸಂಪರ್ಕಿಸಲು ಮುಕ್ತವಾದ ಒಂದು ಅವಕಾಶವನ್ನು ತೆರೆದಿಡಬೇಕು. ಎಂದರೆ ಒಂದಿಷ್ಟು ತೆರೆದಿಟ್ಟ ‘ಜಾಗ’ ಅಥವಾ ವಲಯ ಇರಬೇಕು. ಮಕ್ಕಳು ಮತ್ತು ಅಧ್ಯಾಪಕರು ಎಷ್ಟೇ ಪರಸ್ಪರ ತೆರೆದುಕೊಂಡಿದ್ದಾರೆ ಎಂದು ಭಾವಿಸಿದರೂ ಮುಚ್ಚಿಟ್ಟುಕೊಂಡಿರುವ ಅನೇಕ ಸಂಗತಿಗಳಿರುತ್ತವೆ.