ನೆನಪಿನ ಬುತ್ತಿ ಬಿಚ್ಚಿಟ್ಟ ಸೋನು

11 May, 2018
ಕೆ.ಎಚ್. ಓಬಳೇಶ್

‘ಇಂತಿ ನಿನ್ನ ಪ್ರೀತಿಯ’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟವರು ಸೋನು ಗೌಡ. ‘ಮಾರಿಕೊಂಡವರು’ ಚಿತ್ರದಲ್ಲಿ ಅವರದು ಬಂಡಾಯಗಾತಿ ಪಾತ್ರ. ‘ಕಿರಗೂರಿನ ಗಯ್ಯಾಳಿಗಳು’ ಸಿನಿಮಾದಲ್ಲಿ ಬಂಡಾಯದ ಇನ್ನೊಂದು ಮುಖದಂತೆ ಕಾಣುವ ‘ಗಯ್ಯಾಳಿ’ ಪಾತ್ರ. ‘ಕಾನೂರಾಯಣ’ದಲ್ಲಿ ಹಳ್ಳಿಯ ಬಡ ಹುಡುಗಿಯಾಗಿ, ಹೋರಾಟದ ಮುಂದಾಳು. ‘ಗುಳ್ಟು’ ಚಿತ್ರದಲ್ಲಿ ಕಂಪ್ಯೂಟರ್‌ ಶಿಕ್ಷಕಿ ಪಾತ್ರ. ಹೀಗೆ ವೃತ್ತಿಜೀವನದ ಒಂದು ದಶಕದ ಅವಧಿಯಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವತುಂಬಿದ ಹೆಮ್ಮೆ ಅವರಲ್ಲಿದೆ.

ಸೋನು ಬಣ್ಣದಲೋಕ ಪ್ರವೇಶಿಸಿದ್ದು ಅನಿರೀಕ್ಷಿತ. ಒಂದಿಷ್ಟು ಕಾಲ ಇಲ್ಲಿ ವಿಹರಿಸಿ ಸಿನಿಮಾ ಸಹವಾಸವೇ ಬೇಡವೆಂದು ಜಾಹೀರಾತು ಕ್ಷೇತ್ರದತ್ತ ಮುಖ ಮಾಡಿದರು. ಆದರೆ, ಬೆಳ್ಳಿತೆರೆಯಲ್ಲಿ ಅವಕಾಶ ಸಿಗುವುದು ಅಪರೂಪ. ಕೆಲವರಿಗಷ್ಟೇ ಅವಕಾಶ ಹುಡುಕಿಕೊಂಡು ಬರುತ್ತವೆ ಎಂಬ ಸತ್ಯದ ಅರಿವಾಗಲು ಅವರಿಗೆ ಬಹುಕಾಲ ಬೇಕಾಗಲಿಲ್ಲ. ಆ ಕ್ಷಣವೇ ಮತ್ತೆ ಬಣ್ಣದ ಜಗತ್ತಿನ ಒಳಹೊಕ್ಕರು.

‘‌ನಾನು ಚಿತ್ರರಂಗ ಪ್ರವೇಶಿಸಿದ್ದು ರೀಲ್‌ ಯುಗದಲ್ಲಿ. ಆಗ ಚಿತ್ರೀಕರಣದ ವೇಳೆ ಭಯಪಡುತ್ತಿದ್ದೆ. ಈಗ ಡಿಜಿಟಲ್ ಕಾಲ. ಸಿನಿಮಾ ನಿರ್ಮಾಣದ ಸ್ವರೂಪವೂ ಬದಲಾಗಿದೆ. ಚಿತ್ರರಂಗ ನವೀನ ತಂತ್ರಜ್ಞಾನವನ್ನು ಹೊದ್ದುಕೊಂಡಿದೆ. ಪ್ರಸ್ತುತ ಎಲ್ಲವೂ ಸುಲಭವಾಗಿದೆ. ಎರಡು ಮಾದರಿಯಲ್ಲೂ ನಟಿಸಿದ ಖುಷಿ ನನಗಿದೆ’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

ಕಲಾತ್ಮಕ ಹಾಗೂ ವ್ಯಾಪಾರಿ ಎರಡೂ ಪ್ರಕಾರಗಳಲ್ಲೂ ವಿಭಿನ್ನ ಅನುಭವ ಪಡೆದ ಖುಷಿ ಅವರದು. ಆದರೆ, ನಟನೆಯಲ್ಲಿ ಅವರಿಗೆ ಇನ್ನೂ ತೃಪ್ತಿಯಾಗಿಲ್ಲವಂತೆ. ‘ಮೂವತ್ತು ವರ್ಷ ಕಾಲ ಚಿತ್ರರಂಗದಲ್ಲಿರುವ ಕಲಾವಿದರನ್ನು ನೀವೊಮ್ಮೆ ಕೇಳಿನೋಡಿ. ನನಗೆ ಇನ್ನೂ ಉತ್ತಮ ಅವಕಾಶ ಸಿಕ್ಕಿಲ್ಲ; ನಟನೆಯಲ್ಲಿ ತೃಪ್ತಿ ಸಿಕ್ಕಿಲ್ಲ ಎನ್ನುತ್ತಾರೆ. ನನ್ನದೂ ಇದೇ ಅಭಿಪ್ರಾಯ. ಆದರೆ, ನನಗೆ ಸಿಕ್ಕಿರುವ ಅವಕಾಶಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡಿರುವ ತೃಪ್ತಿ ಇದೆ’ ಎಂದು ನಗೆ ಬೀರುತ್ತಾರೆ ಸೋನು.

ಪ್ರಯೋಗಾತ್ಮಕ ಪಾತ್ರಗಳಿಗೂ ಅವರು ಒಗ್ಗಿಕೊಂಡಿದ್ದಾರೆ. ‘ಉತ್ತಮ ನಿರ್ದೇಶಕರಿದ್ದರೆ ಮಾತ್ರ ನಾವು ಎಂತಹ ಪಾತ್ರವನ್ನಾದರೂ ನಿಭಾಯಿಸಬಹುದು. ಜೊತೆಗೆ, ಉತ್ತಮ ತಂಡವೂ ಇರಬೇಕು. ನಟಿಯೊಬ್ಬಳ ನಟನೆಯ ಪರಿಪೂರ್ಣತೆ ಹಿಂದೆ ನಿರ್ದೇಶಕನ ಪಾತ್ರ ಹಿರಿದು. ದೀಪಿಕಾ ಪಡುಕೋಣೆ ಅವರ ಯಶಸ್ಸಿನ ಹಿಂದೆ ಒಳ್ಳೆಯ ನಿರ್ದೇಶಕರ ಶ್ರಮವೂ ಇದೆ’ ಎಂದು ನುಡಿಯುತ್ತಾರೆ. ಸೋನು ಯಾವುದೇ ಸಿನಿಮಾವನ್ನು ತಕ್ಷಣಕ್ಕೆ ಒಪ್ಪಿಕೊಳ್ಳುವುದಿಲ್ಲವಂತೆ. ‘ಕಥೆ ಸ್ಫೂರ್ತಿ ನೀಡುವಂತಿರಬೇಕು. ಅದರಲ್ಲಿ ಸಾಮಾಜಿಕ ಕಳಕಳಿ ಮಿಳಿತವಾಗಿರಬೇಕು. ಆ ಪಾತ್ರದ ಮೂಲಕ ಪ್ರೇಕ್ಷಕರನ್ನು ತಲುಪಲು ಸಾಧ್ಯವೇ ಎನ್ನುವುದು ಪರಾಮರ್ಶಿಸುತ್ತೇನೆ. ಕೇವಲ ಡಾನ್ಸ್‌ ಮಾಡಿ ಹೋಗುವ ಪಾತ್ರಗಳು ನನಗಿಷ್ಟವಿಲ್ಲ’ ಎನ್ನುವುದು ಅವರ ಸ್ಪಷ್ಟೋಕ್ತಿ.

‘ನನ್ನ ಸಾಮರ್ಥ್ಯದ ಬಗ್ಗೆ ಸ್ಪಷ್ಟವಾದ ಅರಿವು ಇದೆ. ನಮಗೆ ಗೊತ್ತಿಲ್ಲದೆ ಬಹಳಷ್ಟು ಜನರನ್ನು ನಮ್ಮನ್ನು ಅನುಸರಿಸುತ್ತಾರೆ. ನಾವು ಮಾಡುವ ಪ್ರತಿ ಚಟುವಟಿಕೆ ದಾಖಲಾಗುತ್ತಿರುತ್ತದೆ. ನಾವು ತಮಾಷೆಯಾಗಿ ಹೇಳುವ ಮಾತು ಪೇಚಿಗೆ ಸಿಲುಕಿಸುವ ಸಾಧ್ಯತೆಯೂ ಇದೆ. ಬಿಕ್ಕಟ್ಟಿನ ಸುಳಿಗೆ ಸಿಲುಕದಂತೆ ಎಚ್ಚರವಹಿಸಬೇಕು’ ಎಂದು ವಿವರಿಸುತ್ತಾರೆ.

ಗಾಸಿಪ್‌ಗಳು ಹರಡುವ ಬಗ್ಗೆಯೂ ಅವರಿಗೆ ಬೇಸರವಿದೆ. ‘ಬಹಳಷ್ಟು ವೇಳೆ ಪರಿಚಯದವರು ನಮ್ಮ ಹತ್ತಿರವೇ ಇಲ್ಲಸಲ್ಲದ ವಿಷಯ ಹೇಳುತ್ತಾರೆ. ಆ ವೇಳೆ ಮಾನಸಿಕ ಒತ್ತಡ ಸಹಜ. ಆದರೆ, ಇದಕ್ಕೆ ತಲೆಕೆಡಿಸಿಕೊಳ್ಳಬೇಕಿಲ್ಲ. ನಮ್ಮ ಮೇಲೆ ನಮಗೆ ವಿಶ್ವಾಸವಿದ್ದರೆ ಸಾಕು’ ಎಂಬುದು ಅವರ ಖಚಿತ ನುಡಿ.

ಚಿತ್ರರಂಗಕ್ಕೆ ಅಂಟಿದ ‘ಕಾಸ್ಟಿಂಗ್‌ ಕೌಚ್‌’ ಕಳಂಕದ ಬಗ್ಗೆ ಅವರಿಗೆ ಬೇಸರವಿದೆ. ಪ್ರತಿಭೆ ನಟಿಯರ ಮಾನದಂಡ ಆಗಬೇಕು. ಅನ್ಯಮಾರ್ಗಗಳ ಮೂಲಕ ಸಿನಿಮಾಗಳಲ್ಲಿ ಅವಕಾಶ ಸಿಗುತ್ತದೆ ಎಂಬುದು ಮೂರ್ಖತನದ ಪರಮಾವಧಿ ಎನ್ನುವುದು ಅವರ ಸ್ಪಷ್ಟವಾದ ಹೇಳಿಕೆ.

‘ಎಲ್ಲ ಕ್ಷೇತ್ರಗಳಲ್ಲೂ ಕಾಸ್ಟಿಂಗ್‌ ಕೌಚ್‌ ಇದೆ. ಖಾಸಗಿ ಸಂಸ್ಥೆಗಳು ಇದರಿಂದ ಹೊರತಲ್ಲ. ಆದರೆ, ಅಲ್ಲಿ ನಡೆಯುವ ಘಟನಾವಳಿಗಳು ಬೆಳಕಿಗೆ ಬರುವುದಿಲ್ಲ. ಈ ಅನಿಷ್ಟ ಪದ್ಧತಿ ವಿರುದ್ಧ ಕೆಲವು ಸಂಸ್ಥೆಗಳು ಹೋರಾಟ ಮಾಡುತ್ತಿವೆ. ಸಂತ್ರಸ್ತ ನಟಿಯರು ದಿಟ್ಟತನದಿಂದ ಇದನ್ನು ಎದುರಿಸಬೇಕಿದೆ. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಶುದ್ಧವಾದ ದಾರಿಯಲ್ಲಿ ನಡೆದಾಗ ಇಂತಹ ಸುಳಿಗೆ ಸಿಲುಕುವುದಿಲ್ಲ’ ಎನ್ನುತ್ತಾರೆ ಅವರು.

‘ಗುಳ್ಟು’ ಸಿನಿಮಾ ಅವರ ನಟನಾಪಯಣಕ್ಕೆ ಹೊಸದಿಕ್ಕು ನೀಡಿದೆ. ಅವರ ನಟನೆಯ ‘ಒಂಥರ ಬಣ್ಣಗಳು’ ಚಿತ್ರ ಜೂನ್‌ ವೇಳೆಗೆ ತೆರೆಗೆ ಬರುವ ಹಾದಿಯಲ್ಲಿದೆ. ‘ಫಾರ್ಚುನರ್‌’ ಚಿತ್ರ ಮಾತಿನ ಮರುಲೇಪನದ ಹಂತದಲ್ಲಿದೆ. ‘ಚಂಬಲ್‌’ನಲ್ಲೂ ಅವರು ಬ್ಯುಸಿ. ‘ಶಾಲಿನಿ ಐಎಎಸ್‌’ ಸಿನಿಮಾದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಕನ್ನಡದಲ್ಲಿಯೇ ನಟನೆಗೆ ಅವಕಾಶಗಳು ಹೆಚ್ಚಿವೆ. ಹಾಗಾಗಿ, ತಮಿಳಿನಲ್ಲಿ ಅವಕಾಶ ಲಭಿಸಿದರೂ ನಟಿಸಲು ಅವರಿಗೆ ಸಾಧ್ಯವಾಗುತ್ತಿಲ್ಲವಂತೆ. ಇನ್ನೊಂದೆಡೆ ನಟನೆ ನಡುವೆ ತಮ್ಮ ಖಾಸಗಿ ಬದುಕನ್ನೂ ಕಳೆದುಕೊಳ್ಳುತ್ತಿದ್ದೇನೆ ಎನ್ನುವ ಕೊರಗು ಅವರಿಗಿದೆ.

Comments
ಮುಖಪುಟ

‘ಕುಟುಂಬದ ಹಸ್ತಕ್ಷೇಪಕ್ಕೆ ಅವಕಾಶವೇ ಇಲ್ಲ’

‘ನಾಡಿನ ಜನ ಪೂರ್ಣ ಪ್ರಮಾಣದಲ್ಲಿ ಆಶೀರ್ವಾದ ಮಾಡದೇ ಇದ್ದರೂ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಭರವಸೆ ಈಡೇರಿಸಲು ಸಾಧ್ಯವಾಗದೇ ಇದ್ದರೆ ನಾನು ಈ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ. ನಾನೇ ಹಿಂದೆ ಸರಿಯುತ್ತೇನೆ’ –ಎಚ್.ಡಿ. ಕುಮಾರಸ್ವಾಮಿ.

ಖಾತೆ ಕ್ಯಾತೆ: ವಿಸ್ತರಣೆ ವಿಳಂಬ

ಹಣಕಾಸು ಖಾತೆಗಾಗಿ ಜೆಡಿಎಸ್‌ ಬಿಗಿಪಟ್ಟು ಮುಂದುವರಿಸಿದೆ. ಇದರಿಂದ ಬೆದರಿರುವ ಕಾಂಗ್ರೆಸ್ ವರಿಷ್ಠರು ಈ ಖಾತೆ ಬಿಟ್ಟು ಕೊಡುವ ಆಲೋಚನೆಯಲ್ಲಿ ಇದ್ದಾರೆ. ಇನ್ನುಳಿದ ಖಾತೆಗಳ ಹಂಚಿಕೆ ಬಗ್ಗೆ ಚರ್ಚೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಚಿವ ಸಂಪುಟದ ಉಳಿದ ಸದಸ್ಯರ ಪ್ರಮಾಣ ವಚನಕ್ಕೆ ವಾರಾಂತ್ಯದವರೆಗೆ ಮುಹೂರ್ತ ನಿಗದಿಯಾಗುವ ಲಕ್ಷಣ ಕಾಣಿಸುತ್ತಿಲ್ಲ.

ಶೇನ್ ‘ಸೂಪರ್’ ಆಟ; ಚೆನ್ನೈಗೆ ಕಿರೀಟ

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಐಪಿಎಲ್‌ 2018ರ ಫೈನಲ್‌ ಪಂದ್ಯದಲ್ಲಿ ಶೇನ್‌ ವಾಟ್ಸನ್ ಅವರ ಭರ್ಜರಿ ಶತಕದ ನೆರವಿನಿಂದ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಅಮೋಘ ಜಯ ಸಾಧಿಸಿರುವ ಚೆನ್ನೈ ಸೂಪರ್‌ ಕಿಂಗ್ಸ್ ಮೂರನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ರೈತರ ಸಾಲ ಮನ್ನಾ: ಕರ್ನಾಟಕ ಬಂದ್‌ ಅನುಮಾನ?

‘ರೈತರ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್‌ ನಡೆಸುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸದನದಲ್ಲಿ ಶುಕ್ರವಾರ ಹೇಳಿದ್ದರು. ಬಂದ್‌ ವೇಳೆ ಬಿಗಿ ಭದ್ರತೆ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕಿ (ಡಿಜಿ–ಐಜಿ) ನೀಲಮಣಿ ರಾಜು, ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಂಗತ

ದುರ್ಬಲ ರಾಜಕಾರಣಿಗಳು

ಕಂಡಕಂಡವರಿಗೆಲ್ಲ ಉದ್ದಂಡ, ದೀರ್ಘದಂಡ ನಮಸ್ಕಾರ ಹಾಕಿ, ತಮ್ಮ ವ್ಯಕ್ತಿತ್ವವನ್ನೇ ಇಲ್ಲಗೈಯುತ್ತಿರುವ ರಾಜಕಾರಣಿಗಳು ಈ ರಾಜ್ಯಕ್ಕೆ, ಈ ದೇಶಕ್ಕೆ ಬೇಡವೇ ಬೇಡ

ಇವಿಎಂ ಮತ್ತು ಮುಂದಿನ ಚುನಾವಣೆಗಳು

ಮೇ 12ರಂದು ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ಮೇ 13ರ ಸಂಚಿಕೆಯಲ್ಲಿ ಎಲ್ಲಾ ಪತ್ರಿಕೆಗಳು ವಿವರವಾಗಿ ದಾಖಲಿಸಿದ್ದವು. ಆದರೆ, ‘ಪ್ರಜಾವಾಣಿ’ಯಲ್ಲಿ ಬಂದ ವಿವರಗಳಲ್ಲಿ ಮುಖ್ಯವಾಗಿ ಗಮನಿಸಬೇಕಾದ ಎರಡು ಅಂಶಗಳಿದ್ದುವು. ಈ ಅಂಶಗಳನ್ನು ಓದುಗರು

ಪಾರದರ್ಶಕತೆ ಮುಖ್ಯ

ಇವಿಎಂನ ವಿಶ್ವಾಸಾರ್ಹತೆ ಸಾಬೀತುಪಡಿಸಲು ವಹಿಸುವ ಮುತುವರ್ಜಿಯ ಜೊತೆಜೊತೆಗೆ ಅದರ ದುರ್ಬಳಕೆಗೆ ಇರುವ ಅವಕಾಶಗಳತ್ತ ಕೂಡ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳು ಗಮನಹರಿಸುವುದು ಅಗತ್ಯ.

ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ

ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಕಾರಣಕ್ಕಾಗಿ ಪುಟ್ಟ ಪುಟ್ಟ ಸಮುದಾಯಗಳಲ್ಲಿ ಸ್ವಾಭಿಮಾನ ಮತ್ತು ಒಟ್ಟುಗೂಡುವಿಕೆಗೆ ಜೀವ ಬಂದಿದೆ

ಆಟಅಂಕ

ಅಲೋಕ್ ಕನಸುಗಳ ‘ಏಸ್’

‘ಟೆನಿಸ್‌ ದುಬಾರಿ ಆಟವಾಗಿದ್ದು, ಬಡವರ ಕೈಗೆಟುಕುವುದಿಲ್ಲ. ಇದೂ ಒಂದು ರೀತಿಯಲ್ಲಿ ಜೂಜಾಟ ಇದ್ದಂತೆ. ಆಟದಲ್ಲಿ ಕ್ಲಿಕ್‌ ಆದರೆ ನಾವು ಹೂಡಿದ ಹಣ ಬರುತ್ತದೆ; ಇಲ್ಲದಿದ್ದರೆ ಎಲ್ಲವನ್ನೂ ಕಳೆದುಕೊಂಡು ಬರಿದಾಗುತ್ತೇವೆ’ ಎಂಬುದು ಅಲೋಕ್‌ ಅಭಿಪ್ರಾಯ.

ಅವಕಾಶಕ್ಕಾಗಿ ಕಾದವರು...

ಐಪಿಎಲ್‌ 11ನೇ ಆವೃತ್ತಿ ಮುಕ್ತಾಯ ಗೊಂಡಿದೆ. ಪ್ರಶಸ್ತಿ ಕನಸು ಹೊತ್ತು ಭರವಸೆಯಿಂದ ಕಣಕ್ಕೆ ಇಳಿದಿದ್ದ ಎಷ್ಟೋ ತಂಡಗಳು ಪ್ಲೇ ಆಫ್ ಹಂತಕ್ಕೇರುವುದಕ್ಕೂ ಸಾಧ್ಯವಾಗದೆ ನಿರಾಸೆಗೊಂಡಿವೆ. ಇದು ತಂಡಗಳ ಕಥೆಯಾದರೆ, ಆಯ್ಕೆಯಾಗಿಯೂ ಆಡಲು ಸಾಧ್ಯವಾಗದ ಯುವ ಆಟಗಾರರು ಅನೇಕರು ಇದ್ದಾರೆ. ಅವರು ಈಗ ನಿರಾಸೆಗೊಂಡಿದ್ದಾರೆ.
 

ಕೈಗೂಡುವುದೇ ಪದಕದ ಕನಸು?

ಏಳುಬೀಳುಗಳ ನಡುವೆ ಸಾಗುತ್ತಿರುವ ಭಾರತ ಮಹಿಳಾ ಹಾಕಿ ತಂಡ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ. 2014ರ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು, ಏಷ್ಯಾ ಕಪ್‌ನಲ್ಲಿ ಚಿನ್ನ, ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಹೀಗೆ ಹಲವು ಪದಕಗಳನ್ನು ಜಯಿಸಿದೆ. ಈ ಎಲ್ಲ ಸಾಧನೆ ಜುಲೈ 21ರಿಂದ ಲಂಡನ್‌ನಲ್ಲಿ ಆರಂಭವಾಗುವ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಪದಕ ಗೆಲ್ಲುವ ಆಸೆಗೆ ಸ್ಫೂರ್ತಿಯಾಗುವುದೇ?  

ಟಾಸ್ ಏನ್ ಆಗುತ್ತೆ..?

ಇದೀಗ ಟಾಸ್ ಹಾಕುವ ಪದ್ಧತಿಯನ್ನು ಕೈಬಿಡಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚಿಂತನೆ ನಡೆಸಿದೆ. ಇದಕ್ಕೆ ಹಲವು ಹಿರಿಯ ಆಟಗಾರರಿಂದ ಪರ–ವಿರೋಧದ ಚರ್ಚೆಗಳು ಆರಂಭವಾಗಿವೆ.

ಶಿಕ್ಷಣ

ಪರೀಕ್ಷೆ ಎಂಬುದು ಪೆಡಂಭೂತ ಅಲ್ಲ!

ವಿದ್ಯಾರ್ಥಿಗಳು ಯಾವುದೇ ಪರೀಕ್ಷೆಯನ್ನು ಬರೆಯುತ್ತಿರಲಿ. ಪರೀಕ್ಷೆ, ಪರೀಕ್ಷೆ ಎಂದು ಹೆದರಿ ಕೂರಬಾರದು. ಧೈರ್ಯ ಕಳೆದುಕೊಂಡರೆ ಮನಸ್ಸು ಗಲಿಬಿಲಿಯಾಗುತ್ತದೆ. ಮನೆಯಲ್ಲಿಯೇ ಕೃತಕವಾಗಿ ಪರೀಕ್ಷಾ ಕೊಠಡಿಯ ವಾತಾವರಣ ನಿರ್ಮಿಸಿಕೊಂಡು ಈ ಒತ್ತಡವನ್ನು ಅನುಭವಿಸಿ ಗೆಲ್ಲಬೇಕು. ಪರೀಕ್ಷೆ ಪೆಡಂಭೂತವಲ್ಲ; ಅದು ಕಲಿಕೆಯ ಮಾಪಕ. ಸೆಮಿಸ್ಟರ್‌ ಪರೀಕ್ಷೆಯನ್ನು ಎದುರಿಸುವ ಬಗ್ಗೆ ಈ ಲೇಖನ ಮಾಹಿತಿಯನ್ನು ನೀಡುತ್ತದೆ.

 

ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್ ಮಾಡುವಾಸೆ...

ಬಿಎ/ಬಿಕಾಂ ಇನ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ಗಳಿವೆ. ಎಂಟಿಎ ಮಾಸ್ಟರ್ ಆಫ್ ಟ್ರಾವೆಲ್ ಅಂಡ್ ಟೂರಿಸಂ ಕೋರ್ಸ್‌ ಸಹ ಇದೆ. ಇಂಟಿಗ್ರೇಟೆಡ್ ಕೋರ್ಸ್ 5 ವರ್ಷದ್ದು, ಎಂಬಿಎ ಇನ್ ಟ್ರಾವೆಲ್ ಅಂಡ್ ಟೂರಿಸಂ ಇದೆ.

ಪ್ರಜಾವಾಣಿ ಕ್ವಿಜ್ -22

1. ಕರ್ನಾಟಕ ಸಂಗೀತದಲ್ಲಿರುವ ಮೇಳಕರ್ತ ರಾಗಗಳ ಸಂಖ್ಯೆ ಎಷ್ಟು?

ಮರಳಿ ಯತ್ನವ ಮಾಡೋಣ...

ಪರೀಕ್ಷೆಯಲ್ಲಿ ಫೇಲಾದ ಮಾತ್ರಕ್ಕೆ ಜೀವನವೇ ಮುಗಿಯಿತು ಎಂದುಕೊಳ್ಳಬಾರದು. ಬದಲಾಗಿ ‘ಈ ಪರೀಕ್ಷೆಯಲ್ಲಿ ಫೇಲಾದರೆ ಏನಂತೆ ಮುಂದೆ ಬರುವ ಮರುಪರೀಕ್ಷೆ ಬರೆದು ಪಾಸು ಮಾಡೇ ಮಾಡುತ್ತೇನೆ’ ಎಂಬ ಆತ್ಮವಿಶ್ವಾಸದೊಂದಿಗೆ ಹೊಸ ಮಾರ್ಗದೊಂದಿಗೆ ಓದಿದಾಗ ಯಶಸ್ಸು ಖಂಡಿತ ನಿಮ್ಮದೆ...