ಮುಖಪುಟ

ಗುಜರಾತ್‌: ಬಿಜೆಪಿಗೆ ಪ್ರಯಾಸದ ಗೆಲುವು

182 ಸ್ಥಾನಗಳನ್ನು ಹೊಂದಿರುವ ಗುಜರಾತಿನಲ್ಲಿ 99 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಸತತ ಆರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. 68 ಸ್ಥಾನಗಳನ್ನು ಹೊಂರುವ ಹಿಮಾಚಲ ಪ್ರದೇಶದಲ್ಲಿ 44 ಸ್ಥಾನಗಳನ್ನು ಪಡೆಯುವ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಮುಂದಾಗಿದೆ...

‘ಸಾಧನಾ ಸಂಭ್ರಮ’ದಲ್ಲಿ ಆತ್ಮವಿಶ್ವಾಸ ಪ್ರದರ್ಶನ

‘ಉತ್ತಮ ಆಡಳಿತವನ್ನು ನೀಡಿದ್ದೇನೆ. ಆದ್ದರಿಂದ ನಮಗೆ ಆಡಳಿತ ವಿರೋಧಿ ಅಲೆ ಇಲ್ಲ. ಮುಂದಿನ ಬಾರಿಯೂ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೃಢವಾಗಿ ಹೇಳಿದರು.

ರಾಜ್ಯದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ವಿವಿಪಿಎಟಿ ಇವಿಎಂ ಬಳಕೆ

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತಪತ್ರ ವ್ಯವಸ್ಥೆ ಜಾರಿ ಪ್ರಶ್ನೆಯೇ ಇಲ್ಲ. ರಾಜ್ಯದ ಎಲ್ಲ ಮತಗಟ್ಟೆಗಳಲ್ಲೂ ವಿವಿಪಿಎಟಿ (Voter Verifiable Paper Audit Trail) ವ್ಯವಸ್ಥೆ ಹೊಂದಿರುವ ಇವಿಎಂಗಳನ್ನೇ ಬಳಸಲಾಗುವುದು’ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಧಾನಿ ಸ್ಪಷ್ಟನೆಗೆ ಪ್ರತಿಪಕ್ಷಗಳ ಪಟ್ಟು

ಪ್ರತಿಪಕ್ಷದ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಜಮಾಯಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವೆಂಕಯ್ಯ ನಾಯ್ಡು, ‘ನಿಮ್ಮ ಈ ವರ್ತನೆಯನ್ನು ಜನರು ನೋಡುವುದನ್ನು ನಾನು ಇಷ್ಟಪಡುವುದಿಲ್ಲ’ ಎಂದು ಹೇಳಿ ದಿನದ ಮಟ್ಟಿಗೆ ಕಲಾಪ ಮುಂದೂಡಿದರು...

ಪ್ರಜಾವಾಣಿ ರೆಸಿಪಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿ ಮುಖಂಡರ ಕೈಹಿಡಿದ ಮತದಾರ

ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾಣಿ, ಮಾಜಿ ಉಪ ಮುಖ್ಯಮಂತ್ರಿ ನಿತಿನ್‌ ಪಟೇಲ್‌, ಬಿಜೆಪಿ ಅಧ್ಯಕ್ಷ ಜೀತೂ ವಘಾನಿ, ಮಾಜಿ ಸಚಿವರಾದ ಭೂಪೇಂದ್ರ ಸಿಂಗ್‌ ಚೂಡಾಸಮಾ, ಪ್ರದೀಪ್‌ ಸಿಂಗ್‌ ಜಡೇಜಾ, ಸೌರಭ್‌ ಪಟೇಲ್‌ ಬಿಜೆಪಿಯಿಂದ ಜಯ ಸಾಧಿಸಿದ್ದಾರೆ...

ಹಿಮಾಚಲ ಪ್ರದೇಶದಲ್ಲೂ ಬಿಜೆಪಿ ಗೆಲುವಿನ ಓಟ

ಬಿಜೆಪಿ ಗೆಲ್ಲುತ್ತಿದ್ದಂತೆಯೇ ಗುಡ್ಡಗಾಡು ರಾಜ್ಯದಲ್ಲಿ ಕಾರ್ಯಕರ್ತರ ಸಂಭ್ರಮ ಮೇರೆ ಮೀರಿತು. ಕೊರೆಯುವ ಚಳಿಯ ನಡುವೆಯೇ ರಸ್ತೆಗಿಳಿದ ಬಿಜೆಪಿ ಬೆಂಬಲಿಗರು ಪ್ರಧಾನಿ ಮೋದಿ ಅವರನ್ನು ಹೊಗಳುವ ಹಾಡು ಹಾಡಿದರು. ಸಿಹಿ ತಿಂಡಿಗಳನ್ನು ಪರಸ್ಪರ ಹಂಚಿದರು; ಬ್ಯಾಂಡುಗಳ ಸದ್ದಿಗೆ ಹೆಜ್ಜೆ ಹಾಕಿದರು...

ಬಿಜೆಪಿಯ ‘ವಿಕಾಸವಾದ’ ಸತ್ಯಕ್ಕೆ ದೂರ

ಗುಜರಾತ್‌ನಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಅಲ್ಲಿನ ಮತದಾರ ಅಭಿವೃದ್ಧಿಯ ವಿಷಯವನ್ನಷ್ಟೇ ಪರಿಗಣಿಸಿ ಮತ ಚಲಾಯಿಸಿದ್ದರೆ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ದೊರೆಯುತ್ತಿತ್ತು.

ಹಿಂದೂಜಾ ಕಂಪೆನಿಯ 37 ಎಕರೆ ಜಮೀನು ವಶ ವಿವಾದ

‘ಬೆಂಗಳೂರು ಉತ್ತರ ತಾಲ್ಲೂಕಿನ ಜಾಲ ಹೋಬಳಿಯ ನವರತ್ನ ಅಗ್ರಹಾರ ಗ್ರಾಮದ ಸರ್ವೇ ನಂ.67ರಲ್ಲಿನ 34 ಎಕರೆ 16 ಗುಂಟೆ ಜಮೀನು ನಮ್ಮ ವಶದಲ್ಲಿದೆ. ಆದರೆ ಇದನ್ನು ಸರ್ಕಾರ ವಶಪಡಿಸಿಕೊಂಡಿದೆ’ ಎಂದು ಹಿಂದೂಜಾ ಕಂಪೆನಿ ಆಕ್ಷೇಪಿಸಿದೆ.

45 ದಿನಗಳಲ್ಲಿ ಬದಲಾಯಿತು ಕೆರೆ ಚಿತ್ರಣ

ಜಿಗಣಿ ಪುರಸಭೆ ವ್ಯಾಪ್ತಿಯ ಕ್ಯಾಲಸನಹಳ್ಳಿ ಕೆರೆಯ ಚಿತ್ರಣವಿದು. ಕೈಗಾರಿಕಾ ಮಾಲಿನ್ಯ, ತ್ಯಾಜ್ಯ ವಿಲೇವಾರಿ, ಒತ್ತುವರಿ ಸಮಸ್ಯೆಗಳಿಂದ ಸೊರಗಿದ್ದ ಈ ಜಲಮೂಲದ ಸ್ವರೂಪವನ್ನು ಸನ್‌ಸೇರಾ ಎಂಜಿನಿಯರಿಂಗ್‌ ಸಂಸ್ಥೆ ಕೇವಲ 45 ದಿನಗಳಲ್ಲಿ ಬದಲಾಯಿಸಿದೆ.

‘ಗುಜರಿ’ ಆಟೊಗಳು ತಾಲ್ಲೂಕು ಕೇಂದ್ರಕ್ಕೆ

ಕಳೆದ ಬಜೆಟ್‌ನಲ್ಲಿ ಘೋಷಿಸಿದಂತೆ 2018ರ ಏಪ್ರಿಲ್‌ 1ರಿಂದ ನಗರದಲ್ಲಿ 2 ಸ್ಟ್ರೋಕ್‌ ಆಟೊಗಳ ಸಂಚಾರ ನಿಷೇಧವಾಗಲಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಂಬಂಧ ಸಾರಿಗೆ ಇಲಾಖೆಯ ಅಧಿಕಾರಿಗಳು, ಇತ್ತೀಚೆಗೆ ‘ಗುಜರಿ ನೀತಿ’ ಸಿದ್ಧಪಡಿಸಿದ್ದಾರೆ.