ಜನಪ್ರಿಯ

ತೆಂಗಿನಕಾಯಿ ಚಟ್ನಿ ಜತೆಗೆ ‘ಅಕ್ಕಿ ರೊಟ್ಟಿ’ ಸವಿಯಿರಿ

ಊಟಕ್ಕೆ ಬರೀ ಮುದ್ದೆ, ಅನ್ನ, ಚಪಾತಿ ಮಾಡಿ ಬೋರ್‌ ಆಗಿದೆಯಾ!  ಹೊಸ  ರುಚಿಯ ಅಡುಗೆ ಮಾಡಬೇಕು ಅನಿಸಿದೆಯಾ! ಚಿಂತೆ ಯಾಕೆ? ಈ ಬಾರಿ ಅಕ್ಕಿ ರೊಟ್ಟಿ ಮಾಡುವ  ರೆಸಿಪಿಯನ್ನು ಪ್ರಜಾವಾಣಿ ತಂದಿದೆ.  ಇಲ್ಲಿರುವ ವಿಡಿಯೊ ನೋಡಿ ಅಕ್ಕಿ ರೊಟ್ಟಿ ಮಾಡುವುದನ್ನು ಕಲಿಯಿರಿ.

ಬಾಯಿ ಸಿಹಿ ಮಾಡುವ ಹಾಲು ಬಾಯಿ

ಬಾಯಲ್ಲಿ ಕರಗುವಂತಹ ಸಿಹಿಯಾದ ಹಾಲು ಬಾಯಿ ಮಾಡುವುದು ಬಹಳ ಸುಲಭ! ಅತಿ ಹೆಚ್ಚು ಪೋಷಕಾಂಶಗಳಿರುವ ಈ ಸಿಹಿ ಖಾದ್ಯ ಮಾಡುವ ವಿಧಾನವನ್ನು ಈ ಬಾರಿಯ ಪ್ರಜಾವಾಣಿ ರೆಸಿಪಿಯಲ್ಲಿ ನೀಡಲಾಗಿದೆ.

ಬೆಳಗಿನ ಉಪಹಾರಕ್ಕೆ ನುಚ್ಚಿನ ಉಂಡೆ ಇರಲಿ!

ನೆನೆಸಿದ ತೊಗರಿ ಬೇಳೆಯ ಹಸಿ ಹಿಟ್ಟಿನಲ್ಲಿ ನುಚ್ಚಿನ ಉಂಡೆ ಮಾಡುವುದು ಬಹಳ ಸುಲಭ. ಹಬೆಯಲ್ಲಿ ಹದವಾಗಿ ಬೇಯಿಸಿದ ನುಚ್ಚಿನ ಉಂಡೆಗೆ ತುಪ್ಪ ಬೆರೆಸಿ ಸವಿದರೆ ಬೆಳಗಿನ ಉಪಹಾರ ಸಖತ್‌ ಸವಿಯಾಗಿರುತ್ತದೆ. ನೀವು ಕೂಡ ನುಚ್ಚಿನ ಉಂಡೆ ಮಾಡುವ ವಿಧಾನವನ್ನು ‘ಪ್ರಜಾವಾಣಿ ರೆಸಿಪಿ’ ನೋಡಿ ಕಲಿಯಿರಿ!
ಸಸ್ಯಾಹಾರ

ಸಿಂಪಲ್ಲಾಗಿ ರವೆ ಇಡ್ಲಿ ಮಾಡಿ ನೋಡಿ!

ದಕ್ಷಿಣ ಭಾರತದ ಜನಪ್ರಿಯ ತಿಂಡಿ ಇಡ್ಲಿ !  ಮಾಮೂಲಿ ಅಕ್ಕಿ ಇಡ್ಲಿಗಿಂತ ಸ್ವಲ್ಪ ಭಿನ್ನವಾಗಿರುವ ರವೆ ಇಡ್ಲಿ ಮಾಡುವುದು ತುಂಬಾ ಸರಳ. ರವೆ ಇಡ್ಲಿ ಮಾಡುವ ವಿಧಾನಕ್ಕೆ ಈ ಕೆಳಗಿನ ವಿಡಿಯೊ ಮತ್ತು ಮಾಹಿತಿ ನೋಡಿ.

ಬಿಸಿ ಬಿಸಿ ಈರುಳ್ಳಿ ದೋಸೆ !

ಗರಿ ಗರಿಯಾಗಿರುವ, ಬಿಸಿ ಬಿಸಿ ಈರುಳ್ಳಿ ದೋಸೆ ಮಾಡುವುದು ಬಹಳ ಸುಲಭ! ಈರುಳ್ಳಿ ದೋಸೆ ಮಾಡುವುದನ್ನು ಕಲಿಯುವುದಕ್ಕಾಗಿ ಈ ಕೆಳಗಿನ ರೆಸಿಪಿ ಅಥವಾ ಮಾಹಿತಿ ನೋಡಿ.

ರಾಗಿ ಮುದ್ದೆಗೆ ಬೇಕು ಎಲೆಕೋಸಿನ ಬಸ್ಸಾರು!

ಎಲೆಕೋಸಿನ ಬಸ್ಸಾರಿನ ಜತೆಗೆ  ರಾಗಿ ಮುದ್ದೆ ಸವಿದರೆ ಅದರ ಮಜವೇ ಬೇರೆ. ಎಲೆಕೋಸಿನ ಬಸ್ಸಾರಿಗೆ ಬೇಕಾಗುವ ಸಾಮಗ್ರಿ ಮತ್ತು  ಮಾಡುವ ವಿಧಾನದ ಮಾಹಿತಿ ಇಲ್ಲಿದೆ.
ಮಾಂಸಾಹಾರ

ಮರುವಾಯಿ ಗಸಿ ಏಡಿ ಸುಕ್ಕ...

ಮರುವಾಯಿ ಹಾಗೂ ಏಡಿ ಮಾಂಸದ ರುಚಿಗೆ ಮನಸೋಲದ ಮಾಂಸಪ್ರಿಯರು ಕಡಿಮೆ. ಮರುವಾಯಿ ಹಾಗೂ ಏಡಿಯಿಂದ ತಯಾರಾಗುವ ಖಾದ್ಯಗಳ ವಿವರವನ್ನು ತಿಳಿಸಿದ್ದಾರೆ, ಕೋಕಿಲಾ ಕೃಷ್ಣ.

10 ನಿಮಿಷದಲ್ಲಿ ಎಗ್‌ರೈಸ್‌ ಮಾಡಿ ನೋಡಿ!

ನೆಂಟರು, ಗೆಳೆಯರು ಅಥವಾ ಸಂಬಂಧಿಕರು ಮನೆಗೆ ಹಠಾತನೇ ಬಂದಾಗ ತಕ್ಷಣದಲ್ಲಿ ಯಾವ ಅಡುಗೆ ಮಾಡುವುದು ಎಂಬ ಯೋಚನೆ!?  ಮೊಟ್ಟೆ ಇದ್ದರಂತೂ ಹತ್ತು ನಿಮಿಷದಲ್ಲಿ ಎಗ್‌ರೈಸ್‌   ಮಾಡಿ ನೆಂಟರು, ಗೆಳೆಯರ ಮನ ತಣಿಸಬಹುದು. ಎಗ್‌ರೈಸ್‌  ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿ ನೀಡಲಾಗಿದೆ.

ದೋಸೆಯ ರುಚಿ ಹೆಚ್ಚಿಸುವ ಕೋಳಿಗಸ್ಸಿ!

ದೋಸೆಯನ್ನು ಸಾಗು, ಪಲ್ಯ ಅಥವಾ ಚಟ್ನಿ ಜೊತೆಗೆ ತಿನ್ನುವುದು ಸಾಮಾನ್ಯ. ಹದವಾದ ಕೋಳಿಗಸ್ಸಿಯಲ್ಲಿ ದೋಸೆ ತಿಂದರೆ ಅದರ ರುಚಿಯೇ ಬೇರೆ! ನೀವು ಕೂಡ ಕೋಳಿಗಸ್ಸಿ ಮಾಡುವುದನ್ನು  ಕಲಿಯಬೇಕಾದರೆ   ‘ಪ್ರಜಾವಾಣಿ ರೆಸಿಪಿ’ ನೋಡಿ.